ಅಸ್ತಮಾ,ಉರಿ ಮೂತ್ರದ ಸಮಸ್ಯೆಗೆ ಈ ಮರವು ರಾಮಬಾಣ ಇದ್ದಂತೆ ..ಅಷ್ಟಕ್ಕೂ ಈ ಮರದ ಬಗ್ಗೆ ನೀವು ತಿಳಿಯದ ಆರೋಗ್ಯಕರ ಲಾಭಗಳು ಇವು..

139

ಗರ್ಭಿಣಿಯರ ಆರೋಗ್ಯ ಸುಧಾರಿಸುವ ಇದೊಂದು ಪ್ರಕೃತಿದತ್ತವಾದ ಔಷಧೀಯ ಮರ ಸಾಮಾನ್ಯವಾಗಿ ನಾವು ದೇವಸ್ಥಾನಗಳಲ್ಲಿ ಹೌದು ಪುರಾತನ ಗ್ರಂಥದಲ್ಲಿ ಈ ಮರಕ್ಕೆ ಪ್ರತ್ಯೇಕವಾದ ಸ್ಥಾನವಿದೆ ಹಾಗೆ ಹೋಮಹವನ ಗಳಲ್ಲಿಯೂ ಕೂಡ ಇದರ ಚಕ್ಕೆಗಳನ್ನು ಬಳಕೆ ಮಾಡ್ತಾರೆ.ಹಾಗಾದರೆ ಇದರ ಅರ್ಥ ಈ ಮರದಲ್ಲಿಯೇ ಅಧಿಕವಾದ ಔಷಧೀಯ ಗುಣ ಅಡಗಿದೆ ಎಂದು ಇವತ್ತಿನ ಮಾಹಿತಿಯಲ್ಲಿ ನಾವು ಮಾತನಾಡುತ್ತಿರುವುದು ಹತ್ತಿ ಮರದ ಕುರಿತು.

ಹೌದು ದೇವಸ್ಥಾನಗಳ ಸುತ್ತಮುತ್ತ ನಾವು ಹೆಚ್ಚಾಗಿ ಹತ್ತಿ ಮರವನ್ನ ಕಾಣಬಹುದು ಇದರಲ್ಲಿ ಅಗಾಧವಾದ ಔಷಧೀಯ ಗುಣ ಇದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾದ ವಿಚಾರವಾಗಿದ್ದು ಯಾವೆಲ್ಲ ಸಮಸ್ಯೆಗಳಿಗೆ ಈ ಹತ್ತಿ ಮರದ ಎಲೆ ತೊಗಟೆ ಬೇರು ಇವೆಲ್ಲವೂ ಪ್ರಯೋಜನಕಾರಿಯೆಂಬುದನ್ನು ಇವತ್ತಿನ ಈ ಪುಟದಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ಬೆಳೆದು ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಎರಡರಲ್ಲಿಯೂ ಸಹ ಪ್ರಾಧಾನ್ಯತೆಯನ್ನು ಪಡೆದುಕೊಂಡಿರುವ ಎ ಹತ್ತಿಮರದ ಕುರಿತು ತಿಳಿಯೋಣ ಬನ್ನಿ.

ಹತ್ತಿ ಮರವನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕರಿತಾರ ಇದಕ್ಕೆ ಬೌದ್ಧ ಧರ್ಮದಲ್ಲಿ ನೀಲಕಮಲ ಅಂತ ಕರೆಯುತ್ತಾರೆ ಹಾಗೆ ಬಹಳಷ್ಟು ಮಂದಿ ಇದನ್ನು ಯಜ್ಞಾಂಗ ಅಂತ ಕೂಡ ಕರಿತಾರೆ. ಬಹಳಷ್ಟು ಮಂದಿ ಬಹಳಷ್ಟು ಹೆಸರುಗಳಿಂದ ಕರೆಯುವ ಈ ಅತ್ತಿ ಮರದ ಹೂವು ಹಣ್ಣು ಕಾಯಿ ತೊಗಟೆ ಬಹಳ ಪ್ರಯೋಜನಕಾರಿಯಾಗಿದೆ ಈ ಹತ್ತಿ ಮರದ ಹಣ್ಣುಗಳು ಮಲಬದ್ಧತೆ ನಿವಾರಣೆ ಮಾಡಿದರೆ ಈ ಹತ್ತಿ ಮರದ ತೊಗಟೆ ಭೇದಿ ಸಮಸ್ಯೆಗೆ ಉಪಶಮನ ನೀಡುತ್ತದೆ.

ಹಾಗಾಗಿ ಚಿಕ್ಕಪುಟ್ಟ ಸಮಸ್ಯೆಗಳಿಗೆ ಹೇಗೆ ಪ್ರಕೃತಿದತ್ತವಾಗಿ ಪರಿಹಾರ ಪಡೆದುಕೊಳ್ಳಬಹುದು ಎಂಬುದನ್ನು ಈ ಮಾಹಿತಿಯಲ್ಲಿ ತಿಳಿಯೋಣ.ಹೌದು ಇವತ್ತಿನ ದಿನಗಳಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಆಸ್ಪತ್ರೆಗೆ ಹೋಗಿ ಹೋಗಿ ಹೆಚ್ಚಿನ ಸಮಯ ನಾವು ನಮ್ಮ ಬದುಕಿನಲ್ಲಿ ಈ ಆಸ್ಪತ್ರೆಯಲ್ಲಿಯೇ ಕಳೆಯುವ ಪರಿಸ್ಥಿತಿ ಬಂದುಬಿಟ್ಟಿದೆ ಆದರೆ ಆಸ್ಪತ್ರೆಗೆ ತಿರುಗುವುದರ ಬದಲು ಪ್ರಕೃತಿದತ್ತವಾಗಿ ನಮ್ಮ ಆರೋಗ್ಯವನ್ನು ಸರಿಪಡಿಸಿಕೊಂಡಿದ್ದೆ ಆದಲ್ಲಿ, ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಜೊತೆಗೆ ರೋಗನಿರೋಧಕ ಶಕ್ತಿಯೂ ಕೂಡ ವೃದ್ಧಿಸುತ್ತದೆ.

ಹತ್ತಿ ಮರದ ಹಣ್ಣನ್ನು ತಿನ್ನುವುದರಿಂದ ಆಗುವ ಲಾಭವೇನು ಗೊತ್ತಾ ಹೌದು ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಈ ಹತ್ತಿ ಮರದ ಹಣ್ಣು ಪ್ರಯೋಜನಕಾರಿಯಾಗಿದೆ ಈ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಹೌದು ದೇಹದಲ್ಲಿ ನೀರಿನ ಅಂಶ ಇಲ್ಲದೇ ಹೋದಾಗ ಅಥವಾ ನಮ್ಮ ಆಹಾರದ ಮೂಲಕ ನಾವು ಹೆಚ್ಚಾಗಿ ನಾರಿನ ಅಂಶ ತೆಗೆದುಕೊಳ್ಳದೆ ಇರುವಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಆಗ ಮಲಬದ್ಧತೆ ಯಿಂದಲೇ ಮುಂದಿನ ದಿನಗಳಲ್ಲಿ ಬಹಳಷ್ಟು ದೊಡ್ಡ ದೊಡ್ಡ ಸಮಸ್ಯೆಗಳು ಉಂಟಾಗುತ್ತದೆ ಹಾಗೆಯೇ ಇದನ್ನು ನಿರ್ಲಕ್ಷ್ಯ ಮಾಡಿದಷ್ಟು ಮೆದುಳಿನ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಬಹಳಷ್ಟು ಇರುತ್ತದೆ.

ಹಾಗೆ ಈ ಹತ್ತಿ ಮರದ ತೊಗಟೆಯನ್ನು ಒಣಗಿಸಿ ಪುಡಿಮಾಡಿ ಕಲ್ಲು ಚೂರ್ಣ ಮಾಡಿಟ್ಟುಕೊಂಡು ಶೇಖರಣೆ ಮಾಡಿ ಇಟ್ಟರೆ ಈ ಚೂರ್ಣವನ್ನು ಗರ್ಭಿಣಿಯರು ಕೂಡ ಸೇವಿಸಬಹುದು ಇದರಿಂದ ಗರ್ಭಾವಸ್ಥೆಯ ಸಮಯದಲ್ಲಿ ಹೆಣ್ಣು ಮಕ್ಕಳ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡಲು ಈ ಚೂರ್ಣ ಪ್ರಯೋಜನಕಾರಿಯಾಗಿದ್ದು ಜೊತೆಗೆ ಯಾರಿಗೆ ಭೇದಿ ಸಮಸ್ಯೆ ಇರುತ್ತದೆ ಅಂತಹವರು ಹಾಗೂ ಉರಿಮೂತ್ರ ಸಮಸ್ಯೆ ಇರುವವರು ಈ ಪರಿಹಾರವನ್ನು ಪಾಲಿಸಬಹುದು ಅಂದರೆ ಹತ್ತಿ ಮರದ ತೊಗಟೆಯ ಚೂರ್ಣವನ್ನು ಸೇವಿಸಬಹುದು ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಹತ್ತಿಮರದ ಪ್ರವೃತ್ತಿ ಹೇಗೆ ಅಂದರೆ ಇದು ಶರೀರದಲ್ಲಿ ಕಫ ಉಂಟು ಮಾಡುವುದರಿಂದ ಇದನ್ನು ಯಾವುದೇ ಕಾರಣಕ್ಕೂ ಶೀತ ಸ್ವಭಾವವುಳ್ಳವರು ಬಳಸಬಾರದು ಯಾಕೆಂದರೆ ಶೀತ ಪ್ರವೃತ್ತಿ ಇರುವ ಹತ್ತಿಮರ ದೇಹದಲ್ಲಿ ಉಷ್ಣಾಂಶವನ್ನು ಬಹಳ ಬೇಗ ಕಡಿಮೆ ಮಾಡುವುದರಿಂದ, ಈ ಹತ್ತಿ ಮರದ ಹಣ್ಣು ಕಾಯಿ ಅಥವಾ ತೊಗಟೆ ಇನ್ನಷ್ಟು ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ ಅನಾರೋಗ್ಯ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕಾಗಿ.