WhatsApp Logo

ಮೇಘನಾರಾಜ್ ಸಿನೆಮಾದಿಂದ ಕಿರುತರೆಗೆ ಬರಲು ಕೇಳಿದ ಸಂಭಾವನೆ ಇಷ್ಟೊಂದಾ…ನೋಡಿ ಒಮ್ಮೆ

By Sanjay Kumar

Updated on:

ಮೇಘನಾ ರಾಜ್ ಕನ್ನಡ ಸಿನೆಮಾರಂಗದ ಬಹುಬೇಡಿಕೆಯ ನಟಿ ನಟಿ, ಮಲಯಾಳಂ ಭಾಷೆಯಲ್ಲಿಯೂ ಕೂಡ ಮೇಘನಾ ರಾಜ್ ಅವರು ಬಹು ಬೇಡಿಕೆಯ ನಟಿಯಾಗಿದ್ದಾರೆ ಹಾಗೂ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ನಟಿ ಮೇಘನಾ. ನಟಿ ಮೇಘನಾ ಅವರ ಬಗ್ಗೆ ಕುರಿತು ಹೇಳಬೇಕಾದರೆ ಅವರು ಈ ಸಮಾಜಕ್ಕೆ ಮಾದರಿ ಹೆಣ್ಣು ಮಗಳಾಗಿದ್ದಾರೆ. ಯಾಕೆ ಅಂದರೆ ಎಷ್ಟೇ ಕಷ್ಟಗಳು ಬಂದರೂ ಕುಗ್ಗದೇ ಎಲ್ಲವನ್ನು ಎದುರಿಸಿ ಮತ್ತೆ ತಮ್ಮ ವೃತ್ತಿ ಜೀವನಕ್ಕೆ ಕಮ್ ಬ್ಯಾಕ್ ಮಾಡಿರುವ ಮೇಘನಾ ರಾಜ್ ಅದೊಂದು ಪರಿಸ್ಥಿತಿಯನ್ನು ಎಷ್ಟು ತಾಳ್ಮೆಯಿಂದ ಎದುರಿಸಿದ್ದಾರೆ ನಿಜಕ್ಕೂ ಸಂತೋಷವಾಗುತ್ತದೆ.

ಹೌದು ಇಂತಹ ದಿಟ್ಟ ಮಹಿಳೆಯರು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿರುತ್ತಾರೆ ಕೆಲವರಂತೂ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಂದರೂ ಅದನ್ನು ಎದುರಿಸಲು ಸಾಧ್ಯವಾಗದೆ ತಮ್ಮ ಜೀವ ಕಳೆದುಕೊಳ್ಳುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ ಅಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಆದರೆ ಇದು ನಮ್ಮ ಜೊತೆಗಾರರಿಗೆ ಅಥವಾ ನಮ್ಮ ಹೆತ್ತವರಿಗೆ ಎಷ್ಟು ನೋವು ನೀಡುತ್ತದೆ ಅನ್ನೋದೆ ಅರ್ಥ ಮಾಡಿಕೊಳ್ಳುವುದಿಲ್ಲ. ತಮ್ಮ ಜೀವನದಲ್ಲಿ ಬಂದ ನೋವಿನ ದಿನಗಳನ್ನು ಬಹಳ ಧೈರ್ಯವಾಗಿ ಎದುರಿಸಿದ ಮೇಘನ ರಾಜ್ ಅವರಿಗೆ ಈಗ ಬಾಳಿಗೆ ಬೆಳಕಾಗಿ ಬಂದಿರುವವರು ರಾಯನ್ ರಾಜ್ ಸರ್ಜಾ.

ಹೌದು ಅಂದು ತಮ್ಮ ಜೀವನದ ಮುಖ್ಯ ಪಾತ್ರಧಾರಿ ಯನ್ನೇ ತನ್ನ ಪ್ರೀತಿಯ ಕಳೆದುಕೊಂಡ ಮೇಘನರಾಜ್ ತನ್ನ ಬಾಳಿನಲ್ಲಿ ಇನ್ನೇನು ಅನ್ನುವ ಸಮಯದಲ್ಲಿ ಅವರು ತಾಯಿಯಾಗುತ್ತಿರುವ ವಿಚಾರ ಕೂಡ ತಿಳಿದಿರುತ್ತದೆ ಹೌದು ಚಿರು ಇದ್ದಾಗಲೇ ಮೇಘನಾ ರಾಜ್ ಅವರು ತಾಯಿಯ ಗೊತ್ತಿರುವ ವಿಚಾರ ತಿಳಿದಿದ್ದು ತಮ್ಮ ಭವಿಷ್ಯದ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು ಈ ಜೋಡಿ. ಅಂದು ವಿಧಿಯಾಟವೇ ಬೇರೆಯಾಗಿತ್ತು, ಮೇಘನ ರಾಜ್ ಸರ್ಜಾ ಅವರಿಂದ ಅವರು ಅದೆಷ್ಟು ಬೇಗ ದೂರವಾಗಿದ್ದರೂ ನಿಜಕ್ಕೂ ಯಾರು ಕೂಡ ಊಹೆ ಮಾಡಿರಲಿಲ್ಲ ಆದರೆ ಅವರ ಬಾಳಲ್ಲಿ ಮತ್ತೆ ಚಿರು ರೂಪ ರಾಯನ್ ಬಂದರು.

ಈಗ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಮೇಘನಾ ಮತ್ತೆ ತಮ್ಮ ಸಿನಿ ಜೀವನಕ್ಕೆ ಕಂಬ್ಯಾಕ್ ಮಾಡಿದ್ದಾರೆ ರಾಯನ್ ಮೊದಲ ವರ್ಷದ ಜನ್ಮದಿನದಂದು ಮತ್ತೆ ಹೊಸ ಸಿನಿಮಾಗೆ ಸಹಿ ಮಾಡಿರುವ ಮೇಘನಾ, ಹೊಸದಾದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಚಿತ್ರೀಕರಣದ ಜೊತೆ ಕಿರುತೆರೆಯಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ಎಂಬ ಖ್ಯಾತ ಡ್ಯಾನ್ಸಿಂಗ್ ಶೋ ನಲ್ಲಿ ತೀರ್ಪುಗಾರರಾಗಿ ನಟಿ ಮೇಘನ ರಾಜ್ ಅವರು ಕಾಣಿಸಿಕೊಂಡಿದ್ದು, ಈ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆವಿಜಯ ರಾಘವೇಂದ್ರ ಮತ್ತು ನಟಿ ಮಯೂರಿ ಅವರು ಕೂಡ ತೀರ್ಪುಗಾರರಾಗಿದ್ದರು, ಈ ಕಾರ್ಯಕ್ರಮದ ನಿರೂಪಣೆಯನ್ನು ಅಕುಲ್ ಬಾಲಾಜಿಯವರು ನಿರ್ವಹಿಸಿದ್ದರು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುವ ವಿಚಾರವೇನೆಂದರೆ ಮೇಘನಾ ರಾಜ್ ಅವರು ಹಿರಿ ತೆರೆ ಹಿಂದಿ ಕಿರುತೆರೆಗೆ ಬರಲು ಪಡೆದುಕೊಂಡ ಸಂಭಾವನೆ ಎಷ್ಟಿರಬಹುದು ಅಂತ ಈಗಾಗಲೇ ಬಹಳಷ್ಟು ಮಂದಿಗೆ ಕುತೂಹಲ ಮೂಡಿಸಿರುವ ವಿಚಾರವೇನೆಂದರೆ ನಟಿ ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಬರಲು ಪಡೆದುಕೊಂಡ ಸಂಭಾವನೆ ಎಷ್ಟು ಎಂದು, ಹೌದು ಮೇಘನಾ ರಾಜ್ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಒಂದೇ ಎಪಿಸೋಡ್ ಗೆ 2 ಲಕ್ಷ ರೂಪಾಯಿಗಳು.

ಹಾಗಾಗಿ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಪಡೆದುಕೊಂಡ ಸಂಭಾವನೆ 2 ಲಕ್ಷ ರೂಪಾಯಿಗಳು, ಹಾಗೆ ಮೇಘನರಾಜ್ ಡ್ಯಾನ್ಸಿಂಗ್ ಚಾಂಪಿಯನ್ ಗೆ ವಿಶೇಷಾ ಅತಿಥಿಯಾಗಿ ಮಾತ್ರ ಬಂದಿದ್ದರು ಆದರೆ ಸ್ಪರ್ಧಿಗಳ ಒತ್ತಾಯದ ಮೇರೆಗೆ ಅವರನ್ನು ಈ ಕಾರ್ಯಕ್ರಮದ ಪರ್ಮನೆಂಟ್ ತೀರ್ಪುಗಾರರಾಗಿ ಮಾಡಲಾಗಿತ್ತು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment