ಮೈಮೇಲೆ ಆಗಿರುವಂತಹ ಈ ಕೊಬ್ಬಿನ ಗೆಡ್ಡೆಗಳನ್ನು ಕರಗಿಸುವುದು ಹೇಗೆ ಗೊತ್ತಾ? ಹೌದು ಇದಕ್ಕಾಗಿ ನೀವು ಚಿಕಿತ್ಸೆ ತೆಗೆದುಕೊಳ್ಳಬೇಕು ಅಥವಾ ಸರ್ಜರಿ ಮಾಡಿಸಿ ಈ ಗಡ್ಡೆಗಳನ್ನು ತೆಗಿಸಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ.
ಹಾಗಾದರೆ ಅಷ್ಟೊಂದು ಕಷ್ಟ ತೆಗೆದುಕೊಳ್ಳಬೇಡಿ ಇವತ್ತಿನ ಲೇಖನಿಯಲ್ಲಿ ನಾವು ಇಂತಹ ಗೆಡ್ಡೆಗಳನ್ನು ಬಹಳ ಬೇಗ ಕರಗಿಸುವಂತಹ ಒಂದೊಳ್ಳೆ ಸುಲಭವಾದ ಪ್ರಭಾವವಾದ ಮನೆಮದ್ದನ್ನು ತಿಳಿಸಿಕೊಡುತ್ತೆವೆ ಇದನ್ನು ಪಾಲಿಸಿದರೆ ಸಾಕು ಇದರಿಂದ ಮೈಮೇಲೆ ಆಗಿರುವಂತಹ ಗಡ್ಡೆಯನ್ನು ಬಹಳ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಹಾಗೂ ಯಾವುದೇ ಚಿಕಿತ್ಸೆಯಿಲ್ಲದೆ ಹೆಚ್ಚು ಕಷ್ಟ ಪಡದೆ ನೋವು ಅನುಭವಿಸದೇ.
ಹೌದು ಸ್ನೇಹಿತರೆ ಈ ಗಡ್ಡೆಗಳು ಯಾವುದಕ್ಕೆ ಈ ರೀತಿ ನಮ್ಮ ಮೈಮೇಲೆ ಉಂಟಾಗುತ್ತದೆ ಇದಕ್ಕೆ ಕಾರಣವೇನು ಎಂಬುದನ್ನು ಮೊದಲು ತಿಳಿಯೋಣ, ಹೌದು ಈ ಸಮಸ್ಯೆಯನ್ನು ಇಂಗ್ಲಿಷ್ನಲ್ಲಿ ಲಿಫೋಮಾ ತೊಂದರೆ ಅಂತ ಕರೆಯುತ್ತಾರೆ.
ಈ ತೊಂದರೆ ಉಂಟಾದವರಿಗೆ ಯಾವುದೇ ತರಹದ ನೋವು ಇರುವುದಿಲ್ಲ ಹಾಗಂತ ಇದು ಕ್ಯಾನ್ಸರ್ ಗೆ ತಿರುಗುತ್ತೆ ಅಂತ ಭಯ ಬೇಡ ಯಾವುದೇ ಕಾರಣಕ್ಕೂ ಈ ತೊಂದರೆ ನಿಮ್ಮಲ್ಲಿ ಇದ್ದರೆ ಇದು ನಿಮಗೆ ಯಾವುದೇ ತರಹದ ತೊಂದರೆಗಳನ್ನೂ ಮುಂದಿನ ದಿನಗಳಲ್ಲಿ ನೀಡುವುದಿಲ್ಲ. ಆದರೆ ಕೆಲವರಿಗೆ ಇಂತಹ ಗೆಡ್ಡೆಗಳು ಮೈಮೇಲೆ ಕಾಣಿಸಿಕೊಂಡಾಗ ಅದು ಮುಜುಗರ ಆಗುತ್ತದೆ ಎಂಬ ಭಾವನೆ ಬರುತ್ತದೆ ಅಂತ ಕಾರಣಕ್ಕಾಗಿ ಮಾತ್ರ ಈ ಮಾಹಿತಿ ಮೂಲಕ ಸರಳ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ.
ಹೌದು ಮೈ ಮೇಲೆ ಉಂಟಾಗುವ ಈ ಗೆಡ್ಡೆಗಳು ಪರಿಹಾರ ಮಾಡಿಕೊಳ್ಳುವುದು ತುಂಬಾ ಸುಲಭ ಇದಕ್ಕೆ ಸರ್ಜರಿ ತನಕ ಹೋಗುವ ಅವಶ್ಯಕತೆ ಇಲ್ಲ.ಇನ್ನೂ ಈ ಗಡ್ಡೆಗಳು ಕಾಣಿಸಿಕೊಂಡಾಗ ಇದನ್ನು ಪರಿಹಾರ ಮಾಡುವುದು ತುಂಬಾ ಸುಲಭ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಬೆಳ್ಳುಳ್ಳಿ ಅರಿಶಿಣ ಕೊಬ್ಬರಿ ಎಣ್ಣೆ ಮತ್ತು ಸೈಂಧವ ಲವಣ.
