ಕೆಲವರಿಗೆ ಮಳೆಗಾಲ ಬೇಸಿಗೆ ಕಾಲ ಅಥವಾ ಚಳಿಗಾಲ ಅನ್ನದೆ ಗಂಟಲು ಕೆರೆತ ಶೀತ ಕೆಮ್ಮಿನ ಸಮಸ್ಯೆ ಕಾಡ್ತಾನೇ ಇರುತ್ತೆ ಅಂತಹವರು ಎಲ್ಲ ಕಾಲಗಳಲ್ಲಿಯೂ ಮಾತ್ರೆಗಳನ್ನು ತೆಗೆದುಕೊಳ್ಳುವದಕ್ಕೆ ಆಗೋದಿಲ್ಲ ಅಲ್ವಾ ಅದಕ್ಕಾಗಿ ಪದೇ ಪದೇ ಕಾಡುವ ಶೀತ ಕೆಮ್ಮು ಮತ್ತು ಗಂಟಲು ಕೆರೆತ ಕೆ ಉತ್ತಮವಾದ ಒಂದು ಮನೆ ಮದ್ದನ್ನು ತಿಳಿಸಿಕೊಡುತ್ತೇವೆ.ಪದೇ ಪದೇ ಶೀತ ಕೆಮ್ಮು ಗಂಟಲು ಕೆರೆತ ಕಾಡಿದರೂ ಅದಕ್ಕೆ ಮಾತ್ರೆಯ ಮೊರೆ ಹೋಗದೆ ಸುಲಭವಾಗಿ ಈ ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.
ಮತ್ತು ಆರೋಗ್ಯಕ್ಕೆ ಬೇರೆ ತರಹದ ಅಡ್ಡ ಪರಿಣಾಮಗಳು ಆಗದೆ ಉತ್ತಮ ಆರೋಗ್ಯದೊಂದಿಗೆ ನಿಮ್ಮ ಸಮಸ್ಯೆಯನ್ನು ಬೇಗನೆ ಪರಿಹರಿಸಿಕೊಳ್ಳಿ.ಈ ಶೀತ ಕೆಮ್ಮು ನೆಗಡಿ ಅಥವಾ ಗಂಟಲು ಕೆರೆತ ಗೆ ಇಂದಿನ ಮಾಹಿತಿಯಲ್ಲಿ ಎರಡು ಮನೆ ಮಾತುಗಳನ್ನು ತಿಳಿದುಕೊಳ್ಳೋಣ ಸುಲಭವಾದ ಕೆಲವೊಂದು ಮನೆ ಅಲ್ಲಿಯೆ ದೊರೆಯುವಂತಹ ಪದಾರ್ಥಗಳು ಇದಕ್ಕಾಗಿ ಬೇಕಾಗಿರುತ್ತದೆ. ಮೊದಲು ವೀಳ್ಯದೆಲೆಯನ್ನು ತೆಗೆದುಕೊಳ್ಳಿ ನಂತರ ಇದಕ್ಕೆ ಎರಡು ಕಾಳುಮೆಣಸು ಅಥವಾ ಮಕ್ಕಳಿಗಾದರೆ ಒಂದು ಕಾಳು ಮೆಣಸನ್ನು ಅಥವಾ ಚಿಟಕಿ ಮೆಣಸಿನ ಪುಡಿಯನ್ನು ಎಳೆಯೊಂದಿಗೆ ಬೆರೆಸಿ.
ನಂತರ ಎಲೆಗೆ ಮೆಣಸಿನ ಕಾಳುಗಳನ್ನು ಇಟ್ಟ ನಂತರ ಸ್ವಲ್ಪ ಶುಂಠಿ ಅಂದರೆ ಕಾಲು ಇಂಚಿನ ಪ್ರಮಾಣದಲ್ಲಿ ಶುಂಠಿ ತೆಗೆದುಕೊಂಡು ಇದಕ್ಕೆ ಸ್ವಲ್ಪ ಬೆಲ್ಲದ ತುಂಡು ಮತ್ತು ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನು ಎಲೆಯ ಮೇಲೆ ಇರಿಸಿ.ನಾಲ್ಕೈದು ತುಳಸಿ ಎಲೆಗಳನ್ನು ಕೂಡ ವೀಳ್ಯದೆಲೆಯೊಂದಿಗೆ ಬೆರೆಸಿ ಇದೀಗ ಇದನ್ನು ಬೀಡ ಕಟ್ಟಿದ ಹಾಗೆ ಕಟ್ಟಬೇಕು ನಂತರ ಇದನ್ನು ಬಾಯಿಗೆ ಹಾಕಿ ಇದರ ರಸವನ್ನು ನುಂಗುವುದರಿಂದ ಈ ಒಂದು ಮಿಶ್ರಣ ಗಂಟಲು ನೋವಿನ ಸಮಸ್ಯೆಯನ್ನು ತಕ್ಷಣವೇ ಪರಿಹಾರ ಮಾಡುತ್ತದೆ ಹಾಗೆ ನೀವು ಪ್ರತಿದಿನ ಇದನ್ನು ಮಾಡುತ್ತಾ ಬನ್ನಿ ಎಷ್ಟು ದಿನ ಅಂದರೆ ಶೀತ ಕೆಮ್ಮು ಹೋಗುವವರೆಗೂ ಈ ಮನೆ ಮದ್ದನ್ನು ಪಾಲಿಸಿ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಮತ್ತು ಗಂಟಲು ಕಿರಿಕಿರಿಗೆ ಬೇಗಾನೆ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ.
ಎರಡನೆಯ ಮನೆ ಮತ್ತು ಈರುಳ್ಳಿಯ ರಸವನ್ನು ತೆಗೆದುಕೊಳ್ಳಿ ಮತ್ತು ಶುಂಠಿಯ ರಸವನ್ನು ಬೇರ್ಪಡಿಸಿಕೊಂಡು ಒಂದು ಅರ್ಧ ಲೋಟ ನೀರಿಗೆ ಈ ರಸವನ್ನು ಬೆರೆಸಿ ಸ್ವಲ್ಪ ಬಿಸಿ ಮಾಡಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, ಇದನ್ನು ಕುಡಿಯುವುದರಿಂದ ಕೂಡ ಶೀತ ಕೆಮ್ಮು ಮತ್ತು ಗಂಟಲು ಕಿರಿಕಿರಿ ಎಲ್ಲವೂ ಕೂಡ ಬೇಗನೆ ಪರಿಹಾರ ಆಗುತ್ತದೆ.ಈ ಕೆಮ್ಮಿಗೆ ಮತ್ತೊಂದು ಮನೆ ಮದ್ದನ್ನು ಮಾಡಬಹುದು ಅದೇನೆಂದರೆ ಖಾರದ ಈರುಳ್ಳಿಯೊಂದಿಗೆ ಬೆಲ್ಲವನ್ನು ಬೆರೆಸಿ ಸೇವಿಸಬೇಕು ಇದರ ಮಿಶ್ರಣ ಕೆಮ್ಮಿನ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿ ದ್ದಲ್ಲಿ ಈ ಮನೆಮದ್ದುಗಳನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡು ಕೆಮ್ಮು ಬಂದಾಗ ಅದನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸಿ ಉತ್ತಮ ಫಲಿತಾಂಶದೊಂದಿಗೆ ಬೇಗನೆ ಗಂಟಲು ಕಿರಿಕಿರಿಗೆ ಶಮನವನ್ನು ಪಡೆದುಕೊಳ್ಳಿ, ಹಾಗೆ ಇನ್ನೂ ಇಂತಹ ಅನೇಕ ಮನೆ ಮದ್ದುಗಳನ್ನು ಪಡೆದುಕೊಳ್ಳುವುದಕ್ಕಾಗಿ ಮತ್ತು ಆಚಾರ ವಿಚಾರ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.