ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಸಾಲಬಾಧೆ ಮತ್ತು ನೆಮ್ಮದಿಯೆ ಇಲ್ಲ ಶಾಂತಿಯಿಲ್ಲ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಅನ್ನೋ ಒಂದು ಸಮಸ್ಯೆಯಿಂದ ನೀವೇನಾದರೂ ಬಳಲುತ್ತ ಇದ್ದರೆ, ಈ ಒಂದು ಸಮಸ್ಯೆಗಳಿಗೆ ಈಗಾಗಲೆ ಅನೇಕ ಪರಿಹಾರಗಳನ್ನು ಮಾಡಿ ಸಾಕಷ್ಟು ಹಣವನ್ನು ಖರ್ಚು ಮಾಡಿ ಸೋತು ಹೋಗಿದ್ದರೆ, ನಾವು ಈ ದಿನ ತಿಳಿಸುವಂತಹ ಈ ಚಿಕ್ಕ ಪರಿಹಾರವನ್ನು ಮಾಡಿ ಸಾಕು.
ಹೌದು ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಎರಡರಲ್ಲಿಯೂ ಕೂಡ ಉಲ್ಲೇಖವನ್ನು ಪಡೆದುಕೊಂಡಿರುವ, ಈ ಒಂದು ಪರಿಹಾರ ಪರಿಹಾರ ಶಾಸ್ತ್ರದಲ್ಲಿಯೂ ಕೂಡ ಉಲ್ಲೇಖವಾಗಿದೆ ಈ ಒಂದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ. ಹೌದು ಲಕ್ಷ್ಮೀ ದೇವಿಯ ಅನುಗ್ರಹ ಹೊಂದಿದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಉನ್ನತ ಆರ್ಥಿಕ ಪ್ರಬಲತೆ ಎಲ್ಲವೂ ಕೂಡ ಇರುತ್ತದೆ ಅದೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವೆ ಇಲ್ಲ ಅಂದರೆ ಎಂತಹ ಕೋಟ್ಯಾಧಿಪತಿಯು ಕೂಡ ಭಿಕ್ಷಾಧಿಪತಿ ಆಗಿಬಿಡುತ್ತಾನೆ, ಅಂತಹ ಒಂದು ಸಂದರ್ಭ ಬಂದುಬಿಡುತ್ತದೆ ಶ್ರೀ ಲಕ್ಷ್ಮೀ ದೇವಿಯೂ ಕೋಪಿಸಿಕೊಂಡರೆ.
ಜ್ಯೋತಿಷ್ಯ ಶಾಸ್ತ್ರವನ್ನು ನೀವೇನಾದರೂ ನಂಬುವುದಾದರೆ, ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ತಪ್ಪದೆ ನಿಮ್ಮ ಮನೆಯಲ್ಲಿ ಈ ಒಂದು ಪರಿಹಾರವನ್ನು ಮಾಡಿ, ಆ ಒಂದು ಪರಿಹಾರ ಏನು ಅಂದರೆ ಆಮೆಯ ವಿಗ್ರಹವನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಹೌದು ಆಮೆಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಗೆ ಹೋಲಿಸುತ್ತಾರೆ ಯಾಕೆ ಅಂದರೆ ಶ್ರೀ ಲಕ್ಷ್ಮೀ ದೇವಿಯ ತವರು ಅಂತಾನೇ ಹೇಳಬಹುದು ಸಮುದ್ರ ಈ ಸಮುದ್ರದಲ್ಲಿಯೇ ಇರುವ ಈ ಆಮೆಯನ್ನು ಏನಾದರೂ ನೀವು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡರೆ ಸಾಕ್ಷತ್ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಒಂದು ಮನೆಯ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.
ನಿಮ್ಮ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದೆ ಹಣಕಾಸಿನ ಸಮಸ್ಯೆ ಎದುರಾಗುತ್ತಿದೆ ಸಾಲಬಾಧೆ ಹೆಚ್ಚಾಗುತ್ತಾ ಇದೆ ಅಂದರೆ ಸ್ಫಟಿಕದ ಆಮೆಯನ್ನು ನೀವು ನಿಮ್ಮ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ, ಅಥವಾ ಮನೆಯಲ್ಲಿ ಮಕ್ಕಳಿದ್ದರೆ ವಿದ್ಯಾಭ್ಯಾಸ ಮಾಡುವಂತಹ ಮಕ್ಕಳಿದ್ದರೆ ಅಂತಹ ಮಕ್ಕಳು ಇರುವಂತಹ ಅಂದರೆ ಮಲಗುವ ಕೋಣೆಯಲ್ಲಿ ಹಿತ್ತಾಳೆಯ ಆಮೆಯನ್ನು ಇಡುವುದು ಒಳ್ಳೆಯದು.
ನೀವೇನಾದರೂ ಹೊಸದಾಗಿ ವ್ಯಾಪಾರ ವಹಿವಾಟುಗಳನ್ನು ಶುರು ಮಾಡುತ್ತಿದ್ದೀರಾ ಅನ್ನುವುದಾದರೆ ಅಂತಹ ಒಂದು ಸ್ಥಳದಲ್ಲಿ ಬೆಳ್ಳಿಯ ಆಮೆಯ ವಿಗ್ರಹವನ್ನ ಇಟ್ಟುಕೊಳ್ಳುವುದು ಒಳ್ಳೆಯದು ಇದರಿಂದ ಸಕಾರಾತ್ಮಕ ಶಕ್ತಿ ಅಲ್ಲಿ ನೆಲೆಸಿರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಇದು ನಾಶ ಮಾಡಲು ಉಪಯುಕ್ತಕಾರಿಯಾಗಿರುತ್ತದೆ.
ಇನ್ನು ಮನೆಯಲ್ಲಿ ಶಾಂತಿ ಇಲ್ಲ ಅನ್ನುವವರು ಯಾವಾಗಲೂ ಧನನಷ್ಟ ಆಗುತ್ತಿದೆ ಅನ್ನುವವರು ಮನೆಯಲ್ಲಿ ಲೋಹದ ಒಂದು ಆಮೆಯ ವಿಗ್ರಹವನ್ನ ಇಟ್ಟುಕೊಳ್ಳುವುದು ಒಳ್ಳೆಯದು, ಇದರಿಂದ ಧನ ನಷ್ಟವಾಗುವುದು ದೂರ ಹಾಕುತ್ತದೆ ಜೊತೆಗೆ ಮನೆಯಲ್ಲಿ ಶಾಂತಿ ಕೂಡ ನೆಲೆಸುತ್ತದೆ ಅಂತ ಹೇಳಲಾಗುತ್ತದೆ.
ಈ ರೀತಿಯಾಗಿ ನಿಮ್ಮ ಮನೆಯ ಸಮಸ್ಯೆಗಳಿಗೆ ತಕ್ಕ ಹಾಗೆ ಪರಿಹಾರವನ್ನಾಗಿ ಆಮೆಯ ವಿಗ್ರಹವನ್ನ ಇಟ್ಟುಕೊಳ್ಳಿ ಇದರಿಂದ ನಿಮ್ಮ ಮನೆಯ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ, ಜೊತೆಗೆ ಲಕ್ಷ್ಮಿದೇವಿಯ ಕೃಪಾಕಟಾಕ್ಷವು ಕೂಡ ಆಗುತ್ತದೆ ಅಷ್ಟೇ ಅಲ್ಲದೆ ಆಮೆಯ ವಿಗ್ರಹವನ್ನ, ನೀವು ಇಟ್ಟುಕೊಂಡಾಗ ಅದರ ಸುತ್ತಮುತ್ತ ಮಡಿ ಮೈಲಿಗೆಯನ್ನು ಪಾಲಿಸುವುದನ್ನು ಮರೆಯದಿರಿ, ಶ್ರೀ ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪವೆ ಆಗಿರುವ ಆಮೆಯು ಇರುವೆಡೆ ಮುಟ್ಟು ಚಟ್ಟು ಆಗಬಾರದು, ಇದರಿಂದ ದೋಷ ಉಂಟಾಗುತ್ತದೆ.