ನಿಮ್ಮ ಕಣ್ಣುಗಳ ಸುತ್ತ ಮುತ್ತ ಕಪ್ಪು ‌ಕಲೆ ಇದ್ದರೆ ಈ ಗಿಡದಿಂದ ಮನೆ ಮದ್ದು ಮಾಡಿ ಹಚ್ಚಿಕೊಳ್ಳಿ ಸಾಕು …ಒಂದೇ ವಾರದಲ್ಲಿ ಚಮತ್ಕಾರ ರೂಪದಲ್ಲಿ ಮಂಗಾ ಮಾಯಾ ..

297

ಕಣ್ಣಿನ ಸುತ್ತಲಿನ ಕಪ್ಪು ಕಲೆಗೆ ಎಷ್ಟೆಲ್ಲಾ ಕ್ರೀಮ್ ಗಳನ್ನು ಬಳಸಿದ್ದರು ಪರಿಹಾರವಾಗಿಲ್ಲ ಅಂದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಕಣ್ಣಿನ ಸುತ್ತಲಿನ ವರ್ತುಲಕ್ಕೆ ಈ ಎಲೆಯಿಂದ ಪರಿಹಾರ ಮಾಡಿ…ನಮಸ್ತೆ ಪ್ರಿಯ ಸ್ನೇಹಿತರೆ, ಪ್ರಕೃತಿಯ ನಡುವಲ್ಲಿ ಸಿಗುವ ಅದೆಷ್ಟೋ ಗಿಡಮರಗಳಿಗೆ ಅಗಾಧವಾದ ಶಕ್ತಿ ಇದೆ ಆ ಅಗಾಧವಾದ ಶಕ್ತಿಯ ಬಗ್ಗೆ ತಿಳಿದಾಗ ನಿಜಕ್ಕೂ ಅಚ್ಚರಿ ಎನಿಸುತ್ತದೆ ಹಾಗೆ ಈ ಆಯುರ್ವೇದದ ಪ್ರಕಾರ ಕೆಲವೊಂದು ಔಷಧಿಗಳು ಕೆಲವೊಂದು ಪರಿಹಾರಗಳು ದೊಡ್ಡ ದೊಡ್ಡ ಅನಾರೋಗ್ಯ ಸಮಸ್ಯೆಗಳಿಗೂ ಕ್ಷಣಮಾತ್ರದಲ್ಲಿ ಪರಿಹಾರ ನೀಡುತ್ತದೆ ಅಂದರೆ ನೀವು ನಂಬುವುದಿಲ್ಲ ಆದರೆ ಅದು ನಿಜ ನಮ್ಮ ಈ ಪ್ರಕೃತಿಯಲ್ಲಿ ಅಂಥದ್ದೊಂದು ಶಕ್ತಿಯಿದೆ ಔಷಧೀಯ ಗುಣವುಳ್ಳ ಕೆಲವೊಂದು ಗಿಡಮರಗಳ ಬಗ್ಗೆ ನೀವು ಕೂಡ ಖಂಡಿತವಾಗಿಯೂ ತಿಳಿಯಲೇಬೇಕು ಹಾಗೆ ಅದರ ಪ್ರಯೋಜನವನ್ನು ತಪ್ಪದೆ ಪಡೆದುಕೊಳ್ಳಿ.

ಹೌದು ಸ್ನೇಹಿತರ ತುಂಬೆಗಿಡ ಕೇಳಿದ್ದೀರಾ ಅಲ್ವಾ ಇದರಲ್ಲಿ ಬಿಡುವ ಹೂವುಗಳು ಎಷ್ಟು ಅಂದವಾಗಿರುತ್ತದೆ ಪುಟ್ಟ ಪುಟ್ಟದಾಗಿದ್ದರೂ ಶ್ವೇತ ವರ್ಣದಲ್ಲಿ ಇರುವ ಈ ಹೂವು ಶಿವನಿಗೆ ಪ್ರಿಯವಾದದ್ದು ಮತ್ತು ತುಂಬೆ ಗಿಡದ ಎಲೆ ಕಾಂಡಗಳು ಕೂಡ ಔಷಧೀಯ ಗುಣವನ್ನು ಹೊಂದಿರುತ್ತದೆ.

ಸ್ನೇಹಿತರೆ ಈ ತುಂಬೆ ಗಿಡದ ಸಮೇತ ತಂದು ಅದನ್ನು ಸ್ವಚ್ಛ ಮಾಡಿ ಬಿಸಿಲಿನಲ್ಲಿ ಒಣಗಿಸಿ ಆ ಗಿಡದ ಸಮೇತ ಪುಡಿ ಮಾಡಿ ಇಟ್ಟುಕೊಂಡು ಮನೆಗೆ ಧೂಪ ಹಾಕುವಾಗ, ಧೂಪದ ಜೊತೆಗೆ ಆ ಚೂರ್ಣವನ್ನು ಹಾಕಿ ಮನೆಗೆ ಧೂಪವನ್ನು ಕೊಡಿ ಇದರಿಂದ ಮನೆಯಲ್ಲಿರುವ ಸೊಳ್ಳೆಗಳು ನೊಣಗಳು ನಾಶವಾಗುತ್ತದೆ ಹಾಗೂ ಕ್ರಿಮಿಕೀಟಗಳು ಕೂಡಾ ನಶಿಸುತ್ತದೆ ಈ ಸಣ್ಣ ಪರಿಹಾರದಿಂದ.

ಹೌದು ಸ್ನೇಹಿತರೆ ಈ ತುಂಬೆ ಗಿಡದ ಎಲೆಯಲ್ಲಿ ಎಂತಹ ಅದ್ಭುತವಾದ ಶಕ್ತಿ ಇದೆ ಅಂದರೆ ಇದು ಶೀತ ಆಗಿರುವವರಿಗೆ ಶೇತದಿಂದ ಶಮನ ಪಡೆದುಕೊಳ್ಳಲು ಸಹಕಾರಿ ಹೇಗೆಂದರೆ ಎಲೆಯ ರಸವನ್ನು ನೀರಿಗೆ ಹಾಕಿ ಬಳಿಕ ಆ ನೀರಿನಿಂದ ಹಬೆಯನ್ನು ತೆಗೆದುಕೊಳ್ಳಬೇಕು, ಹಬೆ ತೆಗೆದುಕೊಳ್ಳುವಾಗ ನೀರಿಗೆ ಹರಿಶಿಣವನ್ನು ಕೂಡ ಸ್ವಲ್ಪ ಹಾಕಿರಬೇಕು. ಈ ರೀತಿ ಹಬೆ ತೆಗೆದುಕೊಳ್ಳುವುದರಿಂದ ಕಟ್ಟಿರುವ ಮೂಗು ಶಮನಗೊಳ್ಳುತ್ತದೆ ಹಾಗೂ ಕಫದಂತಹ ಸಮಸ್ಯೆ ಪರಿಹಾರ ಆಗುತ್ತದೆ.

ತುಂಬೆ ಗಿಡದ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಸ್ವಲ್ಪ ನೀರನ್ನು ಸೇರಿಸಿ ಕುಡಿಯುವುದರಿಂದ ಜ್ವರದಂತಹ ಸಮಸ್ಯೆ ಕೂಡ ಶಮನವಾಗುತ್ತದೆ. ಹೌದು ಬಿಸಿ ನೀರಿಗೆ ತುಂಬೆ ಗಿಡದ ಎಲೆಯ ರಸ ಮತ್ತು ಸ್ವಲ್ಪ ಮೆಣಸಿನ ಪುಡಿ ಹಾಗೂ ಜೇನುತುಪ್ಪವನ್ನು ಮಿಶ್ರಮಾಡಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ದೊಡ್ಡವರಿಗೆ ಕಾಡುವ ಜ್ವರ ದೂರವಾಗುತ್ತದೆ ಹಾಗೆ ಈ ಪರಿಹಾರದಿಂದ ಅಜೀರ್ಣ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಹಸಿವಾಗುತ್ತಿಲ್ಲ ಎಂದು ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದು ಹಲವರು ಹಲವು ಪ್ರಯತ್ನಗಳನ್ನೂ ಔಷಧಿಗಳನ್ನು ಮಾಡಿಕೊಳ್ತಾರೆ ಹಲವು ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ.

ಆದರೆ ಬಿಸಿ ನೀರಿಗೆ ತುಂಬೆ ಎಲೆ ಮತ್ತು ಹೂವಿನ ರಸವನ್ನು ಮಿಶ್ರಮಾಡಿ ಚಿಟಕಿ ಮೆಣಸಿನ ಪುಡಿ ಹಾಗೂ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯುತ್ತ ಬಂದರೆ ಹಸಿವಾಗದೇ ಇರುವುದು ಅಜೀರ್ಣತೆ ಅಂತಹ ಸಮಸ್ಯೆಗಳು ನಿವಾರಣೆ ಆಗುತ್ತದೆ. ಈ ಚಿಕ್ಕ ಪುಟ್ಟ ಪರಿಹಾರಗಳು ನಿಮ್ಮ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ ಹಾಗೆಯೇ ಈ ತುಂಬೆ ಹೂವಿನ ಶಕ್ತಿ ಸೌಂದರ್ಯ ವೃದ್ಧಿಗೂ ಸಹಕಾರಿಯಾಗುತ್ತದೆ ಹೇಗೆ ಅಂದರೆ.

ಈ ತುಂಬೆ ಹೂವಿನ ರಸವನ್ನು ತೆಗೆದುಕೊಂಡು ಕಣ್ಣಿನ ಸುತ್ತ ಲೇಪ ಮಾಡುವುದರಿಂದ ಕಣ್ಣಿನ ಸುತ್ತಲಿನ ವರ್ತುಲ ನಿವಾರಣೆಯಾಗುತ್ತದೆ ಹಾಗೆ ಅಕ್ಕಿ ತೊಳೆದ ನೀರಿಗೆ ಈ ಎಲೆಯ ರಸವನ್ನು ಮಿಶ್ರ ಮಾಡಿ, ಕೂದಲಿಗೆ ಲೇಪನ ಮಾಡುವುದರಿಂದ ಡ್ಯಾಂಡ್ರಫ್ ನಂತಹ ಸಮಸ್ಯೆ ಪರಿಹಾರ ಆಗುತ್ತದೆ. ಹೀಗಿದೆ ನಮ್ಮ ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವ ಈ ತುಂಬೆ ಹೂವಿನ ಗಿಡದ ಶಕ್ತಿ…

WhatsApp Channel Join Now
Telegram Channel Join Now