ಇದೆ ಕಾರಣಕ್ಕೆ ನೋಡಿ ನಮ್ಮ ಭಾರತೀಯ ಪರಂಪರೆ ಇಷ್ಟ ಆಗೋದು ಜೀವನ ಸಂಗಾತಿನೇ ನಮ್ಮ ಸರ್ವಸ್ವ ಅಂತ ಭಾವಿಸಿ ಜೀವಿಸುವಂತ ಪರಂಪರೆ ಈ ನೆಲದ್ದು ಆದರೂ ಕೂಡ ಇತ್ತೀಚಿನ ಪಾಶ್ಚಿಮಾತ್ಯ ಸಂಸ್ಕೃತಿಯ ದಟ್ಟ ಪ್ರಭಾವದಿಂದ ಇಲ್ಲಿ divorce ಗಳ ಸಂಖ್ಯೆ ಹೆಚ್ಚಾಗಿದೆ ಇವತ್ತು ಮದುವೆ ನಾಳೆ ವಿಚ್ಛೇದನ ಎಂಬಂತಹ ಪರಿಸ್ಥಿತಿ ಇದ್ದರು ಕೂಡ ಅಲ್ಲೊಬ್ಬ ಮಹಿಳೆ ತನ್ನ ಇಳಿ ವಯಸ್ಸಿನಲ್ಲಿ ತನ್ನ ಪತಿಯ ಆರೋಗ್ಯ ಚೇತರಿಕೆಗಾಗಿ ಮ್ಯಾರಥಾನ್ ನಲ್ಲಿ ಓಡಿ ಗೆದ್ದು ಪತಿಯ ಸೇವೆಯನ್ನು ಮಾಡಿದರು ಇವರ ಈ ರೋಚಕ ಕಥೆ ನವ ಜೋಡಿಗಳಿಗೆ ಒಂದು ಅತ್ಯುತ್ತಮ ಪಾಠ ಅಂದ್ರೆ ತಪ್ಪ ವೀಕ್ಷಕರೇ ನಾವೆಲ್ಲ ಕಾಲಿಗೆ ಚಪ್ಪಲಿ ಇಲ್ಲದೆ ಹೋದರೆ ಮನೆಯಿಂದ ಹೊರಗೆ ಬರುವುದಕ್ಕೆ ಹಿಂಜರಿತೇವೆ,
ಈ ವೇಗದ ಬದುಕಲ್ಲಿ ನಾಲ್ಕು ಹೆಜ್ಜೆ ಇಟ್ಟು ನಡೆಯುವುದು ನಮ್ಮಲ್ಲಿ ಬಹುತೇಕರಿಗೆ ಕಷ್ಟ ಸಾಧ್ಯ ಇಂತಹದರಲ್ಲಿ ಈ ಅಜ್ಜಿ ತನ್ನ ಅರವತೈದನೇ ವಯಸ್ಸಿನಲ್ಲಿ ಮಾಸಿದ ಸೀರೆಯನ್ನು ಉಟ್ಟು ಹರಿದ ಚಪ್ಪಲಿಯನ್ನು ಧರಿಸಿ ಬರೋಬ್ಬರಿ ಮೂರು ಕಿಲೋಮೀಟರ್ ವೇಗದ ಮ್ಯಾರಥಾನ್ ನಲ್ಲಿ ಓಟವನ್ನು ಕ್ರಮಿಸಿದ್ದು ಮಾತ್ರವಲ್ಲದೆ ತನ್ನಂತೆ ಆಸ್ಪರ್ಧೆಗೆ ಹಾಜರಾಗಿದ್ದ ಪ್ರತಿಯೊಬ್ಬರನ್ನು ಕೂಡ ದಾಟಿ ಹಿಂದಿಕ್ಕಿ ಮೊದಲ ಬಹುಮಾನವನ್ನು ಗೆದ್ದಿದ್ದರು ಇವರು ಈ ರೀತಿ ಓಡಿದ್ದು ಆ ಒಂದು ಪ್ರೈಸ್ ಹಣವನ್ನು ತನ್ನ ಸ್ವಂತದ ಖರ್ಚ ಪಡೆಯುವ ಸಲುವಾಗಲ್ಲ ಆ ಹಣದಿಂದ ಪತಿ ಆರೋಗ್ಯದ ಖರ್ಚನ್ನು ಬರಿಸುವ ಸಲುವಾಗಿ ಇಂತಹ ಭಾವುಕ ಸಾಹಸತ್ವವನ್ನು ಮೆರೆದು ಎಲ್ಲರೂ ಹುಬ್ಬೇರಿಸಿದ ,
ಆ ಆಧುನಿಕ ಯುಗದ ಅನುಸೂವೆಯ ಹೆಸರೇ ಲತಾ ಭಗವಾನ್ ಕರೆ ವೀಕ್ಷಕರೇ ಇವರು ತನ್ನ ಪತಿಗಾಗಿ ಮ್ಯಾರಥಾನ್ ಅಲ್ಲಿ ಓಡಿದ್ದು ಎರಡು ಸಾವಿರದ ಹದಿನಾಲ್ಕರಲ್ಲಿ ಎರಡು ಸಾವಿರದ ಇಪ್ಪತ್ತರ ಜನವರಿಯಲ್ಲಿ ಇವರ ಈ ಮ್ಯಾರಥಾನ್ ಲವ್ ಸ್ಟೋರಿ ಮರಾಠಿ ಭಾಷೆಯಲ್ಲಿ ಬಯೋಪಿಕ್ ಆಗಿ ತೆರೆಗೆ ಬಂದಿದ್ದು ಅಷ್ಟೇ ಅಲ್ಲದೆ ನ್ಯಾಷನಲ್ ಅವಾರ್ಡ್ ಕೂಡ ಲಭಿಸಿತ್ತು ಜೀವನದಲ್ಲಿ ಏನೇ ಕಷ್ಟ ಚಿಂತೆ ನೋವುಗಳಿರಲಿ ಪರಸ್ಪರ ಪ್ರೀತಿ ಒಲ ಕಾಳಜಿಗಳು ಇದ್ರೆ ಅವುಗಳ ಮುಂದೆ ಎಲ್ಲ ಬಗೆಯ ಕಷ್ಟಗಳು ಕೂಡ ತೃಣಕ್ಕೆ ಸಮಾನ ಸಂಗಾತಿಯ ಕಷ್ಟಕ್ಕೆ ಮಿಡಿಯೋ ಮನ ಒಂದಿದ್ರೆ ಎಂತಹ ಒಂದು ವಿಪತ್ತನ್ನು ಕೂಡ ಗೆಲ್ಲಬಹುದು ಅನ್ನೋದಕ್ಕೆ ಈ ಲತಾ ಭಗವಾನ್ ಕರೆಯ ಬದುಕು ಒಂದು ಜೀವಂತ ಸಾಕ್ಷಿ ಅಂತಹೇಳಬಹುದು,
ಮೂಲತಃ ಮಹಾರಾಷ್ಟ್ರದವರಾದಂತ ಲತಾ ಅಲ್ಲಿನ ಬುದ್ಧನ ಎಂಬ ಜಿಲ್ಲೆಯ ಕುಗ್ರಾಮ ಒಂದರಲ್ಲಿ ತನ್ನ ಪತಿಯ ಜೊತೆಗೆ ವಾಸವಿದ್ದ ಬಡ ವರ್ಗದ ಮಹಿಳೆ ಈಕೆಗೆ ಮೂವರು ಹೆಣ್ಣು ಮಕ್ಕಳು ಹೆಣ್ಣು ಮಕ್ಕಳು ಬೆಳೆದು ಮದುವೆ ವಯಸ್ಸಿಗೆ ಬಂದ ಮೇಲೆ ತಮ್ಮ ಶಾಕ್ತ್ಯನುಸಾರ ಅವರಿಗೆ ಮದುವೆಯನ್ನ ಮಾಡಿ ತಮ್ಮ ಜವಾಬ್ದಾರಿಯನ್ನ ಈ ವೃದ್ಧ ದಂಪತಿಗಳು ನೇಗಿಸಿಕೊಂಡರು ಹೆಣ್ಣು ಮಕ್ಕಳನ್ನ ಮದುವೆಯಾಗಿ ತವರನ್ನು ತೊರೆದು ಹೋದ ಮೇಲೆ ಇವರಿಬ್ಬರು ಒಬ್ಬಂಟಿಯಾಗಿ ಮನೆಯಲ್ಲೇ ಉಳಿದರು ಮಕ್ಕಳ ಮದುವೆ ಕೂಡಿಟ್ಟ ಎಲ್ಲ ಹಣ ಕೂಡ ಖರ್ಚಾಗಿತ್ತು ಈಗ ಅಕ್ಷರ ಸಹ ಬರಿಗೈಯಾದಂತ ಈ ವೃದ್ಧರು ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡಿ ಹೊಟ್ಟೆ ಹೊತ್ತುಕೊಳ್ಳಬೇಕಾದಂತಹ ಅನಿವಾರ್ಯತೆ ,
ಇತ್ತು ವಿಧಿ ಇಲ್ಲದೆ ಸಿರಿವಂತರ ಹೊಲಗದ್ದೆಗಳಲ್ಲಿ ಈ ವೃದ್ಧರು ಕೆಲಸವನ್ನ ಮಾಡೋದಕ್ಕೆ ಶುರು ಮಾಡಿದರು ಕಂಡವರ ಜಮೀನಿನಲ್ಲಿ ಉರಿ ಬಿಸಿಲಲ್ಲಿ ತುಳಿದರೆ ಮಾತ್ರ ಕೂಲಿ ಆ ದಿನದ ಕೂಲಿ ನರಿ ಅವತ್ತಿನ ಗಂಜಿ ಸಿಗ್ತಾಯಿತ್ತು ಇಲ್ಲ ಅಂದ್ರೆ ಅದು ಇಲ್ಲ ಸ್ವಾಭಿಮಾನಿಗಳಾದ ದಂಪತಿಗಳು ಯಾರ ಬಳಿಯೂ ಸಹಾಯಕ್ಕಾಗಿ ಕೈ ಚಾಚಲಿಲ್ಲ ತಮ್ಮ ಶಕ್ತಿಯನ್ನ ಮೀರಿ ಕೆಲಸ ಮಾಡಿ ತಮ್ಮ ಯೋಗ್ಯತೆಗೆ ತಕ್ಕ ಕೂಲಿಯನ್ನ ಪಡೆದು ದಿನವನ್ನ ಕಳೆಯೋದಷ್ಟೇ ಲತಾ ಭಗವಾನ್ ದಂಪತಿಗಳ ನಿತ್ಯದ ದಿನಚರಿಯಾಗಿತ್ತು ಹೇಗೋ ಜೀವನ ತಂಟೆಗಳಿಲ್ಲದೆ ಸಾಗಿತ್ತು ಹೀಗಿರುವಾಗ ಒಮ್ಮೆ ಜಮೀನಿನಲ್ಲಿ ಕೆಲಸ ಮಾಡದೇ ಇರುವಂತಹ ಲತಾರಾಪತಿ ಗೆಳೆಯರನ್ನೇ ಕುಸಿದು ಬಿದ್ದಿದ್ದರು ಇದರಿಂದ ಗಾಬರಿಯಾದಂತಹ ಈ ಅಜ್ಜಿ ಸಹಾಯಕ ಈ ಅಕ್ಕಪಕ್ಕದವರನ್ನು ಕರೆದರು .
ಎಲ್ಲರೂ ಸೇರಿ ಲತಾರಾಪತಿಯನ್ನು ಮುಂದಿನ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ಅಲ್ಲಿ ಲತಾರಾಪತಿಯನ್ನು ಪರೀಕ್ಷೆ ಮಾಡಿದಂತ ವೈದ್ಯರು ಹೆಚ್ಚುವರಿ ಚಿಕಿತ್ಸೆಗಾಗಿ ಟರ್ಮಿನಲ್ ಆಸ್ಪತ್ರೆಗೆ ದಾಖಲು ಮಾಡುವಂತೆ ಸೂಚಿಸುತ್ತಾರೆ ಕೂಡಲೇ ಅವರನ್ನ ಆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತೆ ಅಲ್ಲಿ ಅನೇಕ ವಿಧವಾದ ಪರೀಕ್ಷೆಗಳನ್ನ ನಡೆಸಿದಂತ ವೈದ್ಯರು ಅವರ MRI ಸ್ಕ್ಯಾನಿಂಗ್ ನಡೆಸೋದಕ್ಕೆ ಈಗಲೇ ಐದು ಸಾವಿರ ರೂಪಾಯಿ ಹಣ ಕಟ್ಟಬೇಕು ಅಂತ ಒತ್ತಾಯಿಸುತ್ತಾರೆ ವೈದ್ಯರು ಅಷ್ಟು ಹಣ ತಗುಲುತ್ತೆ ಅಂತ ಕೇಳಿದಾಗ ಅದನ್ನ ಕೇಳಿದ ಈ ಅಜ್ಜಿ ಒಮ್ಮೆಲೆ ತಬ್ಬಿಬ್ಬಾಗುತ್ತಾರೆ ಏಕೆಂದರೆ ಅವರು ಇದ್ದ ಸ್ಥಿತಿಯಲ್ಲಿ ಆ ಹಣ ನಿಜಕ್ಕೂ ಬಾರಿ ಮುದ್ದಾಗಿತ್ತು ಕೂಲಿಯವರಾದಂತ ಲತಾರಾ ಬಳಿ ಅಷ್ಟು ಹಣ ಇರೋದಕ್ಕೆ ಹೇಗೆ ಸಾಧ್ಯ ಅಲ್ವಾ,
ಈಗ ಅವರಿಗೆ ಅಷ್ಟು ಹಣ ಕೊಡೋರು ಯಾರು ಮೊದಲೇ ಸ್ವಾಭಿಮಾನಿಯಾದಂತ ಈ ಅಜ್ಜಿ ಯಾರ ಬಳಿ ಕೂಡ ಪುಕ್ಕಟೆ ಹಣಕ್ಕಾಗಿ ಕೈ ಚಾಚುವಂತಹ ಮನಸ್ಥಿತಿ ಅವರು ಅಲ್ವೇ ಅಲ್ಲ ಇನ್ನೊಬ್ಬರ ಕರುಣೆ ದ್ರಾಕ್ಷಿಣ್ಯಗಳಿಗೆ ತಲೆ ಬಾಗಿ ಇತರರ ಆಮಿಷಗಳನ್ನು ಸ್ವೀಕರಿಸೋರು ಕೂಡ ಅಲ್ಲ ಹಾಗಂತ ಆಸ್ತಿ ಪಾಸ್ತಿ ಮಾರಿಯೋ ಅಥವಾ ಒಡವೆಯನ್ನ ಅಡವಿಟ್ಟು ಹಣ ತರೋದಕ್ಕೆ ಅವರ ಬಳಿ ಮುರುಕಲು ಗುಡಿಸಲು ಬಿಟ್ರೆ ಬೇರೇನೂ ಕೂಡ ಇರಲಿಲ್ಲ ಈಗ ಏನು ಮಾಡೋದು ಹಣಕ್ಕಾಗಿ ಎಲ್ಲಿ ಹೋಗೋದು ನೂರಾ ಇನ್ನೂರು ಆದರೆ ಎರಡು ದಿನ ಸತತವಾಗಿ ಕೂಲಿ ಕೆಲಸ ಮಾಡಿ ಹಣವನ್ನ ಹೊಂದಿಸಬಹುದು ಆದರೆ ಐದಾರು ಸಾವಿರಕ್ಕೆ ತಿಂಗಳೆಲ್ಲ ದುಡಿಯಬೇಕು ಇತ್ತ ಪತಿಯ ಸ್ಥಿತಿ ಗಂಭೀರಗೊಂಡಿದೆ ನನಗೆ ಅಷ್ಟೆಲ್ಲ ಸಮಯ ಕೂಡ ಇಲ್ಲ ಹೊಟ್ಟೆ ಹುಟ್ಟಿದ ಮಕ್ಕಳು ಕುಲಕ್ಕೆ ಹೊರಗೆನ್ನುವಂತೆ ಅವರವರ ಗಂಡನ ಮನೆಯಲ್ಲಿ ಇದ್ದಾರೆ ಅವರ ಬಳಿ ಹೋಗಿ ಬಿಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ ಈ ಅಜ್ಜಿಯ ಬಳಿ ಈಗ ಇದ್ದದ್ದು ಸ್ವಾಭಿಮಾನ ಒಂದೇ ಸ್ವಾಭಿಮಾನ ಅಂತ ಕೂತರೆ ಅದರಿಂದ ಕಾಸು ಹುಟ್ಟುವುದಿಲ್ಲ ,
ಪ್ರತಿಯೊಬ್ಬರೂ ಕೂಡ ಬೇಡುವ ಕಾಲ ಬಂದೆ ಬರುತ್ತೆ ಸ್ವಾಭಿಮಾನವನ್ನು ಬದಿಗಿಟ್ಟಂತಹ ಈ ಅಜ್ಜಿ ತನ್ನ ಆಪ್ತ ಸಂಬಂಧಿ ವರ್ಗದವರ ಬಳಿ ಕಡೆಗೂ ಪತಿಗಾಗಿ ಕೈ ಚಾಚಿ ಸಹಾಯವನ್ನು ಬೇಡಿದರು ಸಂಬಂಧಿಗಳೇ ಆಗಲಿ ಅಥವಾ ಸ್ನೇಹಿತರೇ ಆಗಲಿ ಅಥವಾ ಬೇರೆ ಯಾರೇ ಆಗಲಿ ನಮ್ಮ ಕಷ್ಟಕ್ಕೆ ಇನ್ನೇನು ತಾನೆ ಮಹಾ ಸಹಾಯವನ್ನು ಮಾಡಬಲ್ಲರು ಅವರವರ ಅಷ್ಟು ಚಿಲ್ಲರೆ ಹಣ ಕೊಟ್ಟು ಸರ್ಕಾರಿ ಆಸ್ಪತ್ರೆಯಿಂದ ಭಾರಮತಿ ಆಸ್ಪತ್ರೆಗೆ ಸಾಗಿಸುವುದಕ್ಕೆ ಹಾಗು ಅಲ್ಲಿ ನಡೆಸಲಾದಂತ ಒಂದಷ್ಟು ಪರೀಕ್ಷೆಗಳಿಗೆ ಸಾಕಾಗುವಷ್ಟು ಹಣವನ್ನ ಈ ಅಜ್ಜಿ ಸಂಬಂಧಿಗಳು ನೀಡಿದ ಹಣದಿಂದ ಹೊಂದಿಸಿದರು ಆದರೂ ಕೂಡ ಪತಿಯ MRI ಸ್ಕ್ಯಾನಿಂಗ್ ಗೆ ಇನ್ನು ಐದು ಸಾವಿರ ರೂಪಾಯಿ ಬೇಕಿತ್ತು ಈ ಅಜ್ಜಿಯ ಬಳಿ ಹಣವೆಲ್ಲ ಖಾಲಿಯಾಗಿತ್ತು .
ಅವರ ಬಳಿ ಈಗ ಇದ್ದದ್ದು ಇಪ್ಪತ್ತು ರೂಪಾಯಿ ಮಾತ್ರ ಅತ್ತ ಪತಿ ಭಗವಾನ್ ಕರೆ ನಿಶ್ಚಿತರಾಗಿ ಮಲಗಿದ್ದರು ಒಂಟಿಯಾಗಿ ಆ ರಾತ್ರಿ ಕಳೆದ ಅಜ್ಜಿ ತನಗೆ ಒದಗಿದ ಈ ದುರಾವಸ್ಥೆ ಬಗ್ಗೆ ರೋದಿಸುತ್ತಾ ಕೂತಿದ್ದರು ಬೆಳಗಿನಿಂದ ಉಪವಾಸ ಈ ಅಜ್ಜಿ ತಮ್ಮ ಬಳಿ ಇದ್ದಂತಹ ಇಪ್ಪತ್ತು ರೂಪಾಯಿ ಹಣದಲ್ಲಿ ಹೊರಗಡೆ ಹೋಗಿ ಎರಡು ಬಿಸಿ ಸಮೋಸವನ್ನ ಖರೀದಿ ಮಾಡಿದರು ಅದರಲ್ಲಿ ಒಂದನ್ನ ಪತಿಗೆ ಕೊಟ್ಟು ಇನ್ನೊಂದನ್ನ ತಾವು ಸೇವಿಸಿದರು ಸಮೋಸ ಕಟ್ಟಿಕೊಂಡಿದ್ದಂತ ಪೇಪರ್ ತುಂಡಲ್ಲಿ ಕೈ ಬಾಯಿಯನ್ನ ಒರೆಸಿ ಇನ್ನೇನು ಅದನ್ನ ಬಿಸಾಕಬೇಕು ಅನ್ನೋವಷ್ಟರಲ್ಲಿ ಅದರಲ್ಲಿ ಮರಾಠಿ ಭಾಷೆಯಲ್ಲಿ ಏನೋ ದಪ್ಪಗೆ ಬರೆದದ್ದು ಕಂಡು ಬಂತು ಆಗ ಈ ಅಜ್ಜಿಗೆ ಅಲ್ಪ ಸ್ವಲ್ಪ ಅಕ್ಷರದ ಜ್ಞಾನದೊಂದಿಗೆ ಅದನ್ನ ಓದೋದಕ್ಕೆ ಪ್ರಯತ್ನ ಪಟ್ಟರು ಅದರಲ್ಲಿ ಪಕ್ಕದ ಭಾರಾಮತಿಯಲ್ಲಿ ಮೂರೂ ಕಿಲೋಮೀಟರ್ ದೂರದ ಮ್ಯಾರಥಾನ್ ರೈಸ್ ಜಾರಿಯಾಗಿದ್ದು.
ಆಸಕ್ತರು ಭಾಗವಹಿಸಿ ಮೊದಲ ಗೆದ್ದು ಐದು ಸಾವಿರ ರೂಪಾಯಿ ಹಣವನ್ನ ಗೆಲ್ಲಿ ಅಂತ ಜಾಹಿರಾತು ಇತ್ತು ಈ ಅಜ್ಜಿ ಅದನ್ನ ಖಚಿತ ಪಡಿಸಿಕೊಳ್ಳೋದಕ್ಕೆ ಪಕ್ಕದಲ್ಲಿದ್ದ ಬೇರೆಯವರಿಗೆ ಇದನ್ನ ಓದೋದಕ್ಕೆ ಕೇಳಿಕೊಂಡರು ನಂತರ ಆ ಸ್ಪರ್ಧೆ ಬಗ್ಗೆ ಖಚಿತ ಪಡಿಸಿಕೊಂಡಂತ ಈ ಅಜ್ಜಿ ತಾನು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಆ ಹಣವನ್ನ ಗೆದ್ದರೆ ನನ್ನ ಪತಿಯ ಚಿಕಿತ್ಸೆಗೆ ಆಗುತ್ತೆ ಅಂತ ಯೋಚಿಸಿದರು ಆದರೆ ಇದು ಸಾಧ್ಯನಾ ಈ ಇಳಿ ವಯಸ್ಸಿನಲ್ಲಿ ಈ ಅಜ್ಜಿ marathon ಅಲ್ಲಿ ಓಡಿ ಗೆಲ್ಲೋದು ಅಂದ್ರೆ ಸುಲಭದ ಮಾತ ಆದರೆ ಅಜ್ಜಿಯ ಮನಸಲ್ಲಿ ಇದು ಯಾವುದು ಕೂಡ ಇರಲಿಲ್ಲ ಆಗ ಅಜ್ಜಿಯ ಕಣ್ಣ ಮುಂದೆ ಇದ್ದದ್ದು ಆ ಪ್ರೈಸ್ money ಮಾತ್ರ ಆ ಹಣವನ್ನ ತನ್ನದಾಗಿಸಿಕೊಳ್ಳಬೇಕು ಅದರಿಂದ ಪತಿಯ ಚಿಕಿತ್ಸೆ ಸಾಧ್ಯವಾಗಬೇಕು ಹೀಗಾಗಿ ತಾನು ಇದರಲ್ಲಿ ಸ್ಪರ್ಧಿಸದೆ ಬೇರೆ ವಿಧಿನೆ ಇಲ್ಲ ಈ ಒಂದು ಸ್ಪರ್ಧೆ ತನ್ನ ಬದುಕಿನ ನಿರ್ಣಾಯಕ ಘಟ್ಟ ಅಂತ ಆ ಅಜ್ಜಿ ದೃಢವಾಗಿ ಭಾವಿಸಿದರು ಆ ರಾತ್ರಿಯಿಡೀ ಅವರಿಗೆ ನಿದ್ರೆನೇ ಬರಲಿಲ್ಲ ಬೆಳಗಾಗೋದನ್ನೇ ಕಾದು ಕುಳಿತಂತ ಅವರು ಸೂರ್ಯ ಮುರಿದ ತಕ್ಷಣ ಆ ಮ್ಯಾರಥಾನ್ ನಡೆಯುತ್ತಿದ್ದ ಸ್ಥಳದತ್ತ ದೌಡಾಯಿಸಿದರು .
ಅವರ ಪುಣ್ಯಕ್ಕೆ ಅದು ಹೆಚ್ಚಿನ ದೂರ ಇರಲಿಲ್ಲ ಅವರಿದ್ದ ಆಸ್ಪತ್ರೆಯಿಂದ ಕೆಲವೇ ದೂರದಲ್ಲಿ ಈ ಒಂದು ಸ್ಪರ್ಧೆ ಆಯೋಜನೆ ಗೊಂಡಿತ್ತು ಇದು ಅಲ್ಲಿ ಸುತ್ತ ಮುತ್ತ ಪ್ರತಿ ವರ್ಷ ನಡೆಯುವಂತಹ ಮ್ಯಾರಥಾನ್ ಓಟ ಒತ್ತಡದ ಬದುಕ ನಡಿಗೆ ಹಾಗೂ ಓಟವನ್ನು ಮರೆತಂತಹ ಆಧುನಿಕ ಸಮಾಜದ ನಾಗರಿಕರ ದೇಹ ಮನಸ್ಸುಗಳನ್ನು ರಿಫ್ರೆಶ್ ಆಗಿ ಪ್ರಫುಲ್ಲಗೊಳಿಸುವ ಸಲುವಾಗಿನೇ ಈ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಅಲ್ಲಿ ಪ್ರತಿ ವರ್ಷ ಆಯೋಜನೆ ಗೊಳಿಸುತ್ತಿದ್ದರು ಆ ಸ್ಥಳದ ವಿಳಾಸವನ್ನು ಅವರು ಇವರು ಬಳಿ ಕೇಳಿಕೊಂಡು ಹೇಗೋ ಅಲ್ಲಿಗೆ ಬಂದಂತಹ ಈ ಅಜ್ಜಿ ಅಲ್ಲಿ ಕುಳಿತಿದ್ದ ಸ್ಪರ್ಧಾ ಆಯೋಜಕರ ಬಳಿ ಬಂದು ತನ್ನ ಹೆಸರನ್ನು ಕೂಡ ಆ ಓಟದ ಸ್ಪರ್ಧೆಗೆ ರಿಜಿಸ್ಟರ್ ಮಾಡಿಸುವುದಕ್ಕೆ ಕೇಳಿಕೊಂಡಾಗ ಆಗ ಆ ಅಜ್ಜಿಯನ್ನು ಅಡಿಯಿಂದ ಮುಡಿಯುವವರೆಗೂ ನೋಡಿದಂತಹ ಆಯೋಜಕರು ಅವಕ್ಕಾದರೂ ಹಳೆಯ ಮಾಸಿನ ಸೀರೆ ಹಾಗೂ ಹಳೆಯ ಹಾವಾಯಿ ಚಪ್ಪಲಿ ಧರಿಸಿ ಬಂದಿದ್ದ,
ಆ ಅಜ್ಜಿಯನ್ನ ನೋಡಿದಂತ ಅವರಿಗೆ ಈ ವಯಸ್ಸಲ್ಲಿ ಈ ಅಜ್ಜಿ ಗೆಲ್ಲೋದಕ್ಕೆ ಸಾಧ್ಯನಾ ಯಾರೋ ತಲೆ ಕೆಟ್ಟ ಮುದುಕಿರಬೇಕು ನಿನ್ನನ್ನ ಈ ಓಟಕ್ಕೆ ಸೇರಿಸೋದಕ್ಕೆ ಸಾಧ್ಯ ಇಲ್ಲ ಇಲ್ಲಿಂದ ಹೊರಡುವಂತವರಿಗೆ ಅವಕಾಶವನ್ನ ಕೊಡದೆ ನಿರಾಕರಿಸಿದರು ಆದರೆ ಈ ಅಜ್ಜಿ ತನ್ನ ನಿರ್ಧಾರದಲ್ಲಿ ಆಚಾರವಾಗಿದ್ದರು ಈ ರೇಸ್ ನನಗೆ ಎಷ್ಟು ಮುಖ್ಯ ಹಾಗು ಯಾಕೆ ಮುಖ್ಯ ಎಂಬುದನ್ನ ಅವರಿಗೆ ಅರ್ಥ ಮಾಡಿಸೋದಕ್ಕೆ ಪ್ರಯತ್ನ ಪಟ್ಟರು ಆಗ ಆಯೋಜಕರು ಪರಸ್ಪರ ಮುಖ ನೋಡಿಕೊಂಡರು ಎಷ್ಟೇ ಆದರೂ ಇದು ಉಚಿತವಾದ ಓಟ ಯಾರು ಬೇಕಾದರು ಸ್ಪರ್ದಿಸಬಹುದಾಗಿತ್ತು ಈ ಅಜ್ಜಿಗೆ ಒಂದು ಅವಕಾಶವನ್ನ ಕೊಟ್ಟ ಅಂತ ದೊಡ್ಡ ಮನಸ್ಸನ್ನು ಮಾಡಿದ ಅವರು ಕೊನೆಗು ಒಂದು ಅವಕಾಶವನ್ನು ಕೊಟ್ಟರು ಸುತ್ತ ಮುತ್ತ ಪ್ಯಾಂಟ್ ಹಾಗೂ T-shirt ಧರಿಸಿದಂತ ಅನೇಕರು ದುಬಾರಿ ರನ್ನಿಂಗ್ ಶೋವನ್ನು ಧರಿಸಿ ಓಟಕ್ಕೆ ರೆಡಿ ಆಗಿ ನಿಂತಿದ್ದರು.
ಅವರು ಮಧ್ಯೆ ಈ ಅಜ್ಜಿ ಸೀರೆಯನ್ನು ಉಟ್ಟು ಅದನ್ನು ಭದ್ರವಾಗಿ ಕಚ್ಚೆ ಕಟ್ಟಿ ತಲೆಗೆ ಸೆರಗು ಒದ್ದು ಹವಾಯಿ ಚಪ್ಪಲಿಯನ್ನು ಧರಿಸಿ ತಾನು ಕೂಡ ರೆಡಿ ಆಗಿ ನಿಂತೆ ಬಿಟ್ಟರು ಅಲ್ಲಿಗೆ ಬಂದಿದ್ದ ಹಲವು ಮೀಡಿಯಾಗಳು ಲತಾರೇ ಹೆಚ್ಚು ಕವರ್ ಮಾಡುತ್ತಿದ್ದರು ಈ ಅಜ್ಜಿಯ ಉದ್ದೇಶ ಆದಾಗಲೇ ಜನರಿಗೆ ಪ್ರಚಾರಗೊಂಡಿತ್ತು ಎಲ್ಲರೂ ಆಕೆಯ ದೇಹಕ್ಕೆ ತಲೆ ಬಾಗಿದ್ರು ಈಗ ರೇಸ್ ಶುರುವಾಯಿತು ಈ ಅಜ್ಜಿ ಯಾರ ಬಗ್ಗೆಯೂ ಚಿಂತಿಸದೆ ಒಂದೇ ಉಸಿರಿನಲ್ಲಿ ಒಡ ತೊಡಗಿದರು ಅಲ್ಲಿದ್ದ ಎಲ್ಲರೂ ಕೂಡ ಅಜ್ಜಿಗೇನೇ ಹುರಿದುಂಬಿಸುತ್ತಾ ಇದ್ದರು ಓಟದ ಮಧ್ಯೆ ಆ ಅಜ್ಜಿ ಧರಿಸಿದಂತಹ ಹವಾಯ್ ಚಪ್ಪಲಿ ಕಿತ್ತು ಹೋಗಿತ್ತು ತಕ್ಷಣ ಅವರು ಚಪ್ಪಲಿಯನ್ನು ಕಿತ್ತು ಎಸೆದು ಬರಿಗಾಲಲ್ಲೇ ಹೊಡೆಯುವುದಕ್ಕೆ ಶುರು ಮಾಡಿದರು ಜನರ ಕೇಕೆ ಆರ್ಭಟ ಇನ್ನಷ್ಟು ಜೋರಾಯಿತು,
ನೋಡು ನೋಡುತ್ತಿದ್ದ ಹಾಗೆ ಈ ಅಜ್ಜಿ ಮೂರು ಕಿಲೋಮೀಟರ್ ಗಳ marathon ಓಟದಲ್ಲಿ ಎರಡನ್ನು ಕೂಡ ಹಿಂದಕ್ಕೆ ತಾವೇ ಮೊದಲ ಸ್ಥಾನದಲ್ಲಿ ಗೆದ್ದಿದ್ದರು ಅವರು ನಿರೀಕ್ಷೆ ಮಾಡಿದ ಹಾಗೆ ಆ ಐದು ಸಾವಿರ ರೂಪಾಯಿಯನ್ನು