ರವಿ ಚಣ್ಣನವರ್ ಅವರ ಬಾಲ್ಯದ ಕಷ್ಟದ ದಿನಗಳನ್ನ ನೀವು ಕೇಳಿದ್ರೆ ನಿಜ್ವಾಗ್ಲೂ ಕಣ್ಣಲ್ಲಿ ನೀರು ಬರುತ್ತೆ … ಇವರ ಜೀವನ ಕಥೆ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು

111

ಸಾಧಕರಿಗೆ ತಾವು ನಡೆದು ಬಂದ ದಾರಿಯನ್ನು ಮತ್ತೆ ನೆನಪಿಸಿಕೊಳ್ಳುವಂತಹ ಒಂದು ವೇದಿಕೆಯನ್ನು ಮಾಡಿಕೊಟ್ಟಿದ್ದು ಜೀ ಕನ್ನಡ ವಾಹಿನಿ ಹೌದು ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ತುಂಬಾನೇ ಒಳ್ಳೆಯ ಕಾರ್ಯಕ್ರಮ ಅದು ವೀಕೆಂಡ್ ವಿತ್ ರಮೇಶ್ ಈ ಒಂದು ಕಾರ್ಯಕ್ರಮವನ್ನು ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದರು .ಈ ಒಂದು ಕಾರ್ಯಕ್ರಮ ನಿಜಕ್ಕೂ ಬಹಳ ಯಶಸ್ಸು ಕೂಡಾ ಕಂಡಿತ್ತು ಬರೀ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಲ್ಲ ಹೊರ ರಾಜ್ಯಗಳಲ್ಲಿಯೂ ಈ ಒಂದು ಕಾರ್ಯಕ್ರಮ ಪ್ರಖ್ಯಾತಿ ಹೊಂದಿತ್ತು ಮತ್ತು ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹಲವಾರು ಸಾಧಕರು ಆ ಒಂದು ವೇದಿಕೆಯನ್ನು ಅಲಂಕರಿಸಿದ್ದರು .

ಅಂತಹ ಸಾಧಕರ ಪಟ್ಟಿಯಲ್ಲಿ ನಮ್ಮೆಲ್ಲರ ನೆಚ್ಚಿನ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ಕೂಡ ಬಂದಿದ್ದರೂ ನಿಜಕ್ಕೂ ಇವರು ಬಂದಂತಹ ಆ ಒಂದು ಎಪಿಸೋಡ್ ಎಲ್ಲರಿಗೂ ಕೂಡ ಮಾದರಿಯಾಗಿತ್ತು ಮತ್ತು ಇವರು ತಮ್ಮ ಬಾಲ್ಯದಲ್ಲಿ ಏನು ತುಂಬಾ ಸುಖದಿಂದ ದಿನಗಳನ್ನು ಕಳೆದಿರಲಿಲ್ಲ.ಕಷ್ಟದಿಂದಲೇ ಮನೆಯ ಜವಾಬ್ದಾರಿಗಳನ್ನು ಕೂಡ ಹೊತ್ತುಕೊಂಡು ಇತ್ತ ವಿದ್ಯಾಭ್ಯಾಸವನ್ನು ಕೂಡ ಚೆನ್ನಾಗಿ ಮಾಡಿಕೊಂಡು ಮುಂದೆ ಒಂದು ದಿನ ಐಪಿಎಸ್ ಅಧಿಕಾರಿ ಆಗೇ ಆಗುತ್ತೇನೆ ಅನ್ನೋ ಒಂದು ಕನಸನ್ನು ಭದ್ರವಾಗಿ ಇಟ್ಟುಕೊಂಡು ಇದೀಗ ರವಿ ಡಿ ಚನ್ನಣ್ಣನವರ ಒಬ್ಬ ಗ್ರೇಟ್ ಐಪಿಎಸ್ ಅಧಿಕಾರಿಯಾಗಿದ್ದಾರೆ .

ಇವರ ಬಗ್ಗೆ ಮಾತನಾಡಲು ಪದಗಳೇ ಸಾಲದು ಯಾಕೆ ಅಂತೀರಾ ಸ್ನೇಹಿತರೇ ಬಡ ಕುಟುಂಬದಲ್ಲಿ ಹುಟ್ಟಿದ್ದರೂ ಈಗ ಐಪಿಎಸ್ ಅಧಿಕಾರಿಗಳು ಆಗಿದ್ದರೂ ಕೂಡ ರವಿ ಡಿ ಚನ್ನಣ್ಣನವರ ಹೊಲದಲ್ಲಿ ಕೆಲಸ ಮಾಡುತ್ತಾರೆ ಮತ್ತು ಮಕ್ಕಳಿಗೆ ಐಪಿಎಸ್ ಟ್ರೈನಿಂಗ್ ಕೂಡ ನೀಡುತ್ತಾರೆ ಇವರು .ವೀಕೆಂಡ್ ವಿತ್ ರಮೇಶ್ ನಲ್ಲಿ ಇವರ ಬಾಲ್ಯದಲ್ಲಿ ಶಿಕ್ಷಕರಾಗಿದ್ದವರು ಕೂಡ ಕರೆಸಿದ್ದರು ಮತ್ತು ಇವರ ಹಲವಾರು ಸ್ನೇಹಿತರನ್ನು ಕೂಡ ಕಾರ್ಯಕ್ರಮಕ್ಕೆ ಕರೆಸಿದ್ದರು ನಿಜಕ್ಕೂ ಇಂತಹ ಸಾಧಕರನ್ನು ಕರೆಸಿ ಎಲ್ಲರಲ್ಲಿಯೂ ಕೂಡ ಹುರಿದುಂಬಿಸುವ ಕೆಲಸವನ್ನು ಮಾಡುತ್ತಿರುವ ವೀಕೆಂಡ್ ವಿತ್ ರಮೇಶ್ ಗೆ ನಮ್ಮ ಕರ್ನಾಟಕದ ಜನತೆಯ ಪರವಾಗಿ ದೊಡ್ಡ ಧನ್ಯವಾದಗಳು .

ಇನ್ನು ರವಿ ಡಿ ಚನ್ನಣ್ಣನವರ ಬಾಲ್ಯದ ದಿನಗಳ ಬಗ್ಗೆ ಮಾತನಾಡಲು ಹೋದರೆ ಇವರು ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಶಾಲೆಗೆ ಸರಿಯಾಗಿ ಹೋಗುತ್ತಿಲ್ಲವಂತೆ ಆದರೆ ಅವರ ಶಿಕ್ಷಕಿ ಒಮ್ಮೆ ಇದರ ಬಗ್ಗೆ ಕೇಳಿದಾಗ ರವಿ ಅವರು ಹೇಳಿದ್ದೇನು .ಅಂದರೆ ನಮ್ಮ ಮನೆಯಲ್ಲಿ ತುಂಬಾ ಕಷ್ಟ ಇದೆ ಆದ್ದರಿಂದ ನಾನು ಸರಿಯಾಗಿ ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಉತ್ತರಿಸಿದ್ದರಂತೆ ಇದನ್ನು ಕೇಳಿ ಶಿಕ್ಷಕಿಗೆ ಬಹಳ ಅಚ್ಚರಿ ಅನಿಸುತ್ತದೆ ಆಮೇಲೆ ಶಿಕ್ಷಕಿ ಆ ಹುಡುಗನಿಗೆ ನೀನು ಹನ್ನೊಂದು ಗಂಟೆಗೆ ಶಾಲೆಗೆ ಬಂದರೂ ನಾನು ನಿನ್ನನ್ನು ಸೇರಿಸಿಕೊಳ್ಳುತ್ತೇನೆ ನೀನು ಕೆಲಸ ಮುಗಿಸಿ ಶಾಲೆಗೆ ಎಂದು ಹೇಳುತ್ತಾರೆ .

ನಿಜಕ್ಕೂ ರವಿ ಡಿ ಚನ್ನಣ್ಣನವರ ಆ ಒಂದು ಕಷ್ಟದ ದಿನಗಳ ಬಗ್ಗೆ ಕೇಳುತ್ತಾ ಇದ್ದರೆ ನಮಗೂ ಕೂಡ ಏನನ್ನಾದರೂ ಸಾಧಿಸಬೇಕು ಅನ್ನೋ ಒಂದು ಹುಮ್ಮಸ್ಸು ನಮ್ಮಲ್ಲಿ ಬರುತ್ತದೆ ಮತ್ತೆ ಹೇಳಬೇಕೆಂದರೆ ಸ್ನೇಹಿತರೇ ಇವರ ಬಾಲ್ಯದಲ್ಲಿ ಇವರನ್ನು ಎಲ್ಲರೂ ಕೆಂಪಯ್ಯ ಎಂದು ಕರೆಯುತ್ತಿದ್ದರಂತೆ.ರವಿ ಡಿ ಚೆನ್ನಣ್ಣನವರ್ ಆಗಲೇ ನನಗೆ ಐಪಿಎಸ್ ಅಧಿಕಾರಿ ಅಂತ ಕರಿ ಎಂದು ಹೇಳುತ್ತಿದ್ದರಂತೆ ನಿಜಕ್ಕೂ ಇದನ್ನೆಲ್ಲ ನೆನೆಸಿಕೊಂಡರೆ ತುಂಬಾನೇ ಆಶ್ಚರ್ಯ ಅನಿಸುತ್ತದೆ ಇಂತಹ ಕಷ್ಟದ ದಿನಗಳಲ್ಲಿಯೂ ಇದೀಗ ಒಬ್ಬ ಸಕ್ಸಸ್ ಮ್ಯಾನ್ ಆಗಿದ್ದಾರೆ ಅಂದರೆ ಇವರಿಗೆ ಒಂದು ಸಲ್ಯೂಟ್ .ಹೌದು ಸ್ನೇಹಿತರೇ ಕಷ್ಟಪಟ್ಟರೆ ಸುಖ ಇದ್ದೇ ಇರುತ್ತದೆ ಅನ್ನೋದಕ್ಕೆ ಇವರೇ ಕಾರಣ ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು .