ಸಾಮುದ್ರಿಕ ಶಾಸ್ತ್ರ ಹೇಳುವ ಪ್ರಕಾರ ಮುಖ ಯಾವ ಯಾವ ಆಕಾರದಲ್ಲಿ ಇದ್ದರೆ ಏನೆಲ್ಲಾ ಲಾಭಗಳನ್ನ ಪಡೆಯಬಹುದು ಗೊತ್ತ …

200

ನಮಸ್ಕಾರಗಳು ಪ್ರಿಯ ಓದುಗರೇ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಇರುವ ಗ್ರಂಥಗಳಲ್ಲಿ ಅತ್ಯಂತ ಪುರಾಣಗ್ರಂಥ ಅಂದರೆ ಸಾಮುದ್ರಿಕಾ ಶಾಸ್ತ್ರದ ಗ್ರಂಥ ಆಗಿದೆ ಈ ಗ್ರಂಥದಲ್ಲಿ ಉಲ್ಲೇಖಗೊಂಡಿರುವ ಹಾಗೆ ನಮ್ಮ ಮುಖದ ಆಕಾರವು ನಮ್ಮ ಅದೃಷ್ಟ ದುರಾದೃಷ್ಟವನ್ನು ಸೂಚಿಸುತ್ತದೆ ಅಷ್ಟೇ ಅಲ್ಲ ನಮ್ಮ ಮುಂದಿನ ಭವಿಷ್ಯದ ಕುರಿತು ಕೂಡ ನಮ್ಮ ವ್ಯಕ್ತಿತ್ವದ ಕುರಿತು ಕೂಡ ತಿಳಿಸುತ್ತದೆ ಹೌದು ನೀವು ಸಾಮಾನ್ಯವಾಗಿ ಹೇಳುವುದನ್ನು ಕೇಳಿರಬಹುದು ಅದರಲ್ಲಿಯೂ ಹಿರಿಯರು ತಮ್ಮ ಕಿರಿಯರಿಗೆ ಹೇಳುತ್ತಾ ಇರುತ್ತಾರೆ. ಹೆಣ್ಣು ಮಕ್ಕಳ ತಂದೆ ಮುಖಕ್ಕೆ ಹೋಲಿದರೆ ತಂದೆ ಮುಖದ ಆಕಾರಕ್ಕೆ ಒಲಿದರೆ ಅವರು ಅದೃಷ್ಟವಂತರು ಅಂತ ಇರುತ್ತಾರೆ ಹಾಗೆ ಗಂಡು ಮಕ್ಕಳ ಮುಖ ತಾಯಿಗೆ ಹೋಲಿಕೆ ಹೊಂದಿದ್ದರೆ ಅಂತಹ ವ್ಯಕ್ತಿಗಳು ಕೂಡ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಕೂಡ ಇದೆ ಇದೇ ರೀತಿಯಾಗಿ ಇನ್ನಷ್ಟು ವಿಚಾರಗಳನ್ನು ಕೂಡ ಈ ಗ್ರಂಥದಲ್ಲಿ ಉಲ್ಲೇಖ ಮಾಡಲಾಗಿದೆ.

ಅದೇನು ಎನ್ನುವುದನ್ನು ನಾವು ತಿಳಿಸುತ್ತೇವೆ ಇವತ್ತಿನ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಮುಖದ ಆಕಾರದ ಮೇಲೆ ವ್ಯಕ್ತಿತ್ವವನ್ನು ತಿಳಿಸಬಹುದು ಹೇಗೆ ನಮ್ಮ ಹಸ್ತವನ್ನು ನೋಡಿ ಹಸ್ತರೇಖೆಯನ್ನು ನೋಡಿ ಭವಿಷ್ಯ ಕುರಿತು ಹೇಳಲಾಗುತ್ತದೆ ಅದೇ ರೀತಿ ಮುಖದ ಆಕಾರ ಕುರಿತು ಕೂಡ ವ್ಯಕ್ತಿತ್ವವನ್ನ ತಿಳಿಸ್ತಾರೆ ಅದರಲ್ಲಿ ನಿಮ್ಮ ಮುಖ ವೇನಾದರೂ ಉದ್ದವಿದ್ದು ಅಗಲ ಕಡಿಮೆ ಇದ್ದರೆ ನೀವು ಅದೃಷ್ಟವಂತರು ಕಣ್ರಿ ಅಂದುಕೊಂಡಿದ್ದೆಲ್ಲಾ ನಿಮಗೆ ಬೇಗ ಸಿಗುತ್ತದೆ ಹೌದು ಇಂತಹ ಮುಖದ ಆಕಾರ ಹೊಂದಿದ್ದರೆ ನಿಮ್ಮ ಜೀವನದಲ್ಲಿ ನೀವು ಉತ್ತಮ ಬಯಸಿದ್ದೆಲ್ಲ ನಿಮಗೆ ಸಿಗುತ್ತದೆ ಯಾವುದಕ್ಕೂ ಕೊರತೆ ಇರುವುದಿಲ್ಲ ಬಹಳ ಸೌಂದರ್ಯ ವಂತರು ಕೂಡ ಆಗಿರುತ್ತೀರ.

