ವಾರಕ್ಕೆ ಎರಡು ಬಾರಿ ಒಣ ಕೊಬ್ಬರಿ ಜೊತೆಗೆ ಬೆಲ್ಲವನ್ನ ಜೊತೆಗೂಡಿಸಿ ತಿನ್ನೋದ್ರಿಂದ ನಮ್ಮ ದೇಹಕ್ಕೆ ಏನಾಗುತ್ತೆ ನೋಡಿ ..

277

ಪ್ರತಿದಿನ ಕೊಬ್ಬರಿಯನ್ನು ನಿಯಮಿತವಾಗಿ ತಿನ್ನುತ್ತಾ ಬನ್ನಿ ಇದರಿಂದ ಪುರುಷರ ಬಂಜೆತನ ದೂರವಾಗುತ್ತೆ…ನಮಸ್ಕಾರಗಳು ನಾವು ನಮ್ಮ ಜೀವನ ಶೈಲಿಯನ್ನು ಅದೆಷ್ಟೂ ಬದಲು ಮಾಡಿಕೊಂಡಿದ್ದೇವೆ ಅಂದರೆ ನಿಜಕ್ಕೂ ಈ ಕಾಲ ಬದಲಾದಂತೆ ಮನುಷ್ಯ ಕೂಡ ಬದಲಾಗುತ್ತಿದ್ದಾನೆ. ಆದರೆ ನಾವು ನಡೆದು ಬಂದ ಹಾದಿಯನ್ನು ನಮ್ಮ ಹಿರಿಯರು ನಡೆಸಿಕೊಂಡು ಬಂದ ಜೀವನಶೈಲಿಯನ್ನು ಮರೆಯಬಾರದು ಅನ್ನೋದಕ್ಕೆ ಈಗಾಗಲೇ ಬಹಳಷ್ಟು ಉದಾಹರಣೆಗಳು ಪ್ರಕೃತಿಯೇ ನಮಗೆ ತೋರಿಸಿಕೊಟ್ಟಿದೆ.

ಹೌದು ಅಂದಿಗೂ ಇಂದಿಗೂ ಪ್ರಕೃತಿ ಎಷ್ಟು ಬದಲಾಗಿದೆಯೆಂದರೆ ಇದೆಲ್ಲದಕ್ಕೂ ಕಾರಣ ಮನುಷ್ಯನಾಗಿದ್ದಾನೆ ಹೇಗೆ ಅಂದರೆ ತಾನು ಬದಲಾಗುತ್ತಿರುವುದರಿಂದ ಈ ಪ್ರಕೃತಿಯನ್ನು ಬದಲು ಮಾಡಲು ಹೊರಟಿದ್ದಾನೆ. ಆದರೆ ಪ್ರಕೃತಿ ಮಾತೆ ಮಾತ್ರ ಅವನ ನೆಡೆಗೆ ಸರಿಯಾದ ಉತ್ತರವನ್ನೇ ಕೊಡುತ್ತಿದ್ದಳು ಅದಕ್ಕೆ ನಾವು ಕಳೆದ ವರುಷ ವರುಷ ಅನುಭವಿಸಿದ ದೊಡ್ಡದಾದ ಸಮಸ್ಯೆಯೆ ನಿದರ್ಶನವಾಗಿತ್ತು ಇದೆ ಪ್ರಕೃತಿ ಮಾತೆ ಎದುರು ಹಾಕಿಕೊಂಡರೆ ಬರುವ ಫಲಿತಾಂಶ.

ಮುಖ್ಯವಾಗಿ ನಾವು ಮಾತನಾಡಬೇಕೆಂದರೆ ಇಂದಿನ ಮನುಷ್ಯನ ಆಹಾರ ಪದ್ಧತಿ ಹೇಗಿದೆ ಅಂದಿನ ನಮ್ಮ ಹಿರಿಯರ ಆಹಾರ ಪದ್ಧತಿ ಹೇಗಿದೆ ಅಂತ ಒಮ್ಮೆ ನೋಡಿ, ಇಂದು ತಮ್ಮ ಆರೋಗ್ಯ ವೃದ್ಧಿಗೆ ಸಪ್ಲಿಮೆಂಟ್ ಗಳನ್ನು ತೆಗೆದುಕೊಂಡು ತಮ್ಮ ಆರೋಗ್ಯವನ್ನ ಹೆಚ್ಚಿಸಿಕೊಳ್ಳಲು ಮುಂದಾಗುತ್ತಿದ್ದಾನೆ ಮನುಷ್ಯ ಆದರೆ ಅದೆಲ್ಲಾ ಯಾವುದಕ್ಕೆ ಸಮ ಬಿಡಿ ನಮ್ಮ ಹಿರಿಯರು ಮಾಡುತ್ತಿದ್ದಷ್ಟು ವರುಷವು ಇಂದಿನ ಜನತೆ ಬದುಕುತ್ತಿಲ್ಲ.

ನಮ್ಮ ಹಿರಿಯರು ತಮ್ಮ ಆರೋಗ್ಯ ವೃದ್ಧಿಗೆ ಯಾವುದೇ ಮಾತ್ರೆಗಳನ್ನು ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಕೆಲವೊಂದು ಪದಾರ್ಥಗಳನ್ನು ತಮ್ಮ ಆಹಾರದ ಜೊತೆ ಅವುಗಳನ್ನು ತಿನ್ನುತ್ತಿದ್ದರು ಅದರಲ್ಲಿ ಈ ಕೊಬ್ಬರಿ ಮತ್ತು ಬೆಲ್ಲ ಕೂಡ ಒಂದಾಗಿದೆ.

ಹೌದು ಕೊಬ್ಬರಿ ಮಿಶ್ರಿತ ಬೆಲ್ಲವನ್ನು ತಿನ್ನುವುದರಿಂದ ಆಗುವ ಲಾಭಗಳು ಅಪಾರ, ಅದೇನೆಂದರೆ ಮುಖ್ಯವಾಗಿ ಮಲಬದ್ಧತೆ ದೂರವಾಗುತ್ತದೆ ಹಾಗೂ ಜೀರ್ಣ ಶಕ್ತಿ ಕಡಿಮೆ ಇರುವವರಿಗೆ ಜೀರ್ಣಶಕ್ತಿಯೂ ಹೆಚ್ಚುತ್ತದೆ, ಈ ಬೆಲ್ಲ ಮತ್ತು ಕೊಬ್ಬರಿಯ ಅನ್ನು ನಿಯಮಿತವಾಗಿ ಪ್ರತಿದಿನ ತಿನ್ನುತ್ತ ಬರುವುದರಿಂದ.

ಮತ್ತೊಂದು ಮುಖ್ಯ ಮಾಹಿತಿ ಏನೆಂದರೆ ಪುರುಷರದೇ ಒಂಟಿತನವನ್ನು ದೂರ ಮಾಡುತ್ತೆ ಕೊಬ್ಬರಿ ಹಾಗಾಗಿ ಗಂಡು ಮಕ್ಕಳಿಗೆ ಮುಖ್ಯ ಆಹಾರ ಎಂದು ಕರೆಸಿಕೊಳ್ಳುತ್ತದೆ ಈ ಕೊಬ್ಬರಿ ಮತ್ತು ಇದರ ನಿಯಮಿತ ಸೇವನೆಯಿಂದ ಬ್ಲಡ್ ಪ್ರೆಶರ್ ದೂರವಾಗುತ್ತೆ ಮತ್ತು ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಈ ಸಕ್ಕರೆ ಅನ್ನು ಮನುಷ್ಯ ಇಷ್ಟಪಟ್ಟು ತಿಂತಾನೆ, ಆದರೆ ಇದು ಆರೋಗ್ಯದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಅಂದರೆ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿಸುತ್ತೆ ಮತ್ತು ಡಯಾಬಿಟಿಸ್ ನಂತಹ ಸಮಸ್ಯೆ ತರಲು ಕೂಡ ಈ ಸಕ್ಕರೆಯೆ ಕಾರಣವಾಗುತ್ತದೆ.

ಹಾಗಾಗಿ ನಿಮ್ಮ ಈ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗಬೇಕೆಂದರೆ ಮತ್ತು ರೋಗಮುಕ್ತರಾಗಿ ನೀವು ಆರೋಗ್ಯಕರ ಜೀವನವನ್ನು ನಡೆಸಬೇಕು ಅಂದರೆ ನಾವು ತಿಳಿಸುವಂತಹ ಕೆಲವೊಂದು ಪದಾರ್ಥಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಿ.

ಅದರಲ್ಲಿ ಮೊದಲನೆಯದು ಕೊಬ್ಬರಿ ಮತ್ತು ಬೆಲ್ಲ ಹೌದು ನೀವು ಶುದ್ಧವಾದ ಬೆಲ್ಲ ಅಂದರೆ ಕಪ್ಪು ಬೆಲ್ಲವನ್ನು ತಿನ್ನುವುದರಿಂದ ರಕ್ತ ಹೀನತೆ ದೂರವಾಗುತ್ತೆ, ಜೊತೆಗೆ ಕೊಬ್ಬರಿ ಸೇವಿಸುವುದರಿಂದ ರಕ್ತಶುದ್ಧಿಯಾಗುತ್ತದೆ ಹಾಗೂ ರಕ್ತದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಪರಿಹಾರವಾಗುತ್ತೆ, ಇದರಿಂದ ಲಿವರ್ ನ ಆರೋಗ್ಯ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.

ಈ ಕೊಬ್ಬರಿ ಮಿಶ್ರಿತ ಬೆಲ್ಲವನ್ನೂ ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಕ್ಯಾಲ್ಸಿಯಂ ಕೂಡ ದೊರೆತು ಮೂಳೆಗಳು ಬಲಗೊಳ್ಳುತ್ತದೆ ಹಾಗೂ ವಯಸ್ಸಾದ ನಂತರ ಕಾಣಿಸಿಕೊಳ್ಳುವ ಮಂಡಿ ನೋವು ಕೀಲು ನೋವು ಇಂಥ ಸಮಸ್ಯೆಗಳು ಬಾರದಿರುವ ಹಾಗೆ ನಮ್ಮ ಶರೀರವನ್ನು ಕಾಪಾಡುತ್ತದೆ ಇದೊಂದು ಪದಾರ್ಥಗಳು…