ರಾತ್ರಿಯಲ್ಲ ಎಷ್ಟೇ ಪ್ರಯತ್ನಪಟ್ಟರು ನಿದ್ರೆ ಬರುತ್ತಿಲ್ಲ ಅಂದ್ರೆ ಇದನ್ನ ಹೀಗೆ ಬಳಸಿ ಸಾಕು ಕೇವಲ ಐದೇ ನಿಮಿಷದಲ್ಲಿ ನಿದ್ರೆ ಬರುತ್ತದೆ…

298

ನಿದ್ರಾಹೀನತೆ ಸಮಸ್ಯೆ ಎಂಬುದು ನಿಮ್ಮನ್ನೂ ಸಹ ಬಾಧಿಸುತ್ತಿದ್ದಲ್ಲಿ ಅದಕ್ಕೆ ತಕ್ಕ ಪರಿಹಾರ ಇಲ್ಲಿದೆ ನೋಡಿ ಹೌದು ಯಾವುದೇ ಮಾತ್ರೆಗಳಿಲ್ಲದೆ ಚಿಕಿತ್ಸೆ ಪಡೆದುಕೊಳ್ಳದೆ ಮತ್ತು ಯಾವುದೇ ಟೆಕ್ನಿಕ್ ಬಳಸದೆ ಕೇವಲ ಮನೆಮದ್ದುಗಳನ್ನು ಪಾಲಿಸುವ ಮೂಲಕ ನಿಮ್ಮ ಈ ಸಮಸ್ಯೆಗೆ, ದೊಡ್ಡ ತೊಂದರೆಗೆ ಶಮನ ಪಡೆದುಕೊಳ್ಳಬಹುದು.

ಹಾಗಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ ತಿಳಿದು ಈ ಮನೆ ಮದ್ದು ಯಾವುದು ಎಂದು ತಿಳಿದುಕೊಂಡು ನಿಮ್ಮ ನಿದ್ರಾಹೀನತೆ ಸಮಸ್ಯೆಗೆ ಗುಡ್ ಬಾಯ್ ಹೇಳಿ ಕೇವಲ ಹತ್ತೇ ನಿಮಿಷಗಳಲ್ಲಿ.ಹೌದು ನಿದ್ರೆಯೆಂಬುದು ಮನುಷ್ಯನಿಗೆ ಎಷ್ಟು ಮುಖ್ಯ ಅಂತ ಹೇಳುವುದಾದರೆ ನಮ್ಮ ನಾಳಿನ ಆರೋಗ್ಯ ಹಿಂದಿನ ದಿನದ ನಿದ್ರೆಯ ಮೇಲೆ ನಿಂತಿರುತ್ತದೆ ಅಂತೆ. ಈ ಮಾತು ಎಷ್ಟು ಸತ್ಯ ಅಂದರೆ ನಾವು ಈ ರಾತ್ರಿ ಕಣ್ಣು ತುಂಬ ನಿದ್ರೆ ಮಾಡಿದಾಗ ಮಾತ್ರ ನಾಳೆಯ ದಿನ ಸಂಪೂರ್ಣ ದಿವಸ ಖುಷಿಯಿಂದ ಸಂತಸದಿಂದ ನೆಮ್ಮದಿಯಾಗಿ ಹಾಗೂ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

ಆದರೆ ಯಾವಾಗ ನಾವು ಸರಿಯಾಗಿ ನಿದ್ರೆ ಮಾಡದೆ ಹೋಗ್ತೇವೆ ಮಾರನೇ ದಿನ, ಆ ಸಂಪೂರ್ಣ ದಿನವೂ ನಿರಾಸಕ್ತಿ ಇಂದ ಕೂಡಿರುತ್ತೆ ತಲೆನೋವು ತಲೆ ಭಾರ ವಾಕರಿಕೆ ಬಂದಂತಾಗುವುದು ಯಾವುದರಲ್ಲಿಯೂ ಆಸಕ್ತಿ ತೋರದಿರುವ ಹಾಗೆ ಆಗುವುದು ಈ ಎಲ್ಲಾ ತೊಂದರೆಗಳು ಉಂಟಾಗುತ್ತದೆ. ಇದರಿಂದ ಯಾವ ಕೆಲಸದಲ್ಲಿಯೂ ಕೂಡ ನಮ್ಮನ್ನ ನಾವು ತೊಡಗಿಸಿಕೊಳ್ಳಲು ಆಗದಿರುವಷ್ಟು ಕಿರಿಕಿರಿ ಉಂಟಾಗುತ್ತಾ ಇರುತ್ತದೆ.

