ಕೂದಲು ವಿಪರೀತವಾಗಿ ಉದುರುತ್ತಾ ಇದೆ ಅಂದರೆ ಅದಕ್ಕಾಗಿ ಮಾಡಿ ಈ ಪರಿಹಾರ ಹೌದು ಕೂದಲು ಉದುರುತ್ತಿದೆ ಅಥವಾ ಕೂದಲು ಬಿಳಿಯಾಗುತ್ತ ಇದೆ ಅಂದರೆ ಈ ಗ್ರೇ ಹೇರ್ಸ್ ಅಂತ ಇವತ್ತಿನ ದಿನಗಳಲ್ಲಿ ಹೇಳ್ತಾರೆ ಈ ರೀತಿ ಸಮಸ್ಯೆ ಎದುರಾಗುತ್ತ ಇದ್ದರೆ ಅದಕ್ಕಾಗಿ ಹಲವರು ಮಾಡುವ ಪರಿಹಾರ ಅಂದರೆ ಅದು ಕೂದಲು ಕಲರಿಂಗ್ ಮಾಡಿಸುವುದು ಅಥವಾ ಕೂದಲು ಕತ್ತರಿಸುವುದು ಇಲ್ಲ ಮನೆಯಲ್ಲಿಯೇ ಹೇರ್ ಡೈ ಹಾಕಿಕೊಳ್ಳುವುದು.
ಈ ರೀತಿ ಶಾರ್ಟ್ ಕಟ್ ಪರಿಹಾರಗಳನ್ನು ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಕೂದಲನ್ನ ಕಾಳಜಿ ಮಾಡುತ್ತಾ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಈ ಬಿಳಿ ಕೂದಲನ್ನು ಪರಿಹರ ಮಾಡಿಕೊಳ್ಳಬಹುದು.ಹೌದು ಸ್ನೇಹಿತರ ಬಿಳಿ ಕೂದಲಿನ ಸಮಸ್ಯೆ ಚಿಕ್ಕವಯಸ್ಸಿಗೆ ಎದುರಾದಾಗ ಎಷ್ಟು ಬೇಸರವಾಗುತ್ತದೆ ಅನ್ನೋದು ನಿಜಕ್ಕೂ ಆ ಸಮಸ್ಯೆ ಎದುರಿಸುತ್ತಾ ಇರುವವರೆಗೆ ಗೊತ್ತಿರುತ್ತೆ ನೋಡಿ. ಬೇಕಾದ ಹೇರ್ ಸ್ಟೈಲ್ ಮಾಡುವ ಹಾಗಿಲ್ಲ ಮತ್ತು ಹೊಟ್ಟಿನ ಸಮಸ್ಯೆ ಇರುವುದರಿಂದ ಕೂದಲು ಕೆರೆತಾವ ಉಂಟಾಗುವುದು ಹೀಗೆಲ್ಲ ಆಗುತ್ತಾ ಇರುತ್ತದೆ. ಹೀಗಾಗಿ ಈ ಕೂದಲು ಬಿಳಿಯಾಗಿದ್ದರೆ ಹಲವರು ಅದನ್ನ ನೋಡಿ ಆಡಿಕೊಳ್ಳುತ್ತಾರೆ ಎಂಬ ಭಾವನೆ ಕೂಡ ನಮ್ಮಲ್ಲಿ ಉಂಟಾಗಿರುತ್ತದೆ.
ಆದ್ದರಿಂದ ಪುರುಷರಿಗೆ ಮಹಿಳೆಯರಿಗೆ ಆಗಲೇ ಈ ಬಿಳಿ ಕೂದಲು ಕಾಣಿಸಿಕೊಂಡಾಗ ಅದು ಸ್ವಲ್ಪ ಮುಜುಗರವನ್ನು ಉಂಟು ಮಾಡುತ್ತೆ ಆದರೆ ಬಿಳಿ ಕೂದಲು ಚಿಕ್ಕವಯಸ್ಸಿಗೇ ಉಂಟಾಗುತ್ತದೆ ಅಂದರೆ ನಾವು ಅದಕ್ಕೆ ನಾವೇ ಕಾರಣ ಆಗಿರುತ್ತೇವೆ.
ಸರಿಯಾದ ಪೋಷಕಾಂಶ ಭರಿತ ಆಹಾರವನ್ನು ಸೇವನೆ ಮಾಡುತ್ತಾ ಇರುವುದಿಲ್ಲ ಜೊತೆಗೆ ಕೂದಲಿನ ಕಾಳಜಿ ಕೂಡ ಮಾಡುತ್ತಾ ಇರುವುದಿಲ್ಲ ಈ ಕಾರಣದಿಂದ ಕೂದಲು ಚಿಕ್ಕವಯಸ್ಸಿಗೆ ಬಿಳಿ ಕೂದಲು ಆಗಿರುತ್ತದೆ ಆದರೆ ಈಗ ಚಿಂತೆ ಬೇಡ ನಿಮ್ಮ ಈ ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದು ಅತ್ಯದ್ಭುತ ಪರಿಹಾರ ಇದನ್ನು ಕೊಬ್ಬರಿ ಎಣ್ಣೆಯಿಂದ ಮಾಡೋದು. ಹಾಗಾಗಿ ಕೂದಲಿಗೆ ಯಾವುದೇ ತರಹದ ಅಡ್ಡ ಪರಿಣಾಮ ಇರುವುದಿಲ್ಲ ಮತ್ತು ಕೊಬ್ಬರಿ ಎಣ್ಣೆಯನ್ನು ಬಳಸುತ್ತಿರುವುದರಿಂದ ಕೂದಲನ್ನ ಈ ಪರಿಹಾರ ಚೆನ್ನಾಗಿ ಪೋಷಣೆ ಮಾಡುತ್ತದೆ.
ಅದಕ್ಕಾಗಿ ಈ ಪರಿಹಾರಕ್ಕೆ ಬೇಕಾಗಿರುವುದು ಕೊಬ್ಬರಿ ಎಣ್ಣೆ ಕಪ್ಪು ಜೀರಿಗೆ ಮೆಂತೆ ಬೇಕಾದರೆ ಕರಿಬೇವಿನ ಸೊಪ್ಪನ್ನು ಕೂಡ ಈ ಪರಿಹಾರದಲ್ಲಿ ಬಳಸಬಹುದು.ಮೊದಲಿಗೆ ಕಪ್ಪುಜೀರಿಗೆ ತೆಗೆದುಕೊಂಡು ಅದನ್ನು ಕೂಡ ಪುಡಿ ಮಾಡಿ ಇಟ್ಟುಕೊಳ್ಳಿ ಜೊತೆಗೆ ಮೆಂತೆ ಅನ್ನು ಕೂಡ ತೆಗೆದುಕೊಂಡು ಅದನ್ನು ಪುಡಿಮಾಡಿ ಇಟ್ಟುಕೊಂಡು ಈ ಪದಾರ್ಥಗಳ ಮಿಶ್ರಣ ಮಾಡಿ ಇಟ್ಟುಕೊಳ್ಳಿ ಅದಕ್ಕೆ ನೀವು ಕರಿಬೇವಿನ ಎಲೆಗಳ ಪುಡಿಯನ್ನು ಮಿಶ್ರಮಾಡಿ, ಈ ತಯಾರಿಸಿಕೊಂಡ ಪುಡಿಯೊಂದಿಗೆ ಬೆರೆಸಿ.
ಈಗ ಕೊಬ್ಬರಿಎಣ್ಣೆಯನ್ನ ಹೇಗೆ ಬಿಸಿ ಮಾಡಿಕೊಳ್ಳುತ್ತೀರಾ ಆ ರೀತಿ ಕಬ್ಬಿಣದ ಬಾಣಲೆಗೆ ಹಾಕಿ ಕೊಬ್ಬರಿ ಎಣ್ಣೆ ಬಿಸಿ ಮಾಡಿಕೊಳ್ಳಿ ನಿಮ್ಮ ದೇಹ ವಿಪರೀತ ಉಷ್ಣ ಅನ್ನುವುದಾದರೆ, ಈ ಕೊಬ್ಬರಿ ಎಣ್ಣೆ ಜೊತೆಗೆ ಸ್ವಲ್ಪ ಹರಳೆಣ್ಣೆಯನ್ನು ಕೂಡ ಮಿಶ್ರ ಮಾಡಿಕೊಂಡು, ಆಮೇಲೆ ತಯಾರಿಸಿಕೊಂಡಂತಹ ಪುಡಿಯನ್ನು ಎಣ್ಣೆಗೆ ಹಾಕಿ ಮತ್ತೊಮ್ಮೆ ಚೆನ್ನಾಗಿ ಈ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
ಇದೀಗ ನಮಗೆ ಹೋಮ್ ರೆಮಿಡೀಸ್ ತಯಾರಾಗಿದೆ ಇದನ್ನು ಕೂದಲಿಗೆ ಲೇಪ ಮಾಡಿಕೊಳ್ಳಿ. ಈ ಮನೆಮದ್ದನ್ನು ಪಾಲಿಸುವುದರಿಂದ ಕೂದಲು ಬಿಳಿಯಾಗಿದ್ದರೆ ಕೂದಲು ಕಪ್ಪಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಇದ್ದರೆ ಖಂಡಿತ ಈ ಎಣ್ಣೆಯನ್ನು ಬಳಸುತ್ತಾ ಬಂದರೆ ದಿನದಿಂದ ದಿನಕ್ಕೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುವುದನ್ನು ನೀವು ಗಮನಿಸಬಹುದು.ಈ ಸರಳ ಪರಿಹಾರ ಪಾಲಿಸಿ ನಿಮ್ಮ ಈ ತೊಂದರೆಯಿಂದ ಪರಿಹಾರ ಪಡೆದುಕೊಳ್ಳಿ ಈ ಸರಳ ಮನೆಮದ್ದಿನಿಂದ.