ಈಶ್ವರಿ ಬಳ್ಳಿ ಇದು ಏನೆಲ್ಲಾ ತೊಂದರೆಗೆ ರಾಮಬಾಣ ಗೊತ್ತಾ ಹೌದು ಹಾವು ಕಚ್ಚಿದಾಗ ವಿಷ ಎಳೆಯುವುದಕ್ಕಾಗಿ ಮತವೂ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆ ಕಾಡುವ ಹೊಟ್ಟೆ ನೋವು ನಿವಾರಣೆಗೆ ಜೊತೆಗೆ ಗಾಯ ಬೇಗ ಒಣಗಬೇಕು ಅಂದರೆ ಈ ಈಶ್ವರೀ ಬಳ್ಳಿಯ ರಸವನ್ನು ಬಳಸಿಕೊಂಡು ಈ ಎಲ್ಲಾ ತೊಂದರೆಗಳಿಗೂ ಆದಷ್ಟು ಬೇಗ ಶಮನಪಡಿಸಿ ಕೊಳ್ಳಬಹುದು. ಆದರೆ ಬಳಸುವ ವಿಧಾನವನ್ನು ತಿಳಿದಿರಬೇಕು ಅಷ್ಟೆ ಹಾಗಾದರೆ ಈಶ್ವರೀ ಬಳ್ಳಿಯ ನ ಹೇಗೆಲ್ಲ ಬಳಕೆ ಮಾಡಬಹುದು ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.
ಈಶ್ವರಿ ಬಳ್ಳಿ ಇದೊಂದು ಅದ್ಭುತವಾದ ಬಳ್ಳಿ ಇದನ್ನು ಸರಿಯಾಗಿ ಬಳಕೆ ಮಾಡುತ್ತಾ ಬಂದದ್ದೇ ಆದಲ್ಲಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಇದರಿಂದ ಶಮನ ಪಡೆದುಕೊಳ್ಳಬಹುದು.ಹಾಗಾಗಿ ಈಶ್ವರೀ ಬಳ್ಳಿಯ ಬಗ್ಗೆ ನಾವು ಇಂದಿನ ಈ ಮಾಹಿತಿಯಲ್ಲಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಈಶ್ವರಿಬೇರು ಬಳ್ಳಿ ಇದರಿಂದ ಚೂರ್ಣ ಕೂಡ ತಯಾರಿಸಿಕೊಳ್ಳಬಹುದು ಇದರ ಎಲೆಗಳನ್ನು ಬಳಸಿಕೊಂಡು ಕಷಾಯ ಮಾಡಿ ಕುಡಿಯಬಹುದು.
ಈಶ್ವರೀ ಬಳ್ಳಿಯ ಜೊತೆಗೆ ತಿಗಡಿ ಗೊಮ್ಮೆ ಬೇರು ಜೊತೆಗೆ ಹಾವುಮೆಕ್ಕೆ ಬೇರು ಮತ್ತು ಅಳಲೆಕಾಯಿ ಸಿಪ್ಪೆ ಮತ್ತು ಹಿಪ್ಪಲಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.ಈಗ ತಯಾರಾದ ಚೂರ್ಣವನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಇದನ್ನು ಹೇಗೆ ಬಳಸಿಕೊಳ್ಳಬೇಕು ಅಂದರೆ ಹಾವು ಕಚ್ಚಿದಾಗ ವಿಷ ನಿವಾರಣೆಗೆ ನಾಟಿ ಔಷಧಿ ವೈದ್ಯರು ಇದರ ಬಳಕೆ ಮಾಡುತ್ತಿದ್ದರು, ಇದರ ಪ್ರಯೋಗದಿಂದ ಬೇಗ ವಿಷ ಇಳಿಯುತ್ತದೆ.
ಹೆಣ್ಣು ಮಕ್ಕಳಿಗೆ ಕಾಡುವ ಹೊಟ್ಟೆ ನೋವಿನ ಸಮಸ್ಯೆಗೆ ಹೀಗೆ ಈ ಈಶ್ವರಿ ಬಳಿಯನಾ ಉಪಯೋಗಿಸಬೇಕು ಇದರ ಎಲೆಗಳನ್ನು ಕುಟ್ಟಿ ಪುಡಿ ಮಾಡಿಕೊಂಡು ಚೂರ್ಣ ತಯಾರಿಸಿ ಕೊಂಡು ಇದರೊಟ್ಟಿಗೆ ನಿಂಬೆಹಣ್ಣಿನ ರಸ ಅಥವಾ ಬೆಲ್ಲದೊಂದಿಗೆ ಕೂಡ ಇದನ್ನು ಪ್ರತೀದಿನ ಕಾಲು ಚಮಚದಷ್ಟು ಸೇವಿಸುತ್ತಾ ಬಂದರೆ ಹೊಟ್ಟೆ ನೋವು ಬೇಗ ನಿವಾರಣೆಯಾಗುತ್ತೆ.ನಿಮಗಿದು ಗೊತ್ತಾ ಮಳೆಗಾಲ ಚಳಿಗಾಲ ಈ ಸಮಯದಲ್ಲಿ ಕಾಡುವ ಶೀತಕ್ಕೆ ಸಮಪ್ರಮಾಣದ ಈಶ್ವರೀ ಬಳ್ಳಿಯ ಚೂರ್ಣವನ್ನು ಮೆಣಸಿನ ಕಾಳಿನೊಂದಿಗೆ ಸೇರಿಸಿ, ಪುಡಿಮಾಡಿ ಸೇವಿಸುತ್ತಾ ಬಂದರೆ ಶೀತ ಕೂಡ ಆದಷ್ಟು ಬೇಗ ಶಮನಗೊಳ್ಳುತ್ತದೆ.
ಯಾವುದೇ ಗುಡಿ ಮೂಲಿಕೆಗಳ ಆಗಲಿ ಅದರ ಪ್ರಯೋಜನವನ್ನು ನಾವು ಬಹಳ ನಿಯಮಿತವಾಗಿ ಮಾಡುತ್ತಾ ಬರಬೇಕು ಹಾಗೆ ಈ ಮೇಲೆ ತಿಳಿಸಿದಂತೆ ಹೆಣ್ಣು ಮಕ್ಕಳ ಹೊಟ್ಟೆ ನೋವಿನ ಸಮಸ್ಯೆಗೆ ಈಶ್ವರೀ ಬಳ್ಳಿಯ ಚೂರ್ಣ ಬಹಳ ಪ್ರಯೋಜನಕಾರಿಯಾಗಿದ್ದು ಇದನ್ನೇನಾದರೂ ಅತಿಯಾಗಿ ಸೇವಿಸಿದರೆ ವಾಂತಿ ಭೇದಿ ಇಂತಹ ಅಡ್ಡ ಪರಿಣಾಮಗಳು ಉಂಟಾಗಬಹುದು. ಹಾಗಾಗಿ ತುಂಬ ನಿಯಮತವಾಗಿ ಇದನ್ನ ಸೇವಿಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು ಮತ್ತು ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ದೊರೆಯುತ್ತದೆ.
ಈ ರೀತಿಯಾಗಿ ಈಶ್ವರೀ ಬಳ್ಳಿಯ ಹಲವರಿಗೆ ಪರಿಚಯವಿಲ್ಲದ ಗಿಡಮೂಲಿಕೆ ಆಗಿರಬಹುದು ಆದರೆ ಹಳ್ಳಿ ಮಂದಿಗೆ ಇದರ ಪರಿಚಯ ಹೆಚ್ಚಾಗಿಯೇ ಇರುತ್ತದೆ.ಅದರಲ್ಲಿಯೂ ನಾಟಿ ಔಷಧಿ ಮಾಡುವವರಿಗೆ ಇಂತಹ ಗಿಡಮೂಲಿಕೆಯ ಪರಿಚಯ ಚೆನ್ನಾಗಿ ಇರುತ್ತದೆ. ಆದ್ದರಿಂದ ಪದೇ ಪದೇ ಕಾಡುವ ಸಮಸ್ಯೆಗೆ ನೀವು ಆಸ್ಪತ್ರೆಗೆ ಹೋಗಿ ಸಾಕಾಗದಿದ್ದಲ್ಲಿ ಇಂತಹ ಗಿಡಮೂಲಿಕೆಯ ಪ್ರಯೋಜನವನ್ನು ಮಾಡಿದರೆ ಉತ್ತಮ, ಅದಕ್ಕೂ ಮುಂಚೆ ಈ ಮಾಹಿತಿ ತಿಳಿದಿದ್ದರೆ ನಿಮಗೆ ಇನ್ನಷ್ಟು ಪ್ರಯೋಜನಕಾರಿ ಎಂಬ ಕಾರಣಕ್ಕಾಗಿ ಈ ಅದ್ಭುತ ಗಿಡಮೂಲಿಕೆಯ ಪರಿಚಯವನ್ನ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಧನ್ಯವಾದ.