ಕೈ ಕಾಲು ಉರಿ , ಅಂಗಾಲು ಸೆಳೆತ , ಕಣ್ಣು ಉರಿ , ಬೆಳಿಗ್ಗೆ ನಿಮ್ಮ ಹೊಟ್ಟೆಯನ್ನ ಕ್ಲೀನ್ ಆಗಿ ಇಟ್ಟುಕೊಳ್ಳಬೇಕಾದರೆ ಒಂದು ಚಮಚ ಈ ಮನೆಮದ್ದು ಮಾಡಿ ನೋಡಿ..

364

ನಮಸ್ಕಾರಗಳು ಓದುಗರೆ ಈ ಅಂಟು ಎಂಬ ಹೆಸರನ್ನ ಕೇಳಿದ್ದೀರಾ ಅಲ್ವಾ ಹೌದು ಇದನ್ನು ಸಾಕಷ್ಟು ತಿಂಡಿ ಪದಾರ್ಥಗಳಲ್ಲಿ ಹಾಗೂ ನಾವುಗಳು ತಿನ್ನುವ ಚಾಕ್ಲೇಟ್ ಆಗಲಿ ಇನ್ನಿತರೆ ಆಹಾರ ಪದಾರ್ಥಗಳಲ್ಲಿ ಕೂಡ ಬಳಕೆ ಮಾಡುತ್ತಾರೆ. ಆದರೆ ನಮಗೆ ಅದರ ಪರಿಚಯ ಇರುವುದಿಲ್ಲ ಆಹಾರ ಪದಾರ್ಥಗಳಲ್ಲಿ ಏನೆಲ್ಲಾ ಹಾಕಿರುತ್ತಾರೆ ಎಂಬುದು ಕೂಡ ನಮಗೆ ಗಮನ ಇರುವುದಿಲ್ಲ.

ಆದರೆ ಈ ಅಂಟು ಎಂಬುದು ಮಾತ್ರ ಆರೋಗ್ಯಕ್ಕೆ ಬಹಳ ಲಾಭಗಳನ್ನ ಕೊಡುತ್ತದೆ. ಹೌದು ಸ್ವೀಟು ಗಳಲ್ಲಿಯೂ ಕೂಡ ಬಳಕೆ ಮಾಡುವ ಈ ಅಂಟು ಎಂಬ ಪದಾರ್ಥದಲ್ಲಿ 2 ವಿಧವಿರುತ್ತದೆ. ಸಣ್ಣದಾಗಿ ಕಲ್ಲುಸಕ್ಕರೆಯ ರೀತಿ ಒಂದು ಬಗೆಯ ಅಂಟು ಇದ್ದರೆ ಬಾದಾಮಿಯ ರೀತಿಯಲ್ಲಿ ಈ ಬಗೆಯ ಅಂಟು ಸಹ ಇರುತ್ತದೆ. ನಾವು ಈ ದಿನದ ಲೇಖನಿಯಲ್ಲಿ ಈ ಬಾದಾಮಿಯ ರೀತಿಯಲ್ಲಿ ಇರುವ ನಂಟಿನ ಬಗ್ಗೆ ನಿಮಗೆ ಮಾಹಿತಿ ತಿಳಿಸಿಕೊಡಲು ಹೊರಟಿದ್ದೇವೆ. ಹೌದು ಇದನ್ನು ಹೆಚ್ಚಾಗಿ ಬಾದಾಮಿ ಅಂಟು ಅಂತಾನೆ ಕರೆಯಲಾಗುತ್ತದೆ, ಈ ಅಂಟು ಪದಾರ್ಥವು ಇವತ್ತಿನ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ ಆನ್ ಲೈನ್ ಮೂಲಕವೂ ಕೂಡಾ ನೀವು ಇದನ್ನು ತರಿಸಿಕೊಳ್ಳಬಹುದು.

ಈ ಅಂಟಿನ ಪದಾರ್ಥವನ್ನ ಚಿಕ್ಕವರಿಂದ ದೊಡ್ಡವರವರೆಗೂ ಸಲ್ಲಿಸಬಹುದು ಹಾಗೂ ಹೆಣ್ಣುಮಕ್ಕಳು ತಾಯಿಯಾದ ಮೇಲೆ ಅಂದರೆ ದಸರೆಯ ಸಮಯದಲ್ಲಿ ಅಂಟು ಎಂಬ ಸಾಂಪ್ರದಾಯಿಕ ಸಿಹಿ ಯೊಂದನ್ನು ಕೂಡಾ ತಯಾರಿಸುತ್ತಾರೆ ಈ ಅಂಟಿನ ಜೊತೆಗೆ ಒಣ ಹಣ್ಣುಗಳನ್ನು ಸೇರಿಸಿ ತುಪ್ಪ ಸೇರಿಸಿ ರುಚಿಕರವಾದ ಸಿಹಿಯೊಂದನ್ನ ಮಾಡ್ತಾರೆ. ಇದರಿಂದ ಮೂಳೆಗಳು ಬಲಗೊಳ್ಳುತ್ತವೆ ಅಷ್ಟೆ ಅಲ್ಲಾ ನಿಮಗೇನಾದರೂ ಮಂಡಿನೋವು ಕೀಲುನೋವು ಸಮಸ್ಯೆ ಇದ್ದರೆ ಈ ಅಂಟಿನಿಂದ ಮಾಡುವ ಈ ಸಿಹಿಯನ್ನ ಮಾಡಿ ತಿನ್ನಿ.

ಈಗ ಈ ಮಾಹಿತಿ ಮೂಲಕ ನಾವು ಅಂಟಿನ ಮಹತ್ವವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ, ಹೌದು ಸಾಮಾನ್ಯವಾಗಿ ಮನೆಯಲ್ಲಿ ನಾವು ಬಹಳಷ್ಟು ಪದಾರ್ಥಗಳನ್ನು ಸಿಹಿ ಮಾಡುವುದಕ್ಕೆ ಬಳಕೆ ಮಾಡ್ತೇವೆ. ಅದೇ ವೇಳೆ ಈ ಅಂಟನ್ನು ಬಳಕೆ ಮಾಡುವ ಮೂಲಕ ಕೂಡ ಸಿಹಿ ಮಾಡಿ ಮನೆಮಂದಿಯೆಲ್ಲಾ ತಿನ್ನಬಹುದು.

ಬಾಯಿಯಲ್ಲಿ ಹುಣ್ಣು ಆಗಿದ್ದರೆ ಅಂಥವರು ನೋಡಿ ಈ ಅಂಟಿನ ಪ್ರಯೋಜನವನ್ನು ಪಡೆದುಕೊಳ್ಳಿ ,ಇದನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಮಯದಲ್ಲಿ ಸೇವನೆ ಮಾಡುವುದರಿಂದ ದೇಹದ ಉಷ್ಣಾಂಶ ನಿಯಂತ್ರಣದಲ್ಲಿ ಇರುತ್ತದೆ ಹಾಗೆ ಬಾಯಿ ಹುಣ್ಣಿನ ಸಮಸ್ಯೆ ಕೂಡ ಬಹಳ ಬೇಗ ಶಮನಗೊಳ್ಳುತ್ತದೆ.ಈ ಬಾದಾಮಿ ಅಂಟನ್ನು ನೀರಿನಲ್ಲಿ ನೆನೆಸಿದಾಗ ಅದು ಜಲ್ಲಿ ರೀತಿ ಆಗುತ್ತದೆ ಬಳಿಕ ಅದನ್ನು ಬೆಳಿಗ್ಗೆ ನೀವು ನೀರಿನೊಂದಿಗೆ ಮಿಶ್ರ ಮಾಡಿ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಮಾಡಿ ತಿನ್ನಬಹುದು. ಇದರಿಂದ ಮಲಬದ್ಧತೆ ಮೂಲವ್ಯಾಧಿ ಅಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ಮಧುಮೇಹಿಗಳು ಕೂಡ ಈ ಅಂಟಿನ ಸೇವನೆ ಮಾಡಬಹುದು ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ, ಹಾಗೆ ತಾಯಿಯಾಗುತ್ತಿರುವ ಮಹಿಳೆಯರು ವೈದ್ಯರ ಸಲಹೆ ಮೇಲೆ ಈ ಅಂಟಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು.ಯಾರಿಗೆ ಪೀರಿಯಡ್ಸ್ ಸಮಯದಲ್ಲಿ ಬಹಳ ಹೊಟ್ಟೆ ನೋವು ಇರುತ್ತದೆ ಕೈಕಾಲು ಎಳೆತ ಇರುತ್ತದೆ ಅಂಥವರಿಗೆ ಈ ಅಂಟು ಪ್ರಯೋಜನಕಾರಿ ಹಾಗೆ ಹೊಟ್ಟೆನೋವು ಅಂತಹ ಸಮಸ್ಯೆಗಳಿಗೂ ಕೂಡ ಈ ಅಂಟು ಬಹಳ ಬೇಗ ಉಪಶಮನವನ್ನು ನೀಡುತ್ತದೆ.

ಹಾಗಾಗಿ ನಿಮಗೆ ಏನೇ ಸಮಸ್ಯೆಗಳಿರಲಿ ಮುಖ್ಯವಾಗಿ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಅಥವಾ ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಅನ್ನುವ ಕಾಳಜಿ ಇದ್ದರೆ, ಈ ಅಂಟಿನ ಪ್ರಯೋಜನವನ್ನು ಕೂಡ ಪಡೆದುಕೊಳ್ಳಿ ಇದೊಂದು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವ ಪದಾರ್ಥವಾಗಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಇದು ನೈಸರ್ಗಿಕ ಪದಾರ್ಥ ಕೂಡ ಆಗಿದೆ.