ರಾ ರಾ ರಕ್ಕಮ್ಮಾ ಡಾನ್ಸ್ ಮಾಡುವಾಗ ನೋಡಿ ಅರವಿಂದ ಕೆ ಪಿ ಏನು ಮಾಡಿದ್ದಾರೆ ಅದಕ್ಕೆ ದಿವ್ಯ ರಿಯಾಕ್ಷನ್ ನೋಡಿ … ಅಬ್ಬಬ್ಬಾ ಬೆಚ್ಚಿಬಿದ್ದ ಜನ … ಅಷ್ಟಕ್ಕೂ ಡಾನ್ಸ್ ನೋಡಿ ಕ್ಯೂಟ್

165

ಹೌದು ಪ್ರೀತಿ ಪ್ರೇಮ ಎಂಬುದು ಯಾವಾಗ ಯಾರಿಗೆ ಹೇಗೆ ಹುಟ್ಟುತ್ತದೆ ಅನ್ನೋದು ಯಾರಿಗೂ ಗೊತ್ತಿರುವುದಿಲ್ಲ ನೋಡಿ ಅದಕ್ಕೆ ನಿದರ್ಶನ ಅಂದರೆ ಈ ಜೋಡಿಗಳು. ಬಿಗ್ ಬಾಸ್ 8 ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಬಂದರೂ ಇವರು, ಆದರೆ ಬಳಿಕ ಕಾರ್ಯಕ್ರಮ ಶುರುವಾಗಿ ಎರಡನೇ ವಾರಕ್ಕೆ ಇವರಿಬ್ಬರ ನಡುವಿನ ಸ್ನೇಹ ಬಾಂಧವ್ಯ ಪ್ರೀತಿಯಾಗಿ ತಿರುಗಿತು. ಆದರೆ ಈ ಜೋಡಿಗಳು ಎಲ್ಲಿಯೂ ಕೂಡ ಅದನ್ನು ಬಾಯ್ಬಿಟ್ಟು ಹೇಳಿಕೊಂಡಿರಲಿಲ್ಲ. ಇವರನ್ನು ನೋಡಿದವರೆಲ್ಲ ಎಂತಹ ಒಳ್ಳೆಯ ಜೋಡಿ ಎಷ್ಟು ಸೊಗಸಾಗಿದೆ ಇವರ ಬಾಂಧವ್ಯ ಇವರ ಜೋಡಿ ಸೂಪರ್ ಅಂತ ಬಹಳಷ್ಟು ಮಂದಿ ಮನೆಯಿಂದ ಹೊರಗೆ ಮಾತನಾಡಿಕೊಂಡಿದ್ದರೂ. ಅಷ್ಟೇ ಅಲ್ಲ ಬಹಳಷ್ಟು ಅಭಿಮಾನಿಗಳು ಕೂಡ ಇವರ ಹೆಸರಲ್ಲಿ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದರು ಫ್ಯಾನ್ ಪೇಜ್ ಕ್ರಿಯೇಟ್ ಮಾಡಿದ್ದರು. ಈ ವಿಚಾರ ತಿಳಿದು ಸ್ವತಃ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ ಪಿ ಅವರೇ ಅಭಿಮಾನಿಗಳ ಪ್ರೀತಿಗೆ ಅಚ್ಚರಿಪಟ್ಟಿದ್ದರು.

ಹೌದು ಅರವಿಂದ್ ಕೆಪಿ ಅವರು ಒಬ್ಬ ಬೈಕ್ ರೇಸರ್ ಇವರು ನಮ್ಮ ಭಾರತ ದೇಶವನ್ನು ರೆಪ್ರೆಸೆಂಟ್ ಮಾಡುವ ಆಟಗಾರರಾಗಿದ್ದರು. ದಿವ್ಯಾ ಉರುಡುಗ ಕಿರುತೆರೆಯಲ್ಲಿ ಅಭಿನಯ ಮಾಡುವ ಮೂಲಕ ಯಶಸ್ಸು ಪಡೆದುಕೊಂಡಿದ್ದ ನಟಿ. ದಿವ್ಯ ಉರುಡುಗ ಸ್ವಲ್ಪ ದಿನಗಳ ಕಾಲ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡಿದ್ದರು ಇವರಿಬ್ಬರಿಗು ಸಹ ಯಾವುದೇ ಪರಿಚಯವಿರಲಿಲ್ಲ, ಆದರೆ ಇವರಿಬ್ಬರ ಬಾಂಧವ್ಯಕ್ಕೆ ಬೆಸುಗೆ ಹಾಕಿದ್ದು ಬಿಗ್ ಬಾಸ್ ಕಾರ್ಯಕ್ರಮ 8. ಬಿಗ್ ಬಾಸ್ ಮನೆಯೊಳಗೆ ಎರಡನೆಯ ವಾರ ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಅರವಿಂದ್ ಕೆಪಿ ಅವರು ಆ ಟಾಸ್ಕ್ ನಲ್ಲಿ ದಿವ್ಯ ಉರುಡುಗ ರನ್ನು ಆಯ್ಕೆ ಮಾಡಿಕೊಂಡಿದ್ದರು. ಅಂದಿನಿಂದ ಇವರ ನಡುವಿನ ಬಾಂಧವ್ಯ ಇನ್ನಷ್ಟು ಹತ್ತಿರವಾಗಿಯೇ ಆ ಬಳಿಕ ದಿವ್ಯ ಉರುಡುಗ ತಮ್ಮ ಕೈನಲ್ಲಿದ್ದ ತಮ್ಮ ತಂದೆಯವರು ನೀಡಿದ ಉಂಗುರವನ್ನ ಅರವಿಂದ್ ಅವರಿಗೆ ನೀಡಿದ್ದರು.

