ಮೂರು ವಾರಕ್ಕೆ ಒಂದು ಸಾರಿ ಆದರೂ ಸರಿ ಇದನ್ನ ಕೂದಲಿಗೆ ಹಚ್ಚಿ ಸಾಕು , ನಿಮ್ಮ ಜೀವನದಲ್ಲಿ ಬಿಳಿಕೂದಲು ಆಗೋದೇ ಇಲ್ಲ ..ನಿಮ್ಮ ಕೂದಲಿನ ಬುಡ ಯಾವಾಗಲು ಗಟ್ಟಿಯಾಗಿ ಇರುತ್ತೆ …

251

ಇದನ್ನು ತಿಂಗಳಿಗೊಮ್ಮೆ ನಿಮ್ಮ ಕೂದಲಿಗೆ ಹಚ್ಚುತ್ತ ಬಂದರೆ ಸಾಕು ಕೂದಲ ಬುಡ ಸದೃಢವಾಗುತ್ತೆ, ಜೊತೆಗೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ ಹಾಗೆ ವಯಸ್ಸಾದರೂ ಕೂದಲು ಕಪ್ಪಾಗುವ ಸಮಸ್ಯೆ ಉಂಟಾಗುವುದಿಲ್ಲಾ…ನಮಸ್ಕಾರಗಳು ಪ್ರಿಯ ಓದುಗರೆ ಈ ವಯಸ್ಸಾಗುತ್ತಿದ್ದ ಹಾಗೆ ಮುಖದ ಮೇಲೆ ಸುಕ್ಕು ಮೂಡುತ್ತೆ ಹಾಗೂ ದೇಹದ ಶಕ್ತಿ ಕುಂದುತ್ತ ಇದೆಲ್ಲಾ ನಮಗೆ ವಯಸ್ಸಾಗುತ್ತಿದೆ ಅಂತ ತಿಳಿಸಿದರೆ ಮತ್ತೊಂದು ವಿಚಾರ ಬಹಳ ಚಿಂತೆಗೆ ನಮ್ಮನ್ನು ಒಳ ಮಾಡುತ್ತೆ. ಅದೇನಪ್ಪ ಅಂದರೆ ಕೂದಲು ಬೆಳ್ಳಗಾಗುವುದು, ಹೌದು ಅಂದಿನ ಕಾಲದಲ್ಲಿ ಕೂದಲು ಬೆಳ್ಳಗಾದ್ರೆ ವಯಸ್ಸಾಯ್ತು ಅಂತ ಭಾವಿಸುತ್ತಿದ್ದರೂ ಹಿರಿಯರು, ಆದರೆ ಇಂದಿನ ಕಾಲದಲ್ಲಿ ಈ ಬಿಳಿ ಕೂದಲು ಚಿಕ್ಕವಯಸ್ಸಿಗೇ ಬರುತ್ತಿದೆ ಇದಕ್ಕೆ ಏನು ಮಾಡಬೇಕು ಹೇಳಿ?

ಹೌದಲ್ವಾ ಬಿಳಿಕೂದಲು ಬಂದರೆ ವಯಸ್ಸಾಯ್ತು ಅಂತ ಹೇಳುವುದನ್ನು ಮನೆಯಲ್ಲಿ ಕೂಡ ಕೇಳಿರುತ್ತಿರಾ ಆದರೆ ಇತ್ತೀಚಿಗೆ ಇಪ್ಪತ್ತು ಮೂವತ್ತು ವಹಿಸಿವೆ ಕೂದಲಲ್ಲಿ, ಬಿಳಿ ಕೂದಲು ಕಂಡರೆ ಚಿಂತೆಯಾಗುತ್ತೆ! ಇಷ್ಟು ಬೇಗ ಬಿಳಿಕೂದಲು ಬಂತಾ ಅಂತ. ಆದರೆ ಇದಕ್ಕೆ ಕಾರಣವೇನೆಂದರೆ ನಮ್ಮ ದೇಹದಲ್ಲಿ ಕೆಲವೊಂದು ಪೋಷಕಾಂಶಗಳ ಕೊರತೆ ಮತ್ತು ಕೂದಲನ್ನು ಸರಿಯಾಗಿ ಹಾರೈಕೆ ಮಾಡದೇ ಇರುವುದು.

ಹೌದು ಅಂದು ಶುದ್ಧವಾದ ಕೊಬ್ಬರಿ ಎಣ್ಣೆ ಸಿಗುತ್ತಿತ್ತೋ ಮತ್ತು ಅಂದಿನ ಕಾಲದಲ್ಲೇ ಹಿರಿಯರು ತಮ್ಮ ಕೂದಲನ್ನು ಕಾಳಜಿ ಮಾಡುವುದಕ್ಕೆ ಕೂದಲಿಗೆ ಹರಳೆಣ್ಣೆಯನ್ನು ಲೇಪ ಮಾಡುತ್ತಿದ್ದರು ಇದೆಲ್ಲದರ ಕಾರಣ ಕೂದಲು ಕಪ್ಪಾಗಿ ಇರುತ್ತಿತ್ತು. ಅಂದಿನ ಆಹಾರದ ಪದ್ದತಿಯ ಬಗ್ಗೆ ಹೇಳುವುದೇ ಬೇಡ ಬಿಡಿ. ಪೋಷಕಾಂಶಭರಿತ ಆಹಾರ ತಿನ್ನುತ್ತಾ ಹಿರಿಯರು ಆರೋಗ್ಯಕರವಾಗಿ ಇರುತ್ತಿದ್ದರು.

ಇಂದು ನಾವು ಪಾಲಿಸುವ ಆಹಾರಪದ್ಧತಿ ನಾವು ನಡೆಸುವ ಜೀವನ ಶೈಲಿ ನಮ್ಮ ಶರೀರದ ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರುವುದಲ್ಲದೆ, ನಮ್ಮ ಕೂದಲಿನ ಆರೋಗ್ಯದ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ ಹಾಗಾಗಿಯೇ ಈ ಡ್ಯಾಂಡ್ರಫ್ ಕೂದಲು ಉದುರುವುದು ಜೊತೆಗೆ ಬಿಳಿ ಕೂದಲಿನ ಸಮಸ್ಯೆ ಕೂಡ ಉಂಟಾಗಿದೆ.

ಬಿಳಿ ಕೂದಲಿಗೆ ಎಫೆಕ್ಟಿವ್ ಮನೆ ಮದ್ದು ಇದು ;ಬಿಳಿ ಕೂದಲು ಚಿಕ್ಕವಯಸ್ಸಿಗೆ ಬಂದಿದೆ ಹಾಗಾದ್ರೆ ತಿಂಗಳಿಗೊಮ್ಮೆ ಈ ಮನೆಮದ್ದು ಪಾಲಿಸಿ, ಇದನ್ನು ಮಾಡುವ ವಿಧಾನ ತುಂಬ ಸುಲಭ ಮನೆಯಲ್ಲೇ ಕರಿಬೇವಿನ ಎಲೆಗಳು ಇದ್ದೇ ಇರುತ್ತದೆ ಇದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಹಾಗೂ ತಿಂಗಳಿಗೊಮ್ಮೆ ನೀವು ಬಿಡುವಾಗಿದ್ದಾಗ ತೆಂಗಿನ ಎಣ್ಣೆಗೆ ಈ ಕರಿಬೇವಿನ ಎಲೆಯ ಪುಡಿ ಹಾಕಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ನಿಮ್ಮ ಕೂದಲಿಗೆ ಲೇಪ ಮಾಡಿ.

ಈ ಪ್ಯಾಕ್ ನಿಮ್ಮ ಕೂದಲಿನ ಬುಡಕ್ಕೆ ಪೋಷಣೆ ನೀಡಿ ಕೂದಲಿನ ಬುಡವನ್ನು ಸದೃಢ ಮಾಡುತ್ತದೆ ಮತ್ತು ಬಿಳಿ ಕೂದಲು ಸಮಸ್ಯೆ ಉಂಟಾಗದ ಹಾಗೆ ನೋಡಿಕೊಳ್ಳುತ್ತೆ, ಅಷ್ಟೇ ಅಲ್ಲ ಕೂದಲು ಉದುರದಿರುವ ಹಾಗೆ ಕಾಳಜಿ ಮಾಡುತ್ತೆ.ಈ ಮನೆಮದ್ದನ್ನು ಪಾಲಿಸುವುದರಿಂದ ಆಗುವ ಮತ್ತೊಂದು ಲಾಭವೇನು ಅಂದರೆ ಇತ್ತೀಚೆಗೆ ಹೆಚ್ಚಿನ ಮಂದಿ ದೂಳು ಪ್ರದೂಷಣೆ ಇರುವ ಜಾಗದಲ್ಲಿ ಹೆಚ್ಚಾಗಿ ಕೆಲಸ ಮಾಡುವುದರಿಂದ ಅಂಥವರ ಕೂದಲಿನ ಬುಡದಲ್ಲಿ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿ ಇರುತ್ತದೆ ಅಂತಹವರು ಮಾಡಿ ಈ ಪರಿಹಾರ ಇದರಿಂದ ಖಂಡಿತವಾಗಿಯೂ ಡ್ಯಾಂಡ್ರಫ್ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

ಮತ್ತೊಂದು ವಿಚಾರವೇನು ಅಂದರೆ ಡ್ಯಾಂಡ್ರಫ್ ಸಮಸ್ಯೆ ಇರುವವರಿಗೆ ಈ ಪರಿಹಾರ ವಾರಕ್ಕೊಮ್ಮೆ ಮಾಡಿಕೊಂಡರೆ ಇನ್ನೂ ಪ್ರಭಾವಿತವಾಗಿ ಫಲಿತಾಂಶ ಪಡೆದುಕೊಳ್ಳಬಹುದು.ಕೂದಲನ್ನು ಆರೋಗ್ಯಕರವಾಗಿ ಇರಿಸುವ ಈ ಸರಳ ತಂತ್ರವನ್ನು ನೀವು ಕೂಡ ಪಾಲಿಸಿ ಮತ್ತು ಈ ಮನೆಮದ್ದಿನಿಂದ ಸುಂದರವಾದ ಆರೋಗ್ಯಕರವಾದ ಕೇಶವನ್ನು ಪಡೆದುಕೊಳ್ಳಿ ಧನ್ಯವಾದ.