ಈ ಗಿಡ ನಿಮ್ಮ ಮನೆಯಲ್ಲಿ ನೆಟ್ಟರೆ ಸಾಕು ಯಾವ ಹಾವುಗಳು ಸಹ ನಿಮ್ಮ ಮನೆಯ ಅಕ್ಕಪಡದಲ್ಲೂ ಕೂಡ ಸುಳಿದಾಡುದಿಲ್ಲ…

268

ಇದೊಂದು ಗಿಡಾ ನಿಮ್ಮ ಮನೆಯ ಸುತ್ತ ಇದ್ದರೆ ಸಾಕು ಯಾವ ಹಾವುಗಳು ನಿಮ್ಮ ಮನೆಯ ಬಳಿ ಸುಳಿಯುವುದಿಲ್ಲಾ…ನಮಸ್ಕಾರಗಳು ಪ್ರಿಯ ಓದುಗರೆ ಹಳ್ಳಿಯಾಗಲೀ ಪ್ಯಾಟೆಯಾಗಲೀ ನಾವು ನಮ್ಮ ಮನೆಯ ಅಕ್ಕಪಕ್ಕ ಅಥವಾ ಬೇಸಿಗೆ ಸಮಯದಲ್ಲಿ ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ಹಾವು ಕಾಣಿಸಿಕೊಳ್ಳುವುದನ್ನು ನೋಡಿರುತ್ತೇವೆ ಅಥವಾ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಂತಹ ಮನೆ ಗೆ ಹಾವು ಸೇರಿಕೊಳ್ಳುವುದು ಇಂತಹದ್ದೆಲ್ಲಾ ನೋಡಿರುತ್ತೇವೆ ಕೇಳಿರುತ್ತೇವೆ ಈ ಘಟನೆಗಳು ನಿಮ್ಮ ಜೀವನದಲ್ಲೂ ಕೂಡ ನೆಡದಿದ್ದರೆ ಅಥವಾ ನಿಮ್ಮ ಮನೆಯಲ್ಲಿಯೆ ಇಂಥ ಘಟನೆ ನಡೆದಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತೆ ಇಂತಹ ಸ್ಥಿತಿ ಎಂದಿಗೂ ಬಾರದಿರುವ ಹಾಗೆ ನೀವು ಎಚ್ಚರ ವಹಿಸಬೇಕಾದಲ್ಲಿ ಈ ಪುಟದಲ್ಲಿ ತಿಳಿಸುವ ಈ ಪರಿಹಾರವನ್ನು ಮಾಡಿ ಸಾಕು.

ಹೌದೋ ಅಲ್ಲವೋ ಹಳ್ಳಿಗಳಲ್ಲಿಯೇ ಮನೆಯ ಅಕ್ಕಪಕ್ಕದಲ್ಲಿ ಯಾಗಲಿ ಅಥವಾ ಮನೆಯ ಒಳಗೆ ಆಗಲಿ ಹಾವುಗಳು ಸೇರಿಕೊಳ್ಳಬಾರದು ಹಾವುಗಳು ಬರಬಾರದು ಅಂತ ಮನೆಯ ಸುತ್ತಮುತ್ತ ಕೆಲವೊಂದು ಗಿಡಗಳನ್ನು ಬೆಳೆಸುತ್ತಿದ್ದರು ಅಂತಹ ಗಿಡದಲ್ಲಿ ಈ ನಾಗರ ನಂಜಿನ ಗಿಡ ಕೂಡ ಒಂದಾಗಿದೆ ಇದು ಎಲ್ಲಿ ಇರುತ್ತದೆಯೋ ಅಲ್ಲಿ ಅಕ್ಕಪಕ್ಕದಲ್ಲಿ ಎಂದಿಗೂ ಯಾವದೇ ಕಾರಣಕ್ಕೂ ಹಾವುಗಳು ಸುಳಿಯುವುದಿಲ್ಲ.

ಹಾಗಾದರೆ ಯಾಕೆ? ಹೌದು ಇಂತಹದೊಂದು ಸಂಶಯ ನಿಮ್ಮನ್ನು ಕೂಡ ನೋಡುತ್ತದೆ ಹಾಗಾದರೆ ಯಾಕೆ ಈ ಗಿಡವನ್ನು ಮನೆಯ ಅಕ್ಕಪಕ್ಕದಲ್ಲಿ ಬೆಳೆಸಬೇಕು ಮತ್ತು ಈ ಗಿಡ ಇದ್ದಲ್ಲಿ ಯಾಕೆ ಹಾವುಗಳು ಹತ್ತಿರ ಸುಳಿಯುವುದಿಲ್ಲ ಅಂತ ನೀವು ಅಂದುಕೊಳ್ಳುತ್ತಿದ್ದರೆ ನಿಮ್ಮ ಸಂಶಯ ಸರಿಯಾಗಿದೆ ಹಾಗೆ ನಿಮ್ಮ ಈ ಸಂಶಯಕ್ಕೆ ಉತ್ತರ ಏನೆಂದರೆ ನಾಗರ ನಂಜಿನ ನೀಡದ ವಿಶೇಷತೆಯೆನೆಂದರೆ ಈ ಗಿಡದ ಸೊಪ್ಪು ಹೂವುಗಳಿಂದ ವಿಶೇಷವಾದ ಪರಿಮಳ ಬರುತ್ತದೆ ಆ ಪರಿಮಳವು ನಾಗರಹಾವಿಗೆ ಆಕಡೆ ಇನ್ನಿತರ ಹಾವುಗಳಿಗೆ ಆಗುವುದಿಲ್ಲ ಹಾಗಾಗಿ ಈ ಗಿಡ ಇರುವ ಕಡೆ ಇದರ ಅಕ್ಕಪಕ್ಕದಲ್ಲಿ ಯಾವುದೇ ಕಾರಣಕ್ಕೂ ಹಾವುಗಳು ಸುಳಿಯುವುದಿಲ್ಲ.

