ಇವನು ಯಾರು ಗೊತ್ತ , ಭಾರತದ ಒಬ್ಬ ವಿಶೇಷ ಯೂಟೂಬರ್ ಅವನ ವಿಡಿಯೋಗಳನ್ನ ನೋಡಿದ್ರೆ ಇವತ್ತೇ ಅಭಿಮಾನಿ ಆಗೋದ್ರಲ್ಲಿ ಅನುಮಾನವೇ ಇಲ್ಲ…

143

ವೀಕ್ಷಕರೇ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬುದು ನಮ್ಮಲ್ಲಿ ವಾಡಿಕೆಯಲ್ಲಿರುವ ಹಳೆಯ ನಾಣ್ಣುಡಿಗಳಲ್ಲಿ ಒಂದು ನಾವು ನಮ್ಮ ನಮ್ಮ ಅನುಕೂಲಕ್ಕಾಗಿ ಸ್ವಾರ್ಥಕ್ಕಾಗಿ ಏನೆಲ್ಲಾ ಎಷ್ಟೆಲ್ಲ ಗಳಿಸಿ ಉಳಿಸ್ತೀವಿ ಈಗಿನ ಕಾಲದಲ್ಲಿ ಅಂತೂ ಕುಳಿತಲ್ಲಿ ಹಣ ಗಳಿಸೋದಕ್ಕೆ ಹಲವು ಅವಕಾಶಗಳಿವೆ ಹಣ ಸಿಕ್ಕಷ್ಟು ಕೂಡ ಸ್ವಾರ್ಥಿಗಳಾಗುವಂತ ಜನರಿರುವಂತ ಈ ಒಂದು ಕೆಟ್ಟ ಸಮಾಜದಲ್ಲಿ ಆ ಒಬ್ಬ ಯುವಕ ಬಂದ ಹಣವನ್ನೆಲ್ಲ ಅನೇಕ ಸಾಮಾಜಿಕ ಕಾರ್ಯಗಳಿಗೆ ಬಡಬಗ್ಗರ ಸೇವೆಗೆ ಮೀಸಲಿಡುತ ತನ್ನ ವಯಸ್ಸಿಗೆ ಮೀರಿದ ನೈತಿಕತೆಯನ್ನ ಮೆರೆದಿದ್ದಾನೆ ಈತನ ಹೆಸರೇ ಹರ್ಷ ಸಾಯಿ ವೀಕ್ಷಕರೇ ಈತ ತೆಲುಗಿನ ಒಬ್ಬ YouTube content maker ಆಕ್ಟರ್.

ಈ ರೀತಿ ಅನೇಕ ವಿಧದಲ್ಲಿ ಗುರುತಿಸಿಕೊಂಡಿರುವ ವೀಕ್ಷಕರೇ ಹರ್ಷ ಸಾಯಿ ಒಬ್ಬ YouTube ಹಾಗು ಸೋಶಿಯಲ್ ಮೀಡಿಯಾದ ಯುವ ಸೆಲೆಬ್ರಿಟಿ ಇವನಂತೆ ಹಲವರು ಇರಬಹುದು ಆದರೂ ಕೂಡ ಪ್ರತ್ಯೇಕವಾಗಿ ಈತನ ಬಗ್ಗೆ ಚರ್ಚಿಸುವಂತ ವಿಶೇಷತೆ ಏನಿದೆ ಅಂತ ನಿಮ್ಮಲ್ಲಿ ಹಲವರು ಕೇಳಬಹುದು ಆದರೆ ಈತ ಎಲ್ಲರ ಹಾಗಲ್ಲ ಇನ್ನು ಇಪ್ಪತ್ತಾರು ವರ್ಷ ವಯಸ್ಸಿನ ಈ ಯುವಕನಿಂದ ಅದೆಷ್ಟೋ ಬಡ ಹಾಗು ದೀನ ಕುಟುಂಬಗಳ ಲೈಫ್ ಚೇಂಜ್ ಆಗಿದೆ ಎಷ್ಟು ಜನಕ್ಕೆ ಅವರು ಬಯಸಿದ್ದು ಈತನೇ ಅವರಿಗೆ ಸಿಕ್ಕಿದೆ ಮುಖ್ಯವಾಗಿ ನಗುವ ಬತ್ತಿ ಹೋದವರ ಮುಖದ ಮೇಲೆ ಸಂತೃಪ್ತಿಯ ನಗು ಮೂಡಿದೆ ಈ ವೇಗದ ಯುಗದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಾರ್ಥವನ್ನಷ್ಟೇ ನೋಡದೆ ಇನ್ನೊಬ್ಬರ ಕಷ್ಟಕ್ಕೂ ಸ್ಪಂದಿಸಿ ಬಾಡಿ ಹೋದ ಅವರ ಮುಖದಲ್ಲಿ ನಗು ತೋರಿಸುವುದು ಇದೆಯಲ್ಲ .

ಅದೇ ನಿಜವಾದ ತಪಸ್ಸು ಸಾಧನೆ ಅಥವಾ ಶ್ರೇಷ್ಠತೆ ಎನ್ನಬಹುದು ಇಷ್ಟಕ್ಕೂ ಯಾರು ಈ ಆಧುನಿಕ ಉಪಕಾರಿ ಇಷ್ಟು ಸಣ್ಣ ವಯಸ್ಸಿಗೆ ಇಂತಹ ಸಹಾಯದ ಮನೋಧರ್ಮ ಈತನಲ್ಲಿ ಮೈಗೂಡುವುದಕ್ಕೆ ಕಾರಣ ಏನು ಈತನ ಹಿನ್ನಲೆ ಏನು ಈ ಎಲ್ಲದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ ವೀಕ್ಷಕರೇ ಈ ವಿಡಿಯೋದ ಕೊನೆಯಲ್ಲಿ ಬದುಕು ನಿಮ್ಮಲ್ಲೂ ಕೂಡ ಹೊಸ ಬದಲಾವಣೆಗೆ ಸ್ಫೂರ್ತಿ ನೀಡಬಹುದು ಹಾಗೂ ನೀಡಲಿ ಎಂಬ ಭರವಸೆಯೊಂದಿಗೆ ಮುಂದಿನ ಈ ಚರ್ಚೆಯನ್ನ ಶುರು ಮಾಡೋಣ ವೀಕ್ಷಕರೇ ಹರ್ಷ ಸಾಯಿ ಎಂಬ ಹೆಸರಿನ ಈ ಯೋಗ ಮೂಲತಃ ಆಂಧ್ರದ ಹೈದರಾಬಾದ್ ಪ್ರಾಂತ್ಯದ ತೆಲಂಗಾಣದವನು ಈಗಾಗಲೇ ಈತನನ್ನು ಫಾಲೋ ಮಾಡ್ತಿರುವಂತ ಸಾಕಷ್ಟು ಜನಕ್ಕೆ ಈತನ ಯಾರು ಅಂತ ಗೊತ್ತಿದೆ ತೆಲಂಗಾಣ ಭಾಗದಲ್ಲಿ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಜನಿಸಿದಂತ ,

ಹರ್ಷ ಸಾಯಿ ಯಾರೊಬ್ಬರೂ ಕೂಡ ಮಾಡದಂತಹ ತನ್ನ ಗ್ರೇಟ್ inspiring ವಿಡಿಯೋಗಳಿಂದಾಗಿ ಈಗಾಗಲೇ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ಕನ್ನಡದಲ್ಲಿ ಈತನ ಹೆಸರನ್ನು ಕೇಳಿದವರು ಬಹಳ ಕಡಿಮೆ YouTube ವಾಹಿನಿಯಲ್ಲಿ ಇರುವಂತಹ ಈತನ ವಿಡಿಯೋಗಳನ್ನ ಹಾಗು ಅದರಲ್ಲಿ ಈತನ ಪಾತ್ರವನ್ನ ಒಮ್ಮೆ ನೀವು ನೋಡಿದರೆ ಈತನನ್ನ ವಿಜ್ಞಾನಿ ಅಂತ ಕರಿಬೇಕು ಶಿಕ್ಷಕ ಅಂತ ಕರಿಬೇಕು ಅಥವಾ ಸೋಶಿಯಲ್ ವರ್ಕರ್ ಅಂತ ಕರಿಬೇಕು ಎಂಬ ಗೊಂದಲ ನಿಮ್ಮಲ್ಲಿ ಏರ್ಪಡುತ್ತೆ ಯಾಕಂದ್ರೆ ಆತನ ಕೆಲಸ ಕಾರ್ಯಗಳೇ ಆಗಿವೆ ತನ್ನ ವಾಹಿನಿಯಲ್ಲಿ ಎರಡುವರೆ ಮಿಲಿಯನ್ ಅಧಿಕ ಅನುಯಾಯಿಗಳನ್ನ ಸಂಪಾದಿಸಿರುವಂತ ಈತ ಸದ್ಯ ಅಲ್ಲಿನ ಹಾಟ್ ಯೌಟ್ಯೂಬ್ ಫ್ರೆಂಡ್ಸ್ ಸೆಟ್ಟರ್ ಆಗಿದ್ದಾನೆ ಇಂತ ಈ ಹರ್ಷ ಸಾಯಿ ತೆಲಂಗಾಣದಲ್ಲಿ ಜನಿಸಿದರು ಕೂಡ ತನ್ನ ಬಾಲ್ಯ ಹಾಗು ಶೈಕ್ಷಣಿಕ ಜೀವನದಲ್ಲಿ ಹೆಚ್ಚಿನ ಸಮಯವನ್ನ ಕಳೆದದ್ದು ಅಲ್ಲಿನ ವಿಶಾಖಪಟ್ಟಣಂ ಎಂಬಲ್ಲಿ ತನ್ನ ಆರಂಭಿಕ ಸ್ಕೂಲಿಂಗ್ PU ಶಿಕ್ಷಣವನ್ನ ಈತ ವಿಜಯನಗರಂನಲ್ಲಿಯೇ ಪೂರೈಸಿದರು .

ಕೂಡ ಸದ್ಯ ವಿಶಾಖಪಟ್ಟಣಂ ನ ಗೀತಂ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ವಿದ್ಯಾರ್ಥಿಯಾಗಿ ತನ್ನ ಶಿಕ್ಷಣವನ್ನ ಮುಂದುವರೆಸಿದ್ದಾನೆ ಈತನಿಗೆ ಬಾಲ್ಯದಿಂದಲೂ ವಿಜ್ಞಾನದ ವಿಷಯದಲ್ಲಿ ಅತೀವ ಆಸಕ್ತಿ ಇದ್ದು ಶಾಲೆಯಲ್ಲಿ ಏನಾದರು ಹೊಸ science ಪ್ರಯೋಗದ ಬಗ್ಗೆ ತರಗತಿಯನ್ನ ಮಾಡಿದರೆ ಈತ ತಾನು ಕೂಡ ಮನೆಯಲ್ಲಿ ಅದನ್ನ ಪ್ರಾಯೋಗಿಕವಾಗಿ ಪರೀಕ್ಷೆ ಮಾಡುತ್ತಿದ್ದ ಹರ್ಷ ಸಾಯಿ ಚಿಕ್ಕ ageನಲ್ಲಿ ತನ್ನ ಸ್ವಂತವಾಗಿ ರಿಮೋಟ್ ಕಾರ್ ಗಳನ್ನ ಚಿಕ್ಕ ಗಾತ್ರದ ವಿಮಾನಗಳನ್ನು ಕೂಡ ತಯಾರಿಸಿ ಅವುಗಳ ಜೊತೆ ಆಟವಾಡುತ್ತಿದ್ದ ಹುಡುಗ ಇದರಿಂದಲೇ ಆತ ಆಗಲೇ ವಿಜ್ಞಾನ ಎಷ್ಟು ಆಸಕ್ತಿ ಹಾಗು ಕ್ರೇಜನ್ನ ಬಳಸಿಕೊಂಡಿದ್ದ ಅಂತ ನಾವು ಅಂದಾಜಿಸಬಹುದು ಎಲ್ಲರ ಜೊತೆ ಲವಲವಿಕೆಯಿಂದ ಚುರುಕು ಚುರುಕಾಗಿ ಮಾತಾಡ್ತಿದ್ದಂತಹ ಹರ್ಷ ಕಮ್ಯುನಿಕೇಷನ್ ಅಲ್ಲೂ ಕೂಡ ಉತ್ತಮ ಹಿಡಿತವನ್ನ ಸಾಧಿಸಿದವನು .

ಇದರ ಜೊತೆ ಬಾಡಿ ಫಿಟ್ನೆಸ್ ಕಡೆಯೂ ಕೂಡ ಆಸಕ್ತಿ ತೋರಿದಂತ ಹರ್ಷ ಈಗಲೂ ಕೂಡ ತನ್ನ ದೇಹವನ್ನ ಸದೃಢವಾಗಿ fit ಆಗಿ ಇರಿಸಿಕೊಳ್ಳೋದಕ್ಕೆ ನಿತ್ಯ ಅಭ್ಯಾಸದಲ್ಲಿ ತೊಡಗುತ್ತಾನೆ ಹರ್ಷ ಸಾಯಿ ಪ್ರತಿ ದಿನ ಒಬ್ಬರಿಗಾದರೂ ತನ್ನ ಕೈಲಾದ ಸಹಾಯವನ್ನ ಮಾಡುತ್ತಾನೆ ಇದನ್ನ ಆತ ಪ್ರಚಾರಕ್ಕಾಗಿಯೋ ಅಥವಾ ಇತರ ಸ್ವಾರ್ಥ ಸಾಧನೆಗೆ ಮಾಡೋದಿಲ್ಲ ಅದನ್ನ ಆತ ತನ್ನ ಆತ್ಮ ತೃಪ್ತಿಗಾಗಿ ಮಾತ್ರ ಮಾಡುತ್ತಾನೆ ಹಾಗೆ ಮಾಡಿದ ಕೆಲಸವನ್ನ ತಾನೇ ಕ್ಯಾಮೆರಾದಲ್ಲಿ ಸೆರೆ ಹಿಡಿದು ತನ್ನ ಬಳಿ ಇಟ್ಟುಕೊಳ್ಳುತ್ತಾನೆ ಆತನ ದೈಹಿಕ fitnessಗೆ ಇದು ಕೂಡ ಒಂದು ಕಾರಣವಂತೆ ಅಂದರೆ ತನಗೆ ಇಷ್ಟವಾದ ಕೆಲಸ ತಾನು ಮಾಡುತ್ತಾ ಅದರಿಂದ ಆತ್ಮ ಸಂತೃಪ್ತಿಯನ್ನು ಹೊಂದುವುದು ನನಗೆ ಅನಗತ್ಯ tension ಚಿಂತೆಗಳಿಂದ ಮುಕ್ತವಾಗಿ ಪ್ರಶಾಂತ ಹಾಗು ಪ್ರಫುಲವಾಗಿ ಇರುತ್ತೆ .

ಅನ್ನೋದು ಆತನ ಅಭಿಪ್ರಾಯ ಹರ್ಷ ಎರಡು ಸಾವಿರದ ಹತ್ತೊಂಬತ್ತರಲ್ಲಿ ಅಷ್ಟೇ ತನ್ನ YouTube ವಾಹಿನಿಯನ್ನ ತೆರೆದದ್ದು ಅದಕ್ಕೂ ಮುನ್ನ ಆತ ಕೇವಲ ಟೈಮ್ ಪಾಸ್ ಗಾಗಿ ಸೆರೆ ಹಿಡಿಯುತ್ತಿದ್ದ ಆದರೆ ಇವೆ ಮುಂದೆ ಸೋಶಿಯಲ್ ಮೀಡಿಯಾ ಲೋಕದಲ್ಲಿ ತನ್ನ ಬದುಕನ್ನೇ ಬದಲಿಸುತ್ತೆ ಅನ್ನುವುದು ಆತನಿಗೆ ಗೊತ್ತ ಈತ ಮೊದಲಿಗೆ ತನ್ನ ಫಿಟ್ನೆಸ್ ಹಿಂದಿರುವಂತ ಅಸಲಿ ಗುಟ್ಟಿನ ಬಗ್ಗೆ ಅಪ್ಲೋಡ್ ಮಾಡಿದ ವಿಡಿಯೋಗಳು ಬಹುಬೇಗನೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನ ಪಡೆದು ಮುನ್ನುಗ್ಗಿದವು ಇದಾದ ಮೇಲೆ ಹರ್ಷ ಸಾಯಿ ತನ್ನ ವಾಹಿನಿಯಲ್ಲಿ ಸಣ್ಣ ಸಣ್ಣ ಎಜುಕೇಶನ್ ವಿಡಿಯೋಗಳನ್ನ ಕೂಡ ಪ್ರಮೋಟ್ ಮಾಡಿದ ಅವು ಕೂಡ ಬಹಳ ಚೆನ್ನಾಗೇನೇ ವೈರಲ್ ಆದವು YouTubeನಲ್ಲಿ ಹೊಸ ಬಗೆಯ ಕಂಟೆಂಟ್ ಇರುವಂತ ವಿಡಿಯೋಗಳನ್ನ ಯಾಕೆ ಮಾಡಬಾರದು.

ಅಂತ ಹರ್ಷ ನಿರ್ಧರಿಸಿದ್ದ ಆತ ಈ ಒಂದು ನಿರ್ಧಾರವನ್ನ ತಗೊಂಡವನೇ ತಕ್ಷಣವೇ ಆತ ಒಂದು ವಿಭಿನ್ನ ಬಗೆಯ ವಿಡಿಯೋವನ್ನ ತಯಾರು ಮಾಡಿಕೊಂಡ ಆತ ಶೇರ್ ಮಡಿದ ಮೊದಲ ವಿಡಿಯೋದಲ್ಲಿ ಆತ ಐದು ಸಾವಿರಾರು ಮಾಡಿ ಅದರಿಂದ ಒಂದು ಹುಂಡೆ ಕಾರನ್ನ ಖರೀದಿ ಮಾಡೋದಕ್ಕೆ ಹತ್ತಿರದ ಒಂದು show ರೂಮ್ಗೆ ಭೇಟಿ ಕೊಟ್ಟ ಅಲ್ಲಿ ತನ್ನ ರಾಶಿ ರಾಶಿ ಐದು ರೂಪಾಯಿ coinಗಳನ್ನ ಸುರಿದು ಅಲ್ಲಿನ ಸಿಬ್ಬಂದಿಗಳು ಅವನ್ನೆಲ್ಲ ಎಣಿಸುವುದಕ್ಕೆ ಪಟ್ಟ ಪಾಡು ಅವರ ಕೋಪ ಅಸಮಾಧಾನ ಬೈಗುಳ ಇವೆಲ್ಲವನ್ನೂ ಕೂಡ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದನ್ನ ಪ್ರಕಟ ಮಾಡಿದ ಅದನ್ನ ಪ್ರಕಟ ಮಾಡಿದ್ದೆ ತಡ ಈ ಒಂದು ವಿಚಿತ್ರ ಕಂಟೆಂಟ್ ಇದ್ದಂತ ವೀಡಿಯೋ ಸಕತ್ ವೈರಲ್ ಆಯಿತು .

ನೀವು ಈಗಲೂ ಕೂಡ ಈ ಒಂದು ವಿಡಿಯೋವನ್ನ ಆತನ ವಾಹಿನಿಯಲ್ಲಿ ವೀಕ್ಷಿಸಿ ರೋಮಾಂಚಿತರಾಗಬಹುದು ಈ ಒಂದು ವಿಡಿಯೋದಿಂದ ಹರ್ಷ ವಿಭಿನ್ನ ಆಸಕ್ತಿಕರ content ಕೊಟ್ರೆ ಜನ ನಿರೀಕ್ಷೆಗೂ ಮೀರಿ ಇಲ್ಲಿ ಸ್ಪಂದಿಸ್ತಾರೆ ಎಂಬುದನ್ನ ತಿಳ್ಕೊಂಡ ಇದೆ ರೀತಿಯ ವಿಭಿನ್ನ content ನೀಡಬೇಕು ಅಂತ ಆತ ನಿಶ್ಚಯಿಸಿದ ಆತನ ಎರಡನೇ ವೀಡಿಯೋ ಕೂಡ ವಿಭಿನ್ನವಾಗಿತ್ತು ಅಲ್ಲಿನ ಒಂದು ಹಾರ್ಟೆಡ್ ಕಾಲೇಜಿನ ಪಾಳು ಬಿದ್ದ ಕೊಠಡಿಗಳಲ್ಲಿ ಒಂದು ಇಡೀ ರಾತ್ರಿ ಏಕಾಂಗಿಯಾಗಿ ತಂಗಿದ್ದು ಹೊರಬರೋದಕ್ಕೆ ಹರ್ಷ ಯೋಜಿಸಿದ್ದ ಇಲ್ಲಿ ಒಬ್ಬ ಶಿಕ್ಷಕ ಆತ್ಮಹತ್ಯೆಯನ್ನ ಮಾಡಿಕೊಂಡು ಜೀವ ಬಿಟ್ಟಿದ್ದ ಆತನ ಆತ್ಮ ಇಲ್ಲಿ ರಾತ್ರಿ ಪೂರಾ ಸಂಚರಿಸುತ್ತೆ ಎಂಬ ಭಯಾನಕ ನಂಬಿಕೆಗಳು ಆ ಜಾಗದ ಸುತ್ತ ಇದ್ದವು ಇದೆ ಕಾರಣಕ್ಕೆ ಇಲ್ಲಿ ಯಾರು ಕೂಡ ಓಡಾಡುತ್ತಿರಲಿಲ್ಲ ಇಂತಹ ಭಯ ಖಚಿತ ಸ್ಥಳದಲ್ಲಿ ಹರ್ಷ ಒಂದು ರಾತ್ರಿ stay ಆಗುವುದಕ್ಕೆ ನಿರ್ಧರಿಸಿದ್ದ ಅದು ಕೂಡ ಆ ರಾತ್ರಿ ಅಲ್ಲಿನ ಪ್ರತಿ ಕೊಠಡಿಯೊಳಗೆ ಸುತ್ತಾಡಿ,

ಅಲ್ಲಿ ಸತ್ತ ಶಿಕ್ಷಕನ ಆತ್ಮ ಇದಿಯೋ ಇಲ್ಲವೋ ಅಂತ ಪರಿಶೀಲನೆ ಮಾಡುತ್ತಾನೆ ತಂಗಲು ರೆಡಿ ಆಗಿದ್ದ ಈ ಮೂಲಕ ಹರ್ಷ ತಾನು ಎಷ್ಟು ಧೈರ್ಯಸ್ಥ ಹಾಗು ಗಟ್ಟಿ ಗುಂಡಿಗೆ ಇರುವ ವ್ಯಕ್ತಿ ಎಂದು ಜನರಿಗೆ prove ಮಾಡಿದ್ದ ಈ ಒಂದು ಪ್ರಯತ್ನದಲ್ಲಿ ಹರ್ಷ ಗೆದ್ದು ಯಶಸ್ವಿಯಾಗಿ ಹೊರಬಂದಿದೆ ಕೂಡ ಎಂದಿನಂತೆ ಈ ಒಂದು ವೀಡಿಯೋ ಕೂಡ YouTubeನಲ್ಲಿ ಭಾರಿ ವೈರಲ್ ಆಯ್ತು ಇಂತಹ ಪ್ರತಿ ವಿಡಿಯೋದಲ್ಲಿ ಕೂಡ unique content ನೊಂದಿಗೆ ಆಸಕ್ತಿ present ಮಾಡ್ತಾ ಬಂದಿರುವಂತ ಹರ್ಷ ಇದೀಗ ಅಲ್ಲಿನ YouTubeನ ಒಂದು ದಿವ್ಯ ಸಂಚಲನವಾಗಿದ್ದಾನೆ ಈ ಮೂಲಕ ಹರ್ಷನ ವಿಡಿಯೋಗಳು ಬಹಳವೇ popular ಆಗಿ ಆತ ಯಾವ ವೀಡಿಯೋ ಹಾಕಿದ್ರು .

ಕೂಡ ಅದು ನಂಬರ್ one trend ಆಗುವಷ್ಟು ಆತ ಪ್ರಸಿದ್ದಿ ಪಡೆದಿದ್ದಾನೆ ಆತ ಕೇವಲ ಟ್ರೆಂಡ್ ಸೆಟರ್ ಮಾತ್ರವಲ್ಲದೆ ಓರ್ವ ಸಹೃದಯವಂತ YouTube ಹಾಗೂ ಇತರ ಸೋಶಿಯಲ್ ತಾಣಗಳಲ್ಲಿ ತನಗೆ ಹರಿದು ಬರುವಂತಹ ಹಣದಲ್ಲಿ ಮುಕ್ಕಾಲು ಭಾಗವನ್ನು ಈತ ದೀನದಲಿತರ ಸಹಾಯಕ್ಕಾಗಿ ಬಳಕೆ ಮಾಡುತ್ತಾನೆ ಬಡ ಜನರಿಗೆ ಸಹಾಯ ಮಾಡಿ ಅದರಿಂದ ಖುಷಿಪಡುವಂತಹ ಅವರ ನಗುವನ್ನ ಸಂಭ್ರಮವನ್ನು ಈ ಯುವಕ ತನ್ನ ಪ್ರಕಟಿಸುತ್ತಾನೆ ಇದರ ಉದ್ದೇಶ ತಾನು ಎಷ್ಟು ಸಹಾಯ ಮಾಡಿದೆ ಎಂಬುದಲ್ಲ ಬದಲಿಗೆ ನಾವು ಯಾರಿಗಾದರು ನೆರವಾದ್ರೆ ನೆರವನ್ನ ಪಡೆದವರಿಗೆ ಆಗುವ ನಿರಾಳತೆ ಸಂತೃಪ್ತಿ ಎಂತಹದು ಹಾಗು ಅದು ತಮಗೆ ಎಷ್ಟು ಆನಂದವನ್ನು ಕೊಡುತ್ತೆ ಎಂಬುದನ್ನ ಜನರಿಗೆ ಮನದಟ್ಟು ಮಾಡೋದಷ್ಟೇ ಈ ವಿಡಿಯೋಗಳ ಹಿಂದಿನ ಅಸಲಿ ಉದ್ದೇಶ ಈತ ಈ ಒಂದು ಸಹಾಯಗಳನ್ನ ಬಹಳ ಆಕರ್ಷಕ ಮಾದರಿಯಲ್ಲಿ ಮಾಡುತ್ತಾನೆ ಯಾವುದೋ ಬಡ ಕುಟುಂಬಗಳಿಗೆ ನೆರವಾಗೋದರಿಂದ ಹಿಡಿದು ಶಾಲೆಯ ಫೀಸ್ ಅನ್ನ ಕಟ್ಟಲಾಗದ ಮಕ್ಕಳಿಗೆ ಸಹಾಯ ಮಾಡೋದು ತನ್ನ ಚಂದದಾರರನ್ನ contest ಗೆ ಆಹ್ವಾನಿಸಿ ಅವರಿಗೆ ಫ್ರೀ ರಸ್ತೆ ಬದಿಯ ನಾಯಿ ಹಾಗು ಇತರೆ ಜೀವಿಗಳಿಗೆ ಆಹಾರ ವಿತರಿಸುವುದು.

ಉಚಿತ ಪೆಟ್ರೋಲ್ ಬಂಕನ್ನ ತೆರೆದು ನೆರವಾಗೋದು ಆನಲೈನ್ ಕ್ಲಾಸ್ ಗೋಸ್ಕರ ಬಡ ಮಕ್ಕಳಿಗೆ ಮೊಬೈಲ್ ಅನ್ನ ಕೊಡಿಸೋದು ಕಡು ಬಡ ಕುಟುಂಬಕ್ಕೆ TVಯನ್ನ ಕೊಡಿಸೋದು fridge ಅನ್ನ ಕೊಡಿಸೋದು ಅಂಗವಿಕಲರಿಗೆ ಗಾಡಿಯನ್ನ ಕೊಡಿಸೋದು ಹಾಗು ಬಡ ಕುಟುಂಬಕ್ಕೆ ಅವರ ವ್ಯಾಪಾರಕ್ಕಿಂತ ಹಣ ಸಹಾಯ ಮಾಡೋದು ಮಕ್ಕಳಿಗೋಸ್ಕರ ಕಷ್ಟ ಪಡುತ್ತಿರುವಂತ ಒಬ್ಬ ಬಡ ತಂದೆಯನ್ನ ಹುಡುಕಿ ಆತನಿಗೆ ಹಣ ಸಹಾಯ ಮಾಡೋದು ಈ ರೀತಿ ಹರ್ಷಣ ಸಹಾಯಗಳು ಒಂದಾ ಎರಡಾ ನಿಜಕ್ಕೂ ಈತನ ಕಾರ್ಯಗಳು ಮೆಚ್ಚುವಂತದ್ದೇ ಈ ರೀತಿ ಹರ್ಷ ನಾಗರೀಕ ಸಮಾಜ ತಲೆದೂಗುವಂತಹ ಎಷ್ಟೋ ಉಪಕಾರಗಳನ್ನ ಮಾಡಿದ್ದಾನೆ ಅವೆಲ್ಲವನ್ನು.

ಕೂಡ ನೀವು ಅವನ ಹರ್ಷ ಸಾಯಿ for you ತೆಲುಗು ಎಂಬ ಆತನದೇ YouTube ವಾಹಿನಿಯಲ್ಲಿ ವೀಕ್ಷಣೆ ಮಾಡಬಹುದು ಆತನ ನಿಖರ ಆದಾಯ ಎಷ್ಟಿದೆಯೋ ಗೊತ್ತಿಲ್ಲ ಇಲ್ಲಿ ಅದರ ಚರ್ಚೆ ಕೂಡ ಅನವಶ್ಯಕ ಆದರೆ ಇತರರಿಗೆ ನೆರವಾಗಬಲ್ಲಂತ ಆ ಒಂದು ಸಹೃದಯ ಆತನಿಗೆ ಇದೆಯಲ್ಲ ಅದೇ ಆತನನ್ನು ಸದಾ ಕಾಯುವಂತ ಶ್ರೀರಕ್ಷೆಯಿಂದ ಅಷ್ಟೇ ಇಲ್ಲಿ ಹೇಳಬಹುದು ಆತನಿಂದ ಸಹಾಯ ಪಡೆದಂತ ಅನೇಕರ ಹರಕೆ ಆಶೀರ್ವಾದ ಸದಾ ಆತನ ಮೇಲೆ ಇರುತ್ತೆ ಹಾಗು ಈತನ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳಲಿ ಎಂಬ ಒಂದು ಆಶಯದೊಂದಿಗೆ ಈ ಒಂದು ವಿಡಿಯೋವನ್ನ ಇಲ್ಲಿಗೆ ಮುಗಿಸೋಣ ನಮಸ್ಕಾರ