ಸ್ಟೇಜ್ ಮೇಲೆ ಎಲ್ಲರ ಮುಂದೆ ಆ ಮಾತಾಡಿದ ಯಶ್…. ಒಮ್ಮೆಲೆ ಕಣ್ತುಂಬಿಕೊಂಡ ಶಿವರಾಜ್ ಕುಮಾರ್ … ಅಷ್ಟಕ್ಕೂ ಅಂತದ್ದು ಏನು ಹೇಳಿದರೂ…

179

ಯಶ್ ನುಡಿದ ಮಾತಿಗೆ ಶಿವಣ್ಣ ಕಣ್ಣೀರು ಯಾಕೆ ಗೊತ್ತಾ? ಹೌದು ಯಶ್ ಮಾತು ಕೇಳಿದ್ರೆ ನೀವು ಕೂಡ ತಣ್ಣೀರು ಹಾಕುತ್ತೀರಾ…ಸದ್ಯ ತಮ್ಮನನ್ನು ಕಳೆದುಕೊಂಡ ದೊಡ್ಮನೆ ಮೊದಲ ಮಗ ಶಿವಣ್ಣ ಈ ನೋವನ್ನು ಮರೆಯಲಾಗದ ಮನೆಯವರ ಮುಂದೆ ನೋವನು ತೋರಿಸಿಕೊಳ್ಳಲು ಸಾಧ್ಯವಾಗದೆ ಬಹಳ ಕಷ್ಟಪಡುತ್ತಿದ್ದಾರೆ. ಹೌದು ಮನೆಯ ಹಿರಿಮಗನಾಗಿರುವ ಶಿವಣ್ಣ ಅವರಿಗೆ ಈಗ ಜವಾಬ್ದಾರಿ ಹೆಚ್ಚಿದೆ ಮನೆಗೆ ಮಗನಂತಿದ್ದ ಅಪ್ಪು, ಶಿವಣ್ಣ ಮತ್ತು ರಾಘಣ್ಣನಿಗೆ ಮಗುವಂತೆ ಇದ್ದ ಅಪ್ಪುವನ್ನು ಕಳೆದುಕೊಂಡು ಶಿವಣ್ಣ ಮತ್ತು ರಾಘಣ್ಣ ಅವರಿಗೆ ದಿಕ್ಕುತೋಚದಂತಾಗಿದೆ. ಇಂತಹ ಸಮಯದಲ್ಲಿ ಶಿವಣ್ಣ ಅವರು ಅಪ್ಪು ಅವರ ಪುಣ್ಯ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆ ಮೇಲೆಯ ಅಪ್ಪು ಅವರನ್ನು ನೆನೆದು ಕಣ್ಣೀರಿಟ್ಟಿದ್ದರು.

ಹೌದು ಅಪ್ಪು ಅಗಲಿಕೆಯ ದಿನದಂದು ತಮ್ಮನನ್ನು ಬಿಟ್ಟಿರಲು ಸಾಧ್ಯವಾಗದೆ ತಮ್ಮನ ಪಾರ್ಥಿವ ಶರೀರದ ಪಕ್ಕದಲ್ಲಿಯೇ ಕುಳಿತು ಶಿವಣ್ಣ ಬಿಕ್ಕಿಬಿಕ್ಕಿ ಅತ್ತಿದ್ದರು. ನನ್ನ ಮಗುವನ್ನು ನಾನು ಕಳೆದುಕೊಂಡಿದ್ದೇನೆ ಎಂದು ಶಿವಣ್ಣ ಅವರು ನುಡಿವಾಗ ಎಲ್ಲರೂ ಕೂಡ ಇನ್ನಷ್ಟು ಭಾವುಕರಾಗುತ್ತಿದ್ದರು. ನಿಜಕ್ಕೂ ಇಂತಹ ಸಮಯದಲ್ಲಿ ಶಿವಣ್ಣ ಅವರಿಗೆ ಆ ದೇವರು ಇನ್ನಷ್ಟು ಧೈರ್ಯ ಕೊಡಲಿ ಈ ನೋವನ್ನು ನಿಭಾಯಿಸುವ ಶಕ್ತಿ ದೊಡ್ಮನೆ ಯನ್ನು ಕಾಪಾಡುವ ಶಕ್ತಿ ಅವರಿಗೆ ಕೊಡಲಿ ಎಂದು ಹಲವು ಅಭಿಮಾನಿಗಳು ಮನಸಾರೆ ಕೇಳಿಕೊಂಡಿದ್ದರು. ಯಾಕೆ ಅಂದರೆ ಮನೆಗೆ ದೊಡ್ಮಗ ಅವರು ಈ ರೀತಿ ಕುಗ್ಗಿದರೆ ಮತ್ತೆ ಮನೆಯ ಜವಾಬ್ದಾರಿ ತೆಗೆದುಕೊಳ್ಳುವುದು ಹೇಗೆ ಅಲ್ವಾ. ಹಾಗಾಗಿ ಶಿವಣ್ಣ ಅವರನ್ನ ನೋಡಿ ಇಡೀ ಕರ್ನಾಟಕವೇ ಇನ್ನಷ್ಟು ಕಣ್ಣೀರು ಹಾಕಿತ್ತು.

ತಮ್ಮನ ಕೊನೆಯ ಸಿನೆಮಾ ವಾಗಿರುವ ಜೇಮ್ಸ ನಮಗೂ ಕೂಡ ನಟ ಶಿವಣ್ಣ ಅವರೇ ತಮ್ಮನಿಗಾಗಿ ತಮ್ಮ ವಾಯ್ಸ್ ಓವರ್ ನೀಡಿದ್ದರು. ಹೌದು ಜೇಮ್ಸ್ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾವಾಗಿತ್ತು ಸಿನಮಾದಲ್ಲಿ ಬಹು ಪಾಲು ಚಿತ್ರೀಕರಣ ಮುಗಿದಿತ್ತು ಆದರೆ ಡಬ್ಬಿಂಗ್ ಮಾತ್ರ ಇನ್ನೂ ಬಾಕಿ ಇತ್ತು ಹಾಗಾಗಿ ತಮ್ಮನ ಸಿನೆಮಾಗೆ ತಮ್ಮನಿಗೆ ಧ್ವನಿಯಾಗಿ ಶಿವಣ್ಣ ಅವರೇ ಧ್ವನಿ ನೀಡಿದ್ದರು, ಈ ವೇಳೆ ಬಹಳ ಭಾವುಕರಾಗಿದ್ದರು ಶಿವಣ್ಣ ಆದರೆ ಜನ ದನ ಸಹಿಸಿಕೊಂಡು ಕೊನೆಗೂ ಡಬ್ಬಿಂಗ್ ಕೆಲಸವನ್ನು ಕೂಡ ಮುಗಿಸಿದ್ದರು ಮತ್ತು ತಮ್ಮ ನಿಲ್ಲದ ಮೊದಲ ಜನುಮ ದಿನದಂದು ಅಂದರೆ ಮಾರ್ಚ್ 17ರಂದು ಅಪ್ಪು ಅವರ ಕೊನೆಯ ಸಿನೆಮಾ ಜೇಮ್ಸ್ ಸಿನೆಮಾ ರಿಲೀಸ್ ಕಂಡಿತ್ತು ಇದೇ ವೇಳೆ ಅಪ್ಪು ಅವರ ಕೊನೆಯ ಸಿನಿಮಾ ನೋಡಲು ಶಿವಣ್ಣ ಅವರು ಮೈಸೂರು ಗಾಯತ್ರಿ ಟಾಕೀಸ್ ಗೆ ಹೋಗಿ ಅಭಿಮಾನಿಗಳನ್ನ ಭೇಟಿ ಆಗಿದ್ದರು.

ಅಲ್ಲಿಯೂ ಸಹ ಮೀಡಿಯಾ ಮುಂದೆ ಮಾತನಾಡಿದ ಶಿವಣ್ಣ ತಮ್ಮನ ಕೊನೆಯ ಸಿನೆಮಾವನ್ನ ಕುಟುಂಬ ಸಮೇತವಾಗಿ ನೋಡುವ ಪ್ಲಾನ್ ಇದೆಯಾ ಎಂದಾಗ ಇಲ್ಲ ನನಗೆ ಮತ್ತು ಒಬ್ಬ ತಮ್ಮ ಇದ್ದಾನೆ ಅವನು ಈಗಾಗಲೇ ಬೇರೆ ರೀತಿಯೇ ಮಾತನಾಡುತ್ತಿದ್ದಾರೆ. ಒಟ್ಟಿಗೆ ಸಿನಿಮಾ ನೋಡಿದಾಗ ಎಲ್ಲರೂ ಕೂಡ ಇನ್ನಷ್ಟು ಭಾವುಕರಾಗುತ್ತಾರೆ ಹಾಗಾಗಿ ಒಟ್ಟಿಗೆ ಸಿನಿಮಾ ನೋಡುವ ಪ್ಲಾನ್ ಇಲ್ಲ ಎಂದು ಹೇಳಿರುವ ಶಿವಣ್ಣ ಇದೇ ವೇಳೆ ಮಾರ್ಚ್ ತಿಂಗಳಿನ 27ರಂದು ಕೆಜಿಎಫ್ 2 ಸಿನೆಮಾದ ಟೀಸರ್ ಬಿಡುಗಡೆ ಓರೆಯಾನ್ ಮಾಲ್ ನಲ್ಲಿ ಇತ್ತು, ಇದೇ ವೇಳೆ ಈ ಕಾರ್ಯಕ್ರಮಕ್ಕೆ ಶಿವಣ್ಣ ಅವರನ್ನು ಕೂಡ ಆಹ್ವಾನಿಸಲಾಗಿತ್ತು.

ಕಾರ್ಯಕ್ರಮದಲ್ಲಿಯಶ್ ಅವರು ಮಾತನಾಡುವಾಗ ಅಪ್ಪು ಅವರನ್ನ ನಾವು ಈಗ ಕಳೆದುಕೊಂಡಿದ್ದೇವೆ, ಆದರೆ ಸದಾ ಅವರ ಪ್ರೀತಿ ನಮ್ಮ ಮನದಲ್ಲಿರುತ್ತದೆ, ಎಂದು ಅಪ್ಪು ಅವರ ಕುರಿತೂ ಸಾಕಷ್ಟು ಮಾತುಗಳನಾಡಿದ್ದಾರೆ ನಟ ಯಶ್. ಶಿವಣ್ಣ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ ಎಂದು ಯಶ್ ಅವರು ನುಡಿದ ಮಾತಿಗೆ ಶಿವಣ್ಣ ಅವರು ಅಂದು ಸಹ ಕಣ್ಣೀರು ಇಟ್ಟಿದ್ದರು ನಿಜಕ್ಕೂ ತಮ್ಮನನ್ನು ಕಳೆದುಕೊಂಡ ಶಿವಣ್ಣ ಅವರು ಬಹಳ ದುಃಖದಲ್ಲಿದ್ದಾರೆ. ಆ ದುಃಖದಿಂದ ಹೊರಬರಲು ಆ ದೇವರು ಅವರಿಗೆ ಆದಷ್ಟು ಬೇಗ ಧೈರ್ಯ ನೀಡಲಿ ಎಂದು ನಾವು ಕೂಡ ಕೇಳಿಕೊಳ್ಳೋಣ.