ಆಯೋಜಕರು ಅತಿ ಹೆಮ್ಮೆಯಿಂದ ಆ ಅಜ್ಜಿಗೆ ಹಸ್ತಾಂತರಿಸಿದರು ಈ ಕಥೆ ವೈರಲ್ ಆದಂತೆ ದಾನಿಗಳ ಸಹಾಯ ಹಸ್ತ ಆ ಅಜ್ಜಿಯ ಕಡೆಗೆ ಹರಿದು ಬಂತು ಈ ಅಜ್ಜಿಯ ಖಾತೆ ಕೆಲವೇ ದಿನಗಳಲ್ಲಿ ದಾನಿಗಳು ನೀಡಿದ ಲಕ್ಷಾಂತರ ರೂಪಾಯಿಗಳಿಂದ ತುಂಬಿತ್ತು ಇದರ ಮೂಲಕ ಆಕೆಯ ಪತಿಯೇ ಉತ್ತಮ ಚಿಕಿತ್ಸೆ ಕೂಡ ಸಿಕ್ಕಿ ಅವರು ಅಪಾಯದಿಂದ ಪಾರಾಗಿ ಚೇತರಿಸಿಕೊಂಡರು ವೀಕ್ಷಕರೇ ಪುರಾಣಗಳಲ್ಲಿ ಸಾವಿತ್ರಿ ಅನುಸೂಯೆ ಅರುಂಧತಿ ಮುಂತಾದ ಸತಿಯರು ತಮ್ಮ ಪತಿಯರ ಪರ ಹೋರಾಡಿದ ದಿವ್ಯ ಕಥೆಗಳನ್ನ ನಾವೆಲ್ಲ ಕೇಳಿದ್ದೇವೆ,
ಆದರೆ ಇಂದಿನ ಯುಗದ ಈ ಲತಾ ಕರೆಯವರು ಅವರನ್ನೆಲ್ಲ ಹಿಂದಿಕ್ಕಿ ಅವರಿಗಿಂತ ಹೆಜ್ಜೆ ಮುಂದೆ ಹೋಗಿ ತನ್ನ ಪತಿಯ ಜೀವ ಉಳಿಸಿಕೊಟ್ಟಂತಹ ದಿಟ್ಟ ಹೆಣ್ಣು ಅಂತ ನಿರ್ವಿವಾದಿತವಾಗಿ ನಾವೆಲ್ಲ ಒಪ್ಪಲೇ ಬೇಕಲ್ವಾ ಅರವತ್ತೈದರ ಇಳಿ ವಯಸ್ಸಿನಲ್ಲೂ ಕೂಡ ಕಾಲಿಗೆ ಚಪ್ಪಲಿ ಇರದೇನೆ ಆಕೆ ಆ ಓಟದಲ್ಲಿ ಗೆದ್ದದ್ದು ಅವರ ಮನೋಬಲ ಹಾಗು ಪತಿ ಹಡಗಿನ ವಾತ್ಸಲ್ಯ ಮಾತ್ರದಿಂದ ಎಂಬುದನ್ನ ನಾವು ಇಲ್ಲಿ ಗಮನಿಸಬೇಕಾದಂತ ಮುಖ್ಯ ಸಂಗತಿ ವೀಕ್ಷಕರೇ ಈ ಅಜ್ಜಿಯ ತ್ರಹದ ಸ್ತ್ರೀಯರು ಇವತ್ತಿನ ಕಾಲದಲ್ಲಿ ಎಷ್ಟು ಜನ ಸಿಗೋದಿಕ್ಕೆ ಸಾಧ್ಯ ಅಲ್ವಾ ಇವರ ಹೋರಾಟ ಹಾಗೂ ಗೆಲುವು ನಿಶ್ಚಿತವಾಗಿಯೂ ಇವತ್ತಿನ ಸಮಾಜದ ಪ್ರತಿಯೊಬ್ಬರೂ ಕೂಡ ಒಂದು ಮಾದರಿಯಾಗಿ ನಿಲ್ಲುವುದರಲ್ಲಿ ಯಾವ ಕೂಡ ಇಲ್ಲಾ ಅಂತ ಹೇಳುತ್ತಾ ಆ ಅಜ್ಜಿಯ ಪತಿ ಪ್ರೇಮಕ್ಕೊಂದು ಹೃದಯದ ಕೃತಜ್ಞತೆ ಸಲ್ಲಿಸುತ್ತಾ ಈ ಒಂದು ವಿಡಿಯೋವನ್ನು ಇಲ್ಲಿಗೆ ಮುಗಿಸೋಣ ನಮಸ್ಕಾರ