ಸ್ಕೂಲ್ ಬಸ್ ಗಳಿಗೆ ಹಳದಿ ಕಲರ್ ಯಾಕೆ ಇರುತ್ತೆ ಗೊತ್ತಾ… ಯಾವಾಗಾದರೂ ಇದರ ಬಗ್ಗೆ ಯೋಚನೆ ಮಾಡಿದ್ದೀರಾ …

120

ನಿಮ್ಮ ಮನೆಯಲ್ಲಿಯೂ ಕೂಡ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ನಿಮಗೆ ಈ ಒಂದು ಅನುಮಾನ ಬಂದಿರಬಹುದು ಅದು ಏನೆಂದರೆ ಮಕ್ಕಳ ಸ್ಕೂಲ್ ಬಸ್ ಆಗಲಿ ಕಾಲೇಜ್ ಬಸ್ ಗಳು ಆಗಲಿ ಯಾಕೆ ಹಳದಿ ಬಣ್ಣದಲ್ಲಿಯೇ ಇರುತ್ತದೆ ಈ ಹಳದಿ ಬಣ್ಣವನ್ನೇ ಬಸ್ಗಳಿಗೆ ಬಳಸುವ ಹಿಂದಿರುವ ಕಾರಣವೇನು ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ.ಒಂದು ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇಂಟ್ರೆಸ್ಟಿಂಗ್ ಆಗಿರುವ ಈ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮಾಡಿ.

ಬಸ್ ಗಳಿಗೆ ಅದರಲ್ಲಿಯೂ ಸ್ಕೂಲ್ ಬಸ್ ಕಾಲೇಜ್ ಬಸ್ ಗಳಿಗೆ ಯಾಕೆ ಹಳದಿ ಬಣ್ಣವನ್ನೇ ಬಳಸಬೇಕು ಹಾಗೆ ಈ ಒಂದು ನಿಯಮ ಎಂದಿನಿಂದ ಜಾರಿಯಾಯಿತು ಎಂಬುದನ್ನು ಮೊದಲಿಗೆ ನಾವು ತಿಳಿಯುವುದಾದರೆ, 1939 ರಲ್ಲಿ ನಾರ್ತ್ ಅಮೆರಿಕಾಗೆ ಸೇರಿರುವ ಕೊಲಂಬಿಯಾ ಯೂನಿವರ್ಸಿಟಿಯ ಡಾಕ್ಟರ್ ಫ್ರಾಂಕ್ ಎಂಬುವವರು ಈ ಒಂದು ವಿಚಾರವನ್ನು ಅನೇಕ ವರ್ಷಗಳ ಹಿಂದೆಯೇ ಒಂದು ಕಾನ್ಫರೆನ್ಸ್ ನಲ್ಲಿ ಪ್ರಕಟಿಸಿದ್ದರು.

ಅವರು ಪ್ರಕಟಿಸಿರುವ ವಿಚಾರಗಳು ಹೀಗಿದೆ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಐಡೆಂಟಿಫೈ ಮಾಡುವಂತಹ ಕಲರ್ ಅಂದರೆ ಅದು ರೆಡ್ ಮತ್ತು ದೂರವಿದ್ದರೂ ಬೇಗನೇ ಕಣ್ಣಿಗೆ ಕಾಣುವ ಬಣ್ಣವೆಂದರೆ ಅದು ಕೆಂಪು ಬಣ್ಣ ಈ ಬಣ್ಣಕ್ಕಿಂತ ಎರಡು ಪಟ್ಟು ಹೆಚ್ಚಿನ ವೆಬ್ಲಾಂಚ್ ಹೊಂದಿರುವ ಬಣ್ಣವೆಂದರೆ ಅದು ಹಳದಿ ಬಣ್ಣವಾಗಿದ್ದು ದೂರದಿಂದ ಬರುವಂತಹ ವಾಹನಗಳಲ್ಲಿ ಇರುವ ಚಾಲಕರಿಗೆ ಬೇಗಾನೆ ಹಳದಿ ಬಣ್ಣ ಕಾಣಲೆಂದು ಸ್ಕೂಲ್ ಬಸ್ ಕಾಲೇಜ್ ಬಸ್ ಗಳಿಗೆ ಹಳದಿ ಬಣ್ಣದ ಪೇಂಟ್ ಅನ್ನು ಮಾಡಲಾಗಿರುತ್ತದೆ.

ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ತಿಳಿದಿರುತ್ತದೆ ಬೆಳಿಗ್ಗೆ ಆರೂವರೆ ಗಂಟೆಗೆ ಅಥವಾ ಏಳು ಗಂಟೆಗೆ ಸ್ಕೂಲ್ ಬಸ್ ಬಂದುಬಿಡುತ್ತದೆ ಇನ್ನು ಮಳೆಗಾಲದಲ್ಲಿ ಹಿಮ ಬೀಳುವಂತಹ ಸಮಯದಲ್ಲಿ ಸ್ಕೂಲ್ ಬಸ್ ಗಳ ಬಣ್ಣ ಹಳದಿ ಬಣ್ಣದಲ್ಲಿ ಇರುವುದರಿಂದ ಅದು ಬೇರೆ ವಾಹನಗಳಿಗೆ ಬೇಗನೆ ಕಾಣಿಸುತ್ತದೆ ಹಿಮ ವಿದ್ದರೂ ವಾತಾವರಣ ಮಬ್ಬಾಗಿದೆ ಹಳದಿ ಬಣ್ಣ ಎದ್ದು ಕಾಣುವ ಕಾರಣ ಸ್ಕೂಲ್ ಬಸ್ ಗಳಲ್ಲಿ ಮಕ್ಕಳಿರುತ್ತಾರೆ ಎಂದು ಚಾಲಕರಿಗೆ ಬೇಗಾನೆ ತಿಳಿದು ಜಾಗರೂಕತರಾಗುತ್ತಾರೆ ಎಂಬ ಕಾರಣದಿಂದಾಗಿ ಹಳದಿ ಬಣ್ಣವನ್ನೇ ಸ್ಕೂಲ್ ಬಸ್ ಗಳ ಬಣ್ಣವಾಗಿ ಆಯ್ಕೆ ಮಾಡಲಾಗಿದೆ.

ಕಣ್ಣಿಗೆ ಸಂಬಂಧಪಟ್ಟ ಪೆರಿಫರಲ್ ವಿಷನ್ ಎಂಬ ಕಾಯಿಲೆ ಇರುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಬಿಳಿ ಕೆಂಪು ಹಸಿರು ಕಪ್ಪು ಇನ್ನು ಮುಂತಾದ ಬಣ್ಣಗಳು ಬೇರೆ ಬಣ್ಣಗಳಾಗಿ ಪರಿಣಮಿಸುತ್ತದೆ ಆದರೆ ಹಳದಿ ಬಣ್ಣ ಮಾತ್ರ ಹಳದಿ ಬಣ್ಣ ವಾಗಿಯೇ ಕಾಣಿಸುವ ಕಾರಣ ಬೇರೆ ವಾಹನವನ್ನು ಚಲಾಯಿಸುವ ಚಾಲಕರಿಗೆ ಈ ಸಮಸ್ಯೆ ಕಾಡುತ್ತಿದ್ದರೆ ಹಳದಿ ಬಣ್ಣದ ಬಸ್ಸು ಬೇಗಾನೆ ಕಾಣುವ ಕಾರಣ ಅಪಘಾತಗಳು ಜರುಗುವುದಿಲ್ಲ ಎಂಬ ಕಾರಣದಿಂದಾಗಿಯೂ ಕೂಡ ಈ ಹಳದಿ ಬಣ್ಣವನ್ನು ಸ್ಕೂಲ್ ಬಸ್ ಗಳಿಗೆ ಪೇಂಟ್ ಮಾಡಲಾಗಿರುತ್ತದೆ.ಈ ಕಾರಣಗಳಿಂದ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದೆಲ್ಲೆಡೆ ಸ್ಕೂಲ್ ಬಸ್ ಗಳ ಬಣ್ಣ ಹಳದಿ ಬಣ್ಣದ ಆಗಿರುತ್ತದೆ ಹಾಗೆ ನಿಮಗೂ ಕೂಡ ಈ ಮಾಹಿತಿ ಇಂಟ್ರೆಸ್ಟಿಂಗ್ ಹಾಗಿತ್ತು ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.