ಹುಬ್ಬುಗಳ ಮದ್ಯ ಬರುವ ತಲೆ ನೋವು , ಮೈಗ್ರೇನ್ , ನಿದ್ರಾಹೀನತೆ ದೂರವಾಗಲು ಈ ಮನೆಮದ್ದು ಮಾಡಿ ಸಾಕು … ಚಿಟಿಕೆ ಸಮಯದಲ್ಲಿ ಎಲ್ಲ ದೂರ…

224

ಎಚ್ಚರ! ಮೈಗ್ರೇನ್ ಡಿಪ್ರೆಶನ್ ಉಂಟುಮಾಡಬಹುದು.ಮೈಗ್ರೇನ್ ಸಮಸ್ಯೆಗೆ ಅತ್ಯದ್ಭುತ ಮನೆಮದ್ದು ಏನು ಗೊತ್ತಾ ಹೌದು ಮೈಗ್ರೇನ್ ಬಂದ್ರೆ ಕೆಲಸ ಮಾಡುವುದಕ್ಕೆ ಮಾತ್ರವಲ್ಲ ಹಾಸಿಗೆ ಬಿಟ್ಟು ಏಳೋದಕ್ಕೆ ಮನಸ್ಸಿರುವುದಿಲ್ಲಾ, ಹೀಗಿರುವಾಗ ಈ ಅರ್ಧ ತಲೆನೋವು ತೊಂದರೆಗೆ ಮನೇಲಿ ಮಾಡಬಹುದಾದ ಪಟ್ ಪಟ್ ಪರಿಹಾರ ಯಾವುದು ಗೊತ್ತೆ!

ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಸ್ಟ್ರೆಸ್ ಫುಲ್ ಲೈಫ್ ನಲ್ಲಿ ನಿಮಗೂ ಕೂಡ ಸಾಕಾಗಿ ಹೋಗಿರುತ್ತೆ ಮತ್ತು ಬರುವ ತಲೆನೋವಿಗೆ ಪರಿಹಾರ ಏನು ಮಾಡಬೇಕು ಅಂತ ಕೂಡ ಗೊತ್ತಾಗುತ್ತಲೇ ಇರುವುದಿಲ್ಲ.ಕೆಲಸ ಮುಗಿಯುವ ವೇಳೆಗೆ ಸಾಕಾಗಿ ಹೋಗಿರುತ್ತೆ ಬೆಳಿಗ್ಗೆ ಹೋಗುವಾಗ ಎನರ್ಜಿಟಿಕ್ ಆಗಿ ಹೋಗುತ್ತೇವೆ ಆದರೆ ಸಂಜೆಯ ಸಮಯದಲ್ಲಿ ಆಗಲೇ ತಲೆನೋವು ಬಂದಿರುತ್ತೆ ಅದರಲ್ಲೂ ಕೆಲವರಿಗೆ ಈ ಅರ್ಧ ತಲೆನೋವು ಏನಾದರೂ ಕಾಣಿಸಿಕೊಂಡರೆ ಆ ದಿನ ಪೂರ್ತಿ ಹಾಳು ಅಂತಾನೆ ಅರ್ಥ. ಅರ್ಧ ತಲೆನೋವಿಗೆ ಕಾಫಿ ಕುಡಿಯುವುದೆ? ಕಷಾಯ ಕುಡಿಯುವುದೆ? ಮಾತೃೆ ತೆಗೆದುಕೊಳ್ಳೋದಾ ಒಂದೂ ಗೊತ್ತಾಗದೇ ಹೋಗಿ ಸುಮ್ಮನೆ ಮಲಗಿ ಬಿಡೋಣ ಅಂತ ಅನಿಸಿಬಿಡುತ್ತೆ.

ಆದರೆ ಈ ಅರ್ಧ ತಲೆನೋವನ್ನು ಮೊದಮೊದಲು ನೆಗ್ಲೆಟ್ ಮಾಡುತ್ತಾ ಹೋದರೆ ಅದು ಮುಂದೆ ಗಂಭೀರ ಸಮಸ್ಯೆಯಾಗಿ ಪರಿಣಾಮ ಬೀರಬಹುದು ಯಾಕೆ ಅಂತೀರಾ ಹೌದು ಅರ್ಧ ತಲೆನೋವು ಮುಂದಿನ ದಿನಗಳಲ್ಲಿ ಈ ಕಣ್ಣಿನ ಐ ಸೈಟ್ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ ಅಥವಾ ಅರ್ಧ ತಲೆನೋವು ಬಂದು ಬಂದು ಅದಕ್ಕೆ ಮಾತ್ರೆ ತೆಗೆದುಕೊಂಡು ತೆಗೆದುಕೊಂಡು ಅದೇ ರೂಢಿ ಆಗಿ ಹೋಗುತ್ತೆ.ಹೌದು ತಲೆನೋವು ಬಂದಾಗ ಆ ಸಮಸ್ಯೆ ಪರಿಹಾರ ಆಗಲಿ ಅಂತ ಮಾತ್ರೆ ತೆಗೆದುಕೊಳ್ಳುವುದು ಹೆಚ್ಚು ಅದೇ ರೂಢಿಯಾಗಿ ತಲೆನೋವು ಬಂದಾಗ ಹೆಚ್ಚು ಮಾತ್ರೆ ತೆಗೆದುಕೊಂಡರೆ ಮಾತ್ರ ನೋವು ಹೋಗುತ್ತೆ ಹೊರೆತು, ಅಲ್ಲಿಯವರೆಗೂ ಸಮಸ್ಯೆ ಪರಿಹಾರವೇ ಆಗುತ್ತಿರುವುದಿಲ್ಲ.