ಹಾಗಾಗಿ ಯಾಕೆ ಈ ಎಲ್ಲ ತೊಂದರೆಗಳನ್ನು ಅನುಭವಿಸ ಬೇಕು ನಮ್ಮ ಮನೆಯಲ್ಲಿಯೇ ನಾವು ಮಾಡಿಕೊಳ್ಳಬಹುದಾದ ಸರಳ ಪರಿಹಾರ ಇರುವಾಗ ಅಲ್ವಾ.ಅದಕ್ಕಾಗಿ ನೀವು ಮಾಡಬೇಕು ಇದೊಂದು ಚಿಕ್ಕ ಕೆಲಸ, ದಿನಪೂರ್ತಿ ದುಡಿದು ದಣಿದು ಬಂದಾಗ ರಾತ್ರಿ ಊಟವಾದ ಮೇಲೆ ಕಣ್ಣು ತುಂಬ ನಿದ್ರೆ ಬಾರದೆ ಹೋದಾಗ ಇನ್ನಷ್ಟು ಸ್ಟ್ರೆಸ್ ಹೆಚ್ಚುತ್ತದೆ. ಬೆಳಿಗ್ಗೆ ಇಂದ ಹೆಚ್ಚಿರುವ ತಲೆಬಿಸಿ ಸ್ಟ್ರೆಸ್ ರಾತ್ರಿ ಕೂಡ ಕಡಿಮೆ ಆಗದೆ ಹೋದಾಗ, ಆ ಕಿರಿಕಿರಿ ಆ ನೋವು ತೊಂದರೆ ಎಷ್ಟಿರುತ್ತದೆ ಎಂದು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಗೊತ್ತಿರುತ್ತೆ ಆ ನೋವು.

ಈಗ ಮನೆ ಮದ್ದು ಕುರಿತು ತಿಳಿಯೋಣ ಇದಕ್ಕಾಗಿ ಬೇಕಾಗಿರುವುದು 250ಗ್ರಾಂ ಒಣ ಖರ್ಜೂರ, ಖರ್ಜೂರದ ಒಳಗೆ ಇರುವ ಬೀಜವನ್ನು ತೆಗೆದು ಇದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು.100ಗ್ರಾಂ ಬಾದಾಮಿ ಇದನ್ನು ಕೂಡ ಸ್ವಲ್ಪ ಸಮಯ ತುಪ್ಪದಲ್ಲಿ ಹುರಿದು ತೆಗೆದುಕೊಳ್ಳಬೇಕು.50ಗ್ರಾಂ ಕುಂಬಳಕಾಯಿ ಬೀಜವನ್ನು ತೆಗೆದುಕೊಳ್ಳಬೇಕು. 25ಗ್ರಾಂ ಗಸಗಸೆ ಈ ಮನೆಮದ್ದಿಗೆ ಇಷ್ಟು ಪದಾರ್ಥಗಳು ಬೇಕಿರುತ್ತದೆ.

ಒಣ ಖರ್ಜೂರ ಬಾದಾಮಿ ಗಸಗಸೆ ಕುಂಬಳಕಾಯಿ ಬೀಜ ಇವುಗಳನ್ನ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ, ಈ ಪುಡಿಯನ್ನು ಏರ್ ಟೈಟ್ ಕಂಟೈನರ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಬೇಕು. ಪ್ರತಿದಿನ ನೀವು ಈ ತಯಾರಿ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ರಾತ್ರಿ ಮಲಗಲು ಹೋಗುವ ಮುನ್ನ ಬೆಚ್ಚಗಿನ ನೀರಿಗೆ ಈ ಮಿಶ್ರಣವನ್ನು ಸೇರಿಸಿ ಕುಡಿಯಬೇಕು.

ಬೆಚ್ಚಗಿನ ಹಾಲು ನಿದ್ರೆ ತರಿಸಲು ಸಹಕಾರಿ ಜತೆಗೆ ಶರೀರದಲ್ಲಿ ಎಷ್ಟೇ ನೋವು ಸ್ಟ್ರೆಸ್ ಆಯಾಸ ಇದ್ದರೂ ಅದನ್ನು ನಿವಾರಣೆ ಮಾಡುತ್ತದೆ ಹಾಗೆ ಈ ಬಾದಾಮಿ ಖರ್ಜೂರ ಗಸಗಸೆ ಕುಂಬಳಕಾಯಿ ಬೀಜ ಇವುಗಳು ಕೂಡ ಆಯಾಸ ನಿವಾರಣೆ ಮಾಡಲು ಸಹಾಯಕಾರಿ, ಆದಷ್ಟು ಬೇಗ ನಿದ್ರೆ ತರಿಸಲು ಕಾರಣವಾಗುತ್ತೆ.ಈ ಸುಲಭ ಪರಿಹಾರ ನಿಮ್ಮ ನಿದ್ರಾಹೀನತೆಗೆ ಬಹಳಷ್ಟು ಬೇಗ ಪರಿಹಾರ ಕೊಡುತ್ತದೆ ಹಾಗಾಗಿ ಈ ಆರೋಗ್ಯಕ್ಕೆ ಉತ್ತಮವಾಗಿರುವ ಮನೆಮದ್ದನ್ನು ಪಾಲಿಸಿ ಆರೋಗ್ಯಕರ ನಿದ್ರೆ ಮಾಡಿ.