ನಿಮ್ಮ ಗಂಟಲಲ್ಲಿ ಎಷ್ಟೇ ಕಿರಿ ಕಿರಿ , ನೋವು , ಕೆರೆತ ಹಾಗು ಜ್ವರ ಬರುವ ಹಾಗೆ ಇದ್ರೆ ಇದನ್ನ ಸೇವನೆ ಮಾಡಿ ಸಾಕು ತಕ್ಷಣಕ್ಕೆ ಮಂಗ ಮಾಯಾ ಆಗುತ್ತೆ…

329

ಗಂಟಲು ಕಟ್ಟಿ ಗಂಟಲಿನಲ್ಲಿ ಕಫ ಆಗಿದ್ದರೆ ಮತ್ತು ಇಂದಿನ ಈ ವಾತಾವರಣ ವನ್ನು ನೀವು ಗಮನಿಸಿದ್ದೀರಾ ಒಮ್ಮೆ ಒಂದು ರೀತಿ ಇದ್ದರೆ ಮತ್ತೊಂದು ಬಾರಿ ಮತ್ತೊಂದು ಕ್ಲೈಮ್ಯಾಟ್ ಇದರಿಂದ ಕೂಡ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಿ ಶೀತ ಕೆಮ್ಮಿನಂತಹ ಸಮಸ್ಯೆ ಅಥವಾ ಡ್ರೈ ಕಾಫ್ ಉಂಟಾಗುತ್ತೆ.ಈ ಸಮಯದಲ್ಲಿ ಅಂದರೆ ವಾತಾವರಣ ವೈಪರೀತ್ಯ ಇರುವುದರಿಂದ, ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಉಂಟಾಗುತ್ತದೆ ಇದು ಗಂಟಲಿನ ಆರೋಗ್ಯವನ್ನು ಕೂಡ ಹಾಳು ಮಾಡಿರುತ್ತೆ, ಕುಡಿಯುವ ನೀರು ಬದಲಾದರೆ ಗಂಟಲು ಕಿಚ್ ಕಿಚ್ ಆಗುತ್ತೆ ಮತ್ತು ಇದರಿಂದ ಕೆಮ್ಮು ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ.

ಈ ರೀತಿ ಯಾವುದೇ ಸಮಸ್ಯೆ ಕಾಡುತ್ತಿದ್ದರೂ ಅದಕ್ಕಾಗಿ ಮಾಡಬಹುದಾದ ಸುಲಭ ಪರಿಹಾರಗಳ ಕುರಿತು ಹೇಳುವುದಾದರೆ ಮನೆಯಲ್ಲಿಯೇ ಇರುವ ಕೆಲವೊಂದು ಸರಳ ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಶಮನ ಪಡೆಯಬಹುದು.ಹೌದು ಯಾವಾಗ ಗಂಟಲು ಕಿಚ್ ಕಿಚ್ ಆಗುತ್ತಾ ಇರುತ್ತದೆ ತಕ್ಷಣವೇ ಈ ಪರಿಹಾರವನ್ನು ಪಾಲಿಸಿ ಇದರಿಂದ ಬಹಳ ಬೇಗ ಗಂಟಲು ನೋವು ಅಥವಾ ಗಂಟಲು ಕೆರೆತ ದಂತಹ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ವೈದ್ಯರಿಂದ ಹಿಡಿದು ಹಿರಿಯರವರೆಗೂ ಹೇಳುವ ಸರಳ ಪರಿಹಾರ ಅಂದರೆ ಅದು ಬಿಸಿನೀರಿಗೆ ಉಪ್ಪು ಸೇರಿಸಿ ಗಂಟಲಿಗೆ ಹಾಕಿ ಗಾರ್ಗಲ್ ಮಾಡುವುದು.ಈ ರೀತಿ ಉಪ್ಪು ನೀರಿನಿಂದ ಬಾಯನ್ನು ಮುಕ್ಕಳಿಸುವುದರಿಂದ ಗಂಟಲಿನಲ್ಲಿ ಆಗುತ್ತಿರುವಂತಹ ಕೆರೆತ ಕಡಿಮೆಯಾಗುತ್ತದೆ ಈ ಪರಿಹಾರ ಮಾಡಿದ ಕೂಡಲೇ ನಾವು ತಿಳಿಸುವಂತಹ ಮನೆ ಮದ್ದನ್ನು ಮಾಡಿ ವೀಳ್ಯದೆಲೆಯನ್ನು ತೆಗೆದುಕೊಂಡು ಇದಕ್ಕೆ ತ್ರಿಫಲ ಚೂರ್ಣ ಸೇರಿಸಿ ಸ್ವಲ್ಪ ಜೇನುತುಪ್ಪ ಮಿಶ್ರಮಾಡಿ ವಿಳ್ಳೇದೆಲೆ ಸಮೇತ ಬಾಯಿಗೆ ಹಾಕಿ ಜಗಿದು ಅದರ ರಸವನ್ನು ನುಂಗಬೇಕು.

ಈ ವಿಧಾನ ಎಷ್ಟು ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದರೆ ಮೊದಲೇ ವೀಳ್ಯದೆಲೆಯಲ್ಲಿ ಒಗರು ಅಂಶ ಇರುತ್ತದೆ ಇದು ಗಂಟಲಿನಲ್ಲಿ ಕಟ್ಟಿರುವಂತಹ ಕಫವನ್ನು ಕರಗಿಸಲು ಬಹಳ ಸಹಕಾರಿಯಾಗಿರುತ್ತೆ.ಗಂಟಲು ಕಿಚ್ ಕಿಚ್ ಆದಾಗ ಯಾವುದೇ ಕಾರಣಕ್ಕೂ ತಂಪಾದ ನೀರನ್ನು ಐಸ್ ವಾಟರ್ ಅನ್ನೂ ಕುಡಿಯಬೇಡಿ ಮತ್ತು ಬಿಸಿ ನೀರನ್ನೇ ಕುಡಿಯಿರಿ ಯಾಕೆಂದರೆ ಮೊದಲೇ ಹವಾಮಾನ ಬದಲಾಗಿರುವದರಿಂದ ಬಿಸಿನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಜೊತೆಗೆ ಗಂಟಲು ಕಟ್ಟಿದರೆ ಆ ಗಂಟಲಲ್ಲಿ ಕಫ ಇದ್ದರೆ ಅಥವಾ ಕಫ ಇದ್ದರೆ ಅದು ಕೂಡ ಕರಗಿ ಬಹಳ ಬೇಗ ಗಂಟಲು ಕೆರತ ದಿಂದ ಶಮನ ಕೊಡುತ್ತೆ.

ಈ ಸರಳ ಪರಿಹಾರವನ್ನು ಪಾಲಿಸಿ ಗಂಟಲು ನೋವಿನಿಂದ ಉಪಶಮನ ಪಡೆಯಿರಿ ಯಾವುದೇ ಸಿರಪ್ ಗಳಾಗಲೀ ಮತ್ತು ಮಾತ್ರೆಗಳಾಗಲಿ ಕೊಡದ ರಿಸಲ್ಟ್ ಅನ್ನೂ ಈ ಸರಳ ಪರಿಹಾರ ನಿಮಗೆ ತಕ್ಷಣವೇ ನೋವಿನಿಂದ ಗಂಟಲು ಕೆರೆತ ದಿಂದ ಶಮನ ಕೊಡುತ್ತೆ.ಈ ಸರಳ ಮನೆಮದ್ದಿನಿಂದ ನೀವು ಪರಿಹಾರ ಪಡೆದುಕೊಂಡ ಮೇಲೆ ಒಮ್ಮೆಯೂ ಈ ಮನೆಮದ್ದನ್ನು ಮಾಡುವುದನ ನಿಲ್ಲಿಸಬೇಡಿ ಸಂಪೂರ್ಣವಾಗಿ ನೋವು ಕಡಿಮೆ ಆಗಿದೆ ಅನ್ನುವವರೆಗೂ ಪ್ರತಿದಿನ ಈ ಪರಿಹಾರ ಪಾಲಿಸುತ್ತಾ ಜೊತೆಗೆ ಬಿಸಿನೀರು ಕುಡಿಯುವುದನ್ನು ನಿಲ್ಲಿಸಬೇಡಿ ಬಿಸಿನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ವಾತಾವರಣ ಬದಲಾಗುತ್ತಿದೆ ಅಂದಾಗಲೇ ಮೊದಲೇ ಬಿಸಿ ನೀರನ್ನು ಕಾಯಿಸಿ ಕುಡಿಯಿರಿ ಹಾಗೂ ನೀವು ಊರಿನಿಂದ ಊರಿಗೆ ಜರ್ನಿ ಮಾಡುತ್ತಿದ್ದೀರಾ ಅಂದಾಗಲೂ ಕೂಡ ಎಲ್ಲಾ ಕಡೆಯು ಕಾಯಿಸಿದ ನೀರನ್ನು ಮಾತ್ರ ಕುಡಿಯುವುದು ಒಳ್ಳೆಯದು ಇದರಿಂದ ಗಂಟಲು ಕೆರೆತ ಗಂಟಲು ನೋವು ಉಂಟಾಗುವುದಿಲ್ಲ.