ಹೊಟ್ಟೆಯ ಉಬ್ಬರ , ಅಸಿಡಿಟಿ , ಗಬ್ಬು ಹುಲಿ ತೇಗು ಬಂದರೆ ಈ ತರ ಮನೆಯಲ್ಲೇ ಇದನ್ನ ಮಾಡಿ ಒಂದು ಗ್ಲಾಸ್ ಕುಡಿಯಿರಿ ಸಾಕು …ಕೆಲವೇ ನಿಮಿಷದಲ್ಲಿ ಫಾಸ್ಟ್ ರಿಲೀಫ್ ಸಿಗುತ್ತೆ…

229

ಗ್ಯಾಸ್ಟ್ರಿಕ್ ಹುಳಿತೇಗು ಎದೆ ಉರಿ ಹೊಟ್ಟೆ ಉರಿ ಈ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದು ಅದ್ಭುತ ಪರಿಹಾರ ಧನ ಮಾಡುವುದೂ ಸುಲಭ ಹಾಗೂ ಫಲಿತಾಂಶ ಮಾತ್ರ ಸಖತ್ ಎಫೆಕ್ಟಿವ್.ಹೌದು ಹೋಮ್ ರೆಮಿಡೀಸ್ ಗಳು ಅಂದರೆ ಅದನ್ನು ಕೇವಲವಾಗಿ ನೋಡುವ ಜನರೇ ಹೆಚ್ಚು ಆದರೆ ಎಷ್ಟೋ ಬಾರಿ ಮನೆಯಲ್ಲಿಯೇ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬಹುದು ಎಂಬುದು ಹಲವರಿಗೆ ಗೊತ್ತಿಲ್ಲದ ಸಂಗತಿಯಾಗಿದೆ ಇಂದಿನ ಲೇಖನ ದಲ್ಲಿ ಸದಾ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆ ಹುಳಿತೇಗು ಎದೆಯುರಿ ಅಂತಹ ಸಮಸ್ಯೆಗೆ ಉಪಶಮನಕಾರಿ ನೀಡುವ ಮನೆಮದ್ದು ವೊಂದರ ಬಗ್ಗೆ ತಿಳಿದುಕೊಳ್ಳೋಣ ಇದನ್ನು ಯಾರು ಬೇಕಾದರೂ ಪಾಲಿಸಬಹುದು ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಮಸ್ಯೆ ನಿವಾರಣೆಯಾಗುತ್ತದೆ.

ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಅನ್ನೋದು ಇಂದು ದೊಡ್ಡವರಲ್ಲಿ ಮಾತ್ರ ಕಾಡುತ್ತಿರುವ ಸಮಸ್ಯೆ ಆಗಿಲ್ಲ ಇದೊಂದು ತೊಂದರೆ ಚಿಕ್ಕವರಿಗೂ ಕಾಡುತ್ತಿದೆ.ಹಾಗಾಗಿ ಚಿಕ್ಕವರಿಗೆಲ್ಲ ಮಾತ್ರೆ ಕೊಡಲು ಅಸಾಧ್ಯ ಆದರೆ ತುಂಬ ಸುಲಭವಾಗಿ ಮಕ್ಕಳಿಗೆ ಬಂದಿರುವ ಹೊಟ್ಟೆ ಉರಿ ಎದೆ ಉರಿ ಸಮಸ್ಯೆಯನ್ನು ಪರಿಹಾರ ಮಾಡಬಹುದು. ಮನೆಯಲ್ಲಿಯೇ ಸಿಗುವ ಪದಾರ್ಥದ ಬಳಕೆಯಿಂದ ಈ ಮನೆಮದ್ದು ಪಾಲಿಸಬಹುದು, ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಮತ್ತು ಈ ಹೋಮ್ ರೆಮಿಡೀಸ್ ಯಾವ ಸಮಯದಲ್ಲಿ ಮಾಡಬೇಕು ಯಾವ ಸಮಯದಲ್ಲಿ ಮನೆಮದ್ದು ಪಾಲಿಸಿದರೆ ಎಫೆಕ್ಟಿವ್ ಎಲ್ಲವನ್ನ ತಿಳಿಯೋಣ ಬನ್ನಿ.

ಈಗ ಹೋಂ ರೆಮಿಡಿ ಮಾಡುವುದಕ್ಕಾಗಿ ಬೇಕಾಗಿರುವ ಪದಾರ್ಥದ ಬಗ್ಗೆ ಹೇಳುವುದಾದರೆ ಜಾಯಿಕಾಯಿ ನಿಂಬೆಹಣ್ಣಿನ ರಸ.ಹೌದು ಈ ಎರಡೇ ಪದಾರ್ಥದಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ನೋಡಿ ಇದನ್ನು ಮಾಡುವ ವಿಧಾನ ತುಂಬಾ ಸುಲಭ ಜಾಯಿಕಾಯಿಯನ್ನು ಪುಡಿ ಮಾಡಿಟ್ಟುಕೊಳ್ಳಿ ನಂತರ ಈ ಪುಡಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ಅದನ್ನು ಬೆಳಿಗ್ಗೆ ಸಮಯದಲ್ಲಿ ಉಷಾಪಾನವು ನಂತರ ಈ ಪರಿಹಾರ ಪಾಲಿಸಬೇಕು ಅಂದರೆ ಜಾಯಿಕಾಯಿ ಪುಡಿ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ಅದನ್ನು ಸ್ವಲ್ಪವೇ ಸ್ವಲ್ಪ ಸೇವಿಸುತ್ತ ಬರಬೇಕು.

ಈ ಮನೆಮದ್ದು ಹೊಟ್ಟೆ ಉರಿಯನ್ನು ನಿಯಂತ್ರಿಸುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಆದಷ್ಟು ಕಡಿಮೆ ಮಾಡುತ್ತದೆ ಇದರಿಂದ ಜೀರ್ಣ ಕ್ರಿಯೆ ಉತ್ತಮವಾಗಿ ನಡೆಯುತ್ತೆ ಹಾಗೂ ಕರುಳಿನ ಸಂಬಂಧಿ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.ಇದರ ಜೊತೆಗೆ ನೀವು ಮಾಡಬೇಕಾದ ಪರಿಹಾರ ಏನೆಂದರೆ ಒಂದು ಲೋಟದಷ್ಟು ನೀರನ್ನು ಬಿಸಿ ಮಾಡಲು ಬಿಡಬೇಕು ಇದಕ್ಕೆ ಒಂದು ಚಮಚ ಧನಿಯ ಕಾಳುಗಳನ್ನು ಹಾಕಿ ನೀರನ್ನು ಕುದಿಸಿ ಆ ನೀರನ್ನು ಶೋಧಿಸಿ ತಿಂಡಿಯ ಬಳಿಕ ಕುಡಿಯಬೇಕು ಈ ರೀತಿ ಮಾಡುತ್ತ ಬರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತೆ.

ಹೌದು ಧನಿಯ ಕಾಳುಗಳು ದೇಹವನ್ನು ತಂಪಾಗಿಸುತ್ತದೆ ಮತ್ತು ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಕುಡಿಯಬಹುದು ತಕ್ಷಣವೇ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಇದು ಸಹಕಾರಿ ಆಗಿರುತ್ತೆ.ಹಾಗಾಗಿ ಈ ಮೇಲೆ ತಿಳಿಸಿದಂತಹ ಈ ವಿಧಾನಗಳನ್ನು ನೀವು ಕೂಡ ಪಾಲಿಸುತ್ತ ಬಂದದ್ದೇ ಆದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅದಷ್ಟು ಬೇಗ ಉಪಶಮನ ಪಡೆದುಕೊಳ್ಳಬಹುದು ಹಾಗೂ ಗ್ಯಾಸ್ಟ್ರಿಕ್ ನ ಲಕ್ಷಣಗಳಾಗಿರುವ ಹೊಟ್ಟೆ ಉರಿ ಎದೆ ಉರಿ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತೀರ.ಈ ಸುಲಭ ಪರಿಹಾರ ಪಾಲಿಸಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಿ ಧನ್ಯವಾದ.