ಹೆಣ್ಣು ಮಕ್ಕಳಿಗೆ ಉಪಯುಕ್ತವಾದ ಮಾಹಿತಿ ; ಈ ಬಾಣಂತಿ ಸನ್ನಿ ಎಂಬುದು ಹೆಣ್ಣು ಮಕ್ಕಳಲ್ಲಿ ಕಾಡುವ ದೊಡ್ಡ ಸಮಸ್ಯೆ, ಈ ತೊಂದರೆ ಯಾವಾಗ ಉಂಟಾಗುತ್ತದೆ ಅಂದರೆ ಹೆಣ್ಣು ಮಕ್ಕಳು ತಮ್ಮ ಮಗುವಿಗೆ ಜನ್ಮ ನೀಡಿದ ಬಳಿಕ ಆ ತಾಯಿಯಲ್ಲಿ ಉಂಟಾಗುವ ನಂಜನ್ನು ಬಾಣಂತಿ ಸನ್ನಿ ಅಂತ ಕರೆಯುತ್ತಾರೆ.
ಬಾಣಂತಿ ಸನ್ನಿ ಎಂಬುದು ತಾಯಿಯಾದ ಎಲ್ಲ ಮಹಿಳೆಯರಲ್ಲಿಯೂ ಕಾಣಿಸಿಕೊಂಡು ಇರುವುದಿಲ್ಲ ಆದರೆ ಯಾವಾಗ ಮಗುವಾದ ಮೇಲೆ ಹೆಣ್ಣು ಮಕ್ಕಳಿಗೆ ಸರಿಯಾದ ಪೋಷಣೆ ದೊರೆತಿರುವುದಿಲ್ಲ ಸರಿಯಾದ ಬಾಣಂತನವನ್ನು ಆಕೆಗೆ ಮಾಡಿರುವುದಿಲ್ಲ ಈ ಮಗುವಾದ ಮೇಲೆ ಆಕೆಗೆ ಕಾಳಜಿ ಮಾಡದೆ ಹೋದಾಗ ಈ ರೀತಿ ಬಾಣಂತಿ ಸನ್ನಿ ಉಂಟಾಗುತ್ತದೆ.
ತಾಯಿಯೊಬ್ಬಳು ಮಗುವಿಗೆ ಜನ್ಮನೀಡುವಾಗ ಆಕೆಗೆ ಅದು ಮರುಜನ್ಮ ಆಗಿರುತ್ತದೆ ಆಗ ಆ ತಾಯಿಯಲ್ಲಿ ನೋವು ವಿಪರೀತವಾಗಿರುತ್ತದೆ ಆ ಸಮಯದಲ್ಲಿ ತಾಯಿಯ ಗರ್ಭಕೋಶ ಪೂರ್ಣವಾಗಿ ನೋವಿನ ಸ್ಥಿತಿಯಲ್ಲಿರುತ್ತದೆ ಆ ಗಾಯಗೊಂಡ ಗರ್ಭಕೋಶವು ತುಂಬ ನೋವು ನೀಡುವುದರಿಂದ ತಾಯಂದಿರಿಗೆ ಬಹಳ ನೋವು ನೀಡುತ್ತದೆ ಹಾಗೂ ಆ ನೋವು ದಿನದಿಂದ ದಿನಕ್ಕೆ ಹೆಚ್ಚಾದಾಗ ಏನಾಗುತ್ತದೆ ಅಂದರೆ ಹೆಣ್ಣುಮಕ್ಕಳು ಡಿಪ್ರೆಷನ್ ಗೆ ಹೋಗುತ್ತಾರೆ.
ಅಂದು ಮಾನಸಿಕವಾಗಿ ಕುಗ್ಗುವ ಹೆಣ್ಣುಮಕ್ಕಳು ಆ..ತ್ಮಹತ್ಯೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲಾ.ಇತ್ತೀಚಿನ ದಿನಗಳಲ್ಲಿ ಆದರೆ ಆಸ್ಪತ್ರೆಯಲ್ಲಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಕಾಳಜಿಮಾಡುವುದರಿಂದ ಟ್ರೀಟ್ಮೆಂಟ್ ಕೊಡುವುದರಿಂದ ಗರ್ಭಕೋಶದ ಗಾಯ ಬೇಗನೆ ಮಾಯುತ್ತದೆ.ಹಾಗಾಗಿ ಇತ್ತೀಚೆಗೆ ಈ ನಂಜು ಆಗುವುದು ಅಥವಾ ಬಾಣಂತಿ ಸನ್ನಿ ಆಗುವುದು ಕಡಿಮೆ ಆದರೂ ಕೆಲವೊಂದು ಭಾಗದಲ್ಲಿ ಕೆಲವೊಂದು ಕಡೆ ಹೆಣ್ಣು ಮಕ್ಕಳು ಇನ್ನೂ ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬರುತ್ತದೆ.
ಹಾಗಾಗಿ ನಾವು ಇಂದು ತಿಳಿಸಿರುವ ಮನೆಮದ್ದನ್ನು ಮಗುವಾದ ತಾಯಂದಿರು ಒಂದೆರಡು ದಿನಗಳ ಕಾಲ ಬಾಣಂತನದ ಮೊದಲ ಮೊದಲ ದಿನಗಳಲ್ಲಿ ಸೇವಿಸಿದರೆ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗದೆ ಗರ್ಭಕೋಶಕ್ಕೆ ಆಗಿರುವ ಗಾಯ ಒಣಗುತ್ತದೆ ಮತ್ತು ದೇಹದಲ್ಲಿ ನೋವು ಕಡಿಮೆ ಆಗುತ್ತದೆ.
ಈ ಮನೆಮದ್ದು ಅಂದು ಹಿರಿಯರು ಹೆಣ್ಣುಮಕ್ಕಳಿಗೆ ಮಾಡುತ್ತಿದ್ದರು ಯಾಕೆಂದರೆ ಗರ್ಭಕೋಶದ ಗಾಯ ಬಹಳ ಬೇಗ ಒಣಗಲಿ ಕಡಿಮೆಯಾಗಲಿ ಎಂಬ ಕಾರಣಕ್ಕಾಗಿ.ಅಂದು ಹಿರಿಯರು ಪಾಲಿಸುತ್ತಿದ್ದ ಸರಳ ಮನೆಮದ್ದನ್ನು ನಾವು ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ. ಆದ್ದರಿಂದ ಈ ಸಂಪೂರ್ಣ ಮಾಹಿತಿ ತಿಳಿದು ಮನೆಯಲ್ಲಿಯೂ ಕೂಡ ಬಾಣಂತನ ಮಾಡಿಸಿಕೊಳ್ಳುತ್ತಿರುವ ಅಂತಹ ಹೆಣ್ಣು ಮಕ್ಕಳಿದ್ದರೆ ಅಂಥವರು ಮಗುವಾದಾಗಿನಿಂದ ಡಿಪ್ರೆಶನ್ನಲ್ಲಿ ಇರುವುದು ಮತ್ತು ಮಗುವಿಗೆ ಹಾಲು ಕೊಡಲು ನಿರಾಕರಿಸುವುದು ಮಾಡಿದರೆ ಅಂಥವರಿಗೆ ಕೂರಲೇ ಈ ಪರಿಹಾರವನ್ನು ಮಾಡಿ.
ಮಾಡಬೇಕಾಗಿರುವುದು ಇಷ್ಟೆ ಹಳ್ಳಿಗಳ ಅಥವಾ ಇಂದಿಗೂ ಪೇಟೆ ಪೇಟೆಯಲ್ಲಿ ಓ ಕೆಲವೊಂದು ಕಡೆ ತುಂಬೆಗಿಡ ಬೆರೆತುಕೊಂಡಿರುತ್ತದೆ ತುಂಬೆ ಗಿಡದಲ್ಲಿ ಬೇರನ್ನು ತಂದು ಅದನ್ನು ಚೆನ್ನಾಗಿ ಸ್ವಚ್ಛ ಮಾಡಿ, ನಿಂಬೆಹಣ್ಣಿನ ರಸವನ್ನು ಕಲ್ಲು ಮೇಲೆ ಹಾಕಿ ಅದರ ಮೇಲೆ ಈ ತುಂಬೆ ಗಿಡದ ಬೇರನ್ನು ತೇಯಬೇಕು. ಅದರಿಂದ ಬಂದ ಗಂಧವನ್ನೂ ಸಂಗ್ರಹ ಮಾಡಿ ಹೆಣ್ಣು ಮಕ್ಕಳಿಗೆ ಪ್ರತಿದಿನ ಕೇವಲ 1 ಚಮಚದಷ್ಟು ಈ ರಸವನ್ನು ನೀಡುತ್ತಾ ಬಂದರೆ ನೋವು ನಿವಾರಣೆಯಾಗುತ್ತದೆ ಹಾಗೂ ಬಾಣಂತಿ ಸನ್ನಿ ಇಲ್ಲವಾದರೂ ಈ ರಸವನ್ನು ಸೇವಿಸಿದರೆ ಆರೋಗ್ಯವೂ ಉತ್ತಮವಾಗಿರುತ್ತದೆ.ಆದರೆ ಭಯ ಬೇಡ ಯಾವುದೇ ತರಹದ ಅಡ್ಡ ಪರಿಣಾಮಗಳು ಬಾಣಂತಿ ಹೆಣ್ಣುಮಕ್ಕಳಿಗೆ ಉಂಟಾಗುವುದಿಲ್ಲ.