ಗ್ಯಾಸ್ಟ್ರಿಕ್ ಸಮಸ್ಯೆಗೆ ಒಂದೊಳ್ಳೆ ಪರಿಹಾರ ಇದು ಅದ್ಭುತವಾದ ಮತ್ತು ಪ್ರಭಾವಶಾಲಿಯಾದ ಮನೆಮದ್ದು ಆಗಿದೆ ಸಾಮಾನ್ಯವಾಗಿ ನಾವು ಗ್ಯಾಸ್ಟ್ರಿಕ್ ಸಮಸ್ಯೆ ಬಂದ ಕೂಡಲೆ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆಗಳನ್ನ ತಂದು ನುಂಗುತ್ತೇವೆತಕ್ಷಣಕ್ಕೆ ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲದಂತೆ ಆಗಿ ನಮಗೆ ರಿಲೀಫ್ ನೀಡಿದಂತಾಗುತ್ತದೆ. ಆದರೆ ಮಾತ್ರೆ ತೆಗೆದುಕೊಳ್ಳುವುದರಿಂದ ಮುಂದೇನಾಗಬಹುದು ಎಂಬುದನ್ನು ಮೊದಲು ಯೋಚಿಸಿ. ಹೌದು ನಾವು ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಮನೆಯಲ್ಲೇ ಕೆಲವೊಂದು ಪರಿಹಾರಗಳನ್ನು ಮಾಡಿ ಕುಡಿಯುತ್ತ ಬಂದರೆ ಯಾವುದೇ ತರಹದ ತೊಂದರೆಯಿಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ನಾವು ಪರಿಹಾರ ಪಡೆದುಕೊಳ್ಳಬಹುದು ಅದನ್ನ ನಾವು ತಿಳಿದಿರಬೇಕಾಗುತ್ತದೆ.
ಅಂದಿನ ಕಾಲದ ಹಿರಿಯರು ಯಾಕಷ್ಟು ಅರೋಗ್ಯಕರವಾಗಿರುತ್ತಿದರು ಎಂಬುದು ನಿಮಗೆ ಗೊತ್ತಾ? ಅದರ ಗುಟ್ಟು ಏನೆಂದರೆ ಅವರು ಹೆಚ್ಚು ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ ಚಿಕ್ಕಪುಟ್ಟ ಸಮಸ್ಯೆ ಅಥವಾ ಅನಾರೋಗ್ಯ ತೊಂದರೆಗಳು ಕಾಣಿಸಿಕೊಂಡಾಗ ಅದಕ್ಕೆ ತಕ್ಕ ಮನೆಮದ್ದುಗಳನ್ನು ಪಾಲಿಸುವ ಮೂಲಕ ತಮ್ಮ ಆರೋಗ್ಯವನ್ನು, ಬಂದಿರುವ ಸಮಸ್ಯೆಗಳನ್ನ ನಿವಾರಿಸಿಕೊಳ್ಳುತ್ತಿದ್ದರು.
ಈಗ ನಾವು ಮನೆಮದ್ದಿನ ಕುರಿತು ಮಾತನಾಡುವುದಾದರೆ ಇವತ್ತಿನ ಲೇಖನದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಮಾಡಲು ಪರಿಹಾರದ ಕುರಿತು ಮಾತನಾಡುತ್ತಿದ್ದು ಈ ಗ್ಯಾಸ್ಟ್ರಿಕ್ ಸಮಸ್ಯೆ ಬಗ್ಗೆ ಪರಿಹಾರದ ಬಗ್ಗೆ ಮಾತನಾಡುವಾಗ ಅದಕ್ಕೂ ಮೊದಲು ನಾವು ಗ್ಯಾಸ್ಟ್ರಿಕ್ ಉಂಟಾಗುವುದಕ್ಕೆ ಕಾರಣವನ್ನು ಸಹ ತಿಳಿದುಕೊಳ್ಳಬೇಕಾಗಿದೆಹೌದು ಯಾವಾಗ ತಿಂದ ಆಹಾರ ಜೀರ್ಣವಾಗುವುದಿಲ್ಲ ಆಗ ಅದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡಿ ಹುಳಿತೇಗು ಎದೆಯುರಿ ಸಮಸ್ಯೆ ಉಂಟು ಮಾಡುತ್ತದೆ ಜೊತೆಗೆ ಊಟ ಮಾಡದಿರುವ ಹಾಗೆ ಮಾಡಿಬಿಡುತ್ತದೆ.
ಗ್ಯಾಸ್ಟ್ರಿಕ್ ಉಂಟಾದಾಗ ನಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಊಟ ಬೇಡ ಅನಿಸುತ್ತದೆ, ಆದರೆ ಯಾವಾಗ ನೀವು ಹೊಟ್ಟೆ ತುಂಬಿದ ಅನುಭವ ಇದೆ ಅಂತ ಊಟ ಬೇಡ ಅಂತ ಸುಮ್ಮನಾಗುತ್ತೀರಾ, ಆಗ ಇನ್ನಷ್ಟು ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಅದು ಮತ್ತೊಂದು ಸಮಸ್ಯೆಗೆ ತಿರುಗುವ ಸಾಧ್ಯತೆ ಇರುತ್ತದೆ.ಈಗ ಗ್ಯಾಸ್ಟ್ರಿಕ್ ನಿವಾರಣೆಗೆ ವೇಗದಲ್ಲಿ ಉಂಟಾಗಿರುವಂತಹ ಈ ವಾಯು ಸಮಸ್ಯೆಗೆ ಮಾಡಬಹುದಾದ ಪರಿಹಾರದ ಕುರಿತು ಮಾತನಾಡುವಾಗ ಜೀರಿಗೆ ಅತ್ಯುತ್ತಮ ಪರಿಹಾರ ಗ್ಯಾಸ್ಟ್ರಿಕ್ ನಿವಾರಣೆ ಮಾಡಲು ಮತ್ತು ಹೊಟ್ಟೆಯಲ್ಲಿ ಜೀರ್ಣವಾಗದೆ ಇರುವ ಆಹಾರವನ್ನು ಜೀರ್ಣಿಸಲು.
ಹೌದು ಈ ಜೀರಿಗೆಯ ಜೊತೆ ಮೆಣಸು ಮತ್ತು ಏಲಕ್ಕಿಯನ್ನು ಮಿಶ್ರಣ ಮಾಡಿ ಪುಡಿ ಮಾಡಿಕೊಳ್ಳಬೇಕು ನಂತರ ಇದಕ್ಕೆ ಪಚ್ಚ ಕರ್ಪೂರವನ್ನು ಕೂಡ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ.ಇಷ್ಟೆ ಈ ಪರಿಹಾರದಿಂದ ಅಂದರೆ ಈ ಪುಡಿಯ ಸಹಾಯದಿಂದ ನಿಮ್ಮ ಗ್ಯಾಸ್ಟ್ರಿಕ್ ನಿವಾರಣೆ ಮಾಡಿಕೊಳ್ಳಬಹುದು ಅದು ಹೇಗೆಂದರೆ ತುಂಬ ಸುಲಭ ನೀರನ್ನ ಬಿಸಿ ಮಾಡಲು ಇಟ್ಟು, ಈ ನೀರಿಗೆ ತಯಾರಿಸಿಕೊಂಡ ಮಿಶ್ರಣವನ್ನು ಹಾಕಬೇಕು. ಹೌದು ಪಚ್ಚಕರ್ಪೂರ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲವ ಅಂತ ನೀವು ಅಂದುಕೊಳ್ಳಬಹುದು .
ಖಂಡಿತವಾಗಿಯೂ ಪಚ್ಚಕರ್ಪೂರ ಯಾವುದೇ ಸೈಡ್ ಎಫೆಕ್ಟ್ ಉಂಟು ಮಾಡುವುದಿಲ್ಲ. ಆದರೆ ನೀವು ದಿನ ನಿತ್ಯ ಪೂಜೆಗೆ ಬಳಸುವ ಕರ್ಪೂರವನ್ನು ಈ ಮನೆ ಮದ್ದಿನಲ್ಲಿ ಬಳಸದೆ ಇರುವ ಹಾಗೆ ನೋಡಿಕೊಳ್ಳಿಈಗ ನೀರನ್ನು ಬಿಸಿಗಿಟ್ಟು ತಯಾರಿಸಿಕೊಂಡ ಮಿಶ್ರಣವನ್ನು ನೀರಿಗೆ ಹಾಕಿ ಕುದಿಸಿ ಕೊಳ್ಳಬೇಕು ಬಳಿಕ ಇದನ್ನು ಶೋಧಿಸಿಕೊಂಡು ಬೆಳಿಗ್ಗೆ ತಿಂಡಿಗೆ 1 ಗಂಟೆಯ ಮುಂಚೆ ಈ ಡ್ರಿಂಕ್ ಕುಡಿಯುತ್ತಾ ಬನ್ನಿ. ಇದರಿಂದ ಗ್ಯಾಸ್ಟ್ರಿಕ್ ನಿವಾರಣೆ ಆಗುತ್ತದೆ ಜೊತೆಗೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ನಿಮ್ಮ ಜೀರ್ಣಶಕ್ತಿ ವೃದ್ಧಿಸುತ್ತದೆ ಹಾಗಾಗಿ ಈ ಸರಳ ಉಪಾಯ ನಿಮ್ಮ ಅಜೀರ್ಣತೆಯ ನಿವಾರಿಸಿ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡುತ್ತೆ.