ಎರಡನೆಯದಾಗಿ ನಿಮ್ಮ ಮುಖದ ಆಕಾರ ವೇನಾದರೂ ಮೊಟ್ಟೆ ಆಕಾರದಲ್ಲಿ ಇದ್ದರೆ ಅವರು ಸಹ ಸೌಂದರ್ಯವಂತರಾಗಿ ರುತ್ತಾರೆ ಅದೃಷ್ಟವಂತರಾಗಿರುತ್ತಾರೆ ಮತ್ತು ಜೀವನದಲ್ಲಿ ಬಹಳ ಬೇಗ ತಾವು ಅಂದುಕೊಂಡ ಗುರಿಯನ್ನು ತಲುಪುತ್ತಾರೆ ಸೌಮ್ಯ ಸ್ವಭಾವದವರು ಕೂಡ ಹೌದು ಹಾಗೆ ತಮ್ಮ ವಿಚಾರಕ್ಕೆ ಬಂದವರನ್ನ ತಮಗೆ ಕೆಟ್ಟದನ್ನ ಮಾಡುವುದಕ್ಕೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ ಈ ವ್ಯಕ್ತಿಗಳು. ನಿಮ್ಮ ಮುಖದ ಆಕಾರ ವೇನಾದರೂ ಅಗಲವಿದ್ದರೆ ನಿಮಗೆ ಕಷ್ಟಗಳು ಕಟ್ಟಿಟ್ಟಬುತ್ತಿ ಅಂತಾ ಹೇಳ್ತಾರೆ ನೋಡಿ ಹೌದು ಮುಖದ ಆಕಾರ ವೇನಾದರೂ ಅಂಥವರು ಜೀವನದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಾರೆ ಬಹಳ ಕಷ್ಟಗಳನ್ನು ಎದುರಿಸುತ್ತಾರೆ.

ಕಷ್ಟಗಳಿಂದ ಎಷ್ಟೇ ಹೊರಗ ಬರಬೇಕು ಅಂತ ಪ್ರಯತ್ನ ಪಡುತ್ತಾ ಇದ್ದರೂ ಸಹ ಅಂತಹ ಕಷ್ಟಗಳಿಂದ ಹೊರ ಬರಲು ಸಾಧ್ಯವಾಗುತ್ತಾ ಇರುವುದಿಲ್ಲ ಹಾಗೆ ಮುಖದ ಆಕಾರ ವೇನಾದರೂ ಬಾಕ್ಸ್ ಆಕಾರದಲ್ಲಿ ಇತರೆ ಇವರು ಬಹಳ ಬುದ್ಧಿವಂತರು ಅಂತ ಹೇಳ್ತಾರೆ ಇವರು ಅಂದುಕೊಂಡದ್ದನ್ನು ಸಾಧಿಸುವ ತನಕ ಬಿಡುವುದಿಲ್ಲ ಅಂದುಕೊಂಡದ್ದು ಅವರಿಗೆ ಸಿಗಬೇಕೋ ಅಷ್ಟು ಹಠವಾದಿಗಳು ಆಗಿರುತ್ತಾರೆ ಇವರು ಕೋಪಿಷ್ಟರು ಕೂಡ ಆಗಿರುತ್ತಾರೆ ಹಾಗೆ ಕ್ರಿಯೇಟಿವ್ ಮೈಂಡ್ ಇವರಿಗೆ ಬಹಳಾನೇ ಯಾವುದರಲ್ಲೇ ಆಗಲಿ ಹೊಸಹೊಸ ಕ್ರಿಯೇಟಿವಿಟಿಯನ್ನು ಅಂದರೆ ಸೃಜನಶೀಲತೆಯನ್ನು ಹೊಂದಿರುತ್ತಾರೆ ಈ ವ್ಯಕ್ತಿಗಳು.

ನಿಮ್ಮ ಮುಖದ ಆಕಾರವೇನಾದರೂ ತ್ರಿಕೋನಾಕಾರದಲ್ಲಿ ಇದ್ದರೆ ಜೀವನದಲ್ಲಿ ಕಷ್ಟ ಎಂಬುದನ್ನು ನೋಡಿರುತ್ತೀರಿ ಆ ಕಷ್ಟದಿಂದ ಹೊರಬರಲು ಪ್ರಯತ್ನ ಪಡುತ್ತಾ ಇರುತ್ತೇವೆ ಮುಂದೆ ಒಂದು ದಿನ ಸುಖ ಎಂಬುದು ನಿಮಗೆ ಸಿಗುತ್ತದೆ ಈ ರೀತಿಯಾಗಿ ಮುಖದ ಆಧಾರದ ಮೇಲೆ ಅವರವರ ವ್ಯಕ್ತಿತ್ವ ಮತ್ತು ಭವಿಷ್ಯದ ಕುರಿತು ಹೇಳಲಾಗುತ್ತದೆ. ಮತ್ತೊಂದು ವಿಚಾರವೇನು ಅಲ್ಲ ಅಂದರೆ ಮಗುವಿನ ಮುಖ ಅದರಲ್ಲೂ ಹೆಣ್ಣು ಮಗುವಿನ ಮುಖ ತಂದೆಗೆ ಹೋಲಿದರೆ ಅಂತಹ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಬಹಳ ಸುಖಮಯವಾಗಿ ಇರುತ್ತಾರೆ ಅತ್ತೆ ಮನೆಯಲ್ಲಿ ಪ್ರೀತಿಯ ಮಗಳಾಗಿ ಇರುತ್ತಾರೆ ಅಂತ ಹೇಳ್ತಾರೆ ಹಾಗೆ ಗಂಡು ಮಗುವಿನ ಮುಖ ಅಮ್ಮನ ಮುಖದ ಆಕಾರಕ್ಕೆ ಹೋಲಿದರೆ ಅವರು ಪ್ರಪಂಚದಲ್ಲಿರುವ ಎಲ್ಲ ಸುಖವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ ಈ ರೀತಿಯಾಗಿದೆ ಮುಖದ ಆಕಾರ ಕುರಿತು ತಿಳಿಸುವ ಭವಿಷ್ಯ.