ಕೇವಲ ಇದನ್ನ ಐದು ದಿನ ತಿನ್ನಿ ಸಾಕು ದೇಹದ ಒಳಗೆ ಮಸ್ತ್ ಕ್ಲೀನ್ ಮಾಡುತ್ತದೆ…ಹಾಗು ಗ್ಯಾಸು , ಅಸಿಡಿಟಿ, ಹಾಗು ಸೊಂಟ ನೋವು ಬರೋದಿಲ್ಲ…

626

ನಮಸ್ಕಾರಗಳು ನಾವು ಇವತ್ತಿನ ಲೇಖನಿಯಲ್ಲಿ ಆರರಿಂದ ನೂರು ವರುಷದ ವರೆಗೂ ನಿಮಗೆ ಈ ಮೂಳೆಗಳ ಸಂಬಂಧಿ ಸಮಸ್ಯೆಗಳು ಬಾರದೆ ಇರುವುದಕ್ಕಾಗಿ ಮಾಡಬಹುದಾದ ಮನೆಮದ್ದಿನ ಬಗ್ಗೆ ಮಾತನಾಡುತ್ತಿದ್ದೇವೆ. ಹೌದು ಈ ಮನೆಮದ್ದು ಮಾಡೋದು ಹೇಗೆ ನಿಮಗೆ ನಾಲಿಗೆಗೂ ರುಚಿ ಸಿಗಬೇಕು ಮತ್ತು ನಿಮ್ಮ ಆರೋಗ್ಯವು ಕೂಡ ತುಂಬ ಉತ್ತಮವಾಗಿರಬೇಕು ಅನ್ನೋದಕ್ಕೆ ನಾವು ಹೇಳುವಂತಹ ಮನೆಮದ್ದನ್ನು ಪಾಲಿಸಿ

ಹೌದು ಎಲ್ಲರಿಗೂ ಆರೋಗ್ಯವೇ ಮುಖ್ಯ ಅಲ್ವಾ ಹಾಗಾಗಿ ನಾವು ಆರೋಗ್ಯ ಚೆನ್ನಾಗಿರಬೇಕೆಂದರೆ ಏನೆಲ್ಲಾ ಮಾಡ್ತಾವೆ ಹೇಳಿ ಇವತ್ತಿನ ದಿನಗಳಲ್ಲಂತೂ ವಾಕ್ಸ್ ಮಾಡೋದೇ ಹೆಚ್ಚು ಮಂದಿ ತಮ್ಮ ಆರೋಗ್ಯದ ಬಗ್ಗೆ ಯೋಚನೆಯೇ ಮಾಡದೆ ಸಿಕ್ಕ ಸಿಕ್ಕದ್ದನ್ನು ತಿಂದು ಅನಾರೋಗ್ಯಕ್ಕೆ ಹತ್ತಿರವಾಗುತ್ತಿದ್ದಾರೆ ಹೊರೆತು ಆರೋಗ್ಯಕರ ಜೀವನ ನಡೆಸೋದು ಅಷ್ಟರಲ್ಲಿಯೇ ಇದೆ.

ಆದರೆ ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದು ತುಂಬಾ ಉತ್ತಮವಾದದ್ದು ಇದನ್ನ ಪಾಲಿಸುವುದಕ್ಕೆ ನಿಮಗೆ ಬೇಕಾಗಿರುವುದು ಏನು ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿರಲು ಮಾಡಬೇಕಿರುವ ಪರಿಹಾರವೇನು ಎಲ್ಲವನ್ನ ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಲೇಖನಿಯಲ್ಲಿ

ನಾವು ಈ ದಿನ ಆರೋಗ್ಯವನ್ನು ವೃದ್ಧಿಸಲು ಮೂಳೆಗಳನ್ನು ಬಲಪಡಿಸಲು ಹೇಳಲು ಹೊರಟಿರುವುದು ಇಷ್ಟೇ ಅದೇನೆಂದರೆ ಉತ್ತಮವಾದ ಮನೆಮದ್ದು ಇದು ನಾಲಿಗೆಗೂ ರುಚಿ ನೀಡುತ್ತೆ ಹೌದು ನಾವು ಮೆಂತೆಯಿಂದ ಮಾಡುವ ಲಡ್ಡು ನಿಮ್ಮ ಆರೋಗ್ಯವನ್ನು ಹೇಗೆ ವೃದ್ಧಿಸುತ್ತದೆ ಅನ್ನೋದನ್ನ ತಿಳಿಸಲಿದ್ದೇವೆ

ಈ ಮನೆಮದ್ದು ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಕೆಲವೊಂದು ಡ್ರೈಫ್ರೂಟ್ ಗಳು ಮತ್ತು ತುಪ್ಪ ಗೋಧಿ ಹಿಟ್ಟು ಅಂಟು ಇಷ್ಟು ಪದಾರ್ಥಗಳು ಬೇಕಾಗಿರುತ್ತದೆ ಜೊತೆಗೆ ಮೆಂತ್ಯೆ. ಹೌದು ಮೆಂತೆ ಬಳಸುತ್ತಿದ್ದೇವೆ ಲಡ್ಡು ಕಹಿ ಆಗೋದಿಲ್ವಾ ಅಂತ ಅಂದುಕೊಳ್ಳಬೇಡಿ ಅದಕ್ಕೂ ಕೂಡ ನಾವು ಸರಳ ಪರಿಹಾರವನ್ನು ತಿಳಿಸುತ್ತವೆ ತುಂಬಾ ರುಚಿಕರವಾಗಿರುತ್ತದೆ ಈ ಆರೋಗ್ಯಕರವಾದ ಲಡ್ಡು

ಮೊದಲಿಗೆ ಇದನ್ನು ಮಾಡುವ ವಿಧಾನ 2ಚಮಚ ತುಪ್ಪವನ್ನು ತೆಗೆದುಕೊಳ್ಳಿ ಈ ತುಪ್ಪಕ್ಕೆ 4ಚಮಚ ಮೆಂತೆ ಕಾಳನ್ನು ಪುಡಿ ಮಾಡಿ ಈ ತುಪ್ಪದೊಂದಿಗೆ ಮಿಶ್ರಣ ಮಾಡಿ ಇಟ್ಟುಕೊಳ್ಳಿ ಯಾಕೆ ಅಂದರೆ ಮೆಂತೆ ಪುಡಿ ಮಾಡಿದಾಗ ಆಗಲಿ ಅಥವಾ ಆ ಮೆಂತೆಕಾಳಿನ ಗುಣವೇ ಕಹಿ ಹಾಗಾಗಿ ಅದಕ್ಕೆ ತುಪ್ಪ ಮಿಶ್ರಮಾಡಿದರೆ ಕಹಿ ಸ್ವಲ್ಪ ಕಡಿಮೆಯಾಗುತ್ತದೆಈಗ ತುಪ್ಪದಲ್ಲಿ ಅಂಟು ಮತ್ತು ಡ್ರೈ ಫ್ರೂಟ್ಸ್ ಗಳನ್ನು ಹುರಿದುಕೊಳ್ಳಿ ಬಳಿಕ ಅರ್ಧ ಕಪ್ ನಷ್ಟು ಗೋಧಿಹಿಟ್ಟನ್ನು ಕೂಡ ತುಪ್ಪದಲ್ಲಿ ಹುರಿದುಕೊಳ್ಳಿ. ಗೋಧಿ ಹಿಟ್ಟನ್ನು ಹುರಿಯುವಾಗ ತುಪ್ಪ ಗೋಧಿಹಿಟ್ಟಿನಿಂದ ಆಚೆ ಬರಬೇಕು ಅಷ್ಟರ ವರೆಗೆ ಗೋಧಿಹಿಟ್ಟನ್ನು ಬಿಸಿ ಮಾಡಿಕೊಳ್ಳಿ

ಈಗ ಈ ತುಪ್ಪಕ್ಕೆ ಬೆಲ್ಲವನ್ನು ಹೌದು ರುಚಿಗೆ ಬೇಕಾದಷ್ಟು ಬೆಲ್ಲವನ್ನು ಜೇನು ತುಪ್ಪದೊಂದಿಗೆ ಹಾಕಿ ಬೆಲ್ಲವನ್ನು ಕರಗಿಸಿ ಕೊಳ್ಳಬೇಕು ಆ ನಂತರ ಹುರಿದುಕೊಂಡಂತಹ 8ಡ್ರೈಫ್ರೂಟ್ಸ್ ಗೋಧಿಹಿಟ್ಟು ಎಲ್ಲವನ್ನು ಜೊತೆಗೆ ಮೆಂತೆ ಹಿಟ್ಟನ್ನು ಇದರೊಂದಿಗೆ ಮಿಶ್ರ ಮಾಡಿ ಈಗ ಅದನ್ನು ಉಂಡೆ ಕಟ್ಟಿ ಕೊಳ್ಳಬೇಕು ಜೊತೆಗೆ ಸ್ವಲ್ಪ ತುಪ್ಪ ಹಾಕಿಕೊಂಡು ಈಗ ಲಡ್ಡು ಉಂಡೆಯನ್ನು ಹೇಗೆ ಕಟ್ತಾರೆ ಆ ರೀತಿ ಉಂಡೆಯನ್ನ ಕಟ್ಟಿಕೊಳ್ಳಿ

ಈ ಉಂಡೆ ಅಂದರೆ ಈ ಲಾಡು ಎಷ್ಟು ಆರೋಗ್ಯಕ್ಕೆ ಒಳ್ಳೆಯದು ಅಂದರೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಸುಮರು ಐವತ್ತು ಪ್ರತಿಶತದಷ್ಟು ಪೋಷಕಾಂಶಗಳು ಅಡಗಿದೆ ಜೀರ್ಣಶಕ್ತಿ ವೃದ್ಧಿಸುತ್ತದೆ ಮೆದುಳು ಚುರುಕಾಗುತ್ತದೆ ಜೊತೆಗೆ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ, ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತೆ ಹಾಗೆ ಮೂಳೆಗಳಿಗೆ ಬಲ ದೊರೆಯುತ್ತದೆ. ಈ ಆರೋಗ್ಯಕರವಾದ ಲಡ್ಡುವನ್ನು ನೀವು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