ರಾತ್ರಿ ಸಮಯದಲ್ಲಿ ಸಡನ್ನಾಗಿ ಬರುವ ಈ ಕೆಮ್ಮಿನ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ, ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಿಮಗೂ ಕೂಡ ಎಂದಾದರೂ ರಾತ್ರಿ ವೇಳೆ ಮಲಗಿದ್ದಾಗ ಕೂಡಲೆ ಕೆಮ್ಮು ಕಾಣಿಸಿಕೊಂಡು ನಿದ್ರೆ ಕೊಡದೆ ಕಾಡಿಸುತ್ತಿದ್ದರೆ ಅದಕ್ಕಾಗಿ ಈ ಪರಿಹಾರವನ್ನು ಪಾಲಿಸಿ.
ಹೌದು ಸಾಮಾನ್ಯವಾಗಿ ಕೆಮ್ಮು ಶೀತ ಜ್ವರ ಇವೆಲ್ಲವೂ ಹೇಳಿಕೇಳಿ ಬರುವುದಿಲ್ಲ ಮತ್ತು ರಾತ್ರಿ ವೇಳೆ ಬರುವ ಈ ಕೆಮ್ಮು ರಾತ್ರಿಪೂರ್ತಿ ನಿದ್ರೆಯನ್ನು ಕೆಡಿಸಿ ಬಿಡುತ್ತದೆ ಅಂತಹ ಸಮಯದಲ್ಲಿ ಯಾವ ಪರಿಹಾರ ಮಾಡೋದು ಬಿಡೋದು ಅನ್ನೋದೇ ಗೊತ್ತಿರುವುದಿಲ್ಲ ನೋಡಿ.
ಅಷ್ಟೆಲ್ಲಾ ಕೂಡಲೇ ಮಾತ್ರೆಗಳು ಕೂಡ ಕೈಗೆ ಸಿಗೋದಿಲ್ಲ ಸಿರಪ್ ಕೂಡ ಸಿಗೋದಿಲ್ಲ ಆದರೆ ಅಂಥ ಸಮಯದಲ್ಲಿ ಮಾತ್ರೆ ಸಿರಪ್ ಗಳು ಇವುಗಳನ್ನು ನೀವು ತೆಗೆದುಕೊಂಡು ಕೆಮ್ಮನ್ನು ಶಮನಮಾಡಿಕೊಳ್ಳುತ್ತಾರೆ ಅಂದರೆ ಅದು ಅಷ್ಟು ಪ್ರಭಾವವಾಗಿ ಕೆಲಸ ಮಾಡುವುದಿಲ್ಲ ಆದರೆ ನೀವೇನಾದರೂ ಇಂತಹ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ಇದೊಂದು ಕಷಾಯವನ್ನು ಕೂಡಲೇ ತಯಾರಿಸಿಕೊಂಡು ಕುಡಿದು ಮಲಗಿದರೆ ಗಂಟಲಿಗೂ ಕೂಡ ಹಾಯ್ ಅನಿಸುತ್ತೆ ಜೊತೆಗೆ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ ಹಾಗಾದರೆ ಬನ್ನಿ ತಿಳಿಯೋಣ ಇದನ್ನು ಮಾಡಿಕೊಳ್ಳುವ ವಿಧಾನ.
ಕೆಮ್ಮು ವಿಪರೀತವಾದರೂ ಅಥವಾ ರಾತ್ರಿ ವೇಳೆ ಇದ್ದಕ್ಕಿದ್ದ ಹಾಗೆ ಕೆಮ್ಮು ಕಾಣಿಸಿಕೊಂಡಾಗ ಅದನ್ನು ಪರಿಹಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಕೇವಲ ಎರಡೇ ಹೌದು ನೀವು ಅಂದುಕೊಳ್ಳಬಹುದು ಈ ಹಾಳು ಕೆಮ್ಮು ಇವತ್ತಿಗೆ ಸರಿಹೋಗೋದಿಲ್ಲ ನಿದ್ರೆ ಕೊಡೋದಿಲ್ಲ ಅಂತ.
ಆದ್ರೆ ನೀವೇನಾದರೂ ಈ ಪರಿಹಾರವನ್ನು ಮಾಡಿ ಮಲಗಿದರೆ ಅಥವಾ ದಿನವಿಡೀ ಪೂರ್ಣ ಕೆಮ್ಮು ಇವತ್ತು ನಿದ್ರೆ ಕೂಡ ಮಾಡಲು ಆಗೋದಿಲ್ಲ ಅಂತ ಅಂದುಕೊಂಡರೂ ಕೂಡ ಚಿಂತಿಸಬೇಡಿ ಮಲಗುವ ಮುನ್ನ ಈ ಕಷಾಯ ಮಾಡಿ ಕುಡಿಯಿರಿ ಅದು ಹೇಗೆ ರಾತ್ರಿ ಕೆಮ್ಮು ಬರುತ್ತೆ ಮತ್ತು ನಿದ್ರೆ ಹಾಳಾಗುತ್ತೆ ನೋಡಿ.
