ಸರಕಾರದಿಂದ ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ 16 ಸಾವಿರ ಮನೆಗಳು ಬಿಡುಗಡೆ ಆಗಿವೆ .. ಮನೆ ಕಟ್ಟುವ ಹಂಬಲ ಇದ್ರೆ ಈಗ್ಲೇ ಅರ್ಜಿ ಹಾಕಿ…

160

ರಾಜಧಾನಿ ಬೆಂಗಳೂರು ಅದೆಂಥಹ ಬೃಹತ್ ಮಹಾನಗರವಾಗಿದೆ ಇಲ್ಲಿ ತಮ್ಮದೇ ಆದ ಸ್ವಂತ ಮನೆ ಹೊಂದಬೇಕು ಅಂದರೆ ಅದು ಕನಸಿನ ಮಾತಾಗಿರುತ್ತದೆ. ಇದೀಗ ಜನಸಾಮಾನ್ಯರು ಚಿಕ್ಕ ತುಂಡು ಭೂಮಿ ಕೊಂಡುಕೊಳ್ಳಬೇಕು ಅಂದರೂ ಬಹಳ ಕಷ್ಟವಾಗಿರುತ್ತದೆ ಹೌದೋ ಭೂಮಿ ಬೆಲೆ ಗಗನಕ್ಕೇರಿರುವ ಕಾರಣ ಮನೆ ಕೊಂಡುಕೊಳ್ಳುವುದು ಸಹ ಕಷ್ಟದ ಮಾತಾಗಿದೆ ಇನ್ನೂ ಬಡವರು ಸಾಮಾನ್ಯ ಜನರು ಮಧ್ಯಮವರ್ಗದವರು ಇಲ್ಲಿ ಭೂಮಿ ಕೊಂಡುಕೊಂಡು, ಮನೆ ಕಟ್ಟುತ್ತೇವೆ ಎಂಬುದು ಮಾತ್ರ ಕನಸಿನ ಮಾತು ಆಗಿದೆ. ಹೀಗಾಗಿ ಮನೆ ಕೊಂಡುಕೊಳ್ಳುವವರು ಬ್ಯಾಂಕ್‍ನಿಂದ ಸಾಲ ಮಾಡೋದು ಅನಿವಾರ್ಯ.

ಹೀಗೆ ಬ್ಯಾಂಕ್ ನಿಂದ ಸಾಲ ಪಡೆದು ಮನೆ ಕಟ್ಟಬೇಕು ಅಂತ ಅಂದುಕೊಳ್ಳುವವರ ಹೊರೆ ಕಮ್ಮಿ ಮಾಡಲೆಂದೇ ಇದೀಗ ಕೇಂದ್ರ ಸರ್ಕಾರ ಮಧ್ಯಮ ವರ್ಗದವರಿಗಾಗಿ ಶುಭ ಸುದ್ದಿಯೊಂದನ್ನು ನೀಡಿದೆ ಹೌದು ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟುವವರಿಗೆ ಲೋನ್ ಸೌಲಭ್ಯ ನೀಡಲಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. 2015ರಲ್ಲಿ ಪ್ರಾರಂಭಗೊಂಡ ಈ ಯೋಜನೆ ಇದರ ಅಡಿಯಲ್ಲಿ ಮನೆ ಖರೀದಿಸಲು ಬಯಸುವವರು, ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಸೌಲಭ್ಯವನ್ನು ನೀಡಲು ಸರ್ಕಾರ ಅನುಮೋದನೆ ನೀಡಿತ್ತು. ಅದರ ಪ್ರಕಾರ ಈಗ ಪಿಎಂ ಅವಾಜ್ ಯೋಜನೆ ಅಡಿಯಲ್ಲಿ 16,488 ಮನೆ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದು, ಇದರ ಅಡಿಯಲ್ಲಿ ನೀವು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಕುರಿತಾಗಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸಬಹುದು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

2015ರಿಂದ ಪ್ರಾರಂಭವಾದ ಈ ಯೋಜನೆ ಅಡಿಯಲ್ಲಿ ಇದರ ಪ್ರಯೋಜನವನ್ನು ಬಡವರ್ಗ ಮಾತ್ರ ಪಡೆದುಕೊಂಡಿತ್ತು. ಆದರೆ ಇದೀಗ ಗೃಹ ಸಾಲದ ಮೊತ್ತವನ್ನು ಹೆಚ್ಚು ಮಾಡುವ ಮೂಲಕ ಮಧ್ಯಮ ವರ್ಗದವರಿಗೂ ಅದರ ಲಾಭವನ್ನು ನೀಡಲಾಗುತ್ತ ಇದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ 16,488 ಮನೆಗಳ ನಿರ್ಮಾಣದ ಪ್ರಸ್ತಾಪಕ್ಕೆ ಹಸಿರು ನಿಶಾನೆ ತೋರಿದೆ. ಕೇಂದ್ರ ಸರಕಾರವು ಈ ಯೋಜನೆ ಅಡಿ ಮನೆ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಸಲುವಾಗಿ ಈ ಯೋಜನೆಯನ್ನು ಹಮ್ಮಿಕೊಂಡಿದ್ದು ಸಾಲದ ಮನೆ ಅಥವಾ ಫ್ಲ್ಯಾಟ್ ಖರೀದಿಸುವ ಜನರಿಗೆ ಸಬ್ಸಿಡಿ ಕೂಡ ನೀಡಲಾಗುತ್ತದೆ. ಸುಮಾರು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಭೆಯಲ್ಲಿ ಭಾಗವಹಿಸಿದ್ದವು. ಹಾಗಾದರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ? ತಿಳಿಯೋಣ ಬನ್ನಿ ಇದಕ್ಕೆ ಮೊದಲಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ನಂತರ ಮೊಬೈಲ್ ನಿಂದ ಸರ್ಕಾರಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಇದರ ಮೂಲಕ ಲಾಗಿನ್ ಐಡಿ ರಚಿಸಿಕೊಳ್ಳಬೇಕು.

ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಲಾಗಿನ್ ಐಡಿ ರಚಿಸಿಕೊಂಡ ಬಳಿಕ ನಿಮ್ಮ ಮೊಬೈಲ್ ಗೆ ಪಾಸ್ ವರ್ಡ್ ಗಳೇ ಸೋಲಾಗುತ್ತದೆ ನಂತರ ಇದರ ಸಹಾಯದಿಂದ ಲಾಗಿನ್ ಆಗಿ. ಬಳಿಕ ಅಗತ್ಯವಿರುವ ಮಾಹಿತಿಯನ್ನ ಇಲ್ಲಿ ನೀವು ನೀಡಬೇಕಾಗುತ್ತದೆ. PMAY G ಅಡಿಯಲ್ಲಿ ಮನೆ ಪಡೆಯಲು ಅರ್ಜಿ ಸಲ್ಲಿಸಿದ ಮೇಲೆ, ಕೇಂದ್ರ ಸರ್ಕಾರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ನಂತರ ಫಲಾನುಭವಿಗಳ ಅಂತಿಮ ಪಟ್ಟಿಯನ್ನು PMAYG ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.  ಇದಿಷ್ಟು ಆದ ಬಳಿಕ ಯೋಜನೆಯಡಿಯಲ್ಲಿ ಯಾರಲಾ ಲಾಭ ಪಡೆಯುತ್ತಾರೆ ಎಂಬುದನ್ನು ನೋಡುವುದಾದರೆ ಆವಾಜ್ ಅಂದರೆ ಮನೆ ಈ ಯೋಜನೆಯ ಮೂಲ ಉದ್ದೇಶ ಎಲ್ಲರಿಗೂ ಸೂರು ಕಲ್ಪಿಸಿ ಕೊಡುವುದಾಗಿ ಯಾರಿಗೆ ವಾಸಿಸಲು ಸ್ವಂತ ಸೂರು ಗಳು ಇರುವುದಿಲ್ಲ ಅವರು ಈ ಯೋಜನೆಯ ಫಲಾನುಭವಿಗಳಾಗಬಹುದು. ಇಲ್ಲಿ ನೀವು ತಿಳಿದುಕೊಳ್ಳಬೇಕಾದ ಹೆಸರೇನು ಅಂದರೆ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವು ಬಡ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನೂ ಮನೆ ಹೊಂದಿರುವವರು ಅಥವಾ ಅವರ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಮನೆ ಇಲ್ಲ ಎಂದರೆ ಅವರು ಈ ಯೋಜನೆಯಡಿಯಲ್ಲಿ ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲಾ.

ಹಾಗೆ ಮತ್ತೊಂದು ವಿಚಾರವೇನು ಅಂದರೆ ಈ ಯೋಜನೆಯಡಿಯಲ್ಲಿ ಫಲ ಪಡೆದುಕೊಳ್ಳಬೇಕು ಅಂದರೆ ಕುಟುಂಬ ಗಟ್ಟಿಮುಟ್ಟಾದ ಮನೆ ಹೊಂದಿರಬಾರದು ಹಾಗೆ ಆ ಕುಟುಂಬ ಇಲ್ಲಿಯವರೆಗೂ ಭಾರತ ಸರ್ಕಾರದ ಯಾವುದೇ ವಸತಿ ಯೋಜನೆ ಅಡಿಯಲ್ಲಿ ಪ್ರಯೋಜನ ಕುಟುಂಬ ಗಟ್ಟಿಮುಟ್ಟಾದ ಮನೆ ಹೊಂದಿರಬಾರದು, ಹಾಗೂ ಆ ಕುಟುಂಬ ಈ ತನಕ ಭಾರತ ಸರ್ಕಾರದ ಯಾವುದೇ ವಸತಿ ಯೋಜನೆಯ ಪ್ರಯೋಜನ ಪಡೆದಿರಬಾರದು, ಈ ಎಲ್ಲ ನಿಯಮಗಳು ಅರ್ಜಿ ಸಲ್ಲಿಸುವವರು ತಿಳಿದಿರಬೇಕಾಗುತ್ತದೆ ಹಾಗೆ ಗೃಹ ಸಾಲದ ಮೊತ್ತವನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರಿಗೂ ಕೂಡ ಲಾಭ ನೀಡಲಾಗ್ತಾ ಇದೆ. ಮನೆಯಿಲ್ಲದವರು ಈ ಯೋಜನೆ ಅಡಿ ಈಗಲೇ ಅರ್ಜಿ ಸಲ್ಲಿಸಬಹುದಾಗಿದೆ ಧನ್ಯವಾದ.