ಆ ಬಳಿಕ ಬಿಗ್ ಬಾಸ್ ಮನೆಯೊಳಗೆ ಉತ್ತಮ ಬಾಂಧವ್ಯವನ್ನ ಹೊಂದಿದ ಈ ಜೋಡಿಗಳನ್ನು ನೋಡಿ ಹೊರಜಗತ್ತು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದರು ಹಲವರು ಈ ಜೋಡಿಗೆ ಫಿದಾ ಆಗಿ ಹೋಗಿದ್ದರೂ ಈ ಜೋಡಿ ಗಳನ್ನು ಬಿಗ್ ಬಾಸ್ ಮನೆಯ ಪ್ರೇಮಪಕ್ಷಿಗಳು ಅಂತ ಕೂಡ ಹೇಳಿದ್ದರು. ಆದರೆ ಬಿಗ್ ಬಾಸ್ 8 ಕಾರ್ಯಕ್ರಮವು ಕಾರಣಾಂತರಗಳಿಂದ ಎರಡೆರಡು ಇನಿಂಗ್ಸ್ನಲ್ಲಿ ಮೂಡಿಬಂದಿದ್ದು ಮೊದಲ ಇನಿಂಗ್ಸ್ ಮುಗಿದ ಮೇಲೆ ಹೊರಗೆ ತಮ್ಮ ಜೋಡಿಗೆ ಇದ್ದ ಫ್ಯಾನ್ ಬೇಸ್ ನೋಡಿ ಇವರೇ ಅಚ್ಚರಿಪಟ್ಟಿದ್ದರು ಹಾಗೆ ಮತ್ತೆ ಎರಡನೇ ಇನಿಂಗ್ಸ್ ಶುರುವಾದ ಮೇಲಂತೂ ಹೆಚ್ಚು ಸಮಯ ಒಟ್ಟಿಗೆ ಕಳೆಯುತ್ತಿದ್ದ ದಿವ್ಯ ಉರುಡುಗ ಮತ್ತು ಅರವಿಂದ್ ಮನೆಯೊಳಗೆ ಮ್ಯಾಚಿಂಗ್ ಬಟ್ಟೆಗಳನ್ನು ಧರಿಸುತ್ತಿದ್ದರು. ಇದರಿಂದ ಎಲ್ಲರಿಗೂ ತಿಳಿದಿತ್ತು ಇವರು ಪ್ರೇಮಿಗಳು ಅಂತ ಆದರೆ ಈ ಪ್ರೇಮಿಗಳು ಎಲ್ಲಿಯೂ ಕೂಡ ತಾವು ಪ್ರೀತಿಸುತ್ತಿದ್ದ ವಿಚಾರವನ್ನ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಬಿಗ್ ಬಾಸ್ ಕೂಡ ಮುಗಿಯಿತು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಆಗಿ ಅರವಿಂದ್ ಕೆ ಪಿ ಯವರು ಬಹುಮಾನವನ್ನು ಪಡೆದುಕೊಂಡರು.

ಮನೆಯಿಂದ ಆಚೆ ಬಂದ ಮೇಲೆ ಇವರಿಬ್ಬರೂ ಆಗಾಗ ಕೆಲವು ಕಾರ್ಯಕ್ರಮಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದ್ದು ಅರವಿಂದ್ ಕೆಪಿ ಅವರು ದಿವ್ಯ ಉರುಡುಗ ಅವರ ವರ್ತನೆಯನ್ನು ಕೂಡ ಅದ್ಧೂರಿಯಾಗಿ ಆಚರಿಸಿದ್ದರು ಮತ್ತು ತಮ್ಮ ಬೈಕ್ ರೇಸ್ ಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೂ ಕೂಡ ದಿವ್ಯ ಅವರನ್ನ ಕರೆದುಕೊಂಡು ಹೋಗುತ್ತಿದ್ದರು. ಸದ್ಯ ಇವರಿಬ್ಬರು ಒಟ್ಟಿಗೆ ಮಾಡಿರುವ ರಾ ರಾ ರಕ್ಕಮ್ಮ ರೀಲ್ಸ್ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಸದ್ಯ ಟ್ರೆಂಡಿಂಗ್ ಹಾಡಿಗೆ ಸ್ಟೆಪ್ ಹಾಕಿರುವ ಈ ಜೋಡಿಯ ಈ ಹೊಸದಾದ ವೀಡಿಯೋಗೆ ಎಲ್ಲರೂ ಕೂಡ ಸೂಪರ್ ಡೂಪರ್ ಎಂದಿದ್ದಾರೆ. ಲಕ್ಷಾಂತರ ಮೆಚ್ಚುಗೆ ಕೂಡ ಈ ವಿಡಿಯೋಗೆ ಹರಿದು ಬರುತ್ತಿದೆ ನೀವು ಕೂಡ ರೀಲ್ಸ್ ನೋಡಿದ್ದೀರಾ ಹಾಗಾದರೆ ಈ ಜೋಡಿ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.