ನಿಮಗೂ ಅರ್ಧ ತಲೆನೋವು ಕಾಡುತ್ತಿದೆ ಅಂದಾಗ ನಾವು ಹೇಳುವ ಈ ಸರಳ ಮನೆಮದ್ದು ಪಾಲಿಸಿ, ಸ್ವಲ್ಪ ಸಮಯ ರೆಸ್ಟ್ ಮಾಡಿ ಖಂಡಿತ ಇದರಿಂದ ಅರ್ಧ ತಲೆನೋವು ತಟ್ ಅಂತ ಪರಿಹಾರ ಆಗುತ್ತೆ.ಈ ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಾಗಿರುವ ಪದಾರ್ಥಗಳು ಕೊಬ್ಬರಿ ಗಸಗಸೆ ಹಾಲು ಮತ್ತು ಕಾಳುಮೆಣಸು ಕಲ್ಲುಸಕ್ಕರೆ.ಮೊದಲಿಗೆ ಕೊಬ್ಬರಿಯನ್ನು ತೆಗೆದುಕೊಂಡು ಸ್ವಲ್ಪ ರಂಧ್ರ ಮಾಡಿ ಅದರೊಳಗೆ ಗಸಗಸೆಯನ್ನು ತುಂಬಬೇಕು ಎಷ್ಟು ಅಂದರೆ ಇಪ್ಪತ್ತು ಗ್ರಾಂ ಗಸಗಸೆ ಬಳಿಕ ಹಾಲನ್ನು ಕಾಯಿಸುವಾಗ ಅದಕ್ಕೆ ಹೆಚ್ಚು ನೀರು ಹಾಕಿ, ಆ ಹಾಲು ಕುದಿಯುವ ವೇಳೆ ಕೊಬ್ಬರಿಯನ್ನು ಅದರೊಳಗೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

ಇದೀಗ ಆ ಕೊಬ್ಬರಿ ಒಳಗಿನ ಗಸಗಸೆಯನ್ನು ತೆಗೆದುಕೊಂಡು ಕೊಬ್ಬರಿ ಒಳ ಭಾಗವನ್ನು ತೆಗೆದುಕೊಂಡು, ಇದನ್ನೆಲ್ಲಾ ಮಿಶ್ರ ಮಾಡಿಕೊಳ್ಳಬೇಕು, ಇದಕ್ಕೆ ಅರ್ಧ ಚಮಚದಷ್ಟು ಮೆಣಸು ಮತ್ತು 1ಚಮಚದಷ್ಟು ಕಲ್ಲುಸಕ್ಕರೆಯನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು .ಈ ತಯಾರಿ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ.ಇದೀಗ ತಲೆನೋವು ಬಂದ ದಿನದಿಂದ ಈ ತಯಾರಿ ಮಾಡಿಕೊಂಡಂತಹ ಪುಡಿಯನ್ನು ಹಾಲಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಅಥವಾ ತಲೆನೋವು ಬಂದಾಗ ತಕ್ಷಣವೇ ಕುಡಿಯಬೇಕು.

ಸತತವಾಗಿ 3ದಿನಗಳ ಕಾಲ ಈ ಪರಿಹಾರವನ್ನು ಮಾಡುವುದರಿಂದ ಅಂದರೆ ಮುಂಚೆಯೇ ಈ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಮಾಡಿಟ್ಟುಕೊಂಡು 3 ದಿನ ಸತತವಾಗಿ ಕುಡಿಯಬೇಕು, ತಲೆನೋವು ಬಂದ ದಿನದಿಂದ 3 ದಿನ ಈ ಹಾಲನ್ನು ಕುಡಿಯುತ್ತಾ ಬಂದರೆ ಮೈಗ್ರೇನ್ ದೂರವಾಗುತ್ತೆ ಜೊತೆಗೆ ನಿದ್ರಾಹೀನತೆ ಸಮಸ್ಯೆ ಕೂಡ ಪರಿಹಾರವಾಗಿ ಐಸೈಟ್ ಕೂಡ ಹೆಚ್ಚುತ್ತದೆ.