ಮಂಡಿ ನೋವು ವಿಪರೀತ ಆಗಿದ್ದಲ್ಲಿ ಅದಕ್ಕೆ ಪರಿಹಾರವಾಗಿ ಈ ಮನೆಮದ್ದನ್ನು ಪಾಲಿಸಿ ಇದಕ್ಕಾಗಿ ಬೇಕಾಗಿರುವುದು ಕೇವಲ ಎಕ್ಕದ ಗಿಡ ಅಷ್ಟೇ ಹೌದು ಈ ಮನೆಮದ್ದು ಮಾಡೋದಕ್ಕೆ ಮುಖ್ಯವಾಗಿ ಬೇಕಾಗಿರುವುದು ಎಕ್ಕದ ಗಿಡದ ಎಲೆ.
ಹೌದು ಮಂಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕಾಗಿ ಕೇವಲ ಎಕ್ಕದ ಗಿಡ ದ ಎಲೆ ಇದ್ದರೆ ಸಾಕು, ನೋವು ನಿವಾರಣೆ ಆದಂತೆ ಹಾಗಾದರೆ ಬನ್ನಿ ಪರಿಹಾರದ ಕುರಿತು ತಿಳಿದುಕೊಳ್ಳೋಣ ಜೊತೆಗೆ ಈ ಮಾಹಿತಿಯಲ್ಲಿ ಬಹಳ ಪ್ರಭಾವಶಾಲಿ ಆದಂತಹ ನೋವು ನಿವಾರಕ ಎಣ್ಣೆಯನ್ನ ತಯಾರಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಈ ಪುಟವನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ಮಂಡಿನೋವಿಗೆ ಒಂದೊಳ್ಳೆ ಮನೆಮದ್ದನ್ನು ಮಾಡಿಕೊಳ್ಳಿ ಈ ವಿಧಾನವನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು.
ಹೌದು ಮಂಡಿ ನೋವು ಸಾಮಾನ್ಯವಾಗಿ ತೂಕ ಹೆಚ್ಚುವುದರಿಂದ ಹಾಗೂ ವಯಸ್ಸಾದ ಮೇಲೆ ಕಾಣಿಸಿಕೊಳ್ಳುತ್ತದೆ. ಈ ವಯಸ್ಕರರಲ್ಲಿ ಮಂಡಿ ನೋವು ಕಾಣಿಸಿಕೊಂಡರೆ ಅದಕ್ಕೆ ಕಾರಣ ಏನು ಎನ್ನುವುದನ್ನೂ ಹೇಳುವುದಾದರೆ ಕೆಲವೊಂದು ಬಾರಿ ಚಿಕ್ಕ ಪುಟ್ಟ ಪೆಟ್ಟು ಆಗಿರುತ್ತದೆ ಆ ನೋವು ಹಾಗೇ ನಿಂತಿರುತ್ತದೆ, ಆಗ ಆ ನೋವು ವಿಪರೀತವಾದಾಗ ಮಂಡಿನೋವು ಹೆಚ್ಚುತ್ತದೆ ಆದರೆ ತುಂಬ ಸರಳ ವಿಧಾನದಲ್ಲಿ ಈ ತರಹದ ಮಂಡಿನೋವನ್ನು ಪರಿಹಾರ ಮಾಡಿಕೊಳ್ಳಬಹುದು ಹೇಗೆಂದು ತಿಳಿಯುವುದಕ್ಕೆ ಈ ಲೇಖನವನ್ನ ತಿಳಿಯಿರಿ ಹಾಗೂ ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಈ ಪರಿಹಾರವನ್ನು ಬೇರೆಯವರಿಗೂ ಕೂಡ ತಿಳಿಸಿಕೊಡಿ.
ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಎಕ್ಕದ ಎಲೆಗಳು ಮತ್ತು ಸಾಸಿವೆ ಎಣ್ಣೆ ಬೆಳ್ಳುಳ್ಳಿ ಇಷ್ಟು ಪದಾರ್ಥಗಳು ಬೆಚ್ಚಗಿರುತ್ತದೆ. ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ ಬಳಿಕ ಈ ಎಲೆಯನ್ನು ರೊಟ್ಟಿ ಹಂಚಿನ ಮೇಲೆ ಹಾಕಿ ಬಿಸಿ ಮಾಡಬೇಕು.
ಈ ಎಲೆ ಬಿಸಿ ಆಗುವ ತನಕ, ನೋವು ನಿವಾರಕ ಎಣ್ಣೆಯನ್ನು ಮಾಡಿಕೊಳ್ಳಿ, ತುಂಬ ಸುಲಭ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಈ ಎಣ್ಣೆ ಬಿಸಿ ಆಗುವ ಸಮಯದಲ್ಲಿ ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಸಾಸಿವೆ ಎಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಕೂಡ ಬಿಸಿ ಮಾಡಬೇಕು. ಈಗ ಈ ಎಣ್ಣೆಯನ್ನು ಹಾಗೇ ತಣಿಯಲು ಬಿಟ್ಟು ಸ್ವಲ್ಪ ಸಮಯದ ಬಳಿಕ ಈ ಎಣ್ಣೆಯನ್ನು ಶೋಧಿಸಿಕೊಂಡು ಕಂಟೈನರ್ ವೊಂದಕ್ಕೆ ಶೇಖರಣೆ ಮಾಡಿ ಇಟ್ಟುಕೊಳ್ಳಿ ನೋವು ಆದಾಗ ಆ ಭಾಗಕ್ಕೆ ಈ ನೋವು ನಿವಾರಕ ಎಣ್ಣೆಯನ್ನು ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಬೇಕು.
ಈ ರೀತಿ ಮಸಾಜ್ ಮಾಡುವ ಮುನ್ನ ಒಮ್ಮೆ ಚರ್ಮದ ಮೇಲೆ ಅಲೋವೆರಾ ಜೆಲ್ ಅನ್ನು ಹಚ್ಚಿ ಬಳಿಕ ನೋವು ನಿವಾರಕ ಎಣ್ಣೆಯನ್ನು ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿದ ಮೇಲೆ ಬಿಸಿ ಮಾಡಿಕೊಂಡಂತಹ ಎಕ್ಕದ ಎಲೆಯನ್ನ ನೋವಿರುವ ಭಾಗದಲ್ಲಿ ಇಟ್ಟು ಶಾಖಾ ನೀಡುತ್ತಾ ಬರಬೇಕು ಈ ರೀತಿ ಮಾಡುತ್ತ ಬರುವುದರಿಂದ ಆ ನೋವು ಇರುವ ಭಾಗದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ ಜೊತೆಗೆ ನೋವು ಕೂಡ ಬಹಳ ಬೇಗ ನಿವಾರಣೆಯಾಗುತ್ತೆ.
ಈ ರೀತಿ ಸರಳ ವಿಧಾನದಲ್ಲಿ ಮಂಡಿನೋವನ್ನು ಪರಿಹಾರ ಮಾಡಿಕೊಳ್ಳಿ ಆರೋಗ್ಯದ ಮೇಲೆಯೂ ಕೂಡ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ ನಿವೇನಾದರೂ ಮಂಡಿನೋವು ಎಂದು ಮಾತ್ರೆ ತೆಗೆದುಕೊಳ್ಳುವ ರೂಢಿ ಮಾಡಿಕೊಂಡರೆ.
ಮಾತ್ರೆ ತೆಗೆದುಕೊಳ್ಳುತ್ತಲೇ ಇದ್ದರೆ ಅದು ಆರೋಗ್ಯ ಕ್ಷೀಣಿಸುತ್ತದೆ ಹೊರೆತು ನೋವನ್ನ ಆ ಕ್ಷಣಕ್ಕೆ ಕಡಿಮೆ ಮಾಡುತ್ತದೆ ಆದರೆ ಖಂಡಿತ ಸಂಪೂರ್ಣ ನೋವನ್ನು ನಿವಾರಣೆ ಮಾಡುವುದಿಲ್ಲ. ಈ ಸರಳ ಮನೆಮದ್ದು ಪಾಲಿಸಿ ಮಂಡಿ ನೋವಿನಿಂದ ಪರಿಹಾರ ಪಡೆಯಿರಿ.