ಸುಧಾಮೂರ್ತಿ ನಾರಾಯಣ ಮೂರ್ತಿ ಲವ್ ಸ್ಟೋರಿ ಸಿಕ್ಕಾಪಟ್ಟೆ ರೋಚಕ , ಮದುವೆಗೆ ಮನೆಲ್ಲಿ ಒಪ್ಪಿರಲಿಲ್ಲ ಮುಂದೆ ಏನಾಯಿತು…

233

ಬಂಧುಗಳೆ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಸುಧಾ ಮೂರ್ತಿ ಈ ಹೆಸರನ್ನ ಕೇಳ್ತಾಯಿದ್ದ ಹಾಗೆ ಸ್ಫೂರ್ತಿ ಬರುತ್ತೆ ನಮ್ಮೆಲ್ಲರಿಗೂ ಕೂಡ ವಿಶೇಷವಾದಂತ ಶಕ್ತಿಯು ಕೂಡ ಬರುತ್ತೆ ಯಾಕಂದ್ರೆ ಸುಧಾ ಮೂರ್ತಿ ನಮ್ಮ ಕರ್ನಾಟಕದ ಹೆಮ್ಮೆ ಕೋಟಿ ಕೋಟಿ ಒಡತಿ ಆಗಿದ್ದರು ಕೂಡ ಈಗ ಅಳಿಯ ಬ್ರಿಟನ್ ಪ್ರಧಾನಿ ಕೂಡ ಹೌದು ಅಷ್ಟೊಂದು ಸಿಂಪಲ್ ಆಗಿ ಇರೋದಕ್ಕೆ ಸುಧಾ ಮೂರ್ತಿಯವರು ಹೇಗೆ ಸಾಧ್ಯವಾಗುತ್ತೆ ಪ್ರತಿಯೊಬ್ಬರೂ ಕೂಡ ಯೋಚನೆ ಮಾಡುವಂತ ವಿಚಾರ ಆ ಸಿಂಪಲ್ ಆಗಿರುವಂತ ಒಂದು ಸೀರೆ ಮಿತವಾದಂತ ಭಾಷೆ ಪ್ರಾಮಾಣಿಕವಾದಂತ ಹೃದಯ ಎಲ್ಲರ ಜೊತೆಗು ಕೂಡ ಆ ಬೆರೆಯುವಂತ ಗುಣ ಎಲ್ಲೆಲ್ಲಿ ತಮ್ಮ ಸರಳ ತೋರಿಸಲು ಜನರಿಗೆ ಸ್ಫೂರ್ತಿ ತುಂಬುವಂತ ಕೆಲಸವನ್ನ ಮಾಡ್ತಾರೆ.

