ನಮಸ್ಕಾರಗಳು ಕೇವಲ ಬೆಳ್ಳುಳ್ಳಿಯಿಂದ ಈ ಪರಿಹಾರ ಮಾಡಿದ್ರೆ ನಿಮ್ಮ ಮನೆಯಲ್ಲಿರುವ ಧಾನ್ಯ ಅಕ್ಕಿ ಗಳಲ್ಲಿರುವ ಹುಳಗಳನ್ನು ಕ್ಲೀನಾಗಿ ಸ್ವಚ್ಚ ಮಾಡಿ ಬಿಡಬಹುದು ಹೌದು ಕೇವಲ ಬೆಳ್ಳುಳ್ಳಿಯ ಈ ಪರಿಹಾರ ಅಕ್ಕಿಯಲ್ಲಿ ಇರುವ ಧಾನ್ಯಗಳಲ್ಲಿರುವ ಹುಳಗಳನ್ನ ಹೋಗಲಾಡಿಸುತ್ತದೆ.ಅಂದಿನ ಕಾಲದಲ್ಲಿ ಸಾಕಷ್ಟು ಮನೆಗಳಲ್ಲಿ ಧಾನ್ಯಗಳನ್ನ ಅಕ್ಕಿಯನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಿದ್ದರು ಹೌದು ಇಂದಿಗೂ ಹಳ್ಳಿ ಮನೆಗಳಲ್ಲಿ ಅಕ್ಕಿ ಆಗಲಿ ಕೆಲವೊಂದು ಧಾನ್ಯಗಳನ್ನಾಗಲಿ ಸ್ಟೋರ್ ಮಾಡಿ ಇಡುತ್ತಾರೆ ನಿಮಗೆ ಗೊತ್ತಿರಬಹುದು ಅಲ್ವ.
ಅದೇ ರೀತಿ ಸಂಬಳ ಬಂದರೆ ಕೆಲಸ ಮಾಡುವ ವ್ಯಕ್ತಿಗಳು ಸಹಾ ತಿಂಗಳಿಗೆ ಆಗುವಷ್ಟು ರೇಷನ್ ಅನ್ನು ಮನೆಗೆ ತಂದು ಇಡುತ್ತಾರೆ ಕಾಳು ಅಕ್ಕಿ ರಾಗಿ ಗೋಧಿ ಹಿಟ್ಟು ಇನ್ನೂ ಕೆಲವೊಂದು ಸಾಮಗ್ರಿಗಳನ್ನು ಮನೆಗೆ ತಂದು ತಿಂಗಳಿಗೆ ಆಗುವಷ್ಟು ಸ್ಟೋರ್ ಮಾಡಿ ಇಡುತ್ತಾರೆ.
ಹಾಗಾಗಿ ಈ ರೀತಿ ತಿಂಗಳಿಗೆ ಆಗುವಷ್ಟು ರೇಷನ್ ಮನೆಗೆ ತಂದು ಇಟ್ಟಾಗ ಮನೆಯಲ್ಲಿ ಅಡುಗೆ ಕೋಣೆಯಲ್ಲಿ ಏನೋ ಈ ಸಾಮಾನುಗಳನ್ನು ಇಡುತ್ತೇವೆ ಆದರೆ ಹುಳಹುಪ್ಪಟೆಗಳು ಹಲ್ಲಿ ಇರುವೆಗಳು ಮತ್ತು ಇಲಿಗಳ ಕಾಟದಿಂದ ಈ ರೇಷನ್ ಅನ್ನು ದೂರ ಇಡಬೇಕು ಅಲ್ವಾ ಹಾಗಾಗಿ ಬೆಳ್ಳುಳ್ಳಿಯಿಂದ ಈ ಪರಿಹಾರವನ್ನು ಮಾಡಿದ್ರೆ ಖಂಡಿತ ಇಂತಹ ಹುಳಗಳಿಂದ ಆಗಲಿ ಇರುವೆಯಾಗಲಿ ಅಥವಾ ಅಕ್ಕಿ ಹುಳು ಅಥವಾ ಧಾನ್ಯಕ್ಕೆ ಹತ್ತುವಂತಹ ಹುಳಗಳು ರೇಷನ್ ಗೆ ಅಂದರೆ ಅಕ್ಕಿ ಕಾಳು ಬೇಳೆ ಕಾಳುಗಳು ಇವುಗಳಿಗೆ ಯಾವುದೇ ಪ್ರಭಾವ ಆಗುವುದಿಲ್ಲ.
ಪರಿಹಾರ ಮಾಡುವ ವಿಧಾನವನ್ನು ತಿಳಿಯುವುದಾದರೆ ನಿಮ್ಮ ಮನೆಯಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಇಟ್ಟಿದ್ದೀರಾ ಸಕ್ಕರೆಗೆ ಕಪ್ಪು ಇರುವೆ ಅಥವಾ ವಾಸನೆ ಇರುವೆ ಹತ್ತುತ್ತಿದೆ ಅನ್ನುವುದಾದರೆ ಆ ಸಕ್ಕರೆಗೆ ಕೇವಲ ನಾಲ್ಕೈದು ಲವಂಗ ಗಳನ್ನ ಹಾಕಿ ಇಡಿ ಈ ರೀತಿ ಲವಂಗವನ್ನು ಹಾಕಿ ಇಡುವುದರಿಂದ ವಾಸನೆ ಇರುವೆಯಾಗಲಿ ಕಪ್ಪು ಇರುವೆ ಆಗಲೇ ಸಕ್ಕರೆ ಬಳಿ ಬರುವುದಿಲ್ಲ ಮತ್ತು ಇಂತಹ ಪರಿಹಾರವಲ್ಲ ನೀವು ಬೆಲ್ಲಕ್ಕೂ ಸಹ ಮಾಡಬಹುದು.
ಸೊಪ್ಪು ಇದ್ದರೆ ಸೊಪ್ಪನ್ನು ಸ್ವಚ್ಚಮಾಡಿ ಕವರ್ ಗೆ ಹಾಕಿ ಗಾಳಿ ಹೋಗದಿರುವ ಹಾಗೇ ನೀವು ಫ್ರಿಡ್ಜ್ ನಲ್ಲಿ ಶೇಖರಣೆ ಮಾಡಿ ಇಡಬಹುದು.ಮನೆಯಲ್ಲಿ ಹಸಿರು ಮೆಣಸಿನ ಕಾಯಿಯನ್ನು ಹೆಚ್ಚಾಗಿ ತಂದಿದ್ದರೆ ಆ ಹಸಿರು ಮೆಣಸಿನಕಾಯಿಯ ನ ಕ್ಲೀನ್ ಮಾಡಿಕೊಳ್ಳಬೇಕು ಮೊದಲು ತೊಟ್ಟನ್ನು ಮುರಿದು ಬಾಕ್ಸ್ ಒಂದಕ್ಕೆ ಮೊದಲು ಟಿಶ್ಯೂ ಪೇಪರ್ ಆಗಲಿ ಅಥವಾ ನ್ಯೂಸ್ ಪೇಪರ್ ಶೀಟ್ ಅನ್ನ ಇರಿಸಿ ಬಳಿಕ ಅದಕ್ಕೆ ತೊಟ್ಟು ಮುರಿದು ಹಸಿರು ಮೆಣಸಿನ ಕಾಯಿಯನ್ನು ಹಾಕಿ ಅದರ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿಡಬಹುದು, ಈ ರೀತಿ ಹಸುರು ಮೆಣಸಿನಕಾಯಿಯನ್ನು ಸ್ಟೋರ್ ಮಾಡುವುದರಿಂದ ಹೆಚ್ಚು ದಿನಗಳವರೆಗೂ ಹಸಿರುಮೆಣಸಿನಕಾಯಿ ಕೆಡುವುದಿಲ್ಲ.
ಅಕ್ಕಿ ಸಿರಿಧಾನ್ಯಗಳು ಬೇಳೆಕಾಳುಗಳು ಇವುಗಳಿಗೆ ಹುಳ ಹತ್ತಬಾರದು ಅಂದರೆ ಬೆಳ್ಳುಳ್ಳಿಯನ್ನು ಅರಿಶಿನದೊಂದಿಗೆ ಮಿಶ್ರ ಮಾಡಿ ಜಜ್ಜಿ ಪೇಸ್ಟ್ ಮಾಡಿ ಇದಕ್ಕೆ ಲವಂಗದ ಪುಡಿಯನ್ನು ಮಿಶ್ರಮಾಡಿ ಇದನ್ನು ಉಂಡೆ ಕಟ್ಟಿ ಬಿಸಿಲಿನಲ್ಲಿ ಸ್ವಲ್ಪ ಸಮಯ ಒಣಗಿಸಿ, ಈ ರೀತಿ ಕಾಳುಗಳಿಗೆ ಅಕ್ಕಿಗೆ ರಾಗಿ ಗೋಧಿ ಇವುಗಳ ಮಧ್ಯೆ ಇಡುವುದರಿಂದ ಯಾವುದೇ ಕಾರಣಕ್ಕೂ ರೇಷನ್ ಗೆ ಹುಳ ಹತ್ತುವುದಿಲ್ಲ.
ಹಾಗಾಗಿ ಇಂತಹ ಸರಳ ಪರಿಹಾರಗಳನ್ನು ಮಾಡುತ್ತಾ ಬರುವುದರಿಂದ ಮನೆಯಲ್ಲಿರುವ ರೇಷನ್ ಅನ್ನೋ ಹುಳುಗಳಿಂದ ಕಾಪಾಡಿಕೊಳ್ಳಬಹುದು ಮತ್ತು ಯಾವುದೇ ಕಾರಣಕ್ಕೂ ಧಾನ್ಯಗಳು ಕೆಡುವುದಿಲ್ಲ. ತುಂಬ ಸುಲಭ ಪರಿಹಾರ ಅಂದರೆ ಅಕ್ಕಿಗೆ ಹುಳು ಹತ್ತಬಾರದು ಅಂದರೆ ಅದರೊಳಗೆ ಒಣಮೆಣಸಿನಕಾಯಿಯನ್ನು ಸಹ ಅಂದರೆ ಅಕ್ಕಿ ಚೀಲದ ಅಥವಾ ಅಕ್ಕಿ ಡಬ್ಬದ ಒಳಗೆ ಒಣಮೆಣಸಿನಕಾಯಿಯನ್ನು ಇಡುವುದರಿಂದ ಕೂಡ ಅಕ್ಕಿಗೆ ಹುಳು ಹತ್ತುವುದಿಲ್ಲ.