ಶನಿ ದೋಷ ನಿಮ್ಮ ಮೇಲೆ ಯಾವಾಗಲು ಬರಲೇ ಬಾರದು ಅಂದುಕೊಳ್ಳುವವರು ಈ ಒಂದು ಮರದ ಪೂಜೆ ಮಾಡಿದರೆ ಸಾಕು… ಶನಿ ದೋಷ ಬದಲು ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಪ್ರಾಪ್ತಿ ಆಗುತ್ತದೆ…

596

ಸಾಮಾನ್ಯವಾಗಿ ದೋಷ ಇದ್ದರೆ ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನಾವು ಜ್ಯೋತಿಷಿಗಳ ಬಳಿ ಹೋಗಿ ಅಥವಾ ದೇವಸ್ಥಾನಗಳಿಗೆ ಹೋಗಿ ಅದನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗುತ್ತೇವೆ. ಹೌದು ದೋಷಗಳೆಂದು ಪ್ರಮುಖವಾದದ್ದು ಶನಿ ದೋಷ ರಾಹು ದೋಷ ಕೇತು ದೋಷ ಇವುಗಳು ಆಗಿರುತ್ತದೆ ಅದರಲ್ಲಿಯೂ ಶನಿದೋಷ ಬಂದಾಗ ಮನುಷ್ಯ ಜೀವನದಲ್ಲಿ ಪಡುವಷ್ಟು ಕಷ್ಟ ಕಾರ್ಪಣ್ಯಗಳು ಹೇಳತೀರದು ಆ ಕಷ್ಟ ಅನುಭವಿಸಿದವರಿಗೇ ಗೊತ್ತಿರುತ್ತದೆ ಯಾವ ಕೆಲಸ ಮಾಡುವುದಾಗಿಯೂ ಬರೀ ನಷ್ಟಗಳು ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಕೆಲಸ ಮಾಡುತ್ತಿರುವ ಜಾಗದಲ್ಲಿ ನೆಮ್ಮದಿ ಇರುವುದಿಲ್ಲ ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೂ ನಮಗೆ ಪ್ರಶಂಸೆ ಸಿಗುವುದಿಲ್ಲ ಹಾಗೆ ಈ ಶನಿ ದೋಷ ಬಂದಾಗ ಕೆಲವೊಂದು ಬಾರಿ ಕೆಲಸ ಕಳೆದುಕೊಳ್ಳುವಂತಹ ಪರಿಸ್ಥಿತಿ ಕೂಡ ಬರುತ್ತದೆ ಹೀಗೆ ದಿನದಿಂದ ದಿನಕ್ಕೆ ಶನಿದೋಷದಿಂದ ಬಹಳ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ.

ಶನಿ ದೋಷ ಸಾಡೇಸಾತಿ ಅಂತ ಹೇಳ್ತಾರೆ ಅಂದರೆ ಶನಿ ದೋಷವನ್ನು ಸತತವಾಗಿ 7 ವರುಷಗಳ ಕಾಲ ಎದುರಿಸಬೇಕಾಗುತ್ತದೆ ಕರ್ಮಫಲದ ಅನುಗುಣವಾಗಿ ಶನಿ ದೋಷ ನಡೆಯುವಾಗ ನೀವು ಜೀವನದಲ್ಲಿ ಕಷ್ಟವನ್ನು ಎದುರಿಸುತ್ತೀರಾ. ಆದರೆ ಶನಿ ದೋಷ ಬಂದಾಗ ಪರಿಹಾರವಾಗಿ ಅರಳಿ ಮರವನ್ನು ಪ್ರದಕ್ಷಿಣೆ ಹಾಕಲು ಹೇಳ್ತಾರೆ ಇದರಿಂದ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಶನಿದೋಷವನ್ನು ಕ್ರಮೇಣವಾಗಿ ಕಡಿಮೆ ಮಾಡಿಕೊಂಡು ಜೀವನದಲ್ಲಿ ನೆಮ್ಮದಿ ಪಡೆಯಬಹುದು ಜೀವನದಲ್ಲಿ ಯಶಸ್ಸು ಕಾಣಬಹುದು ಹಾಗಾದರೆ ಸಾಡೇಸಾತಿ ಶನಿ ದೋಷ ನಡೆಯುವಾಗ ನಿಮಗೆ ಸಮಾನ್ಯವಾಗಿ ತಿಳಿಸುವ ಪರಿಹಾರ ಅರಳಿಮರ ಪ್ರದಕ್ಷಿಣೆ ಹಾಕುವುದು ಇದನ್ನು ಶನಿವಾರದ ದಿನದಂದು ಮಾಡಿದರೆ ಇನ್ನಷ್ಟು ಉತ್ತಮ.

ಅರಳಿಮರ ಸುತ್ತುವುದರ ಹಿಂದಿನ ಕಥೆ :ಹೌದು ಶನಿ ದೋಷ ಇರುವವರು ತಪ್ಪದೆ ಅರಳಿ ಮರವನ್ನು ಪ್ರದಕ್ಷಿಣೆ ಹಾಕಲು ಹಿರಿಯರು ಕೂಡ ಹೇಳ್ತಾರೆ ನೀವು ಪರಿಹಾರವನ್ನ ಕೇಳಲು ಹೋದಾಗ ಜ್ಯೋತಿಷ್ಯಗಳು ಕೂಡ ನಿಮಗೆ ಈ ಪರಿಹಾರವನ್ನು ಸೂಚಿಸುವುದು. ಇದರ ಹಿಂದಿರುವ ಸತ್ಯ ಅಸತ್ಯತೆ ಗಳನ್ನ ನೀವು ಕೂಡ ತಿಳಿಯಬೇಕು ಅಲ್ವಾ. ಅದನ್ನೇ ನಾವು ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ, ಶನಿದೋಷ ಇರುವವರು ಅರಳಿ ಮರವನ್ನು ಪ್ರದಕ್ಷಿಣೆ ಹಾಕಬೇಕು, ಏಕೆಂದರೆ ಒಮ್ಮೆ ಋಷಿಮುನಿಗಳು ಒಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪೋಷಕರನ್ನು ಕಳೆದುಕೊಳ್ಳುತ್ತಾರೆ. ಇದರಿಂದ ತಂದೆ ತಾಯಿ ಪ್ರೀತಿಯಿಂದ ವಂಚಿತರಾದರು ಮುನಿ. ನನ್ನ ತಂದೆ ತಾಯಿಯ ಈ ಸ್ಥಿತಿಗೆ ಶನಿದೋಷವೆ ಕಾರಣ ಎಂಬುದನ್ನು ತಿಳಿದುಕೊಳ್ಳುತ್ತಾರೆ.

ಬ್ರಹ್ಮನನ್ನು ಕುರಿತು ಧ್ಯಾನ ಮಾಡಿದ ಮುನಿ :ಹೌದು ಶನಿ ದೋಷದಿಂದ ಅಪ್ಪ ಅಮ್ಮನನ್ನು ಕಳೆದುಕೊಂಡ ಋಷಿ ಮುನಿಗಳೂ ಬ್ರಹ್ಮನ ಕುರಿತು ಧ್ಯಾನ ಮಾಡ್ತಾರೆ ಕೊನೆಗೆ ಮುನಿಗಳ ಭಕ್ತಿಗೆ ಮೆಚ್ಚಿ ಬ್ರಹ್ಮದೇವ ಪ್ರತ್ಯಕ್ಷರಾಗಿ ಮುನಿಗಳಿಗೆ ಬೇಕಾದ ವರವನ್ನು ನೀಡುತ್ತಾರೆ. ಅವರು ಇರುವ ವಿಚಾರವನ್ನು ತಿಳಿಸಿ ತನಗೆ ಬೇಕಾದ ವರವನ್ನು ಕೂಡ ಪಡೆದುಕೊಳ್ಳುತ್ತಾರೆ. ಬಳಿಕ ಶನಿದೇವ ಇರುವೆಡೆ ಹುಡುಕಿ ಹೊರಟ ಮುನಿಗಳು ಶನಿದೇವ ಅರಳಿ ಮರದ ಮೇಲೆ ತಪಸ್ಸಿಗೆ ಕುಳಿತ ರುವುದಾಗಿ ತಿಳಿದು ಬರುತ್ತದೆ ಕೊನೆಗೆ ಶನಿದೇವನನ್ನು ಬ್ರಹ್ಮದೇವ ನೀಡಿರುವ ವರದಿಂದ ಇಲ್ಲವಾಗಿಸಬೇಕೆಂದು ಹೊರಟ ಋಷಿಮುನಿಗಳು ಶನಿದೇವನಿಗೆ ಶಾಪವನ್ನು ಕೂಡ ನೀಡ್ತಾರೆ.

ಋಷಿ ಮುನಿಯ ಶಾಪದಿಂದ ಶನಿದೇವನು ಸಂಕಷ್ಟಕ್ಕೊಳಗಾಗುತ್ತಾರೆ ಆಗ ತನ್ನ ಸಹಾಯಕ್ಕೆ ಶನಿದೇವ ಶಿವನನ್ನು ನೆನೆಯುತ್ತಾರೆ. ಆಗ ಶಿವ ದೇವ ಪ್ರತ್ಯಕ್ಷರಾಗಿ ಋಷಿ ಮುನಿಯಿಂದ ಶನಿದೇವನನ್ನು ಕಾಪಾಡುತ್ತಾರೆ. ಅಂದಿನಿಂದ ಋಷಿಮುನಿಗಳು ಅರಳಿ ಮರದಲ್ಲಿಯೆ ನೆಲೆಸುತ್ತಾರೆ ಹಾಗೇ ಈ ಘಟನೆ ನಡೆದಾಗಿನಿಂದಲೂ ಶನಿದೇವನು ಈ ಋಷಿ ಮುನಿಗಳೆಂದರೆ ಭಯಭೀತರಾಗುತ್ತಾರಂತೆ ಆದ್ದರಿಂದ ಶನಿದೋಷ ಯಾರ ಜೀವನದಲ್ಲಿ ಕಾಡುತ್ತೆ, ಅಂಥವರು ಋಷಿಮುನಿಗಳು ನೆಲೆಸಿರುವ ಅರಳಿ ಮರವನ್ನು ಪ್ರದಕ್ಷಿಣೆ ಹಾಕಿದರೆ ಶನಿದೋಷದಿಂದ ಪರಿಹಾರ ಪಡೆದುಕೊಳ್ಳುತ್ತಾರೆ ಶನಿದೇವನ ವಕ್ರದೃಷ್ಟಿಯಿಂದ ಉಂಟಾದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನಡೆದುಕೊಂಡು ಬಂದಿದೆ….