ರಾತ್ರಿ ನಿದ್ರೆ ಸಮಸ್ಸೆಯನ್ನ ಎದುರುಸುತ್ತಿದ್ದೀರಾ ಹಾಗಾದರೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಈ ಒಂದು ಮನೆ ಮದ್ದು ಮಾಡಿ ಸಾಕು… ಕೇವಲ ಸೆಕೆಂಡ್ ನಲ್ಲಿ ನಿದ್ರೆಗೆ ಜಾರುತ್ತೀರಾ..

161

ನಿದ್ರಾಹೀನತೆಗೆ ಕಾರಣಗಳು ಹಲವು ಇರಬಹುದು ಆದರೆ ನಿದ್ರಾಹೀನತೆ ಸಮಸ್ಯೆ ಬಗ್ಗೆ ಕೆಲವೊಂದು ಮನೆಮದ್ದುಗಳನ್ನು ತಿಳಿದಾಗ ಆ ನಿದ್ರಾಹೀನತೆ ಎಂಬ ಸಮಸ್ಯೆಗೆ ಈ ಮನೆಮದ್ದಿನ ಮೂಲಕವೇ ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ ನಿದ್ರಾಹೀನತೆಗೆ ಮಾತ್ರೆ ತೆಗೆದುಕೊಳ್ಳುವ ರೂಢಿಯನ್ನು ಮಾತ್ರ ಮಾಡಿಕೊಳ್ಳಬೇಡಿ.ಹೌದು ನಮಸ್ತೆ ಪ್ರಿಯ ಸ್ನೇಹಿತರೆ ಇಂದಿನ ಯುಗದಲ್ಲಿ ಹೆಚ್ಚಿನ ಮಂದಿ ಕೆಲಸ ಮಾಡುತ್ತಾ ಮಾಡುತ್ತಾ ತಮ್ಮ ನಿದ್ರೆ ಬಗ್ಗೆ ತಮ್ಮ ಆರೋಗ್ಯದ ಬಗ್ಗೆ ಗಮನವೇ ಹರಿಸುವುದಿಲ್ಲ. ಹಾಗಾಗಿ ತಮ್ಮ ಆರೋಗ್ಯದ ಬಗ್ಗೆ ತಮ್ಮ ಆರೋಗ್ಯಕರ ಪದ್ದತಿಯ ಬಗ್ಗೆ ಯೋಚಿಸದೆ ಇರುವವರಿಗೆ ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾಗಬಹುದು ಅದರಲ್ಲಿ ದೊಡ್ಡ ಸಮಸ್ಯೆಯೆಂದರೆ ಅದು ನಿದ್ರಾಹೀನತೆ ಹೌದು ಈ ನಿದ್ರಾಹೀನತೆ ಸಮಸ್ಯೆ ಚಿಕ್ಕದೇನೂ ಅಲ್ಲ ನಿದ್ರೆ ಎಂಬುದು ಮನುಷ್ಯನಿಗೆ ಸರಿ ಹೋಗದೇ ಇದ್ದರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದು ನಿಮಗೆ ಗೊತ್ತಿದೆಯೇ?

ಹೌದು ಫ್ರೆಂಡ್ಸ್ ನಿದ್ರಾಹೀನತೆ ಸಮಸ್ಯೆ ಎದುರಾದಾಗ ಅಂದರೆ ಸಮಯಕ್ಕೆ ಸರಿಯಾಗಿ ನಿದ್ರೆ ಬಾರದೆ ಇರುವುದು ಸರಿಯಾದ ಪ್ರಮಾಣದ ನಿದ್ರೆ ಮಾಡದೇ ಇರುವುದು ಎಂತಹ ದೊಡ್ಡ ಸಮಸ್ಯೆಯನ್ನು ತಂದೊಡ್ಡುತ್ತದೆ ಅಂದರೆ, ನಿಮಗೆ ಬಹುಶಃ ಗೊತ್ತಿಲ್ಲದೇ ಇರಬಹುದು ಮನುಷ್ಯನಿಗೆ 8ಗಂಟೆಗಳ ಕಾಲ ನಿದ್ರೆ ಅವಶ್ಯಕವಾಗಿರುತ್ತದೆ ಯಾವಾಗ ಮನುಷ್ಯ ಸರಿಯಾಗಿ ಇಷ್ಟು ಪ್ರಮಾಣದ ನಿದ್ರೆ ಮಾಡದೆ ಹೋಗುತ್ತಾನೆ ಆಗ ದೊಡ್ಡ ದೊಡ್ಡ ಸಮಸ್ಯೆ ಬರಬಹುದು ಅದರಲ್ಲಿ ಮುಖ್ಯವಾಗಿ ಸ್ಟ್ರೆಸ್ ಎಂಬ ದೊಡ್ಡ ಸಮಸ್ಯೆ ಬಂದಾಗ ಇದು ಮಾನಸಿಕ ಆರೋಗ್ಯದ ಮೇಲೆ ಮೊದಲು ಪ್ರಭಾವ ಬೀರಿ ಬಳಿಕ ದೈಹಿಕ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುತ್ತದೆ..

