ಊಟ ಮಾಡುವಾಗ ನೀರು ಕುಡಿಬೇಕಾ? ಊಟದ ನಂತರ ನೀರು ಕುಡಿಬೇಕಾ? ಸಂಶಯ ಇದೆಯಾ ಹಾಗಾದ್ರೆ ಆಯುರ್ವೇದದಲ್ಲಿ ಉಲ್ಲೇಖಗೊಂಡಿರುವ ಈ ಉಪಯುಕ್ತ ಮಾಹಿತಿಯನ್ನು ತಿಳಿಯಿರಿ…ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಆರೋಗ್ಯದ ಬಗ್ಗೆ ನಾವು ಎಷ್ಟು ಕಾಳಜಿ ಮಾಡಿದರೂ ನಮ್ಮ ಆರೋಗ್ಯ ಆಗಾಗ ಕೈ ಕೊಡುತ್ತಿದೆ ಅಂದರೆ ನಾವು ಮಾಡುವ ಸಣ್ಣ ತಪ್ಪುಗಳೇ ಕಾರಣ ಆಗಿರುತ್ತದೆ. ಹೌದು ದೊಡ್ಡ ದೊಡ್ಡ ವಿಚಾರಗಳಲ್ಲಿ ನಾವು ಬೇಗ ಗಮನ ವಹಿಸಿ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುತ್ತೇವೆ ಆದರೆ ಚಿಕ್ಕಪುಟ್ಟ ಸಮಸ್ಯೆಗಳು ನಮಗೆ ಗೊತ್ತಾಗೋದು ಇಲ್ಲ ಹಾಗೂ ಚಿಕ್ಕಪುಟ್ಟ ಸಮಸ್ಯೆಗಳಿಗೆಲ್ಲ ನಾವು ದೊಡ್ಡ ದೊಡ್ಡ ಪರಿಹಾರ ಮಾಡಿಕೊಳ್ಳುವುದೇನು ಬೇಡ.
ಇವತ್ತಿನ ಲೇಖನಿಯಲ್ಲಿ ಊಟ ಮಾಡುವಾಗ ನಾವು ನೀರು ಕುಡಿಯಬೇಕೇ ಅಥವಾ ಊಟದ ನಂತರ ನೀರು ಕುಡಿಬೇಕು ಎಂಬುದರ ಮಾಹಿತಿ ಕುರಿತು ಮಾತನಾಡುತ್ತಿದ್ದೇವೆ ಈಗಾಗಲೇ ಬಹಳಷ್ಟು ಮಾಹಿತಿಗಳಲ್ಲಿ ನೀವು ಕೇಳಿದ್ದೀರಾ ಯಾವಾಗ ಎಷ್ಟು ನೀರು ಕುಡಿಯಬೇಕು ಎಂದು. ವೈದ್ಯರೂ ಸಹ ಕೆಲವೊಂದು ಮಾಹಿತಿಯನ್ನು ನಿಮಗೆ ನೀಡಿರುತ್ತಾರೆ ಯಾವಾಗ ನೀರು ಕುಡಿಬೇಕು ಯಾವ ಸಮಯದಲ್ಲಿ ನೀರು ಕುಡಿಯಬೇಕು ಎಂದು. ಆದರೆ ಆಯುರ್ವೇದ ಏನು ಹೇಳುತ್ತೆ? ಅಂದಿನ ಕಾಲದಲ್ಲಿ ಹಿರಿಯರು ಏನನ್ನು ಪಾಲಿಸುತ್ತಿದ್ದರು ಅನ್ನೋದನ್ನು ಕೂಡ ತಿಳಿಯೋಣ ಬನ್ನಿ.
ಫ್ರೆಂಡ್ಸ್ ಅಂದಿನ ಕಾಲದಲ್ಲಿಯೇ ನಮ್ಮ ಗುರು ಹಿರಿಯರು ಗಳು ಎಷ್ಟು ಆರೋಗ್ಯಕರ ಅದಕ್ಕೆ ಮೂಲ ಕಾರಣ ಅವರ ಆಹಾರ ಪದ್ಧತಿ. ಹಾಗಾಗಿ ಅಂದಿನ ಕಾಲದ ಆಹಾರ ಪದ್ಧತಿಯ ಬಗ್ಗೆ ಹೇಳುವುದಾದರೆ ಎಷ್ಟು ತಿನ್ನುತ್ತಿದ್ದರು, ಅಷ್ಟೇ ದೈಹಿಕ ಶ್ರಮ ಹಾಕುತ್ತಿದ್ದರು, ಹಾಗಾಗಿ ಅವರ ಆರೋಗ್ಯ ಚೆನ್ನಾಗಿರುತ್ತಿತ್ತು. ಇಂದು ನಾವು ನೀರು ಕುಡಿಯುವ ಸಮಯ ಯಾವುದಿರಬೇಕು ಎಂಬುದರ ಕುರಿತು ತಿಳಿಯೋಣ ಬನ್ನಿ.
ಊಟ ಮಾಡುವಾಗ ಮಧ್ಯೆ ಮಧ್ಯೆ ನೀರು ಕುಡಿಯುತ್ತಿದ್ದೀರಾ ಹೀಗೆ ಮಾಡುವುದಾದರೆ ಅದು ತಪ್ಪು ಅಂತ ಯಾರಾದರೂ ನಿಮಗೆ ಹೇಳಿದ್ದಾರಾ ಹಾಗಾಗಿ ನೀವು ಈ ಪದ್ದತಿಯನ್ನ ಬಿಟ್ಟಿದ್ದೀರಾ? ಈ ರೂಢಿಯನ್ನು ನೀವು ಬಿಟ್ಟಿದ್ದರೆ ಇಂದಿನಿಂದಲೇ ಅದನ್ನು ರೂಢಿಸಿಕೊಳ್ಳಿ. ಯಾಕೆಂದರೆ ನೀವು ಊಟ ಮಾಡುವ ಸಮಯದಲ್ಲಿ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು ನಿಮ್ಮ ಜೀರ್ಣಶಕ್ತಿ ಅನ್ನೂ ವೃದ್ಧಿ ಮಾಡುತ್ತದೆ.
ಆದರೆ ಊಟದ ಬಳಿಕ ಒಂದೇ ಸಮ ತಂಬಿಗೆಗಟ್ಟಲೆ ನೀರು ಕುಡಿಯಬೇಡಿ. ಯಾಕೆ ಅಂತೀರಾ ಅದಕ್ಕೂ ಕಾರಣವಿದೆ ಆಯುರ್ವೇದ ಹೇಳುತ್ತದೆ ನೀವು ಊಟ ಮಾಡುವಾಗ ಮಧ್ಯೆ ಮಧ್ಯೆ ನೀರು ಕುಡಿಯುವುದರಿಂದ ಅದು ಅಮೃತ ಸಮಾನ ಎಂದು ಆದರೆ ಊಟದ ನಂತರ ಒಂದೇ ಸಮನೆ ಹೆಚ್ಚು ನೀರು ಕುಡಿದು ಬಿಟ್ಟರೆ ನಿಮ್ಮ ಜೀರ್ಣ ಶಕ್ತಿ ಸರಿಯಾಗಿ ಆಗುವುದಿಲ್ಲ.
ಊಟ ಮಾಡಿದ ಬಳಿಕ ಒಂದೂವರೆ ಗಂಟೆಗಳ ಕಾಲ ನಿಮ್ಮ ಶರೀರದಲ್ಲಿ ಜೀರ್ಣ ಕ್ರಿಯೆ ನಡೆಯುತ್ತದೆ ಆ ಜೀರ್ಣಕ್ರಿಯೆ ನಡೆಯುವ ಸಮಯದಲ್ಲಿ ನಿಮಗೆ ಬಲ ಸಿಗುತ್ತದೆ. ಆ ಸಮಯದಲ್ಲಿ ನೀವು ಹೆಚ್ಚು ಹೆಚ್ಚು ನೀರು ಕುಡಿದು ಬಿಟ್ಟರೆ ಜೀರ್ಣಕ್ರಿಯೆ ಸರಿಯಾಗಿ ಆಗದೇ ಹೋಗಬಹುದು ಉದಾಹರಣೆಗೆ ನೀವು ಅಡುಗೆ ಮಾಡುವಾಗ ಮಸಾಲೆ ಪದಾರ್ಥಗಳನ್ನು ಆಗಲಿ ಅಥವಾ ದೋಸೆ ಹಿಟ್ಟಿಗಾಗಿ ಅಕ್ಕಿಯನ್ನು ರುಬ್ಬುವಾಗ, ಮಧ್ಯೆ ಮಧ್ಯೆ ನೀರು ಹಾಕಿ ಅಕ್ಕಿಯನ್ನು ರುಬ್ಬುತ್ತಾರೆ. ಆಗ ಮಾತ್ರ ಅದು ನುಣ್ಣಗೆ ಹಿಟ್ ಆಗುತ್ತದೆ, ಇಲ್ಲವಾದರೆ ಅಕ್ಕಿ ತರಿತರಿಯಾಗಿರುತ್ತದೆ ಹಾಗೆ ನಮ್ಮ ಜೀರ್ಣಕ್ರಿಯೆಯು ಕೂಡ ನಾವು ಊಟ ಮಾಡುವಾಗ ಮಧ್ಯೆ ಮಧ್ಯೆ ಸ್ವಲ್ಪವೇ ನೀರು ಕುಡಿಯಬೇಕು.
ಹೀಗೆ ನಿಮ್ಮ ಆಹಾರ ಸೇವನೆಯ ಸಮಯದಲ್ಲಿ ಸ್ವಲ್ಪ ಸ್ವಲ್ಪವೇ ನೀರು ಕುಡಿಯುವುದು ಅಮೃತಕ್ಕೆ ಸಮಾನ ಎಂದು ತಿಳಿಸುತ್ತದೆ ಆಯುರ್ವೇದ. ಹಾಗಾಗಿ ಊಟದ ಸಮಯದಲ್ಲಿ ಯಾವಾಗ ನೀರು ಕುಡಿಯಬೇಕು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಿ ಆಯುರ್ವೇದ ಪ್ರಕಾರವಾಗಿ ನೀರು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.