ಹೌದು ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಈ ಕೊಬ್ಬರಿ ಎಣ್ಣೆಗೆ ಅರಿಶಿಣ ಮತ್ತು ಸೈಂಧವ ಲವಣ ಅಂದರೆ ಇದನ್ನು ಇಂಗ್ಲಿಷ್ ನಲ್ಲಿ ರಾಕ್ ಸಾಲ್ಟ್ ಅಂತ ಕರೆಯುತ್ತಾರೆ ಇದನ್ನು ಮಿಶ್ರಣ ಮಾಡಿಕೊಂಡು ಪಡಿಕಮಣ ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಅದನ್ನು ಹಾಗೆ ಹಸಿಯಾಗಿಯೇ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಅಂದರೆ ಪೇಸ್ಟ್ ರೀತಿ ಮಾಡಿಕೊಂಡು ಈ ಕೊಬ್ಬರಿ ಎಣ್ಣೆಯ ಮಿಶ್ರಣಕ್ಕೆ ಹಾಕಿ ಮತ್ತೊಮ್ಮೆ ಪೇಸ್ಟ್ ಮಾಡಿಕೊಳ್ಳಬೇಕು.
ಈಗ ನಮಗೆ ಪರಿಹಾರ ತಯಾರಾಗಿದೆ ಇದನ್ನ ದೇಹದ ಮೇಲೆ ಯಾವುದೇ ಭಾಗದಲ್ಲಿ ಆಗಲಿ ಅದು ಕುತ್ತಿಗೆ ಅಥವಾ ಕೈ ಕಾಲು ಇವುಗಳ ಮೇಲೆ ಇದ್ದರೆ, ಅದರ ಮೇಲೆ ಈ ಮಿಶ್ರಣವನ್ನು ಲೇಪ ಮಾಡಿ.
ಈ ಲೇಪವನ್ನು ಪ್ರತಿದಿನ ಮಾಡುತ್ತ ಬರಬೇಕು ಇದನ್ನು ಅರ್ಧ ಗಂಟೆಯ ವರೆಗೂ ಹಾಗೇ ಇರಿಸಿ ಬಳಿಕ ಅದನ್ನು ಬಿಸಿನೀರಿನಿಂದ ಸ್ವಚ್ಛ ಮಾಡಬೇಕು ಇದನ್ನು ನೀವು ಪ್ರತಿದಿನ ಮಾಡಿಕೊಂಡು ಬಂದದ್ದೇ ಆದಲ್ಲಿ ಆ ಗೆಡ್ಡೆಗಳು ಬಹಳ ಬೇಗ ಕರಗುತ್ತದೆ.
ನೋಡಿ ಈ ಪರಿಹಾರವನ್ನು ನೀವು ಕೂಡ ವಾರದವರೆಗೂ ಮಾಡಿ ನೋಡಿ ಇದರಿಂದ ಬರುವ ಫಲಿತಾಂಶ ನಿಮಗೆ ಅಚ್ಚರಿ ಮೂಡಿಸುತ್ತೆ.ಈ ಪರಿಹಾರವೇನಾದರೂ ನಿಮಗೆ ಫಲಿತಾಂಶವನ್ನು ಬೇಗ ಕೊಡದೇ ಹೋದಾಗ ಈ ಪರಿಹಾರವನ್ನು ಮಾಡಿದ ಮೇಲೆ ಅಂದರೆ ಬಿಸಿ ನೀರಿನಿಂದ ಸ್ವಚ್ಛ ಮಾಡಿದ ನಂತರ ಸೈಂಧವ ಲವಣವನ್ನು ಕಾಟನ್ ಬಟ್ಟೆ ಯೊಂದಕ್ಕೆ ಹಾಕಿ, ಗೆಡ್ಡೆಯ ಸುತ್ತ ಬಿಸಿ ಮಾಡಿಕೊಂಡು ಇದರಿಂದ ಗೆಡ್ಡೆಯ ಭಾಗಕ್ಕೆ ಶಾಖ ಕೊಡಿ. ಇದರಿಂದ ಕೂಡ ಆ ಭಾಗದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆದು ಕೊಬ್ಬು ಕರಗಿ ಗೆಡ್ಡೆ ಮಾಯವಾಗುತ್ತೆ.