ಪೈಲ್ಸ್ ಸಮಸ್ಯೆ ಕಾಡುತ್ತಿರುವವರು ನಾಚಿಕೆ ಮುಳ್ಳಿನ ಪ್ರಯೋಜನ ಪಡೆದುಕೊಳ್ಳಿ ಇದರಿಂದ ಪೈಲ್ಸ್ ಬೇಗನೆ ಪರಿಹಾರವಾಗುತ್ತೆ.ನಮಸ್ಕಾರಗಳು ಈ ಮೂಲವ್ಯಾಧಿ ಸಮಸ್ಯೆ ಇದನ್ನು ಆಂಗ್ಲ ಭಾಷೆಯಲ್ಲಿ ಪೈಲ್ಸ್ ಅಂತ ಕರೆಯುತ್ತಾರೆ, ನೋಡಿ ಈ ತೊಂದರೆ ಕಾಡುತ್ತಿರುವವರು ಇದನ್ನೂ ನೆಗ್ಲೆಕ್ಟ್ ಮಾಡಬೇಡಿ ಇದಕ್ಕೆ ಬೇಕಾದ ಪರಿಹಾರವನ್ನು ಪಾಲಿಸಿ.ಹೌದು ಮೊದಲಿಗೆ ಈ ಮೂಲವ್ಯಾಧಿ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂದು ಹೇಳುವುದಾದರೆ ಇದಕ್ಕೆ ಮೂಲ ಕಾರಣವೇ ಅತಿಹೆಚ್ಚು ಉಷ್ಣಾಂಶ ಉಂಟುಮಾಡುವಂತಹ ಆಹಾರ ಪದಾರ್ಥಗಳ ಸೇವನೆ ಮಾಡುವುದು. ಈ ಲೇಖನದಲ್ಲಿ ಮೂಲವ್ಯಾಧಿ ಸಮಸ್ಯೆಗೆ ಮಾಡುವ ಸರಳ ವಿಧಾನದ ಕುರಿತು ಸರಳ ಪರಿಹಾರದ ಕುರಿತು ನಾವು ತಿಳಿಸಿಕೊಡುತ್ತಿದ್ದೇವೆ.
ಹೌದು ಈಗೇನೋ ಮೂಲವ್ಯಾಧಿಗೆ ಆಪರೇಷನ್ ಮಾಡಿಸಿಕೊಂಡರೆ ಸಾಕು ಅಂತ ಹಲವರು ಅಂದುಕೊಳ್ಳುತ್ತಾರೆ ಆದರೆ ಈ ಸರ್ಜರಿ ಅಂತ ಎಲ್ಲ ಹೋಗೋದು ಬೇಡ ಕೆಲವೊಂದು ಮನೆಮದ್ದನ್ನು ಮಾಡುವ ಮೂಲಕ ಹಳ್ಳಿ ಕಡೆ ಮಾಡುವ ಪರಿಹಾರ ಪಾಲಿಸುವ ಮೂಲಕ ಈ ಪೈಲ್ಸ್ ಅಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅದು ತುಂಬ ಸರಳ ವಿಧಾನದಲ್ಲಿ
ಈ ಮನೆಮದ್ದು ಪಾಲಿಸುವುದಕ್ಕೆ ನಮಗೆ ನಾಚಿಕೆ ಮುಳ್ಳಿನ ಅಗತ್ಯ ಇರುತ್ತದೆ ಹೌದು ನಾಚಿಕೆಮುಳ್ಳು ಇದನ್ನು ಟಚ್ ಮಿ ನಾಟ್ ಅಂತ ಕೂಡ ಕರೆಯುತ್ತಾರೆ ಇದನ್ನು ಮುಟ್ಟಿದರೆ ಮುನಿ ಗಿಡ ಅಂತ ಕೂಡ ಕರೆಯುತ್ತಾರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಕರೆಯುವ ಈ ಗಿಡವು ಸಾಮಾನ್ಯವಾಗಿ ಎಲ್ಲಾ ಕಡೆ ಕಾಣಸಿಗುತ್ತದೆ.
ಈ ಗಿಡವನ್ನು ತಂದು ಈ ಗಿಡದ ಎಲೆಯನ್ನು ತೆಗೆದುಕೊಂಡು ಇದನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಬೇಕು ಬಳಿಕ ಎಲೆಯನ್ನು ಜಜ್ಜಿ ಪೇಸ್ಟ್ ಮಾಡಿ ಈ ಪೇಸ್ಟ್ ಜೊತೆಗೆ ಕಪ್ಪು ಜೀರಿಗೆ ಮಿಶ್ರಮಾಡಿ ಒಮ್ಮೆಲೆ ಬ್ಲೆಂಡ್ ಮಾಡಿ ಇಟ್ಟುಕೊಳ್ಳಿಇದಕ್ಕೆ ಬೇರೇನೂ ಮಿಶ್ರಣ ಮಾಡುವುದು ಬೇಡ ನೀರನ್ನು ಕುದಿಯಲು ಇಟ್ಟು ನೀರಿಗೆ ಈ ತಯಾರಿಸಿಕೊಂಡು ಪೇಸ್ಟನ್ನು ಹಾಕಿ ಒಮ್ಮೆಲೆ ನೀರನ ಕುದಿಸಿಕೊಂಡು ನಂತರ ಅದರ ಶೋಧಿಸಿ ಕುಡಿಯುತ್ತ ಬರಬೇಕು ಈ ಪರಿಹಾರವನ್ನು ಪಾಲಿಸಿಕೊಂಡು ಬರುವುದರಿಂದ ಆಗುವ ಲಾಭವೇನೆಂದರೆ ದೇಹದ ಉಷ್ಣಾಂಶ ಬೇಗನೆ ಕಡಿಮೆಯಾಗುತ್ತದೆ ಮತ್ತು ಮೂಲವ್ಯಾಧಿಯಂತಹ ಸಮಸ್ಯೆಗೆ ಬೇಗ ಪರಿಹಾರ ದೊರೆಯುತ್ತದೆ ನೀವು ಕೂಡ ವಾರದವರೆಗೂ ಈ ಮನೆ ಮದ್ದನ್ನು ಪಾಲಿಸಿ ನೋಡಿ
ರಿಸಲ್ಟ್ ಬೇಗಾನೆ ಗೊತ್ತಾಗುತ್ತೆ! ಹಾಗಾಗಿ ಈ ಪೈಲ್ಸ್ ಸಮಸ್ಯೆಯಿಂದ ಬಳಲುವವರು ಮಾತ್ರೆಗಳನ್ನ ಪ್ರಯೋಗ ಮಾಡಿಕೊಳ್ಳುವುದರ ಬದಲು ಈ ರೀತಿ ಮನೆ ಮದ್ದಿನ ಪಾಲಿಸಿ ಮೂಲವ್ಯಾಧಿಗೆ ತಕ್ಕ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ.ಮೂಲವ್ಯಾಧಿ ಸಮಸ್ಯೆ ಯಿಂದ ಬಳಲುವವರು ಪಾಲಿಸುವ ಆಹಾರ ಪದ್ಧತಿ ಹೇಗಿರಬೇಕು ಅಂದರೆ ಅಧಿಕ ಫೈಬರ್ ಅಂಶ ಇರುವ ಆಹಾರ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡಬೇಕು ಮತ್ತು ಹೆಚ್ಚು ದ್ರವ ಪದಾರ್ಥಗಳನ್ನು ತಿನ್ನಬೇಕು ಹೆಚ್ಚು ನೀರು ಕುಡಿಯಬೇಕು ಪ್ರತಿದಿನ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದು ಇನ್ನಷ್ಟು ಒಳ್ಳೆಯದು
ಪ್ರತಿದಿನ ಮಧ್ಯಾಹ್ನ ಊಟದ ಬಳಿಕ ಚುಕ್ಕಿ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು ಈ ಚುಕ್ಕಿ ಬಾಳೆ ಹಣ್ಣಿನಲ್ಲಿ ಫೈಬರ್ ಅಂಶವಿರುತ್ತದೆ ಮತ್ತು ಚುಕ್ಕಿ ಬಾಳೆಹಣ್ಣು ದೇಹದ ಉಷ್ಣಾಂಶವನ್ನು ಅತಿ ಬೇಗನೆ ಕಡಿಮೆ ಮಾಡುತ್ತದೆ. ಹಾಗಾಗಿ ಮೂಲವ್ಯಾಧಿ ನಿಂದ ಬಳಲುವವರು ಚುಕ್ಕಿ ಬಾಳೆಹಣ್ಣನ್ನು ತಿನ್ನುವ ರೂಢಿ ಮಾಡಿಕೊಳ್ಳಿ ಇದರಿಂದ ಆರೋಗ್ಯ ವೃದ್ಧಿಸುತ್ತದೆ ಜೊತೆ ಸಮಸ್ಯೆ ಕೂಡ ಬೇಗನೆ ಪರಿಹಾರವಾಗುತ್ತದೆ.