ಯಾವ ಕಾರಣಕ್ಕಾಗಿ ಬುಧುವಾರದ ದಿನದಂದು ಗಣೇಶನ ಪೂಜೆ ಮಾಡಿದರೆ ಒಳ್ಳೇದು ಅಂತ ಹೇಳುತ್ತಾರೆ… ನಿಜಕ್ಕೂ ಇಲ್ಲಿದೆ ಇದೆಕ್ಕೆಲ್ಲ ಕಾರಣಗಳು..

337

ನಮ್ಮಲ್ಲಿ ದಿನಕ್ಕೆ ತಿಂಗಳಿಗೆ ಮಂಡಲಕ್ಕೆ ಬಹಳ ವಿಶೇಷವಾದ ಸ್ಥಾನವಿದೆ ಹೌದು ದಿನ ಅಂದರೆ ಕೆಲವರಿಗೆ ಅದು ಸಾಮಾನ್ಯ ಆಗಿರಬಹುದು ಸಹಜ ಆಗಿರಬಹುದು ಆದರೆ ದಿನಕ್ಕೆ ಅನುಗುಣವಾಗಿ ನಾವು ದೇವರ ಆರಾಧನೆಯನ್ನೂ ಮಾಡುತ್ತೇವೆ ಹೀಗೆ ಪ್ರತಿದಿನ ಒಂದೊಂದು ದೇವರನ್ನು ಪೂಜಿಸುವುದು ನಮ್ಮ ಸಂಪ್ರದಾಯದ ಪ್ರಕಾರ ವಿಶೇಷ ಆಗಿತ್ತು ಇಂದಿನ ಲೇಖನದಲ್ಲಿ ನಾವು ಯಾವ ದಿನದಂದು ಯಾವ ದೇವರನ್ನು ಆರಾಧಿಸಿದರು ವಿಶೇಷ ಹಾಗೂ ಬುಧವಾರ ದಿನದಂದು ಯಾಕೆ ಗಣಪತಿಯನ್ನು ಆರಾಧಿಸುವುದು ವಿಶೇಷ ಎಂಬುದನ್ನು ಸಹ ತಿಳಿಸಿಕೊಡುತ್ತೇವೆ. ಇಂದಿನ ದಿವಸಗಳಲ್ಲಿ ಮಂದಿ ಪೂಜೆ ಮಾಡುವುದು ಮಂತ್ರಪಠಣೆ ಮಾಡುವುದು ದೇವರ ಆರಾಧನೆ ಮಾಡುವುದು ಇದನ್ನೆಲ್ಲ ದೂರ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪೂಜೆ ಮಾಡುವುದರಲ್ಲಿ ಆಧ್ಯಾತ್ಮಿಕ ಅರ್ಥ ಇದೆ ಹಾಗೆಯೇ ಪೂಜೆ ಮಾಡುವುದಕ್ಕೆ ಪೂಜೆ ಮಾಡುವುದರಿಂದ ವೈಜ್ಞಾನಿಕ ಲಾಭಗಳು ಕೂಡ ಇದೆ ವೈಜ್ಞಾನಿಕ ಅರ್ಥವೂ ಕೂಡ ಇದೆ.

ಯಾರಿಗೆ ಮನಸ್ಸಿಗೆ ಬಹಳ ಬೇಸರ ಆಗಿರುತ್ತದೆ ಅಂಥವರು ದೇವಸ್ಥಾನಕ್ಕೆ ಹೋಗಬೇಕಂತೆ. ಯಾಕೆಂದರೆ ದೇವಸ್ಥಾನದಲ್ಲಿ ಇರುವ ಆ ದೈವಿಕ ಗುಣ ಸಕಾರಾತ್ಮಕ ಶಕ್ತಿ ಧನಾತ್ಮಕ ವಾತಾವರಣ ಇವು ನಮ್ಮ ಮೂಡ್ ಅನ್ನು ಅಂದರೆ ನಮ್ಮ ಬೇಸರ ಆಗಲಿ ನಮ್ಮ ಕಷ್ಟಗಳನ್ನು ದೂರ ಮಾಡುವುದಕ್ಕೆ ಈ ದೇವಸ್ಥಾನದಲ್ಲಿರುವ ವಾತವರಣ ಬಹಳ ಪ್ರಯೋಜನಕಾರಿಯಾಗಿರುತ್ತದೆ ಹಾಗೆಯೇ ನಮ್ಮ ಕಷ್ಟವಲ್ಲ ಬೇಸರವನ್ನ ನಮಗೆ ಎದುರಾಗುತ್ತಿರುವ ಸಂಕಟವನ್ನು ನಮಗೆ ಎದುರಾಗುತ್ತಿರುವ ಯಾವುದೇ ತರಹದ ಭಾವನೆಗಳಾಗಲಿ ಅದು ಕೆಟ್ಟ ಭಾವನೆ ಗಳಾಗಿರಲಿ ಬೇಡದಿರುವ ಭಾವನೆಗಳಾಗಲಿ ಅದನ್ನೆಲ್ಲ ದೂರಮಾಡುವುದಕ್ಕೆ ದೇವಸ್ಥಾನದಲ್ಲಿರುವ ಸಕಾರಾತ್ಮಕ ಶಕ್ತಿ ಸಹಕಾರಿಯಾಗಿರುತ್ತದೆ.

ಈಗ ಮಾಹಿತಿಗೆ ಬರುವುದಾದರೆ ಈ ಮೊದಲೇ ಹೇಳಿದಂತೆ ಒಂದೊಂದು ದಿನಕ್ಕೆ ಅದರದೇ ಆದ ವಿಶೇಷತೆ ಇದೆ ಹಾಗೆ ಸೋಮವಾರ ಶಿವನ ಆರಾಧನೆ ಮಾಡಿದರೆ ಮಂಗಳವಾರ ಆಂಜನೇಯನ ಆರಾಧನೆ ಮಾಡ್ತಾರೆ ಎಲ್ಲರಿಗೂ ಗೊತ್ತಾಯಿತು ಗುರುವಾರದಂದು ಗುರು ರಾಯರ ಆರಾಧನೆ ಮಾಡ್ತಾರೆ ಶುಕ್ರವಾರದ ದಿನದಂದು ಅಮ್ಮನವರ ಆರಾಧನೆ ಮಾಡುವುದು ಶ್ರೀಮಹಾಲಕ್ಷ್ಮೀ ದೇವಿಯ ಆರಾಧನೆ ಮಾಡುವುದು ಶ್ರೇಷ್ಠ ಹಾಗೆ ಶನಿವಾರದ ದಿನದಂದು ತಪ್ಪದೇ ಶನಿದೇವನ ಗುಡಿಗೆ ಹೋಗಿ ಶನಿದೇವನಿಗೆ ನಮಸ್ಕರಿಸಿ ಬಂದದ್ದೇ ಆದಲ್ಲಿ ಶನಿದೇವನ ಕೃಪಾಕಟಾಕ್ಷ ನಿಮಗೆ ಲಭಿಸುತ್ತದೆ.

ಇದೆಲ್ಲ ಒಂದೆಡೆಯಾದರೆ ಮುಖ್ಯವಾಗಿ ಈ ಬುಧವಾರದಂದು ವಿಘ್ನೇಶ್ವರನ ಆರಾಧನೆ ಮಾಡುವುದು ವಿಶೇಷವಾಗಿರುತ್ತದೆ ಈ ವಿಶೇಷ ದಿನದಂದು ಯಾರು ವಿಘ್ನೇಶ್ವರನ ಪೂಜೆ ಮಾಡ್ತಾರೆ ಬಾರಿನಲ್ಲಿ ಎದುರಾಗುತ್ತಿರುವ ವಿಘ್ನಗಳು ದೂರವಾಗುತ್ತದೆ ಹೌದು ಪ್ರತಿದಿನ ವಿಘ್ನೇಶ್ವರನ ಆರಾಧನೆ ಮಾಡುವುದು ಉತ್ತಮವೇ ಆದರೆ ವಿಶೇಷವಾಗಿ ಬುಧವಾರದ ದಿನದಂದು ಯಾರೂ ಗಜಾನನನ ಆರಾಧನೆ ಮಾಡ್ತಾರೆ ಅಂಥವರ ಸಮಸ್ಯೆಗಳನ್ನು ಆ ದೇವ ಆದಷ್ಟು ಬೇಗ ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ ಹಾಗೇ ಇದು ಬಹಳಷ್ಟು ಜನರ ಬಾಳಿನಲ್ಲಿ ನಿಜವಾಗಿಯೂ ನಿರೂಪಿಸಲ್ಪಟ್ಟಿದೆ.

ಹೇಗೆ ಬಹುತೇಕಾರ್ಯಕ್ರಮಗಳಲ್ಲಿ ಶುಭ ಸಮಾರಂಭಗಳಲ್ಲಿ ಮೊದಲು ವಿಘ್ನೇಶ್ವರನ ಆರಾಧನೆ ಮಾಡಿ ಪೂಜೆ ಸಮಾರಂಭಗಳನ್ನು ಶುರು ಮಾಡುತ್ತಾರೆ ಹಾಗೆ ನಮ್ಮ ಬಾಳಿನಲ್ಲಿ ನಾವು ಪ್ರತಿದಿನ ವಿಘ್ನೇಶ್ವರನ ಆರಾಧನೆಯಿಂದ ದಿನ ಶುರುಮಾಡಿದರೆ ಆ ದಿನ ಎದುರಾಗುವ ವಿಘ್ನಗಳೆಲ್ಲ ದೂರ ಮಾಡಿಕೊಳ್ಳಬಹುದು ಹಾಗೆ ಬಾಳಿನಲ್ಲಿ ಆಗಾಗ ಕಷ್ಟಗಳು ವಿಪರೀತವಾಗಿ ಎದುರಾಗುತ್ತಲೆ ಇದೆ ಅನ್ನುವವರು, ತಪ್ಪದೆ ಬುಧವಾರದ ದಿನದಂದು ವಿಘ್ನೇಶ್ವರ ನ ಆರಾಧನೆ ಮಾಡಿ ಈ ದಿನದಂದು ವಿಘ್ನೇಶ್ವರನ ಗುಡಿಗೆ ಹೋಗಿ ಗಜಾನನ ದರ್ಶನ ಪಡೆದು ಬನ್ನಿ ಇದರಿಂದ ನಿಮ್ಮ ಬಾರಿನಲ್ಲಿ ಉಂಟಾಗುವ ಬದಲಾವಣೆಯನ್ನು ಕಾಣಬಹುದು.

ಬುಧವಾರದಂದು ವಿಘ್ನೇಶ್ವರನನ್ನು ಆರಾಧಿಸಲು ವಿಶೇಷ ದಿನವಾಗಿತ್ತು ಈ ದಿನ ಗಣಪತಿಗೂ ವಿಶೇಷ ದಿನ ಹಾಗೆ ಗಜಾನನ ಆರಾಧನೆ ಮಾಡುವವರಿಗೆ ವಿಶೇಷ ದಿನವಾಗಿದೆ. ಬಾಳಿನಲ್ಲಿ ಯಾವುದೇ ವಿಘ್ನಗಳಿಲ್ಲದೆ ವಿಘ್ನಗಳನ್ನು ನಿವಾರಣೆ ಮಾಡಲು ತಪ್ಪದೆ ವಿಘ್ನೇಶ್ವರನ ಆರಾಧನೆ ಮಾಡಿ ಬುಧವಾರದಿಂದ ದಿನದಂದು ವಿಘ್ನೇಶ್ವರನಿಗೆ ಗರಿಕೆ ಅನ್ನು ಸಮರ್ಪಿಸಿ. ವಿದ್ಯಾರ್ಥಿಗಳ ಪಾಲಿನ ಗುರುಗಳಾಗಿರುವ ವಿಘ್ನೇಶ್ವರನನ್ನು ಆರಾಧಿಸುವುದರಿಂದ ಓದಿನಲ್ಲಿ ಎದುರಾಗುತ್ತಿರುವ ಸಂಕಷ್ಟಗಳು ಕೂಡ ದೂರವಾಗುತ್ತದೆ ಹಾಗೆ ಮಕ್ಕಳು ಓದುವ ಕೋಣೆಯಲ್ಲಿ ತಪ್ಪದೆ ವಿಘ್ನೇಶ್ವರನ ಮೂರ್ತಿಯನ್ನು ಇರಿಸಿ ಇದರಿಂದ ಮಕ್ಕಳ ಮೇಲೆ ಸಕಾರಾತ್ಮಕ ಭಾವನೆಗಳು ಪ್ರಭಾವ ಬೀರುತ್ತದೆ.