ಹೌದು ಮುಖದ ಅಂದ ಸದಾ ಯಂಗ್ ಆಗಿ ಇರೋದಕ್ಕೆ ಈ ಮನೆಮದ್ದು ಪಾಲಿಸಿ, ಈ ಮನೆ ಮದ್ದು ಮಾಡುವುದರಿಂದ ಸದಾ ಯೌವನದಿಂದ ಕೂಡಿರುವ ಹಾಗೆ ನಿಮ್ಮ ಮುಖ ಕಾಣಿಸುತ್ತೆ.ಹೌದು ಕೆಲವರಿಗೆ ಆಸೆ ಇರುತ್ತದೆ ತಮ್ಮ ತ್ವಚೆ ಯಾವಾಗಲೂ ಯಂಗ್ ಆಗಿ ಕಾಣಬೇಕು ಅಂತ ಅದಕ್ಕಾಗಿ ಬಹಳಷ್ಟು ಜನರು ಬಹಳಷ್ಟು ಪರಿಹಾರಗಳನ್ನು ಮಾಡುತ್ತಾರೆ ಬಿಡಿ ಅದರಲ್ಲಿಯೂ ಬ್ಯೂಟಿ ಬಗ್ಗೆ ಬಹಳಷ್ಟು ಕಾಳಜಿ ಇರೋರು ಹಣ ಇರೋರು ಇನ್ಯಾವುದೋ ಯಾವುದೋ ಪರಿಹಾರಗಳನ್ನು ಮಾಡಿಕೊಳ್ಳುತ್ತಾರೆ ಬಿಡಿ
ಇದೀಗ ಅದರ ಮಾತು ಬೇಡ ಆದರೆ ನಾವು ಇಂದು ನೈಸರ್ಗಿಕವಾಗಿ ತ್ವಚೆಗೆ ಕಾಳಜಿ ಮಾಡುತ್ತಾ ಪುಷ್ಟಿ ನೀಡುತ್ತಾ ಸದಾ ಯಂಗ್ ಆಗಿ ಇರುವ ಹಾಗೆ ಹೇಗೆ ಮಾಡಿಕೊಳ್ಳುವುದು ಎಂಬುದನ್ನ ಸರಳ ಮಾರ್ಗದಲ್ಲಿ ಸರಳ ವಿಧಾನದಲ್ಲಿ ನಿಮಗೆ ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆಹೌದು ನಮ್ಮ ತ್ವಚೆಯು ನಮಗೆ ವಯಸ್ಸಾಗಿದೆ ಇಲ್ಲ ಅನ್ನೋದು ತಿಳಿಸುತ್ತೆ ನೋಡಿ ಕೆಲವರಿಗಂತೂ ಎಷ್ಟು ವಯಸ್ಸಾಗಿರುತ್ತದೆ ಆದರೆ ಅವರ ತ್ವಚೆ ಯಂಗ್ ಆಗಿ ಇರುತ್ತದೆ ಹಾಗಾಗಿ ಅವರಿಗೆ ವಯಸ್ಸಾಗಿದೆ ಅಂತ ಗೊತ್ತಾಗುತ್ತಾ ಇರುವುದಿಲ್ಲ ಅದು ಪುರುಷರು ಅಗಿರಲಿ ಮಹಿಳೆಯರು ಆಗಿರಲಿ, ಈ ರೀತಿ ತ್ವಚೆಯ ಕಾಳಜಿಯನ್ನು ಮಾಡುತ್ತಾ ಯಂಗ್ ಆಗಿ ಇರಿಸಿಕೊಂಡರೆ ವಯಸ್ಸಾಗಿದ್ದು ಕೂಡಾ ತಿಳಿಯುವುದಿಲ್ಲ
ಇವತ್ತಿನ ಲೇಖನಿಯಲ್ಲಿ ತ್ವಚೆಯ ಕಾಳಜಿ ಮಾಡುವಂತಹ ಮನೆಮದ್ದಿನ ಕುರಿತು ಮಾತನಾಡುತ್ತಿದ್ದೇವೆ ಇದನ್ನು ಮಾಡುವ ವಿಧಾನಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಅದು ಟೊಮೆಟೊ ರಸ ಅರಿಶಿಣ ಕಡಲೆಹಿಟ್ಟು ಅಲೋವೆರಾ ಜೆಲ್ ಇದಿಷ್ಟು ಪದಾರ್ಥಗಳು ನಮಗೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುತ್ತದೆಅರಿಷಿಣ ಎಂಬುದು ತುಂಬಾ ಒಳ್ಳೆಯದು ಆರೋಗ್ಯಕ್ಕೆ ಆಗಲಿ ನಮ್ಮ ತ್ವಚೆಗೆ ಆಗಲೇ ಆದರೆ ಮಾರ್ಕೆಟ್ನಲ್ಲಿ ತ್ವಚೆಗೆ ಬಳಸುವಂತಹ ಅರಿಶಿನವೇ ಬೇರೆ ದೊರೆಯುತ್ತದೆ .
ಅದನ್ನಾದರೂ ನೀವು ತಂದು ಬಳಕೆ ಮಾಡಬಹುದು ಅಥವಾ ಅರಿಶಿಣದ ಕೊಂಬನ್ನು ತಂದು ಅದನ್ನು ಒಮ್ಮೆ ತೊಳೆದು ಬಿಸಿಲಿನಲ್ಲಿ ಒಣಗಿಸಿ ಕುಟ್ಟಿ ಪುಡಿ ಮಾಡಿಕೊಂಡು ಅದನ್ನು ಬೇಕಾದರೂ ನೀವು ತ್ವಚೆಯ ಕಾಳಜಿ ಮಾಡುವುದಕ್ಕೆ ಬಳಸಬಹುದು ಬಳಿಕ ಕಡಲೆ ಹಿಟ್ಟು ಕಡಲೆಹಿಟ್ಟು ಕೂಡ ತ್ವಚೆಗೆ ತುಂಬಾ ಒಳ್ಳೆಯದು ತ್ವಚೆಯ ಆಳದಲ್ಲಿ ಇರುವ ಡರ್ಟ್ ಅಂದರೆ ಎಣ್ಣೆಯ ಅಂಶ ಆಗಲಿ ಅಂತಹ ವಸ್ತುಗಳನ್ನು ತೆಗೆದುಹಾಕಲು ಸಹಕಾರಿ
ಈಗ ಅಲೋವೆರಾ ಜೆಲ್ ಇದಂತೂ ಮುಖವನ್ನ ಮಾಯಿಸ್ಚರ್ ಮಾಡುತ್ತಾರೆ ಹಾಗಾಗಿ ನಾವು ಈ ಮಾಹಿತಿಯಲ್ಲಿ ಈ ಮನೆ ಮದ್ದಿಗಾಗಿ ಬಳಸುತ್ತಿರುವಂತಹ ಎಲ್ಲಾ ಪದಾರ್ಥಗಳು ತ್ವಚೆಗೆ ಪುಷ್ಟಿಕೊಡುತ್ತದೆ ಜೊತೆಗೆ ಈ ಟೊಮೆಟೊ ಹಣ್ಣಿನ ರಸ ತ್ವಚೆಯ ಮೇಲಿರುವ ಕಪ್ಪು ಕಲೆ ಮೊಡವೆ ಕಲೆ ಪಿಗ್ಮೆಂಟೇಶನ್ ಎಲ್ಲವನ್ನ ತೆಗೆದುಹಾಕಲು ಸಹಕಾರಿಯಾಗಿರುತ್ತೆಟೊಮೆಟೊ ರಸಕ್ಕೆ ಕಡಲೆಹಿಟ್ಟು ಅರಿಶಿನ ಮಿಶ್ರ ಮಾಡಿ ಇದಕ್ಕೆ ಬೇಕಾದರು ಚಿಟಿಕೆ ಉಪ್ಪನ್ನು ಕೂಡ ಮಿಶ್ರಮಾಡಿ ಇದರಿಂದ ತ್ವಚೆಯ ಮೇಲಿರುವ ಕಪ್ಪು ಕಲೆ ಬೇಗನೆ ತೆಗೆದು ಹಾಕಬಹುದು
ಈಗ ಇವುಗಳನ್ನು ಪೇಸ್ಟ್ ಮಾಡಿಕೊಂಡು ಮುಖವನ್ನು ಒಮ್ಮೆ ತಣ್ಣೀರಿನಿಂದ ಸ್ವಚ್ಛ ಮಾಡಿ ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಲೇಪ ಮಾಡಿ ಈ ಫೇಸ್ ಪ್ಯಾಕ್ ತ್ವಚೆಯ ಅಂದವನ್ನು ಹೆಚ್ಚು ಮಾಡುತ್ತ ಹಾಗೂ ಇದನ್ನ ನೀವು ವಾರಕ್ಕೊಮ್ಮೆ ಮಾಡುತ್ತಾ ಬಂದರೆ, ಈ ಪರಿಹಾರವು ಸದಾ ಯಂಗ್ ಆಗಿ ಕಾಣುವಂತೆ ನಿಮ್ಮ ತ್ವಚೆಯನ್ನು ಕಾಳಜಿ ಮಾಡುತ್ತೆ, ನೀವೆ ಇದರ ಫಲಿತಾಂಶವನ್ನು ಕಾಣಬಹುದು ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.