ನಿಮ್ಮ ರಕ್ತ ಹದಲ್ಲಿ ಎತ್ತೇಚ್ಛವಾಗಿ ಹಿಮೋಗ್ಲೋಬಿನ್ ಹೆಚ್ಚು ಮಾಡಿಕೊಳ್ಳಬೇಕಾದರೆ ಇದನ್ನ ಒಂದು ಕುಡಿಯಿರಿ ಸಾಕು ..

272

ಹಿಮೋಗ್ಲೋಬಿನ್ ಕೊರತೆಯನ್ನು ನಿವಾರಣೆ ಮಾಡಲು ಈ ಡ್ರಿಂಕ್ ಅನ್ನು ನೀವು ಪ್ರತಿದಿನ ಕುಡಿಯಬೇಕಾಗುತ್ತದೆ.ನಮಸ್ಕಾರಗಳು ಪ್ರಿಯ ಸ್ನೇಹಿತರೆ ಹಿಮೋಗ್ಲೋಬಿನ್ ಕೊರತೆ ಎಂಬುದು ನಮ್ಮ ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ ಕಂಡು ಬರಲು ಕಾರಣವೇನು ಅಂದರೆ ಹೆಣ್ಣು ಮಕ್ಕಳ ಆಹಾರ ಪದ್ಧತಿ ಆಗಿರಬಹುದು ಹಾಗೂ ಮುಖ್ಯವಾಗಿ ಹೆಣ್ಣುಮಕ್ಕಳು ಪ್ರತಿ ತಿಂಗಳು ಋತುಚಕ್ರಕ್ಕೆ ಒಳಪಡುವುದರಿಂದ ಅವರಲ್ಲಿಯೇ ರಕ್ತಹೀನತೆ ಸಮಸ್ಯೆ ಅಥವಾ ಹಿಮೋಗ್ಲೋಬಿನ್ ಕೊರತೆ ಎಂಬುದು ಕಂಡುಬರುತ್ತದೆ ಆದರೆ ಹೆಣ್ಣುಮಕ್ಕಳು ಈ ಸ್ಥಿತಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡುವಂತಿಲ್ಲ.

ರಕ್ತಹೀನತೆ ಆಗಲಿ ಈ ಹಿಮೋಗ್ಲೋಬಿನ್ ಕೊರತೆ ಆಗಲೇ ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದಷ್ಟು ಸಮಸ್ಯೆ ದೊಡ್ಡದಾಗುತ್ತದೆ ಮತ್ತು ರಕ್ತಹೀನತೆ ಇದ್ದಾಗ ತಲೆಸುತ್ತು ಬರುವುದು ಅಥವಾ ಚರ್ಮ ಬಿಳಿ ಆಗುವುದು ಬಿಳಿಚಿಬ್ಬು ಉಂಟಾಗುವುದು ಅಥವಾ ಸುಸ್ತು ಪದೇಪದೆ ಆಗುವುದು ಇದೆಲ್ಲ ಆಗುತ್ತಾ ಇರುತ್ತದೆ.ಅಷ್ಟೇ ಅಲ್ಲ ರಕ್ತಹೀನತೆಯಿಂದ ಅಥವಾ ಹಿಮೊಗ್ಲೋಬಿನ್ ಕೊರತೆಯಿಂದ ಹೆಣ್ಣು ಮಕ್ಕಳು ಪ್ರತಿ ತಿಂಗಳು ಸರಿಯಾಗಿ ಮುಟ್ಟಾಗುವುದಿಲ್ಲ ಸಹ ಇರುವುದಿಲ್ಲ ಹಾಗಾಗಿ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು.

ಹೌದು ಹಿಮೋಗ್ಲೋಬಿನ್ ಕೊರತೆ ಉಂಟಾದಾಗ ಅಥವಾ ರಕ್ತಹೀನತೆಯುಂಟಾದಾಗ ಇದಕ್ಕೆ ಸಾಕಷ್ಟು ಪರಿಹಾರ ಗಾಣಿಗ ಮತ್ತು ಪಾಲಿಸುವುದಕ್ಕೆ ಹಲವು ದಾರಿಗಳಿವೆ ಅದರಲ್ಲಿ ಒಂದಾಗಿರುವ ಸರಳ ಮನೆ ಮದ್ದಿನ ಬಗ್ಗೆ ನಾವು ಈ ಪುಟದ ಮೂಲಕ ತಿಳಿಸಿಕೊಡಲಿದ್ದೇವೆ, ನಿಮಗೆ ಈ ಪರಿಹಾರ ಸುಲಭ ಅನಿಸಿದರೆ ಇದನ್ನು ನೀವು ಪಾಲಿಸಬಹುದು.

ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ;ನುಗ್ಗೆ ಎಲೆಗಳು ಮತ್ತು ಕರಿಬೇವಿನ ಎಲೆಗಳು ಈ ಪರಿಹಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು, ಇದರ ಜತೆಗೆ ಬೇಕಾದಲ್ಲಿ ನೀವು ಬೆಲ್ಲವನ್ನು ಕೂಡ ಬಳಸಬಹುದು ಅದು ಆಪ್ಷನಲ್ ಆಗಿರುತ್ತೆ.ಮೊದಲಿಗೆ ಎಳೆ ನುಗ್ಗೆ ಎಲೆಗಳನ್ನು ತೆಗೆದುಕೊಳ್ಳಿ ಜೊತೆಗೆ ಕರಿಬೇವಿನ ಸೊಪ್ಪನ್ನು ತೆಗೆದುಕೊಳ್ಳಿ ಸಮಪ್ರಮಾಣದಲ್ಲಿ ಈ ಎಲೆಗಳನ್ನು ತೆಗೆದುಕೊಂಡು ಇದನ್ನೊಮ್ಮೆ ನೀರಿನಲ್ಲಿ ಸ್ವಚ್ಛ ಮಾಡಿ ಬಳಿಕ 2 ಲೋಟದಷ್ಟು ನೀರನ್ನು ತೆಗೆದುಕೊಂಡು ಇದಕ್ಕೆ ಅರ್ಧ ಮುಷ್ಟಿ ಅಷ್ಟು ನುಗ್ಗೆ ಎಲೆ ಅರ್ಧ ಮುಷ್ಟಿಯಷ್ಟು ಕರಿಬೇವಿನ ಎಲೆಗಳನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಬೇಕು, ಅರ್ಧ ಪ್ರಮಾಣದಷ್ಟು ನೀರು ಇಳಿಕೆಯಾದ ಮೇಲೆ ಇದನ್ನು ಶೋಧಿಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಗೆ ಈ ಡ್ರಿಂಕ್ ಅನ್ನ ಕುಡಿಯಿರಿ.

ನಿಮಗೇನಾದರೂ ಸಕ್ಕರೆ ಕಾಯಿಲೆ ಬಿಪಿ ಸಮಸ್ಯೆ ಇದೆ ಅಂದರೆ ಈ ಡ್ರಿಂಕ್ ಅನ್ನು ವಾರಕ್ಕೊಮ್ಮೆ ಕುಡಿಯುತ್ತ ಬಂದರೆ ಸಾಕು.ಈ ಡ್ರಿಂಕ್ ಕೇವಲ ಹಿಮೊಗ್ಲೋಬಿನ್ ಕೊರತೆ ರಕ್ತಹೀನತೆ ಎಲ್ಲ ಮಾತ್ರ ದೂರ ಮಾಡುವುದಿಲ್ಲ ಜತೆಗೆ ರಕ್ತ ಶುದ್ಧಿ ಮಾಡಲು ಸಹಕಾರಿಯಾಗಿದೆ ಹಾಗೆ ಕರುಳಿನಲ್ಲಿಯ ಬ್ಯಾಕ್ಟೀರಿಯಾಗಳು ಹೆಚ್ಚಿದ್ದರೆ, ಅದರ ನಾಶ ಮಾಡಲು ಕೂಡ ಈ ಡ್ರಿಂಕ್ ಸಹಕಾರಿಯಾಗಿದೆ. ಯಾಕೆಂದರೆ ನುಗ್ಗೆ ಎಲೆ ಮತ್ತು ಕರಿಬೇವಿನ ಎಲೆ ತನ್ನಲ್ಲಿ ಕಹಿ ಅಂಶವನ್ನು ಹೊಂದಿದ್ದು ಈ ಅಂಶ ನಮ್ಮ ಆರೊಗ್ಯಕ್ಕೆ ಒಳ್ಳೆಯದಾಗಿದೆ.

ಅಷ್ಟೇ ಅಲ್ಲ ನಮ್ಮ ದೇಹದಲ್ಲಿರುವ ಬೇಡದಿರುವ ಬ್ಯಾಕ್ಟೀರಿಯಗಳನ್ನು ಹೊರ ಹಾಕಲು ಸಹಕಾರಿಯಾಗಿದೆ ಈ ಡ್ರಿಂಕ್ ಇದನ್ನು ಹತ್ತು ವರ್ಷ ಮೇಲ್ಪಟ್ಟ ಮಕ್ಕಳು ಹೊಡೆಯಬಹುದು ಈ ಡ್ರಿಂಕ್ ಕುಡಿಯುತ್ತಾ ಬರುವುದರಿಂದ ಜಂತು ಹುಳುವಿನ ಸಮಸ್ಯೆ ಕೂಡ ಕಾಡುವುದು ಕಡಿಮೆ ಆಗುತ್ತೆ ಮತ್ತು ಈ ಡ್ರಿಂಕ್ ಅನ್ನ ಕುಡಿಯುತ್ತ ಬರುವುದರಿಂದ ಸಹ ಮುಖ್ಯವಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತೆ ಹಾಗೂ ನಮಗೆ ತಿಳಿಯದೆ ಹತ್ತು ಹಲವಾರು ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತೇವೆ.