ಸಕ್ಕರೆ ಕಾಯಿಲೆ ಇರುವವರು , ಬೀಪಿ ಇರುವವರು ಈ ಒಂದು ಹಣ್ಣಿನ ಶರಬತ್ತು ಮಾಡಿ ಕುಡೀರಿ ಸಾಕು ..

277

ನಮಸ್ಕಾರಗಳು, ಶರಬತ್ತು ಹಣ್ಣು ನಿಮಗೆ ಗೊತ್ತಿರಬಹುದು ಈ ಹಣ್ಣಿನ ಜ್ಯೂಸ್ ಇದೀಗ ಅಂಗಡಿಗಳಲ್ಲಿ ದೊರೆಯುತ್ತಿವೆ ಆದರೆ ಶರಬತ್ತು ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ?ಹೌದು ಸ್ನೇಹಿತರೆ ಶರಬತ್ತು ಹಣ್ಣು ಇದನ್ನು ಗಡಿಯಾರದ ಹಣ್ಣು ಅಂತ ಕೂಡ ಕರೆಯುತ್ತಾರೆ ಯಾಕೆಂದರೆ ಈ ಶರಬತ್ತು ಹಣ್ಣು ಬಿಡುವ ಗಿಡದಲ್ಲಿ ಅರಳುವ ಹೂವು 3 ಮುಳ್ಳುಗಳನ್ನು ಹೊಂದಿರುವ ಕಾರಣ ಇದನ್ನು ಗಡಿಯಾರದ ಹಣ್ಣು ಅಂತ ಕೂಡ ಕೆಲವರು ಕರೆಯುತ್ತಾರೆ ಈ ಹಣ್ಣಿನ ಮೇಲೆ ಈಗಾಗಲೇ ಬಹಳಷ್ಟು ಸಂಶೋಧನೆಗಳನ್ನು ನಡೆಸಿದ್ದು, ಸಂಶೋಧನೆಯಲ್ಲಿ ತಿಳಿದು ಬಂದಿರುವುದೇನೆಂದರೆ ಶರಬತ್ತು ಹಣ್ಣಿನಲ್ಲಿರುವ ಪೋಷಕಾಂಶಗಳು ಬಹಳಷ್ಟು ಮನುಷ್ಯನ ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು. ಹಾಗಾಗಿ ಶರಬತ್ತು ಹಣ್ಣು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೇರಳವಾಗಿ ಕಾಣಸಿಗುತ್ತಿದೆ ಹಾಗೆ ಶರಬತ್ತು ಹಣ್ಣಿನ ಬಳಕೆ ಕೂಡ ಹೆಚ್ಚುತ್ತಿದೆ.

ಶರಬತ್ತು ಹಣ್ಣಿನ ಬಗ್ಗೆ ಹೇಳುವುದಾದರೆ ಈ ಹಣ್ಣಿನ ಸಿಪ್ಪೆ ಅದರೊಳಗಿರುವ ಬೀಜ, ಈ ಹಣ್ಣು ಬಿಡುವ ಗಿಡದಲ್ಲಿರುವ ಹೂವನು ಎಲ್ಲವೂ ಕೂಡ ಹೆಚ್ಚಿನ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿದ್ದು, ಈ ಹಣ್ಣು ಅಧಿಕವಾದ ವಿಟಮಿನ್ ಸಿ ಜೀವಸತ್ವವನ್ನು ಹೊಂದಿದೆ.ಸಾಮಾನ್ಯವಾಗಿ ವಿಟಮಿನ್ ಸಿ ಜೀವಸತ್ವವನ್ನು ಹೊಂದಿರುವ ಹಣ್ಣುಗಳು ತಿನ್ನುವುದರಿಂದ ಆಗುವ ಲಾಭಗಳೇನು ಅಂದರೆ ರೋಗ ನಿರೋಧಕ ಶಕ್ತಿ ವೃದ್ದಿ ಮಾಡುವುದಲ್ಲದೆ, ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಚಿಕ್ಕಪುಟ್ಟ ಅನಾರೋಗ್ಯ ಸಮಸ್ಯೆಗಳಿಂದ ಆಗಾಗ ಬಳಲುತ್ತಿದ್ದರೆ ಈ ರೀತಿ ವಿಟಮಿನ್ ಸಿ ಜೀವಸತ್ವ ಹೇರಳವಾಗಿ ಹಣ್ಣುಗಳನ್ನು ತಿನ್ನಬೇಕು ಆಗಿರುತ್ತದೆ ಹಾಗೂ ವೈದ್ಯರು ಕೂಡ ಅದನ್ನು ಸೂಚಿಸುತ್ತಾರೆ.

ಹಾಗಾಗಿ ಶರಬತ್ತು ಹಣ್ಣು ಕೂಡ ಅಧಿಕವಾದ ವಿಟಮಿನ್ ಸಿ ಜೀವಸತ್ವ ಹೊಂದಿದ್ದು ಇದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ಸಹಕಾರಿ. ಸಕ್ಕರೆ ಕಾಯಿಲೆಯಿಂದ ಬಳಲುವವರು ಈ ಶರಬತ್ತು ಹಣ್ಣಿನ ಪ್ರಯೋಜನ ಪಡೆದುಕೊಂಡರೆ ಶರಬತ್ತು ಹಣ್ಣು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೂ ಕೊಲೆಸ್ಟ್ರಾಲ್ ನಿಂದ ಬಳಲುತ್ತ ಇರುವವರು ಈ ಹಣ್ಣಿನ ಪ್ರಯೋಜನ ಪಡೆದುಕೊಳ್ಳಿ ಉತ್ತಮ ಆರೋಗ್ಯ ಪಡೆದುಕೊಳ್ಳಿ.

ಈ ಶರಬತ್ತು ಹಣ್ಣಿನ ಬಗ್ಗೆ ಇನ್ನಷ್ಟು ಹೇಳುವುದಾದರೆ ವಿಟಮಿನ್ ಸಿ ಅಧಿಕವಾಗಿರುವ ಈ ಶರಬತ್ತು ಹಣ್ಣು ಇದರ ಜೊತೆಗೆ ಕೆಲವೊಂದು ಖನಿಜಾಂಶಗಳನ್ನು ಕೂಡ ಹೊಂದಿದೆ. ಶರಬತ್ತು ಹಣ್ಣಿನಲ್ಲಿ ಮ್ಯಾಂಗನೀಸ್ ಮೆಗ್ನೀಶಿಯಂ ಸೋಡಿಯಂ ಫಾಸ್ಫರಸ್ ಹಾಗೆ ಝಿಂಕ್ ಕೂಡ ಇದೆ ಜೊತೆಗೆ ಪೊಲೈಟ್ ಅಂಶ ಕೂಡ ಇರುವುದರಿಂದ ಈ ಶರಬತ್ತು ಹಣ್ಣು ನಮ್ಮ ದೇಹಕ್ಕೆ, ದೇಹಕ್ಕೆ ಬೇಕಾಗಿರುವಂತಹ ಮುಖ್ಯವಾದ ಖನಿಜಾಂಶಗಳನ್ನು ಸಹ ನೀಡುತ್ತದೆ.

ಸಾಮಾನ್ಯವಾಗಿ ಸೀಸನಲ್ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಹಾಗಾಗಿ ನಿಮ್ಮ ಮನೆಯ ಸುತ್ತಮುತ್ತ ಜಾಗ ಇದ್ದರೆ ಅಥವಾ ಮನೆಯ ಮೇಲೆ ಜಾಗವಿದ್ದರೆ ಕೆಲವೊಂದು ಹಣ್ಣಿನ ಗಿಡಗಳನ್ನು ಬೆಳಸಿ ಹಾಗೂ ಬೆಳೆಯುವಂತಹ ಹಣ್ಣುಗಳ ಸೇವನೆ ಮಾಡಿ ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾದ ಪೋಷಕಾಂಶಗಳು ದೊರೆಯುತ್ತದೆ ಆದ್ದರಿಂದ ನೀವು ಹೆಚ್ಚಿನ ಕಾಲ ಆರೋಗ್ಯಕರ ವಾಗಿರಬಹುದು.

ಅಂತಹ ಸೀಸನಲ್ ಫ್ರುಟ್ ನಲ್ಲಿ ಈ ಶರಬತ್ತು ಹಣ್ಣು ಕೂಡ ಒಂದಾಗಿದೆ ಆದ್ದರಿಂದ ನೀವು ಮಾರುಕಟ್ಟೆಗೆ ಹೋಗಿ ಈ ಶರಬತ್ತು ಹಣ್ಣನ್ನು ಕೊಂಡು ಕೊಂಡು ಬರಬೇಕು ಅಂತ ಏನೂ ಇಲ್ಲ ಮನೆಯ ಸುತ್ತಮುತ್ತ ಜಾಗ ಇದ್ದರೆ ಅಲ್ಲಿಯೇ ಬೆಳೆಸಿಕೊಂಡು ಕಾಲಕ್ಕೆ ತಕ್ಕಂತೆ ಬಿಡುವ ಹಣ್ಣುಗಳನ್ನು ಸೇವಿಸಿ ಅದರ ಪ್ರಯೋಜನಗಳನ್ನು ಪಡೆದು ಹಣ್ಣಿನ ರುಚಿಯನ್ನು ಕೂಡ ಸವಿಯಬಹುದು. ಹೀಗಾಗಿ ಶರಬತ್ತು ಹಣ್ಣಿನಂತಹ ಪೋಷಕಾಂಶಭರಿತ ರಸಭರಿತ ಹಣ್ಣುಗಳನ್ನು ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ ಧನ್ಯವಾದ…