ಹೇನಿನ ಸಮಸ್ಯೆ ಕಾಡುತ್ತಿದ್ದರೆ ಈ ಪರಿಹಾರ ಮಾಡಿ ಈ ಪರಿಹಾರ ಕೆಲವೇ ಕೆಲವು ಬಾರಿ ಉಪಯೋಗಿಸಿದ್ದೇ ಆದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಹೇನಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುತ್ತಿರ.ನಮಸ್ಕಾರಗಳು ಹೇನು ಇದು ಕೂದಲಿಗೆ ಸಂಬಂಧಪಟ್ಟ ತೊಂದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯು ಆದಷ್ಟು ಕಡಿಮೆ ಆಗಿದ್ದರೂ ಸಹ ಕೆಲವರಲ್ಲಿ ಇನ್ನೂ ಸಹ ಈ ತೊಂದರೆ ಕಾಡುತ್ತಿದೆ ಹೇನು ಇದ್ದರೆ, ವಿಪರೀತ ತಲೆ ಕಡಿತಾ ಬರುತ್ತದೆ ಈ ತುರಿಕೆ ಯಿಂದಲೇ ಯಾವಾಗ ಈ ಹೇನೂ ಹೋಗುತ್ತದೊ ಅಂತ ಅನಿಸುತ್ತದೆ.
ಹೌದು ಇವತ್ತಿನ ದಿನಗಳಲ್ಲಿ ಹೊಟ್ಟಿನ ಸಮಸ್ಯೆ ತುಂಬಾನೇ ಇದೆ ಹಾಗೆ ಈ ಹೇನಿನ ಸಮಸ್ಯೆ ಕಡಿಮೆ ಆಗಿದೆ ಆದರೆ ಇವತ್ತು ಮಾರುಕಟ್ಟೆಯಲ್ಲಿ ಸಾಕಷ್ಟು ಶಾಂಪೂಗಳು ದೊರೆಯುತ್ತದೆ ಈ ಹೇನು ಸಮಸ್ಯೆ ನಿವಾರಣೆ ಮಾಡಲು.ಆದರೆ ಇದು ಕೂದಲಿನ ನೈಸರ್ಗಿಕವಾದ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ ಡ್ರೈನೆಸ್ ಉಂಟು ಮಾಡುತ್ತದೆ, ಆದರೆ ಮನೆಮದ್ದು ಪಾಲಿಸಿ ಈ ಹೇನಿನ ಪರಿಹಾರ ಮಾಡಿದರೆ ಖಂಡಿತವಾಗಿಯೂ ಹೇನಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.
ಬನ್ನಿ ಈ ಲೇಖನದಲ್ಲಿ ನಾವು ಈ ಸಮಸ್ಯೆಗೆ ಮಾಡಬಹುದಾದ ಪರಿಹಾರ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತ ಪದಾರ್ಥಗಳು ಅಂದರೆ ಅದು ತುಳಸಿ ಎಲೆ ಮೆಂತ್ಯೆ ಮತ್ತು ಕರ್ಪೂರ ಈ ಪದಾರ್ಥಗಳನ್ನು ಬಳಸಿ ಹೇಗೆ ಪರಿಹಾರ ಮಾಡಬೇಕು ಅಂದರೆ ಮೊದಲಿಗೆ ತುಳಸಿ ಎಲೆಗಳನ್ನು ಮತ್ತೆ ಮೆಂತೆ ಕಾಳುಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಅಥವಾ ಮಿಕ್ಸಿಗೆ ಹಾಕಿ ಸಣ್ಣಗೆ ಪುಡಿಮಾಡಿಕೊಳ್ಳಬೇಕು ನಂತರ ಈ ಪುಡಿಯನ್ನ ಶೇಖರಣೆ ಮಾಡಿ ಇಟ್ಟುಕೊಳ್ಳಿ.
ನಂತರ ಕಬ್ಬಿಣದ ಬಾಣಲೆಯನ್ನು ತೆಗೆದುಕೊಂಡು ಆ ಬಾಣಲೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಕೊಬ್ಬರಿ ಎಣ್ಣೆ ಬಿಸಿಯಾಗುವಾಗ ತಯಾರಿಸಿಕೊಂಡ ಮಿಶ್ರಣವನ್ನು ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ ಈ ಎಣ್ಣೆಯಲ್ಲಿ ತುಳಸಿ ಎಲೆ ಮತ್ತು ಮೆಂತೆಕಾಳಿನ ಪುಡಿ ಹಸಿ ವಾಸನೆ ಹೋಗುವವರೆಗೂ ಬಿಸಿ ಮಾಡಿಕೊಳ್ಳಬೇಕು ನಂತರ ಇದಕ್ಕೆ ಕರ್ಪೂರದ ಪುಡಿಯನ್ನ ಕುಟ್ಟಿ ಪುಡಿಮಾಡಿ ಎಣ್ಣೆಯೊಳಗೆ ಹಾಕಿ
ಈ ಎಣ್ಣೆಯನ್ನು ತಣಿಯಲು ಬಿಡಬೇಕು ನಂತರ ಈ ಎಣ್ಣೆಯನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಈಗ ಈ ಎಣ್ಣೆಯನ್ನು ಶೇಖರಣೆ ಮಾಡಿಟ್ಟುಕೊಂಡರೂ ದಿನಬಿಟ್ಟು ದಿನ ಕೂದಲಿಗೆ ಹಚ್ಚುತ್ತ ಬರಬೇಕು ಈ ರೀತಿ ಪರಿಹಾರ ಮಾಡುತ್ತ ಬರುವುದರಿಂದ, ಡ್ಯಾಂಡ್ರಫ್ ಸಮಸ್ಯೆ ಅಥವಾ ಹೇನಿನ ಸಮಸ್ಯೆ ಇರಲಿ ಕೇವಲ ಮೂರ್ನಾಲ್ಕು ಬಾರಿ ಯಲ್ಲಿಯೇ ಹೇನಿನ ಸಮಸ್ಯೆ ಕಡಿಮೆಯಾಗುವುದನ್ನೂ ನೀವು ಕಾಣಬಹುದು.
ಹೌದು ಈ ಸರಳ ಉಪಾಯ ಹೇನಿಗೆ ತುಂಬಾನೇ ಪ್ರಭಾವವಾಗಿ ಕೆಲಸಮಾಡಿ ಈ ಸಮಸ್ಯೆಯನ್ನು ನಿವಾರಿಸುತ್ತದೆ ಜೊತೆಗೆ ಹುಟ್ಟು ಮತ್ತು ಹೇನಿನ ಚಿಕ್ಕಚಿಕ್ಕ ಮೊಟ್ಟೆ ಈ ಎಲ್ಲಾ ತೊಂದರೆಯನ್ನು ಪರಿಹರಿಸಲು ಹಾಗೂ ತಲೆಸ್ನಾನ ಮಾಡಿದ ಮೇಲೆ ಹೇನು ಬರುವ ಬಾಚಣಿಕೆಯಲ್ಲಿ ನಿಮ್ಮ ತಲೆ ಬುಡವನ್ನು ಬಾಚಿಕೊಳ್ಳಬೇಕು.
ಈ ಸರಳ ಪರಿಹಾರ ಹೇನಿನ ಸಮಸ್ಯೆ ಫಲಿತಾಂಶ ಕೊಡುತ್ತದೆ ಅಥವಾ ಕೊಬ್ಬರಿ ಎಣ್ಣೆಗೆ ಭಜಿಯನ್ನ ಕುಟ್ಟಿ ಪುಡಿಮಾಡಿ ಮತ್ತು ಕರ್ಪೂರವನ್ನು ಕುಟ್ಟಿ ಪುಡಿ ಮಾಡಿ ಅದನ್ನು ಎಣ್ಣೆಯೊಂದಿಗೆ ಮಿಶ್ರ ಮಾಡಿ ಎಣ್ಣೆಯನ್ನು ಬಿಸಿ ಮಾಡಿ, ಇದೇ ರೀತಿ ಕೂದಲಿಗೆ ಅಪ್ಲೈ ಮಾಡಿ ನಂತರ ಹೇನು ಬರುವ ಬಾಚಣಿಗೆಯಿಂದ ಕೂದಲನ್ನು ಬಾಚಬೇಕು, ಈ ರೀತಿ ಮಾಡುವುದರಿಂದ ಕೂಡ ಹೇನುಗಳು ಬಹಳ ಬೇಗ ಕಡಿಮೆಯಾಗುತ್ತದೆ.