Categories
ಮಾಹಿತಿ ಸಂಗ್ರಹ

24 ಸಾವಿರದ ವಾಚ್ ಗೆ 5 ಕೋಟಿ ಕೊಡ್ತೀವಿ ಕೊಡು ಅಂತಿದ್ದಾರೆ ಯಾಕೆ ಗೊತ್ತಾ…

ಇಪ್ಪತ್ನಾಲ್ಕು ಸಾವಿರ ರೂಪಾಯಿ ಕೊಟ್ಟು ಕೊಂಡು ಕೊಂಡಂತಹ ವಾಚ್ ಗೆ ಐವತ್ತು ವರ್ಷಗಳ ಬಳಿಕ ಆ ವಾಚಿಗೆ ಸಿಕ್ಕಂತಹ ಬೆಲೆ ಸುಮಾರು ಐದು ಕೋಟಿ ರೂಪಾಯಿಗಳು, ಹೌದು ನೀವು ಹೇಳುತ್ತಿರುವಂತಹ ವಿಚಾರ ನಿಜಾನೇ ಈ ಒಂದು ಘಟನೆ ನಡೆದಿರುವುದು ಅಮೆರಿಕಾದಲ್ಲಿ.

ಈ ವಾಚ್ನ ಹಿಂದೆ ಇರುವಂತಹ ಕಥೆ ಏನು ಅಂತ ಹೇಳ್ತೀವಿ ಕೇಳಿ, ಈ ಕೆಳಗೆ ನೀಡಲಾಗಿರುವ ಲೇಖನವನ್ನು ಸಂಪೂರ್ಣವಾಗಿ ತಿಳಿದು ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಬಿಬಿಸಿ ಟಿವಿ ಚಾನೆಲ್ ನವರು ಒಂದು ರೋಡ್ ಶೋವನ್ನು ನಡೆಸುತ್ತಾರೆ ಶೋನ ಹೆಸರು ಆ್ಯಂಟಿ ಕ್ಯೂಸ್ ರೋಡ್ ಶೋ ಎಂದು, ಇದೊಂದು ಪ್ರಸಿದ್ಧವಾದಂತಹ ಒಂದು ರೋಡ್ ಶೋ ಈ ರೋಡ್ ಶೋನಲ್ಲಿ ಆ್ಯಂಟಿಕ್ ಪೀಸ್ ಗಳನ್ನು ಹೆಚ್ಚು ಬೆಲೆಗೆ ತೆಗೆದುಕೊಳ್ಳುತ್ತಾರೆ ಹಾಗೂ ಒಮ್ಮೆ ಈ ರೀತಿಯ ಒಂದು ರೋಡ್ ಶೋ ಅಮೆರಿಕದಲ್ಲಿ ಕೂಡ ನಡೆಯುತ್ತದೆ.

ಒಮ್ಮೆ ಅಮೆರಿಕಾಗೆ ಸೇರಿದಂತಹ ಒಬ್ಬ ಪ್ರಜೆ ಸಾವಿರದ ಒಂಬೈನೂರ ಎಪ್ಪತ್ತು ಒಂದರಲ್ಲಿ ಅಮೆರಿಕದ ಏರ್ಫೋರ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ನಂತರ ಒಂದು ರೋಲೆಕ್ಸ್ ವಾಚ್ ಮೇಲೆ ತುಂಬಾನೇ ಒಲವು ಮೂಡಿ ಆ ವಾಚ್ ಅನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ, ತನ್ನ ಒಂದು ತಿಂಗಳ ಸಂಬಳವನ್ನು ನೀಡಿ ಇಪ್ಪತ್ತ್ನಾಲ್ಕು ಸಾವಿರಕ್ಕೆ ವಾಚ್ ಅನ್ನು ಕೊಂಡುಕೊಂಡು, ಆ ಆ ವಾಚನ್ನು ಕೈಗೆ ಕಟ್ಟಿಕೊಳ್ಳದೆ ಬಳಸದೆ ತುಂಬಾ ಸುಂದರವಾಗಿ ಇದೆ ಎಂಬ ಕಾರಣಕ್ಕಾಗಿ ಅದನ್ನು ಜೋಪಾನ ಮಾಡಿ ಇಟ್ಟಿದ್ದ ಆ ವ್ಯಕ್ತಿ.

ಪ್ರತಿ ದಿನ ವಾಚನ್ನು ನೋಡಿ ಖುಷಿ ಪಡುತ್ತಿದ್ದ ಆ ವ್ಯಕ್ತಿ ಒಮ್ಮೆ ಬಿಬಿಸಿ ಟಿವಿ ಚಾನೆಲ್ ನ ಅನೌನ್ಸ್ ಮೆಂಟ್ ಅನ್ನು ಕೇಳಿ ತನ್ನ ರೋಲೆಕ್ಸ್ ವಾಚ್ ಅನ್ನು ಕೂಡ ಆ ಆಂಟಿ ಕ್ಯೂಸ್ ರೋಡ್ ಶೋಗೆ ತೆಗೆದುಕೊಂಡು ಹೋಗುತ್ತಾರೆ, ನಂತರ ಆ ರೋಡ್ ಶೋನಲ್ಲಿ ಇದಂತಹ ಪರಿಣಿತರು ರೋಲೆಕ್ಸ್ ವಾಚ್ ಅನ್ನು ಪರಿಶೀಲಿಸಿ ಆ ವ್ಯಕ್ತಿಗೆ ವಾರ್ಚ್ ನ ಬೆಲೆಯನ್ನು ನಿಗದಿಪಡಿಸಿ ಹೇಳುತ್ತಾರೆ, ಬೆಲೆ ಕೇಳಿ ಆ ವ್ಯಕ್ತಿ ಅಲ್ಲಿಯೇ ಕುಸಿದು ಬಿದ್ದು ಬಿಡುತ್ತಾನೆ.

ಸಾವಿರದ ಒಂಬೈನೂರ ಇಪ್ಪತ್ತ್ಮೂರು ರಲ್ಲಿ ಅಂದರೆ ಸುಮಾರು ಐವತ್ತು ವರ್ಷ ಹಿಂದೆ ಕಂಡುಕೊಂಡಂತಹ ಒಂದು ವಾಚ್ ಗೆ ನೀಡಿದ್ದ ಹಣ ಇಪ್ಪತ್ತ್ನಾಲ್ಕು ಸಾವಿರ ರೂಪಾಯಿ ಎಂದರೆ ಮುನ್ನೂರ ನಲವತ್ತೈದು ಡಾಲರ್, ಆದರೆ ಇದೀಗ ವಾಚ್ನ ಬೆಲೆ ಸುಮಾರು ಏಳು ಲಕ್ಷ ಡಾಲರ್ ಅಂದರೆ ಅದರ ಮೊತ್ತ ಐದು ಕೋಟಿ ರೂಪಾಯಿಗಳು, ಯಾರಿಗೇ ಆದರೂ ಇಪ್ಪತ್ತ್ನಾಲ್ಕು ಸಾವಿರ ಕೊಟ್ಟು ವಾಚನ ಕೊಂಡುಕೊಂಡರೆ ಅದಕ್ಕೆ ಐದು ಕೋಟಿ ರೂಪಾಯಿ ಬೆಲೆಯನ್ನು ನೀಡುತ್ತಾರೆ ಅಂದರೆ ಖುಷಿಯಾಗಲ್ಲ ನೀವೇ ಹೇಳಿ.

ವಾಚನ್ನು ಆ ವ್ಯಕ್ತಿಗೆ ನೀಡುವಾಗ ಪರಿಣಿತರು ಹೇಳಿದ್ದೇನು ಅಂದರೆ ಈ ವಾಚನ್ನು ನೀವು ಒಂದು ಬಾರಿ ಕಟ್ಟಿಕೊಂಡರು ಕೂಡ ಈ ವಾಚ್ನ ಬೆಲೆ ನಾಲ್ಕು ಕೋಟಿ ರೂಪಾಯಿಗಳು ಆಗುತ್ತದೆ ಎಂದು ಕೂಡ ಹೇಳುತ್ತಾರೆ, ನಂತರ ಆ ವ್ಯಕ್ತಿ ವಾಚ್ನ್ನು ನೀಡಿ ಐದು ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ.

Leave a Reply