ಹೌದು ಒಬ್ಬ ವ್ಯಕ್ತಿಗೆ ಆರಾಮ ಇಲ್ಲ ಎಂದಾಗ ದೇಹಕ್ಕೆ ವಿಶ್ರಾಂತಿ ಬಹಳ ಬೇಕಾಗಿರುತ್ತದೆ ಆದರೆ ನಿದ್ರೆ ಕೊಡದಿರುವ ಅನಾರೋಗ್ಯ ಕಾಡಿದಾಗ ಇನ್ನಷ್ಟು ಬಳಲು ಬಿಡುತ್ತೇವೆ.ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ಈ ಕಷಾಯ ಯಾರು ಬೇಕಾದರೂ ಮಾಡಿ ಕುಡಿಯಬಹುದು ಹತ್ತು ವರ್ಷ ಮೇಲ್ಪಟ್ಟವರು.
ಮಾಡುವುದು ತುಂಬ ಸುಲಭ ಅರಿಶಿಣ ಮತ್ತು ಮೆಣಸಿನ ಕಾಳುಗಳು ಇದಕ್ಕೆ ಬೇಕಾಗಿರುತ್ತದೆ ಅರಿಶಿಣ ಮತ್ತು ಮೆಣಸಿನ ಕಾಳುಗಳನ್ನು ಮಿಶ್ರ ಮಾಡಿ ಅದನ್ನ ಕುಟ್ಟಿ ಪುಡಿಮಾಡಿಕೊಳ್ಳಿ ನೀರು ಬಿಸಿ ಇಟ್ಟು ಆ ನೀರಿಗೆ ಈ ಪುಡಿಯನ್ನು ಹಾಕಿ ನೀರು ಅರ್ಧದಷ್ಟು ಆಗಬೇಕು ಅಷ್ಟು ಪ್ರಮಾಣದಲ್ಲಿ ನೀರನ ಕುದಿಸಿಕೊಂಡು ಶೋಧಿಸಿಕೊಂಡು ಇದಕ್ಕೆ ಏನನ್ನೂ ಮಿಶ್ರಣ ಮಾಡದೆ ಹಾಗೆ ಕುಡಿಯಬೇಕು.
ಇದೊಂದು ಪರಿಹಾರವಾದರೆ ಮಕ್ಕಳಿಗೆ ಕಾಡುವ ಕೆಮ್ಮು ಶೀತಕ್ಕೆ ಪರಿಹಾರ ಏನೆಂದರೆ ಹಿಪ್ಪಲಿ ಅರಿಶಿಣದ ಕೊಂಬು ಮೆಣಸು ವೀಳ್ಯದೆಲೆ.ಇಷ್ಟು ಪದಾರ್ಥಗಳನ್ನು ಕುಟ್ಟಿ ಪುಡಿ ಮಾಡಿಕೊಂಡು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಇದನ್ನು ಮಕ್ಕಳಿಗೆ ಕೇವಲ ಕಾಲು ಚಮಚದಷ್ಟು ಅದಕ್ಕೂ ಕಡಿಮೆ ಪ್ರಮಾಣದಲ್ಲಿ ದಿನಕ್ಕೆ 4 ಬಾರಿ ಇದನ್ನೂ ತಿನ್ನಿಸುತ್ತ ಬರಬೇಕು.
ಈ ಸರಳ ವಿಧಾನಗಳನ್ನು ಪಾಲಿಸಿ ಈ ಮನೆಮದ್ದಿನಿಂದ ಕೆಮ್ಮು ಶೀತದಂತಹ ಸಮಸ್ಯೆ ಪರಿಹಾರವಾಗುತ್ತದೆ ಕೇವಲ ಹಿಪ್ಪಲಿ ಒಂದೇ ಸಾಕು ಕೆಮ್ಮು ನಿವಾರಣೆಗೆ. ಹಾಗಾಗಿ ಈ ಪವರ್ ಫುಲ್ ಮನೆಮದ್ದನ್ನು ಪಾಲಿಸಿ ಕೆಮ್ಮಿನಿಂದ ಶಮನ ಪಡೆಯಿರಿ ಧನ್ಯವಾದ.