ನಿಮ್ಮ ಮನೆಯ ಹೊಸ್ತಿಲನ್ನ ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಮನೆಯ ಒಳಗೆ ಯಾವುದೇ ಪ್ರೇತ ಭೂತ ಪೀಡೆಗಳು ನುಗ್ಗೋದಿಲ್ಲ… ಅಷ್ಟಕ್ಕೂ ಹೊಸ್ತಿಲಲ್ಲಿ ಏನು ಮಾಡಬೇಕು ಗೊತ್ತ …

649

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಮನೆಯ ಹೊಸ್ತಿಲು ಯಾವ ರೀತಿ ಇರಬೇಕು ಎಂಬುದನ್ನು ತಿಳಿಸುತ್ತಿದ್ದೇವೆ ಹೌದು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡಾ ಮುಖ್ಯದ್ವಾರದಲ್ಲಿ ಹೊಸ್ತಿಲು ಇರುತ್ತದೆ. ಮುಖ್ಯದ್ವಾರದ ಅಂದರೆ ಸಿಂಹದ್ವಾರದಲ್ಲಿ ಇರುವ ಹೊಸ್ತಿಲನ್ನು ಸದಾ ನಗು ಶುಚಿಯಾಗಿಟ್ಟುಕೊಳ್ಳಬೇಕು ಅಷ್ಟೇ ಅಲ್ಲ ಈ ಹೊಸ್ತಿಲನ್ನು ಯಾವ ಕ್ರಮದಲ್ಲಿ ಇಡಬೇಕು ಅನ್ನುವುದನ್ನು ಕೂಡ ಸರಿಯಾಗಿ ತಿಳಿದಿರಬೇಕು. ಯಾಕೆ ಅಂದರೆ ಮನೆಗೆ ಲಕ್ಷ್ಮೀದೇವಿಯ ಆಗಮನವಾಗುವುದು ಇದೆ ಸಿಂಹ ದ್ವಾರದ ಮೂಲಕ ಆದ್ದರಿಂದ ಪ್ರತಿದಿನ ನಾವು ಮನೆಯ ಅಂಗಳವನ್ನ ಶುಚಿ ಮಾಡುವ ಹಾಗೆ ಮನೆಯನ್ನು ಶುಚಿ ಮಾಡುವ ಹಾಗೆ ಮನೆಯ ಹೊಸ್ತಿಲನ್ನು ಕೂಡ ಶುಚಿ ಮಾಡಬೇಕು. ಅಷ್ಟೇ ಅಲ್ಲ ಸಿಂಹ ದ್ವಾರದ ಹೊಸ್ತಿಲನ್ನು ಅಲಂಕಾರವಾಗಿ ಇಟ್ಟಿರಬೇಕು ಆಗ ನನ್ನ ತಾಯಿ ಲಕ್ಷ್ಮೀದೇವಿ ಮನೆಗೆ ಆಗಮಿಸುವುದು.

ಹಾಗಾದರೆ ಸಿನ್ಹಾ ದ್ವಾರದ ಹೊಸ್ತಿಲು ಹೇಗಿರಬೇಕು ಅಂತ ಹೌದು ಮನೆಯ ಪ್ರತಿಯೊಂದು ಕೋಣೆಗೂ ಕೂಡ ಹೊಸ್ತಿಲು ಇರಬೇಕು ಆದರೆ ಇವತ್ತಿನ ದಿವಸಗಳಲ್ಲಿ ಟ್ರೆಂಡ್ ಎಂದು ಕೆಲವೊಂದು ಕೋಣೆಗಳಿಗೆ ಹೊಸ್ತಿಲನ್ನು ಇರಿಸಿರುವುದಿಲ್ಲ ಆದರೆ ನೆನಪಿನಲ್ಲಿ ಇಡೀ ಮನೆಗೆ ಅದರಲ್ಲಿಯ ಸಿಂಹದ್ವಾರದಲ್ಲಿ ಹೊಸ್ತಿಲ ಇರಲೇಬೇಕು ಅದು ಶ್ರೇಷ್ಠ ಹಾಗೆ ಆ ಹೊಸ್ತಿಲನ್ನು ಕ್ರಮಬದ್ಧವಾಗಿ ಅಲಂಕರಿಸಿ ಅದರಲ್ಲಿ ಮೊದಲನೆಯದಾಗಿ ಪ್ರತಿ ಹೆಣ್ಣುಮಕ್ಕಳು ಮನೆಯ ಸಿಂಹದ್ವಾರದಿಂದ ಪ್ರತಿದಿನ ಬೆಳಗ್ಗೆ ಶುಚಿ ಮಾಡಬೇಕು ಹಾಗೆ ಸಿಂಹ ದ್ವಾರದ ಹೊಸ್ತಿಲನ್ನು ಕೊಡ ಶುಚಿಮಾಡಿ ಅರಿಶಿನವನ್ನು ಲೇಪ ಮಾಡಬೇಕು ಈ ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನು ಲೇಪ ಮಾಡಿ ರಂಗೋಲಿಯನ್ನು ಹಾಕಬೇಕು.