ಆದಕಾರಣ ಈ ಗಿಡಗಳನ್ನು ಹಳ್ಳಿಗಳಲ್ಲಿ ತಮ್ಮ ಹಿತ್ತಲಿನಲ್ಲಿ ಮತ್ತು ಮನೆಯ ಅಕ್ಕಪಕ್ಕದಲ್ಲಿ ಬೆಳೆಸುತ್ತಿದ್ದರು ಕೇವಲ ಇದಷ್ಟೇ ಪ್ರಯೋಜನವಲ್ಲ ನಾಗರ ನಂಜಿನ ಗಿಡದಿಂದ ಮತ್ತೊಂದು ಪ್ರಯೋಜನವಿದೆ ಹಾಗೂ ಉಪಯುಕ್ತ ಲಾಭವೂ ಕೂಡ ಇದೆ. ಅದೇನು ಅಂತೀರಾ ಈ ಗಿಡವನ್ನು ನಿಮ್ಮ ಮನೆ ಸುತ್ತಮುತ್ತ ಬಳಸುವುದರಿಂದ ಪ್ರಕೃತಿಗೂ ಒಳ್ಳೆಯದು ಹಾಗೂ ಈ ಗಿಡ ನಿಮ್ಮ ಮನೆಯ ಅಂಗಳದಲ್ಲಿ ಇದ್ದರೆ, ಇದರಿಂದ ವಿಶೇಷ ಮನೆಮದ್ದಿನ ಮಾಡಿಕೊಳ್ಳುವ ಮೂಲಕ ನಿಮಗೆ ಕಾಡುವ ಶೀತ ಕೆಮ್ಮಿನಂತಹ ಸಮಸ್ಯೆಗೆ ಅಥವಾ ಕೆಲವರಿಗೆ ದೇಹದ ಉಷ್ಣಾಂಶ ಹೆಚ್ಚಾಗಿ ಸರ್ಪದ ಉಣ್ಣು ಅನ್ನುವ ಸಮಸ್ಯೆ ಕಾಡುತ್ತದೆ ಅಂಥವರು ಕೂಡ ಈ ಗಿಡದ ಎಲೆಗಳ ಪ್ರಯೋಜನವನ್ನು ಪಡೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹೌದು ಈ ಗಿಡದ ಎಲೆಗಳ ಪ್ರಯೋಜನದಿಂದ ನೀವು ಶೀತ ಕೆಮ್ಮಿನಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗೆ ಈ ಮೊದಲೇ ಹೇಳಿದಂತೆ ಸರ್ಪವನ್ನು ಅನ್ನುವ ಸಮಸ್ಯೆಯಿಂದ ಕೂಡ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು ಕುರುಚಲು ಗಿಡದಂತೆ ಕಂಡರೂ ಈ ಗಿಡ ಅಪಾರವಾದ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಈ ಗಿಡಮೂಲಿಕೆಯು ಅಗಾಧವಾದ ಔಷಧಿ ಗುಣವನ್ನು ಹೊಂದಿರುವುದರಿಂದ, ಇದನ್ನು ಹೇಗೆ ಬಳಕೆ ಮಾಡಬೇಕು ಅಂದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಇದಕ್ಕೆ 1ಗ್ರಾಂ ಮೆಣಸಿನ ಕಾಳು ಹಾಗೂ 1ಗ್ರಾಂ ಬೆಳ್ಳುಳ್ಳಿ ತೆಗೆದುಕೊಂಡು ಈ 3 ಪದಾರ್ಥಗಳನ್ನು ಜಜ್ಜಿ ಪುಡಿ ಮಾಡಿಕೊಳ್ಳಬಹುದು ಅಥವಾ ರುಬ್ಬಿಕೊಳ್ಳಬಹುದು.

ನಂತರ ಇದನ್ನು ಉಂಡೆ ಕಟ್ಟಿ ಪ್ರತಿದಿನ ಒಂದರಂತೆ ಸೇವನೆ ಮಾಡಿ ಹೆಚ್ಚು ಹೆಚ್ಚು ನೀರು ಕುಡಿಯುತ್ತ ಬಂದರೆ ಶೀತ ಕೆಮ್ಮು ಬಾಧೆ ಮಾತ್ರವಲ್ಲ ದೇಹದ ಉಷ್ಣಾಂಶ ಏರಿದ್ದರೆ ಅದು ನಿಯಂತ್ರಣಕ್ಕೆ ಬರುತ್ತದೆ ಹಾಗೂ ಸರ್ಪುಣ್ಣು ಅನ್ನು ಅಥವಾ ನರಗಳ ದೌರ್ಬಲ್ಯ ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.