ಹಾಗಾಗಿ ನಿದ್ರಾಹೀನತೆ ಸಮಸ್ಯೆ ಅನ್ನೂ ನಿರ್ಲಕ್ಷಿಸಬೇಡಿ ನಿದ್ರೆ ಬರುತ್ತಿಲ್ಲವೆಂದು ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮಾತ್ರೆಯನ್ನು ತೆಗೆದುಕೊಳ್ಳಬೇಡಿ. ಹೌದು ನಿದ್ರಾಹೀನತೆ ಸಮಸ್ಯೆ ಬಂದಾಗ ರಾತ್ರಿ ಮಲಗುವ ಮುನ್ನ ಕೆಲವೊಂದು ಪರಿಹಾರಗಳನ್ನು ಪಾಲಿಸಬೇಕಿರುತ್ತದೆ ಅದರಲ್ಲಿ ಮೊದಲನೆಯದಾಗಿ ಯೋಗ ಇರಬಹುದು ಹೌದು ಯೋಗ ಮುದ್ರಾ ಯೋಗ ಕೆಲವೊಂದು ಮನೆಮದ್ದುಗಳು ಪಾಲಿಸುವ ಮೂಲಕ ನಿದ್ರಾಹೀನತೆ ಸಮಸ್ಯೆ ಅನ್ನೂ ದೂರ ಮಾಡಿಕೊಳ್ಳಬಹುದು.

ಅದರಲ್ಲಿ ಮೊದಲನೇ ಪರಿಹಾರಾ ತುಂಬ ಸುಲಭವಾಗಿರುತ್ತದೆ ಅದೇನೆಂದರೆ ತ್ರಿಫಲ ಚೂರ್ಣ ಎಂದು ಗ್ರಂಥಿಗೆ ಅಂಗಡಿಯಲ್ಲಿ ಅಥವಾ ಆಯುರ್ವೇದ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಇದು ನಿಮಗೆ ದೊರೆಯುತ್ತದೆ ಅದನ್ನು ತಂದು ರಾತ್ರಿ ಮಲಗುವ ಹತ್ತು ನಿಮಿಷಗಳ ಮುಂಚೆ ಕಾಲು ಚಮಚದಷ್ಟು ತ್ರಿಫಲಚೂರ್ಣ ಕಾಲು ಚಮಚದಷ್ಟು ಜೇನುತುಪ್ಪವನ್ನು ಮಿಶ್ರಮಾಡಿ ಇದಕ್ಕೆ ಸ್ವಲ್ಪ ಬಿಸಿ ನೀರನ್ನು ಮಿಶ್ರ ಮಾಡಿ ಅಥವಾ ಹಾಲನ್ನು ಮಿಶ್ರಣ ಮಾಡಿ ಕುಡಿಯಿರಿ.

ತ್ರಿಫಲ ಚೂರ್ಣ ಆರೋಗ್ಯಕ್ಕೂ ಒಳ್ಳೆಯದು ಹಾಗೆ ಉತ್ತಮವಾದ ನಿದ್ರೆ ತರಿಸುವುದಕ್ಕೂ ಕೂಡ ಈ ತ್ರಿಫಲಚೂರ್ಣ ಸಹಕಾರಿ ಆಗಿರುತ್ತದೆ ಹಾಗಾಗಿ ತ್ರಿಫಲಚೂರ್ಣ ದ ಈ ಮನೆಮದ್ದನ್ನು ಪಾಲಿಸುವುದರಿಂದ ಖಂಡಿತಾ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ನಿದ್ರಾ ಹೀನತೆ ಸಮಸ್ಯೆಯಿಂದ ದೂರ ಮಾಡಿಕೊಂಡು ನೆಮ್ಮದಿ ಕರವಾದ ಆರೋಗ್ಯಕರವಾದ ನಿದ್ರೆಯನ್ನ ಮಾಡಬಹುದು ಆದರೆ ಮಾತ್ರ ತೆಗೆದುಕೊಂಡು ನಿದ್ರೆ ಮಾಡುತ್ತೇವೆ ಅಂದರೆ ಇದು ಮೆದುಳಿನಲ್ಲಿರುವ ನರಗಳ ಆರೋಗ್ಯವನ್ನು ಕುಂದಿಸುತ್ತದೆ ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಮನುಷ್ಯನ ಆಯಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಹಾಗೆ ಮತ್ತೊಂದು ಸುಲಭ ಪರಿಹಾರವೇನೆಂದರೆ ಮಲಗುವುದಕ್ಕೆ ಮುಂಚೆ ಬಿಸಿ ಹಾಲಿಗೆ ಅರಿಶಿಣವನ್ನು ಹಾಕಿ ಕುಡಿಯಿರಿ ಹಾಗೆ ಮಲಗುವ ಅರ್ಧ ಗಂಟೆಯ ಮುನ್ನ ಮೊಬೈಲ್ ಬಳಕೆ ಮಾಡಬೇಡಿ ಈ ಕೆಲವು ಪರಿಹಾರವನ್ನ ಪಾಲಿಸುವುದರಿಂದ ನಿದ್ರಾ ಹೀನತೆಯಿಂದ ಪಾರಾಗಬಹುದು ಧನ್ಯವಾದ