ಈ ಆಹಾರವನ್ನ ತಿನ್ನೋದ್ರಿಂದ ಶುಗರ್ ತುಂಬಾ ಕಂಟ್ರೋಲ್ ಗೆ ಬರುತ್ತದೆ ..ಹಾಗಾದ್ರೆ ಇದರ ಬಗ್ಗೆ ತಿಳಿದುಕೊಳ್ಳಿ…

254

ಸಕ್ಕರೆ ಕಾಯಿಲೆ ಬಂದ್ರೆ ‘ಮುಗ್ದೇ ಹೋಯ್ತು’ ಜೀವನ ಅಂತ ಅಂದುಕೊಳ್ಳುವವರು ಮತ್ತೆ ನಿಮ್ಮ ಜೀವನವನ್ನು ಮುಂಚೆಯಂತೆ ನಡೆಸುವುದಕ್ಕಾಗಿ ಉತ್ತಮ ಜೀವನ ಶೈಲಿಯ ಜೊತೆಗೆ ನಿಮ್ಮ ಉತ್ತಮ ಆಹಾರ ಪದ್ದತಿಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳಿ ಸಾಕು, ಸಕ್ಕರೆ ಕಾಯಿಲೆಯಿಂದ ಮುಂದೆ ಬರುವ ಯಾವ ಸಮಸ್ಯೆಗಳು ನಿಮಗೆ ತೊಂದರೆ ಉಂಟು ಮಾಡುವುದಿಲ್ಲ.

ಹೌದು ಈ ಸಕ್ಕರೆ ಕಾಯಿಲೆ ಎಂಬುದು ಹೇಳಿದಷ್ಟು ಸರಳವಾಗಿರುವುದಿಲ್ಲ ಸುಲಭವಾಗಿರುವುದಿಲ್ಲ ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ಕೆಲವರು ಇದನ್ನು ಮಾತ್ರ ತೆಗೆದುಕೊಂಡು ಎದುರಿಸಬಹುದು ಅಂದುಕೊಂಡಿರುತ್ತಾರೆ. ಇನ್ನೂ ಕೆಲವರು ಸಕ್ಕರೆ ಕಾಯಿಲೆ ಬರುತ್ತಿದ್ದ ಹಾಗೆ ನಮ್ಮ ಜೀವಕ್ಕೆ ಎಲ್ಲಿ ಹಾನಿಯುಂಟುಮಾಡುತ್ತವೆ ತೊಂದರೆ ಉಂಟು ಮಾಡಿತ್ತು ಈ ಕಾಯಿಲೆ ಅಂತ ತಿನ್ನೋದನ್ನಾ ಬಿಡ್ತಾರೆ.

ಇನ್ನೂ ತಿನ್ನುವ ವಯಸ್ಸಿನಲ್ಲಿಯೇ ಇತ್ತೀಚಿನ ದಿನಗಳಲ್ಲಿ ಈ ಡಯಾಬಿಟಿಸ್ ಅನ್ನುವ ಸಮಸ್ಯೆ ಕಾಡುತ್ತಿರುವಾಗ ತಿನ್ನುವ ಹಾಗಿಲ್ಲ, ಬಿಡುವ ಹಾಗಿಲ್ಲ ಎನ್ನುವ ಆಕೆಯ ದೊಡ್ಡ ಸಮಸ್ಯೆ ಉಂಟು ಮಾಡುತ್ತದೆ ಹಾಗಾಗಿ ಡಯಾಬಿಟಿಸ್ ಗೆ ಹೆದರದಿರಿ, ಅದಕ್ಕೆ ಮಾಡಬೇಕಾದ ಪರಿಹಾರದ ಬಗ್ಗೆ ತಿಳಿದುಕೊಂಡು ಪಾಲಿಸುತ್ತಾ ಬನ್ನಿ ನಿಮ್ಮ ಆರೋಗ್ಯವನ್ನು ವೃತ್ತಿ ಮಾಡಿಕೊಳ್ಳಿ.

ಮೊದಲು ಸಕ್ಕರೆ ಕಾಯಿಲೆ ಬಂದಾಗ ಏನೆಲ್ಲ ಮಾಡಬೇಕು ಎಂಬುದನ್ನು ತಿಳಿದುಕೊಂಡು ಬಿಡೋಣ ಆ ಬಳಿಕ ಸಕ್ಕರೆ ಕಾಯಿಲೆ ಕುರಿತು ಇನ್ನಷ್ಟು ಮಾಹಿತಿಯನ್ನು ಕೂಡ ತಿಳಿಯೋಣ.ಸಕ್ಕರೆ ಕಾಯಿಲೆ ಬಂದಾಗ ಕೆಲವೊಂದು ಹಣ್ಣುಗಳು ಕೆಲವೊಂದು ಪದಾರ್ಥಗಳನ್ನು ನಾವು ದಿನನಿತ್ಯ ಆಹಾರ ಪದ್ಧತಿಯಲ್ಲೇ ಬಳಕೆ ಮಾಡಲೇಬೇಕಾಗಿರುತ್ತದೆ ಅದರಲ್ಲಿಯೂ ಮುಖ್ಯವಾಗಿ ‘ಹಾಗಲಕಾಯಿ’.ಹೌದು ಹಾಗಲಕಾಯಿಯಲ್ಲಿ ಉತ್ತಮ ಪ್ರೊಟೀನ್ ಹಾಗೂ ವಿಟಮಿನ್ ಸಿ ಜೀವಸತ್ವವಿದೆ ಇದು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಡಯಾಬಿಟಿಸ್ ಅನ್ನುವ ಸಮಸ್ಯೆಯನ್ನ ನಿಯಂತ್ರಣದಲ್ಲಿ ಇಡುತ್ತದೆ ಹಾಗೂ ರಕ್ತವನ್ನು ಶುದ್ಧಿ ಮಾಡಿ ಆರೋಗ್ಯವನ್ನು ವೃದ್ಧಿ ಮಾಡಲು ಸಹಕಾರಿಯಾಗಿರುತ್ತೆ.

ಎರಡನೆಯದಾಗಿ ಈ ‘ಮೆಂತ್ಯೆ ಕಾಳುಗಳು’, ಎಲ್ಲರ ಮನೆಯಲ್ಲಿಯೂ ಮೆಂತ್ಯೆ ಕಾಳುಗಳು ಇದ್ದೇ ಇರುತ್ತದೆ ಕಡಿಮೆ ಬೆಲೆ ಆದರೂ ಇದರ ಆರೋಗ್ಯಕರ ಪ್ರಯೋಜನಗಳು ಅಪಾರವಾದದು. ಅಗಾಧವಾದ ಆರೋಗ್ಯಕರ ಲಾಭಗಳನ್ನು ಹೊಂದಿರುವ ಮೆಂತೆ ಕಾಳುಗಳನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದರ ನೆನೆಸಿದ ನೀರಿನ ಜೊತೆಗೆ ಕಾಳುಗಳನ್ನ ಕೂಡ ತಿನ್ನುವುದರಿಂದ, ರಕ್ತ ಸುದ್ದಿ ಮಾಡುವುದರ ಜೊತೆಗೆ ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

ಆದರೆ ಆಯುರ್ವೇದ ಹೇಳುತ್ತಾ ನಿಮಗೇನಾದರೂ ಮಲಬದ್ಧತೆ ಸಮಸ್ಯೆಯಿದ್ದರೆ ಅಂಥವರು ಈ ಮೆಂತೆಕಾಳುಗಳನ್ನು ಅಷ್ಟಾಗಿ ಸೇವಿಸದಿರುವುದು ಉತ್ತಮ ಎಂದು ಹಾಗಾಗಿ ನಿಮಗೇನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ಅಂಥವರು ಆದಷ್ಟು ಕಡಿಮೆ ಪ್ರಮಾಣದಲ್ಲಿ ಮೆಂತೆ ಕಾಳುಗಳನ್ನು ಬಳಸಿ.ವಿಟಮಿನ್ ಸಿ ಜೀವಸತ್ವವಿರುವಂತಹ ಕಿತ್ತಳೆ ಹಣ್ಣು ಮೂಸಂಬಿ ಹಣ್ಣು ಆ್ಯಪಲ್ ಸೀಬೆಹಣ್ಣು ನೇರಳೆ ಹಣ್ಣು ಆಮ್ಲ ಅಂದರೆ ನೆಲ್ಲಿಕಾಯಿ ಪರಂಗಿ ಹಣ್ಣು ಇಂತಹ ಹಣ್ಣುಗಳನ್ನು ಪ್ರತಿದಿನ ತಿನ್ನಿ, ಅದರಲ್ಲಿಯೂ ಬೆಳಿಗ್ಗೆ ತಿಂಡಿ ನಂತರ ಈ ಹಣ್ಣುಗಳನ್ನು ತಿನ್ನುವುದು ಇನ್ನಷ್ಟು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ.

ಸಕ್ಕರೆ ಕಾಯಿಲೆಯಿಂದ ಬಳಲುವವರು ಬೇಯಿಸಿದ ಮೊಟ್ಟೆಯನ್ನು ಕೂಡ ನಿಯಮಿತವಾಗಿ ತಿನ್ನಬಹುದು, ಇದರಲ್ಲಿ ಇರುವ ಪ್ರೋಟಿನ್ ಅಂಶ ಆರೋಗ್ಯಕ್ಕೆ ಹೆಚ್ಚಿನ ಪುಷ್ಟಿ ಅನ್ನು ನೀಡಿ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಒಳ್ಳೆಯ ಆರೋಗ್ಯವನ್ನು ಕೊಡಲು ಸಹಕಾರಿಯಾಗಿದೆ.ಇನ್ನೂ ಹಸಿ ತರಕಾರಿಗಳಾದ ಗೆಡ್ಡೆಕೋಸು ಕ್ಯಾರೋಟ್ ಬೀಟ್ ರೂಟ್ ಇಂತಹ ತರಕಾರಿಗಳನ್ನು ತಿನ್ನುವುದು ಒಳ್ಳೆಯದು ಹಾಗೆ ಹಸಿರು ಸೊಪ್ಪುಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಾಗಿರುತ್ತೆ.