Ad
Home ಅರೋಗ್ಯ ನಿಮಗೇನಾದ್ರು ಮೂತ್ರ ಮಾಡುವ ತುಂಬಾ ಉರಿ ಉರಿ ಅನಿಸೋದು , ಹಾಗು ಮೂತ್ರನಾಳದಲ್ಲಿ ಸೋಂಕು ಎನ್ನೋದು...

ನಿಮಗೇನಾದ್ರು ಮೂತ್ರ ಮಾಡುವ ತುಂಬಾ ಉರಿ ಉರಿ ಅನಿಸೋದು , ಹಾಗು ಮೂತ್ರನಾಳದಲ್ಲಿ ಸೋಂಕು ಎನ್ನೋದು ಬರದೇ ಇರಲು ಈ ಒಂದು ಮನೆಮದ್ದು ಮಾಡಿ … ಜೀವನದಲ್ಲಿ ಯೂರಿನ್ ಇನ್ಫೆಕ್ಷನ್ ಆಗಲ್ಲ..

ಯೂರಿನ್ ಇನ್ಫೆಕ್ಷನ್ ಎಂಬುದು ಎಲ್ಲರಿಗೂ ಕೂಡ ಸೀರಿಯಸ್ ಸಮಸ್ಯೆಯೇನೂ ಆಗಿರುವುದಿಲ್ಲ. ಆದರೆ ಕೆಲವರಿಗೆ ಮಾತ್ರ ಈ ಯೂರಿನ್ ಇನ್ ಫೆಕ್ಷನ್ ಅಥವಾ ಈ ಮೂತ್ರನಾಳದಲ್ಲಿ ಉರಿ ಉಂಟಾಗುವುದು ಅಥವಾ ಜನನಾಂಗದಲ್ಲಿ ಬ್ಯಾಡ್ ಸ್ಮೆಲ್ ಬರುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತಿದ್ದರೆ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ….

ನಮಸ್ಕಾರ ಸ್ನೇಹಿತರೇ ನಾವು ಪ್ರತಿದಿನ ಸ್ನಾನ ಮಾಡುವುದು ನಮ್ಮ ಶರೀರವನ್ನು ಸ್ವತ್ಛವಾಗಿಟ್ಟುಕೊಳ್ಳಲು ಆದರೆ ನಮ್ಮ ದೇಹದಲ್ಲಿ ಕೆಲವು ಅಂಗಗಳಿವೆ ಅದನ್ನು ನಾವು ಶುದ್ಧ ಮಾಡಬೇಕಂತ ಏನೂ ಇಲ್ಲ ತಾನಾಗಿಯೇ ಪ್ರಕೃತಿದತ್ತವಾಗಿ ಅದಕ್ಕೆ ಶುದ್ಧ ಮಾಡಿಕೊಳ್ಳುವ ಸಾಮರ್ಥ್ಯವಿದೆ ಅಂತಹ ಅಂಗಗಳು ಅಂದರೆ ಮೊದಲನೆಯದ್ದು ಕಣ್ಣು ಮತ್ತು ಎರಡನೆಯದು ಜನನಾಂಗ.

ಈ ಜನಾಂಗ ಬಹಳ ಸೂಕ್ಷ್ಮವಾದದ್ದು, ಹಾಗೆ ಈ ಯೂರಿನ್ ಇನ್ ಫೆಕ್ಷನ್ ಇಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಭಾರಿ ಹೆಚ್ಚಾಗಿದೆ. ಇದಕ್ಕೆ ಹೆದರುವುದು ಬೇಡ ಈ ಸಮಸ್ಯೆ ಕಂಡು ಬರುತ್ತಿದ್ದ ಹಾಗೆ ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಂಡರೆ ತಕ್ಷಣವೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಆದರೆ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಇದಕ್ಕೆ ಪರಿಹಾರ ಮಾಡಬೇಕಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಬಹಳ ದೊಡ್ಡದಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇವತ್ತಿನ ಈ ಮನೆ ಮದ್ದಿನಲ್ಲಿ ಯೂರಿನ್ ಇನ್ಫೆಕ್ಷನ್ ಆಗಲಿ ಅಥವಾ ಮೂತ್ರನಾಳದಲ್ಲಿ ಉರಿ ಉಂಟಾಗುವುದು ಅಥವಾ ಮೂತ್ರ ಮಾಡುವ ಜಾಗದಲ್ಲಿ ಕೆಟ್ಟ ವಾಸನೆ ಬರುವುದು ಇಂತಹ ಸಮಸ್ಯೆಗಳು ನಿಮಗಿದ್ದರೆ ಇದಕ್ಕೆ ಮನೆಯಲ್ಲಿಯೇ ಮಾಡಬಹುದಾದ ಸರಳ ಪರಿಹಾರವೆಂದರೆ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಏನು ಮತ್ತು ಯಾವ ಸಮಯದಲ್ಲಿ ಈ ಪರಿಹಾರ ಮಾಡಬೇಕು ಹಾಗೆ ಜನನಾಂಗದ ಕಾಳಜಿಯನ್ನು ಹೇಗೆ ಮಾಡಬೇಕೋ ಎಲ್ಲವನ್ನೂ ತಿಳಿಯೋಣ ಈ ಕೆಳಗಿನ ಪುಟದಲ್ಲಿ.

ಮೊದಲಿಗೆ ಮನೆಮದ್ದಿನ ಬಗ್ಗೆ ತಿಳಿಯೋಣ ಯೂರಿನ್ ಇನ್ಫೆಕ್ಷನ್ ಕಾಣಿಸಿಕೊಂಡ ಕೂಡಲೇ ಮೊದಲ ದಿನದಿಂದಲೇ ಈ ಪರಿಹಾರವನ್ನು ಮಾಡಿ ಇದಕ್ಕಾಗಿ ಮಾಡಬೇಕಿರುವುದು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಶುದ್ಧ ಮಾಡಿಕೊಂಡು ಇದನ್ನು ರುಬ್ಬಿಕೊಳ್ಳಬೇಕು ಅದಕ್ಕೂ ಮುಂಚೆ ಸಬ್ಚ ಬೀಜಗಳನ್ನು ನೆನೆಸಿಟ್ಟು, ಬಳಿಕ ಆ ನೀರಿನಿಂದ ಈ ಕೊತ್ತಂಬರಿ ಸೊಪ್ಪನ್ನು ರುಬ್ಬಿ ಕೊಳ್ಳಿ ಬಳಿಕ ಅದನ್ನು ಶೋಧಿಸದೆ ಲೋಟಕ್ಕೆ ಹಾಕಿ ಬಳಿಕ ನೆನೆಸಿಕೊಂಡ ದಂತಹ ಸಬ್ಚ ಬೀಜಗಳನ್ನು ಪೂರ್ತಿಯಾಗಿ ಅದರೊಟ್ಟಿಗೆ ಮಿಶ್ರಮಾಡಿ ನಿಂಬೆಹಣ್ಣಿನ ರಸವನ್ನು ಇದಕ್ಕೆ ಹಾಕಿ ಚಿಟಿಕೆ ಉಪ್ಪನ್ನು ಹಾಕಿ ಇದನ್ನು ಸೇವಿಸಿ, ಇದೇ ರೀತಿ 7 ದಿನಗಳ ಕಾಲ ಕುಡಿಯುತ್ತ ಬಂದರೆ ಈ ಸಮಸ್ಯೆಯಿಂದ ಬೇಗನೆ ಪರಿಹಾರವನ್ನು ಪಡೆದುಕೊಳ್ಳಬಹುದು.

ಇಂತಹ ಸಮಸ್ಯೆ ಕಂಡುಬಂದಾಗ ಹೆಚ್ಚು ಹೆಚ್ಚು ನೀರು ಕುಡಿಯಬೇಕು ಹೌದು ಈ ಯೂರಿನ್ ಇನ್ಫೆಕ್ಷನ್ ಎಂಬುದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಹೆಣ್ಣುಮಕ್ಕಳು ಆಚೆ ಏನಾದರೂ ಮೂತ್ರ ವಿಸರ್ಜನೆ ಮಾಡಬೇಕು ಅನಿಸಿದಾಗ ಶುದ್ಧವಾದ ವಾಶ್ ರೂಮ್ ಗಳನ್ನು ಬಳಸುವುದು ಅವಶ್ಯಕ, ಇಲ್ಲವಾದಲ್ಲಿ ಬಹಳ ಬೇಗ ಯೂರಿನ್ ಇನ್ಫೆಕ್ಷನ್ ಅಟ್ಯಾಕ್ ಆಗುವ ಸಾಧ್ಯತೆ ಇರುತ್ತದೆ.

ಮೂತ್ರನಾಳಗಳ ಬಳಿ ಬ್ಯಾಕ್ಟೀರಿಯಾ ಉಂಟಾದಾಗ ಆಗ ಈ ಯೂರಿನ್ ಇನ್ಫೆಕ್ಷನ್ ಸಮಸ್ಯೆ ಉಂಟಾಗುತ್ತದೆ ಈ ಬ್ಯಾಕ್ಟೀರಿಯಾವನ್ನು ನಟಿಸುವುದಕ್ಕಾಗಿಯೇ ಆ ಸಮಯದಲ್ಲಿ ಹೆಚ್ಚು ನೀರನ್ನು ಸೇವಿಸುವ ಮೂಲಕ ಹೆಚ್ಚೆಚ್ಚು ಮೂತ್ರವಿಸರ್ಜನೆ ಮಾಡುತ್ತಾ ಬಂದರೆ, ಈ ಬ್ಯಾಕ್ಟೀರಿಯಾ ನಾಶವಾಗುತ್ತದೆ ಮತ್ತು ಆದಷ್ಟು ಬೇಗ ಇನ್ಫೆಕ್ಷನ್ ಸಮಸ್ಯೆ ನಿವಾರಣೆ ಆಗುತ್ತದೆ.

ಯಾವುದೇ ಅನಾರೋಗ್ಯ ಸಮಸ್ಯೆ ಆಗಿರಲಿ ಅದಕ್ಕೆ ಪ್ರಾಥಮಿಕ ಪರಿಹಾರ ಅಂದರೆ ಅದನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು ಮತ್ತು ಸರಿಯಾಗಿ ತಿಳಿದಿರಬೇಕು ಸರಿಯಾದ ಪ್ರಮಾಣದ ನೀರು ಕುಡಿಯುವುದರಿಂದ ಮತ್ತು ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುವುದರಿಂದ ಬಹಳಷ್ಟು ಸಮಸ್ಯೆಗಳನ್ನು ಮನೆಯಲ್ಲಿಯೇ ಪರಿಹರ ಮಾಡಿಕೊಳ್ಳಬಹುದು.

Exit mobile version