ಎಷ್ಟೇ ಹಳೆಯ ಸೊಂಟ , ಕೀಲು ಹಾಗು ಬೆನ್ನು ನೋವು ಇದ್ದರು ಸಹ ಈ ತರದ ಎಣ್ಣೆಯನ್ನ ಮನೆಯಲ್ಲೇ ತಯಾರಿಸಿ ಒಂದು ವಾರ ಹಚ್ಚಿ ಸಾಕು… ಕೆಲವೇ ಎಲ್ಲ ಕಡಿಮೆ ಆಗುತ್ತದೆ..

337

ಇತ್ತೀಚೆಗೆ ಕಾಡುವ ಈ ಕಾಲು ನೋವು ಮೊಣಕಾಲು ನೋವು ಇಂತಹುದೆಲ್ಲ ನೋವಿಗೆ ಮಾತ್ರೆಗಳ ಮೊರೆ ಹೋಗುವುದರ ಬದಲು ಅಥವಾ ಆಪರೇಷನ್ ಚಿಕಿತ್ಸೆ ಎಂಬ ದಾರಿ ಹಿಡಿಯುವುದರ ಬದಲು ನಮ್ಮ ಸುತ್ತಮುತ್ತ ನಮ್ಮ ಪರಿಸರದಲ್ಲಿ ದೊರೆಯುವ ಕೆಲವೊಂದು ಗಿಡಮೂಲಿಕೆಯನ್ನ ಬಳಸಿಕೊಂಡು ನೋವು ನಿವಾರಣೆ ಮಾಡುವ ಎಣ್ಣೆಯನ್ನು ಮಾಡಿ, ಪ್ರತಿದಿನ ಮಸಾಜ್ ಮಾಡುತ್ತಾ ಬಂದರೆ ನೋವನ್ನು ಬಹಳ ಬೇಗ ಕಡಿಮೆ ಮಾಡಿಕೊಳ್ಳಬಹುದು.

ಹಾಗಾದರೆ ನಿಮಗೂ ಕೂಡ ಈ ಸೊಂಟ ನೋವು ಕಾಲು ನೋವು ಕಾಲು ಸೆಳೆತ ಪಾದಗಳಲ್ಲಿ ನೋವು ಹೀಗೆ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೂ, ಅದರಿಂದ ಶಮನ ಪಡೆದುಕೊಳ್ಳುವುದಕ್ಕಾಗಿ ಈ ನೋವು ನಿವಾರಣೆ ಮಾಡುವ ಎಣ್ಣೆ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ.ಈ ನೋವು ನಿವಾರಣೆ ಮಾಡುವ ಎಣ್ಣೆಯನ್ನ ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಅಗ್ನಿ ಬಳ್ಳಿ ಅಥವಾ ಇರುಂಬಳ್ಳಿ ಅಂತ ಕೂಡ ಇದನ್ನು ಕರೆಯುತ್ತಾರೆ, ಅಥವಾ ಇಂಗ್ಲಿಷ್ ನಲ್ಲಿ ಇದನ್ನು ಬಲೂನ್ ವೈನ್ ಎಂದು ಕರೆಯುತ್ತಾರೆ.

ಈ ಬಳ್ಳಿಯು ನಿಮಗೆ ಹಳ್ಳಿಗಳಲ್ಲಿ ದೊರೆಯುತ್ತೆ ಅಥವಾ ನಾಟಿ ಔಷಧಿ ಮಾಡುವ ಮಂದಿಗೆ ಇದರ ಪರಿಚಯ ಇರುತ್ತದೆ, ಇದನ್ನು ತಂದು ನೀವು ಮನೆಯಲ್ಲಿಟ್ಟುಕೊಂಡು ಇದರಿಂದ ಎಣ್ಣೆ ತಯಾರಿಸಿಕೊಂಡು ವರ್ಷಾನುಗಟ್ಟಲೆ ಈ ಎಣ್ಣೆಯನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.ಈ ನೋವು ನಿವಾರಕ ಎಣ್ಣೆಯನ್ನು ಮಾಡಿಕೊಳ್ಳುವುದು ತುಂಬಾ ಸುಲಭ ಮೊದಲಿಗೆ ಹರಳೆಣ್ಣೆಯನ್ನು ಬಿಸಿ ಮಾಡಲು ಇಡಬೇಕು, ಈ ಎಣ್ಣೆ ಮಾಡುವಾಗ ನೀವು ಅದಷ್ಟು ಕಬ್ಬಿಣದ ಬಾಣಲೆಯನ್ನು ತೆಗೆದುಕೊಳ್ಳಿ.

ಇದಕ್ಕೆ ಹರಳೆಣ್ಣೆ ಹಾಕಿ ಎಣ್ಣೆ ಸ್ವಲ್ಪ ಬಿಸಿಯಾದ ಮೇಲೆ ಬಳ್ಳಿಯ ಎಲೆಗಳನ್ನು ಎಣ್ಣೆಗೆ ಹಾಕಿ ತಿರುಗಿಸುತ್ತಾ ಇರಬೇಕು.ಹೌದು ಬಾಣಲೆಗೆ ಎಲೆಗಳನ್ನು ಕತ್ತರಿಸಿ ಹಾಕಿದ ಮೇಲೆ ಚಮಚದ ಸಹಾಯದಿಂದ ಆ ಎಲೆಗಳನ್ನೂ ಎಣ್ಣೆ ಒಳಗೆ ಕೈ ಆಡಿಸುತ್ತಲೇ ಇರಬೇಕು.ಎಣ್ಣೆ ಒಳಗೆ ಎಲೆಗಳು ಎಷ್ಟು ಬಿಸಿಯಾಗಬೇಕು ಅಂದರೆ ಪೂರ್ತಿಯಾಗಿ ಎಲೆಯು ಸೀದು ಹೋಗಬೇಕು ಅಷ್ಟು ಪ್ರಮಾಣದಲ್ಲಿ ಎಣ್ಣೆ ಅಲ್ಲಿ ಎಲೆಗಳನ್ನು ಹುರಿಯಬೇಕು.

ಇದಾದ ಮೇಲೆ ಎಣ್ಣೆಯೊಳಗೆ ಹಾಗೆ ಎಲೆಗಳನ್ನು ಇರಿಸಿ ಆ ಎಣ್ಣೆ ತಣಿದ ಮೇಲೆ, ಗಾಜಿನ ಬಾಟಲಿಯೊಂದಕ್ಕೆ ಈ ಎಣ್ಣೆಯನ್ನು ಶೋಧಿಸಿಕೊಂಡು ವರ್ಷಾನುಗಟ್ಟಲೆ ಇದನ್ನು ನೀವು ಬಳಸಬಹುದು ಈ ಎಣ್ಣೆ ಕೆಡುವುದಿಲ್ಲ. ಆದರೆ ನೀವು ಎಣ್ಣೆಯೊಳಗೆ ಎಲೆಗಳನ್ನ ಸಂಪೂರ್ಣವಾಗಿ ಸೀದು ಹೋಗುವಷ್ಟು ಪ್ರಮಾಣದಲ್ಲಿ ಬಿಸಿ ಮಾಡಿಕೊಳ್ಳಬೇಕು.ಈಗ ನೋವು ನಿವಾರಕ ಎಣ್ಣೆ ತಯಾರಾಗಿದೆ ಇದನ್ನು ನೋವಿರುವ ಭಾಗಕ್ಕೆ ಲೇಪ ಮಾಡಿ ಬೇರೆಯವರಿಂದ ಆ ಭಾಗಕ್ಕೆ ಮಸಾಜ್ ಮಾಡಿಸಿಕೊಳ್ಳಬೇಕು.

ಈ ರೀತಿ ನೋವು ಬಂದಾಗ ತಕ್ಷಣವೇ ಈ ನೋವು ನಿವಾರಕ ಎಣ್ಣೆಯಿಂದ ಮಸಾಜ್ ಮಾಡಿಕೊಂಡಿದ್ದೇ ಆದಲ್ಲಿ ನೋವಿನಿಂದ ಬಹಳ ಬೇಗ ಶಮನ ದೊರೆಯುತ್ತದೆ.ನೋವು ಬಂದಾಗ ನೋವುನಿವಾರಕ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರ ಜೊತೆಗೆ ಪ್ರತಿದಿನ ಸ್ನಾನ ಮಾಡುವ ಸಮಯದಲ್ಲಿ ನೋವು ಇದ್ದ ಭಾಗಕ್ಕೆ ಬಿಸಿ ನೀರಿನಿಂದ ಶಾಖ ನೀಡುತ್ತ ಬರಬೇಕು.ಈ ರೀತಿ ಶಾಖ ನೀಡುವುದರಿಂದ ನೋವು ಬಹಳ ಬೇಗ ನಿವಾರಣೆ ಅಗುವುದು.ಬಿಸಿ ನೀರಿನಿಂದ ಶಾಖ ಕೊಡುವುದರಿಂದ ಆಗುವ ಲಾಭವೇನು ಅಂದರೆ ನೋವು ಬಹಳ ಬೇಗ ಕಡಿಮೆಯಾಗುತ್ತದೆ ಮತ್ತು ನೋವಾದ ಭಾಗದಲ್ಲಿ ಊದಿದ್ದರೆ ಅದು ಸಹ ಬಹಳ ಬೇಗ ಕಡಿಮೆ ಅಗುತ್ತೆ ಅಂದರೆ ಊತ ಇಳಿಯುತ್ತದೆ.