ನಿಮ್ಮ ದೇಹ ತುಂಬಾ ಉಷ್ಣತೆಯಿಂದ ಇದ್ದರೆ ಹಾಗು ಜೊತೆಗೆ ಕಣ್ಣು , ಉಚ್ಛೆ ತುಂಬಾ ಉರಿ ಉರಿ ಆಗುತಿದ್ದರೆ ಈ ಒಂದು ಪಾನೀಯವನ್ನ ಮನೆಯಲ್ಲೇ ಮಾಡಿ ಕುಡಿಯಿರಿ ಸಾಕು..

313

ದೇಹದ ಉಷ್ಣಾಂಶ ಅತಿಯಾಗಿದ್ದರೆ ಮತ್ತು ಇದರ ಕಾರಣದಿಂದ ಉರಿಮೂತ್ರ ಹಾಗೆಯೇ ಎದೆ ಉರಿ ಹೊಟ್ಟೆ ಉರಿ ಸಮಸ್ಯೆಗಳು ಬಂದಿದ್ದರೆ ಅದಕ್ಕಾಗಿ ಮಾಡಬಹುದಾದ ಪರಿಹಾರ ಇದು.ಸಾಮಾನ್ಯವಾಗಿ ದೇಹದ ಉಷ್ಣಾಂಶ ಹೆಚ್ಚಾದಾಗ ಅದರಿಂದ ಬಾಯಿಯಲ್ಲಿ ಹುಣ್ಣು ಆಗುತ್ತದೆ ಅಂತ ಹಲವರು ಹೇಳ್ತಾರೆ ಬಿ ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಳ್ಳಬೇಕು ಅಂತ.

ಆದರೆ ಬಿ ಕಾಂಪ್ಲೆಕ್ಸ್ ಮಾತ್ರ ತೆಗೆದುಕೊಂಡ ಕೂಡಲೇ ಬಾಯಿಹುಣ್ಣು ನಿವಾರಣೆ ಆಗುತ್ತೆ ಅನ್ನೋದು ಸುಳ್ಳು, ಹೌದು ಶರೀರದಲ್ಲಿ ಯಾವಾಗ ಈ ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶ ಕಡಿಮೆಯಾಗಿರುತ್ತದೆ, ಅದರ ಸೂಚನೆಯಾಗಿ ಬಾಯಿಯಲ್ಲಿ ಹುಣ್ಣು ಆಗುತ್ತದೆ. ಆಗ ಬಿ ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಂಡರೆ ಈ ತೊಂದರೆ ಇಂದ ಶಮನ ಪಡೆಯಬಹುದು, ಆದರೆ ಪ್ರತ್ಯೇಕವಾಗಿ ದೇಹದ ಉಷ್ಣಾಂಶ ಹೆಚ್ಚಾದ ಕಾರಣ ಬಾಯಿಯಲ್ಲಿ ಹುಣ್ಣು ಆಗಿದೆ ಅಂದರೆ ನೀವು ಮಾಡಬೇಕಾದ ಪರಿಹಾರವೇನು ಅಂದರೆ ಈ ತೊಂಡೆಕಾಯಿ ಎಂಬ ತರಕಾರಿ ಸಿಗುತ್ತದೆ ಅದನ್ನ ತಂದು ಚೆನ್ನಾಗಿ ತೊಳೆದು ಸಿಪ್ಪೆ ಸಹಿತ ನೀವು ಆ ತೊಂಡೆಕಾಯಿಯನ್ನು ಬಾಯಿಯಲ್ಲಿ ಹಾಕಿ ಜಗಿಯಬೇಕು ಇದರ ಪರಿಣಾಮ, ಬಾಯಿಯಲ್ಲಿ ಹುಣ್ಣು ಬೇಗ ನಿವಾರಣೆಯಾಗುತ್ತೆ.

ಈ ಪರಿಹಾರದ ಪ್ರಯೋಜನ ನೀವು ಕೂಡ ಪಡೆದುಕೊಳ್ಳಿ ಬಾಯಿಹುಣ್ಣು ಯಾವಾಗ ಆದರೂ ಇದನ್ನು ಮಾಡಿ ಇದರಿಂದ ಖಂಡಿತಾ ಬಾಯಲ್ಲಿ ಆಗಿರುವ ಹುಣ್ಣಿಗೆ ಶಮನ ದೊರೆಯುತ್ತದೆ.ಹಾಗಂತ ಪದೇ ಪದೇ ಬಾಯಿಹುಣ್ಣು ಹಾಡುತ್ತಾ ಇದ್ದರೆ ನೀವು ಒಮ್ಮೆ ವೈದ್ಯರ ಬಳಿ ನಿಮ್ಮ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ.ಈಗ ದೇಹದ ಉಷ್ಣಾಂಶ ಹೆಚ್ಚಾದಾಗ ಅದನ್ನು ಕಡಿಮೆ ಮಾಡಿಕೊಳ್ಳುವ ವಿಧಾನವನ್ನು ತಿಳಿಯೋಣ, ಹೌದು ಯಾವಾಗ ದೇಹದ ಉಷ್ಣಾಂಶ ಹೆಚ್ಚಾಗಿರುತ್ತೆ ಸಾಕಷ್ಟು ಪರಿಹಾರಗಳನ್ನು ಮಾಡುತ್ತೆವೆ ಕೆಲವರು ಜೀರಿಗೆ ತಿಂತಾರೆ, ಆದರೂ ಕೂಡ ದೇಹದ ಉಷ್ಣಾಂಶ ಇಳಿದಿರುವುದಿಲ್ಲ.