ರಂಗೋಲಿಯನ್ನು ಹಾಕಿದ ಬಳಿಕ ಹೊಸ್ತಿಲಿಗೆ ಹೂವನ್ನು ಇರಿಸಬೇಕು ಹಾಗೆ ಹಬ್ಬಹರಿದಿನಗಳಂದು ನಾವು ಮನೆಯ ಸಿಂಹ ದ್ವಾರಕ್ಕೆ ಮಾವಿನ ತೋರಣ ಕಟ್ಟುತ್ತೇವೆ ಆದರೆ ಈ ರೀತಿ ಸಾಮಾನ್ಯ ದಿನಗಳಲ್ಲಿಯೂ ಕೂಡ ನಾವು ಮನೆಯ ಹೊಸ್ತಿಲನ್ನು ಮನೆಯ ಸಿಂಹ ದ್ವಾರವನ್ನು ಅಲಂಕಾರವಾಗಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿ ಮನೆಯಲ್ಲಿ ಪ್ರಸನ್ನಳಾಗಿ ನೆಲೆಸಿರುತ್ತಾಳೆ ಹೌದು ಮಾವಿನ ಎಲೆ ಇದು ಶುಚಿತ್ವದ ಸಂಕೇತವಾಗಿರುತ್ತದೆ ಹಾಗು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಲು ಸಹಕಾರಿಯಾಗಿರುತ್ತದೆ.

ಹೌದು ಮನೆಯ ಮುಖ್ಯದ್ವಾರದಲ್ಲಿ ಮಾವಿನ ತೋರಣವನ್ನು ಕಟ್ಟಿದರೆ ಮನೆಯೊಳಗೆ ಯಾವುದೇ ತರಹದ ಕೆಟ್ಟ ಶಕ್ತಿ ಬಾರದಿರುವ ಹಾಗೆ ಇದು ಕಾಪಾಡುತ್ತದೆ ಅಷ್ಟೇ ಅಲ್ಲ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಮನೆಯ ಅಂಗಳವನ್ನು ಪ್ರತಿದಿನ ಶುಚಿಯಾಗಿಡಬೇಕು ಅಷ್ಟೆಲ್ಲ ಮನೆಯ ಅಂಗಳದಲ್ಲಿ ತುಳಸಿ ಗಿಡ ಇರಲೇಬೇಕು ಹೌದು ಯಾರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆ ಅಂಥವರ ಮನೆಗೆ ಸದಾ ಲಕ್ಷ್ಮಿದೇವಿ ಖುಷಿಯಾಗಿ ಸಂತಸದಿಂದ ಆಗಮನಿಸುತ್ತಾಳೆ.

ಮನೆಯ ಮುಖ್ಯ ದ್ವಾರದಲ್ಲಿ ನರಸಿಂಹಸ್ವಾಮಿ ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯ ಸಿಂಹ ದ್ವಾರದ ಹೊಸ್ತಿಲನ್ನು ತುಳಿಯಬಾರದು ಅದನ್ನು ಸದಾ ದಾಟಿಕೊಂಡೇ ಓಡಾಡಬೇಕು. ಆದ್ದರಿಂದ ಮನೆಯ ಹೊಸ್ತಿಲಲ್ಲಿ ದೇವರು ನೆಲೆಸಿರುವ ಕಾರಣ ಸದಾ ನಾವು ಹೊಸ್ತಿಲನ್ನು ಶುಚಿಯಾಗಿರಿಸಿ ಕೊಳ್ಳಬೇಕು ಸದಾ ಪೂಜೆಯನ್ನು ಮಾಡಬೇಕು ಹೌದು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನಾವು ಮನೆಯ ಹೊಸ್ತಿಲನ್ನು ಪೂಜೆ ಮಾಡುವುದು ಕಡ್ಡಾಯವಾಗಿರುತ್ತದೆ ಹೇಗೆ ಮನೆ ದೇವರಿಗೆ ಪೂಜೆಯನ್ನು ಮಾಡ್ತೇವೆ ಹಾಗೆ ಮನೆಯ ಮುಖ್ಯ ದ್ವಾರವನ್ನು ಕೂಡ ನಾವು ಪೂಜಿಸಬೇಕು.

ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಮನೆಯ ಮುಖ್ಯದ್ವಾರದಲ್ಲಿ ಕುಳಿತು ಹರಟೆ ಹೊಡೆಯಬಾರದು ಬೇರೆಯವರ ಮನೆಯ ವಿಚಾರವನ್ನು ಮಾತನಾಡಬಾರದು ಯಾಕೆ ಅಂದರೆ ಈ ಗೋಧೂಳಿ ಸಮಯದಲ್ಲಿ ಲಕ್ಷ್ಮಿದೇವಿ ಲೋಕಸಂಚಾರ ಮಾಡುತ್ತಾ ಇರುತ್ತಾಳೆ ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಹೆಣ್ಣುಮಕ್ಕಳು ಹೊಸ್ತಿಲಿಗೆ ಅಡ್ಡಲಾಗಿ ಕುಳಿತುಕೊಳ್ಳಬಾರದು ಬರೀ ಈ ಸಮಯದಲ್ಲಿ ಮಾತ್ರವಲ್ಲ ಯಾವತ್ತಿಗೂ ಮನೆಯ ಸದಸ್ಯರ ಆಗಲಿ ಯಾರೇ ಆಗಲಿ ಮುಮ್ಮನೆಯ ಸಿಂಹ ದ್ವಾರದ ಹೊಸ್ತಿಲಿಗೆ ಅಡ್ಡಲಾಗಿ ಕೂರಬಾರದು. ಈ ಕೆಲವೊಂದು ವಿಚಾರಗಳನ್ನು ತಪ್ಪದೆ ತಿಳಿದು ಮನೆಯ ಸಿಂಹ ದ್ವಾರದ ಹೊಸ್ತಿಲನ್ನು ಶುಚಿಯಾಗಿಟ್ಟುಕೊಳ್ಳಿ ಸದಾ ಹೊಸ್ತಿಲನ್ನು ಅಲಂಕಾರದಿಂದ ಇರಿಸಿ ತಾಯಿ ಖುಷಿಯಿಂದ ಆಗಮಿಸುತ್ತಾಳೆ ಧನ್ಯವಾದ…