ಹುಳಿ ತೇಗು , ಹೊಟ್ಟೆಯಲ್ಲಿ ಬೆಂಕಿ ಹಾಕಿದ ಹಾಗೆ ಆಗುತಿದ್ದರೆ ಅರ್ಧ ಚಮಚ ಇದನ್ನ ಮಾಡಿ ತಿನ್ನಿ ಸಾಕು …ತಕ್ಷಣಕ್ಕೆ ಒಳ್ಳೆ ಪರಿಣಾಮವಾಗಿ ಕೆಲಸ ಮಾಡುತ್ತೆ ಇದು ..

367

ಹೊಟ್ಟೆ ಉರಿ ಎದೆ ಉರಿ ಉರಿ ಉರಿ ಏನೇ ಇದ್ದರೂ ಈ ಪರಿಹಾರ ಪಾಲಿಸಿದರೆ ಸ್ವಲ್ಪ ಸಮಯದಲ್ಲಿಯೇ ಇದರಿಂದ ಫಲಿತಾಂಶ ಸಿಗದಿದ್ದರೆ ಕೇಳಿ…ಸಾಮಾನ್ಯವಾಗಿ ಹೊಟ್ಟೆ ಉರಿ ಆಗಲಿ ಎದೆ ಉರಿ ಆಗಲಿ ಯಾವಾಗ ಬರುತ್ತೆ ಅಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ ಆದಾಗ, ಅಷ್ಟೆ ಅಲ್ಲಾ ನಮ್ನ ದೇಹದ ಉಷ್ಣಾಂಶ ಯಾವಾಗ ಹೆಚ್ಚಾಗಿರುತ್ತದೆ ಆ ಸಮಯದಲ್ಲಿ ಕೂಡ ಹೊಟ್ಟೆ ಉರಿ ಅಥವಾ ಪಾದಗಳ ಉರಿ ಕೈ ಉರಿ ಎದೆ ಉರಿ ಕಾಣಿಸಿಕೊಳ್ಳುತ್ತದೆ. ಈ ಯಾವ ಕಾರಣಕ್ಕೆ ನಿಮಗೆ ಶರೀರದಲ್ಲಿ ಕೆಲ ಭಾಗದಲ್ಲಿ ಉರಿ ಕಾಣಿಸಿಕೊಂಡಾಗಲೂ ಇದೊಂದು ಪರಿಹಾರ ನಿಮಗೆ ಬಹಳ ಬೇಗ ಶಮನವನ್ನು ಕೊಡುತ್ತೆ.

ಈ ಗ ಗ್ಯಾಸ್ಟ್ರೈಟಿಸ್ ಸಮಸ್ಯೆ ಕುರಿತು ಹೇಳುವುದಾದರೆ ಯಾವಾಗ ನಮ್ಮ ದೇಹದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚುತ್ತದೆ ಆಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಮತ್ತು ಕೈಕಾಲುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ಎದೆ ಮತ್ತು ಹೊಟ್ಟೆಯಲ್ಲಿ ಉರಿ ಆಗುವುದು ಹೀಗೆಲ್ಲಾ ಆಗುತ್ತದೆ ಈ ಸಮಸ್ಯೆಗೆ ಆಗಲಿ ಅಥವಾ ಶರೀರದ ಉಷ್ಣಾಂಶ ಹೆಚ್ಚಿ ಕೈಕಾಲು ಚರ್ಮದಲ್ಲಿ ಸಿಪ್ಪೆ ಸುಲಿಯುವ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕಾಗಿ ಈ ಮನೆ ಮದ್ದು ಪಾಲಿಸಿ ನೋಡಿ.

ಹೌದು ನಿಮಗೇನಾದರೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತಿದ್ದರೆ ಅದಕ್ಕೆ ಮಾತ್ರೆ ಬದಲು ಸರಿಯಾದ ಸಮಯಕ್ಕೆ ಊಟ ಮಾಡುವುದು ಹಾಗೂ ಖಾಲಿ ಹೊಟ್ಟೆ ಬಿಡದೆ ಆಗಾಗ ನೀರು ಕುಡಿಯುವುದು ಜತೆಗೆ ಪೌಷ್ಠಿಕ ಆಹಾರಗಳನ್ನು ಸೇವಿಸುವುದು ಇಂತಹ ಪರಿಹಾರಗಳನ್ನು ಪಾಲಿಸುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಿ.

ದೇಹದ ಉಷ್ಣಾಂಶ ಹೆಚ್ಚಾದಾಗ ಬಸಳೆ ಸೊಪ್ಪು ಅಥವಾ ಜೀರಿಗೆ ಅಥವಾ ಪಚ್ಚ ಬಾಳೆ ಹಣ್ಣನ್ನು ತಿನ್ನಬೇಕು ಈ ಪಚ್ಚಬಾಳೆಹಣ್ಣು ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುವುದಕ್ಕೆ ಮಾತ್ರ ಸಹಕಾರಿಯಲ್ಲಾ, ಪಚ್ಚ ಬಾಳೆಹಣ್ಣು ಅಥವಾ ಚುಕ್ಕಿ ಬಾಳೆಹಣ್ಣು ಅಂತ ಎಂದು ಕರೆಯುತ್ತಾರೆ ಇದು ಹೊಟ್ಟೆಯ ಉರಿ ಯಾಗಲಿ ಎದೆ ಉರಿ ಆಗಲಿ ಕೈಕಾಲೂರಿ ಆಗಲಿ ಇಂತಹ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರ ಕೊಡುತ್ತದೆ.

ಎದೆ ಉರಿ ಪಾದಗಳು ಕೈಗಳು ಉರಿ ಹೊಟ್ಟೆ ಉರಿ ಯಾಕೆ ಕೊಟ್ಟಿದ್ದರೆ ಇನ್ನೂ ಕೆಲವರಿಗೆ ದೇಹದ ಉಷ್ಣಾಂಶ ಹೆಚ್ಚಾಗಿ ಮೂಗು ಸೋರುತ್ತಲೇ ಇರುತ್ತದೆ ಕಣ್ಣು ಉರಿಯುತ್ತಾ ಇರುತ್ತದೆ ಆಗ ಚುಕ್ಕಿ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಸ್ಮ್ಯಾಶ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಅರ್ಧ ಚಮಚದಷ್ಟು ಮೊಸರು ಅರ್ಧ ದಿಂದ ಒಂದು ಚಮಚದಷ್ಟು ಪುಡಿಮಾಡಿದ ಕಲ್ಲುಸಕ್ಕರೆಯನ್ನು ಇದಕ್ಕೆ ಹಾಕಿ ಬೆಲ್ಲವನ್ನು ಮಿಶ್ರ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು.

ಹೌದು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಬಿಸಿ ನೀರು ಅಥವಾ ನೀರು ಕುಡಿದ ಮೇಲೆ ಸ್ವಲ್ಪ ಸಮಯ ಬಿಟ್ಟು ಈ ಮೇಲೆ ತಿಳಿಸಿದ ಪರಿಹಾರವನ್ನ ಮಾಡುವುದರಿಂದ ಇದರಿಂದ ದೇಹದ ಉಷ್ಣಾಂಶ ಕೂಡ ನಿಯಂತ್ರಣಕ್ಕೆ ಬರುತ್ತದೆ ಜೊತೆಗೆ ಎದೆ ಉರಿ ಹೊಟ್ಟೆ ಉರಿ ಅಂತಹ ಸಮಸ್ಯೆ ಕೂಡ ಪರಿಹಾರ ಆಗುತ್ತದೆ.

ಅಷ್ಟೇ ಅಲ್ಲ ಗ್ಯಾಸ್ಟ್ರಿಕ್ ನಿಂದ ಕೆಲವರಿಗೆ ಹಸಿವಾಗದೇ ಇರುವ ಹಾಗೆ ಅನುಭವವಾಗುತ್ತಲೇ ಇರುತ್ತದೆ, ಈ ಪರಿಹಾರವನ್ನು ನೀವು ಮಾಡಿಕೊಂಡು ಬೆಳಿಗ್ಗೆ ಸಮಯದಲ್ಲಿಯೇ ಇದನ್ನು ಪಾಲಿಸಿದರೆ ಸರಿಯಾದ ಸಮಯಕ್ಕೆ ಹಸಿವಾಗುವುದು ಆಗುತ್ತದೆ ಜತೆಗೆ ಬೆಳಿಗ್ಗೆ ಸಮಯದಲ್ಲಿಯೇ ಚುಕ್ಕಿ ಬಾಳೆಹಣ್ಣು ತಿಂದುದರಿಂದ ಮಲವಿಸರ್ಜನೆಯು ಕೂಡ ಸರಾಗವಾಗಿ ನಡೆಯುತ್ತದೆ ಇದರಿಂದ ಕರುಳಿನ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.