ಇನ್ನೂ ಕೆಲವರು ತಂಪು ಪಾನೀಯಗಳನ್ನು ಕುಡಿಯುವ ಮೂಲಕ ತಮ್ಮ ಶರೀರವನ್ನು ತಣ್ಣಗೆ ಮಾಡಿಕೊಳ್ಳಲು ಹೋಗ್ತಾರೆ ಆದರೆ ಯಾವುದೇ ಕಾರಣಕ್ಕೂ ತಂಪು ಪಾನೀಯವನ್ನು ಯಾವಾಗಲೂ ಸೇವಿಸಬೇಡಿ ಅಂದರೆ ಕೋಲ್ಡ್ ವಾಟರ್ ಎಂದಿಗೂ ಕುಡಿಯಬೇಡಿ ಇದು ಆರೋಗ್ಯಕ್ಕೆ ಒಳ್ಳೆಯದಿರುವುದಿಲ್ಲ.

ದೇಹದ ಉಷ್ಣಾಂಶ ಹೆಚ್ಚಾದಾಗ ಮಾಡಬೇಕಾದ ಪರಿಹಾರವೇನು ಅಂದರೆ ಬಸಳೆ ಸೊಪ್ಪನ್ನು ತಿನ್ನಬಹುದು, ಇದನ್ನು ಯಾವುದೇ ಖಾದ್ಯದ ರೂಪದಲ್ಲಿ ಅಥವಾ ಇದರಿಂದ ಜ್ಯೂಸ್ ತಯಾರಿಸಿ ಕೊಂಡು ಕುಡಿಯಬಹುದು.ಅದು ಆಗಿಲ್ಲವಾದರೆ ಎಲ್ಲಾ ಅಂಗಡಿಗಳಲ್ಲಿಯೂ ದೊರೆಯುತ್ತದೆ ಇದನ್ನು ಮನೆಗೆ ತಂದು ಕೇವಲ ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಬಳಿಕ ಒಂದು ಲೋಟ ರೂಂ ಟೆಂಪರೇಚರ್ ನಲ್ಲಿ ಇರುವ ನೀರನ್ನು ತೆಗೆದುಕೊಂಡು, ಅದಕ್ಕೆ ಕಲ್ಲುಸಕ್ಕರೆ ಹಾಕಿ ನೀರಿನಲ್ಲಿ ಮಿಶ್ರಮಾಡಿ ನೆನೆಸಿಟ್ಟ ಸಬ್ಚ ಬೀಜಗಳನ್ನು ಈ ನೀರಿಗೆ ಹಾಕಿ ಇದನ್ನು ಗಟಗಟನೆ ಕುಡಿಯಿರಿ, ದಿನಕ್ಕೊಮ್ಮೆ ಮಾಡಿದರೂ ದೇಹದ ಉಷ್ಣಾಂಶ ಬಹಳ ಬೇಗ ನಿಯಂತ್ರಣಕ್ಕೆ ಬರುತ್ತೆ.

ಈ ಪರಿಸ್ಥಿತಿಯಲ್ಲಿ ಉಂಟಾಗುವ ಉರಿ ಮೂತ್ರಕ್ಕೆ ಮಾಡಬೇಕಾದ ಪರಿಹಾರ ಅಂದರೆ ಊಟದ ಬಳಿಕ ಚಿಕ್ಕ ತುಂಡು ಬೆಲ್ಲ ತಿನ್ನಿ ಈ ಮೇಲೆ ತಿಳಿಸಿದಂತಹ ಮನೆಮದ್ದು ಪಾಲಿಸಿ.ಉರಿಮೂತ್ರ ಸಮಸ್ಯೆ ಉಂಟಾದಾಗ ಆ ಭಾಗದಲ್ಲಿ ಅಂದರೆ ಮೂತ್ರ ಮಾಡುವ ಜಾಗದಲ್ಲಿ ಬಹಳ ಉರಿ ಇರುತ್ತದೆ ಆಗ ಬೆಚ್ಚಗಿನ ನೀರಿನಿಂದ ಆ ಭಾಗವನ್ನು ಸ್ವಚ್ಛ ಮಾಡಿಕೊಳ್ಳುವುದು ಒಳ್ಳೆಯದು,

ಹಾಗೆ ಯಾವುದೆ ಸೋಪ್ ಬಳಸುವುದು ಸ್ವಚ್ಛ ಮಾಡುವುದಕ್ಕೆ ಅಥವಾ ಮೆಡಿಕಲ್ ಶಾಪ್ ಗಳಲ್ಲಿ ದೊರೆಯುವ ಲಿಕ್ವಿಡ್ ಗಳನ್ನು ಬಳಸುದು ಮಾಡಬೇಡಿ. ಶರೀರವೇ ಸಹಜವಾಗಿ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುತ್ತೆ, ಅದಕ್ಕೆ ಕೆಲವೊಂದು ಪದಾರ್ಥಗಳನ್ನು ನಾವು ಆಹಾರದ ಮೂಲಕ ಸೇವಿಸಬೇಕು.ಯಾವುದೇ ಕಾರಣಕ್ಕೂ ದೇಹದ ಉಷ್ಣಾಂಶ ಹೆಚ್ಚಾದಾಗ, ಉರಿಮೂತ್ರ ಸಮಸ್ಯೆ ಇದ್ದಾಗ ಹಸಿರು ಮೆಣಸಿನಕಾಯಿ ಮತ್ತು ಹೆಚ್ಚು ಮಸಾಲೆಭರಿತ ಆಹಾರಗಳನ್ನು ಕರಿದ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ.