ಯಾವುದೇ ಕೈ ಕಾಲು , ಸೊಂಟ ಅದೇನೇ ನೋವು ಇರಲಿ ಸಹ ಇದರ ಎಣ್ಣೆಯನ್ನ ಈ ತರ ಮಾಡಿ ಹಚ್ಚಿ ನಾಲಕ್ಕೆ ನಾಲಕ್ಕು ದಿನ ಚಮತ್ಕಾರ ನೋಡಿ.. ಎಲ್ಲಾ ಹುಷಾರು ಆಗುತ್ತೆ..

224

ಮಂಡಿನೋವು ಕಾಲುನೋವು ಕೈಕಾಲು ನೋವು ಅಥವಾ ಪಾದಗಳ ನಾವು ಅಂತ ಇದ್ದರೆ ಅದಕ್ಕೊಂದು ಪರಿಹಾರ ಇಲ್ಲಿದೆ ನೋಡಿ ಹೌದು ಪರಿಣಾಮಕಾರಿಯಾಗಿ ನಿಮ್ಮ ಕೈ ಕಾಲು ನೋವು ನಿವಾರಣೆಯಾಗಬೇಕೆಂದರೆ ಅದಕ್ಕೊಂದು ಎಫೆಕ್ಟಿವ್ ಮಸಾಜ್ ಆಯಿಲ್ ಅನ್ನು ನಾವು ಈ ದಿನ ಮನೆಯಲ್ಲಿಯೇ ತಯಾರಿ ಮಾಡಿಕೊಳ್ಳೋಣ. ಅದಕ್ಕಾಗಿ ಏನೆಲ್ಲ ಬೇಕು, ಅದನ್ನ ಹೇಗೆ ತಯಾರಿ ಮಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲ್ಲಿ. ಹೌದು ಮಂಡಿ ನೋವು ಎಂಬುವುದು ಇನ್ನೂ ಸರ್ವೇಸಾಮಾನ್ಯವಾಗಿದೆ ಹಾಗೂ ಅದಕ್ಕಾಗಿ ಮಾತ್ರೆ ನುಂಗಿ ನುಂಗಿ ಸಾಕಾಗಿದೆ.

ಹಾಗಾಗಿ ನಿಮ್ಮ ನೋವಿಗೆ ಒಂದೊಳ್ಳೆ ಪರಿಣಾಮಕಾರಿಯಾದ ಮನೆ ಮದ್ದು ಬೇಕಾದಲ್ಲಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಮಂಡಿ ನೋವಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಿ.ಸಾಕಷ್ಟು ಪ್ರಾಡಕ್ಟ್ಗಳ ನಾವು ಜಾಹೀರಾತು ಮೂಲಕ ನೋಡುತ್ತಾ ಇರುತ್ತೇವೆ ಇದನ್ನ ತೆಗೆದುಕೊಳ್ಳಿ ಮಂಡಿನೋವು ಹೋಗುತ್ತೆ ಇದನ್ನ ತೆಗೆದುಕೊಳ್ಳಿ ಕೈಕಾಲು ಸೆಳೆತ ಹೋಗುತ್ತೆ ಅಂತ ಆದರೆ ಹಳ್ಳಿಗಳ ಇದ್ಯಾವುದನ್ನು ಬಳಸುವುದಿಲ್ಲ. ಆದರೆ ಹೊಲ ಗದ್ದೆ ಬದಿಯಲ್ಲಿ ಸಿಗುವ ಕೆಲವೊಂದು ಕಾಯಿಹಣ್ಣುಗಳ ಪ್ರಯೋಜನವನ್ನು ಪಡೆದುಕೊಂಡು ಮನೆಯಲ್ಲಿಯೇ ಮಸ್ಸಾಜಿಂಗ್ ಎಣ್ಣೆಯನ್ನು ಮಾಡಿಕೊಂಡು ಅದರಿಂದ ಪ್ರತಿದಿನ ಕೈಕಾಲುಗಳನ್ನು ಮತ್ತು ಸೊಂಟದ ಭಾಗವನ್ನು ಮಸಾಜ್ ಮಾಡುತ್ತಾ ಬಂದದ್ದೇ ಆದಲ್ಲಿ ನಿಮ್ಮ ನೋವಿಗೆ ಶಾಶ್ವತ ಪರಿಹಾರ ಸಿಕ್ಕಂತೆ!

ಹಾಗಾಗಿ ನಿಮ್ಮ ನೋವಿಗೆ ಈ ಪರಿಹಾರ ಇದಕ್ಕಾಗಿ ಬೇಕಾಗುವ ಪದಾರ್ಥಗಳು ದತ್ತೂರಿಕಾಯಿ, ಹೌದು ಈ ದತ್ತೂರಿ ಕಾಯಿ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬೇಲಿಗಳ ಬಳಿ ತೋಟ ಗದ್ದೆಗಳ ಬದಿಯಲ್ಲಿ ಬಿಟ್ಟಿರುತ್ತದೆ ಇದನ್ನು ತಂದು ಚೆನ್ನಾಗಿ ಜಜ್ಜಿ ಇಟ್ಟುಕೊಳ್ಳಬೇಕು ನಂತರ ಇದನ್ನು ಬಿಸಿ ಆಗುತ್ತಿರುವಂತಹ ಹರಳೆಣ್ಣೆಯೊಂದಿಗೆ ಹಾಕಿ ದತ್ತೂರಿ ಕಾಯಿಯ ಸಾರಾಂಶ ಆ ಹರಳೆಣ್ಣೆ ಒಟ್ಟಿಗೆ ಬಿಟ್ಟುಕೊಳ್ಳಬೇಕು ಆ ರೀತಿ ಬಿಸಿ ಮಾಡಬೇಕು ಅಂದರೆ ಬಾಡಿಸಿಕೊಳ್ಳಬೇಕು.

ಈ ರೀತಿ ಬಾಡಿಸಿ ಕೊಳ್ಳುಬೇಕಾದರೆ, ಇದರೊಟ್ಟಿಗೆ ಬೆಳ್ಳುಳ್ಳಿ ಅನ್ನೂ ಕೂಡ ಹಾಕಿ ಆ ಬೆಳ್ಳುಳ್ಳಿಯ ಅಂಶವೂ ಕೂಡ ಎಣ್ಣೆಗೆ ಇಳಿದುಕೊಳ್ಳಬೇಕು, ಆ ರೀತಿ ಈ ಮೂರೂ ಪದಾರ್ಥಗಳನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.ಇದನ್ನು ಹಾಗೇ ಸ್ವಲ್ಪ ಸಮಯ ತಣಿಯಲು ಬಿಡಿ ನಂತರ ಏರ್ ಟೈಟ್ ಕಂಟೈನರ್ ಗೆ ಈ ಎಣ್ಣೆಯನ್ನು ಶೋಧಿಸಿಕೊಳ್ಳಿ.ಈಗ ಮನೆಯಲ್ಲಿಯೇ ಎಫೆಕ್ಟಿವ್ ಮಸಾಜಿಂಗ್ ಆಯಿಲ್ ತಯಾರಾಗಿದೆ ಇದನ್ನು ನೀವು ಹೇಗೆ ಬಳಸಬೇಕೆಂದರೆ ಸ್ನಾನಕ್ಕೂ ಅರ್ಧ ಗಂಟೆಯ ಮುಂಚೆ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ನೋವು ಇರುವ ಭಾಗಕ್ಕೆ ಹಚ್ಚಿ ಬೇರೆಯವರಿಂದ ಸ್ವಲ್ಪ ಮಸಾಜ್ ಮಾಡಿಸಿಕೊಳ್ಳಿ.

ಇದೇ ರೀತಿ ಪ್ರತಿದಿನ ಮಾಡುತ್ತ ಬಂದಲ್ಲಿ ಕೈಕಾಲುಗಳಲ್ಲಿ ಕಾಣಿಸಿಕೊಳ್ಳುತ್ತಿರುವಂಥ ನೋವು ನಿವಾರಣೆಯಾಗುತ್ತದೆ ಹಾಗೆ ಇದರಿಂದ ಚರ್ಮಕ್ಕೆ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.ಇದರ ಜೊತೆಗೆ ನೀವು ಪ್ರತಿದಿನ ಆಹಾರ ಪದ್ಧತಿಯಲ್ಲಿ ಇದನ್ನು ಕೂಡ ಅಳವಡಿಸಿಕೊಳ್ಳಬೇಕು ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಚಿಟಿಕೆ ಅರಿಶಿಣವನ್ನು ಮಿಶ್ರಮಾಡಿ ಕುಡಿಯುತ್ತ ಬರಬೇಕು ಇದನ್ನು ಎಲ್ಲರೂ ಕೂಡ ಮಾಡಬಹುದು.

ಇದರಿಂದ ಸೊಂಟಕ್ಕೆ ಫಲ ಸಿಗುತ್ತೆ ಹಾಗೂ ಕೈ ಕಾಲುಗಳು ಕೂಡ ಬಲಗೊಳ್ಳುತ್ತದೆ ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಗಳಿಗೆ ಚೆನ್ನಾಗಿ ಬಲ್ಲ ನೀಡಿ ನೋವನ್ನು ನಿವಾರಣೆ ಮಾಡಲು ಸಹಕಾರಿಯಾಗಿರುತ್ತೆ ಹಾಗಾಗಿ ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಜೊತೆಗೆ ಮಂಡಿನೋವು ಕೈ ಕಾಲು ನೋವಿಗೆ ಬಾಯ್ ಬಾಯ್ ಹೇಳಿ…