ಸದ್ಯ ಲೇಖಕಿ ಕೂಡ ಹೌದು ಅದೇ ರೀತಿಯಾಗಿ ಸ್ಪೂರ್ತಿದಾಯಕ ಭಾಷಣಗಳ ಮೂಲಕವೂ ಕೂಡ ತಮ್ಮನ್ನ ತಾವು ಸುಧಾ ಮೂರ್ತಿ ಗುರುತಿಸಿಕೊಂಡಿದ್ದಾರೆ ಯಾರೇ ಅವರ ಬಳಿ ಹೋದರು ಕೂಡ ಅಷ್ಟೇ ಸರಳವಾಗಿ ಅವರ ಜೊತೆಗೆ ಮಾತನಾಡ್ತಾರೆ ಇಂತಹ ಸುಧಾ ಮೂರ್ತಿ ನಮ್ಮ ಕರ್ನಾಟಕದಲ್ಲಿ ಹುಟ್ಟಿದ್ದು ನಮ್ಮೆಲ್ಲರಿಗೂ ಕೂಡ ಭಾಗ್ಯ ನಮ್ಮೆಲ್ಲರಿಗೂ ಕೂಡ ಪುಣ್ಯ ಅಂದರು ತಪ್ಪಾಗಲಿಕ್ಕಿಲ್ಲ ಬಂಧುಗಳೇ ಹಾಗಾದ್ರೆ ಸುಧಾ ಮೂರ್ತಿ ಮತ್ತೆ ನಾರಾಯಣಮೂರ್ತಿ ಭೇಟಿಯಾಗಿದ್ದು ಹೇಗೆ ಅವರಿಬ್ಬರ ರೋಚಕವಾದಂತ ಲವ್ ಸ್ಟೋರಿ ಏನು ಜೊತೆಗೆ ಆ ಕಂಪೆನಿಯನ್ನ ಕಟ್ಟಿದ್ದು ಯಾವ ರೀತಿಯಾಗಿ ಆ ಎಲ್ಲ ಒಂದಿಷ್ಟು interesting ಸಂಗತಿಗಳನ್ನ ನಿಮ್ಮ ಮುಂದೆ ಇಡ್ತಾ ಹೋಗ್ತೀನಿ ಇದು ಒಂದಷ್ಟು ಜನರಿಗೆ ಸ್ಫೂರ್ತಿಯನ್ನು ಕೂಡ ತುಂಬಬಹುದು ಸದ್ಯ ಸುಧಾ ಮೂರ್ತಿ ಮಾಡುತ್ತಿರುವಂತ ಸಮಾಜ ಸೇವೆ ಇದೆಯಲ್ಲ ,

ಅದು ಸಾಮಾನ್ಯವಾದಂತ ವಿಚಾರ ಅಲ್ಲವೇ ಅಲ್ಲ Infosys foundation ಮೂಲಕ ಅದೆಷ್ಟೋ ಜನರಿಗೆ ಸಹಾಯವನ್ನ ಮಾಡಿದ್ದಾರೆ ಕೋಟಿ ಕೋಟಿ ಹಣವನ್ನ ಸಮಾಜ ಸೇವೆಗೆ ಅಂತ ಮುಡಿಪಾಗಿ ಇಟ್ಟಿದ್ದಾರೆ ಈಗ ಒಂದಿಷ್ಟು interesting ಸಂಗತಿಗಳನ್ನ ನಿಮ್ಮ ಮುಂದೆ ಇಡ್ತಾ ಹೋಗ್ತೀನಿ ಸುಧಾ ಮೂರ್ತಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಶಿಗ್ಗಾವಿಯಲ್ಲಿ ಜನಿಸಿದ್ದು ತಂದೆ surgeon ತಾಯಿ teacher ಆಗಿರ್ತಾರೆ ಬಡತನದ ಕುಟುಂಬ ಅಂತದ್ದೇನು ಕೂಡ ಇರಲಿಲ್ಲ ಆದ್ರೆ ತಂದೆ ತಾಯಿಯ ವಿರೋಧದ ನಡುವೆ ಇಂಜಿನಿಯರಿಂಗ್ ಅನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಅದರಲ್ಲಿ ಪದವಿಯನ್ನು ಕೂಡ ಪಡೆದುಕೊಳ್ಳುತ್ತಾರೆ ಕಾರಣ ಆಗ ಯಾವುದೇ ಮಹಿಳೆಯರು ಕೂಡ ಈ ಪದವಿಯನ್ನು ಪಡೆಯುತ್ತಿರಲಿಲ್ಲ.

ಆದರೆ ಸುಧಾ ಮೂರ್ತಿ ಹಠ ಮಾಡಿ ಅಂತಹದೊಂದು ಪದವಿಯನ್ನು ಪಡೆದುಕೊಳ್ಳುತ್ತಾರೆ ಅದಾದ ನಂತರ ಪುಣೆಯ ಟೆಲಿಕೋ ಕಂಪನಿಯಲ್ಲಿ ಕೆಲಸಕ್ಕೂ ಕೂಡ ಸೇರುತ್ತಾರೆ ಕೆಲಸಕ್ಕೆ ಸೇರಿದ್ದೆ ಒಂದು ಕಥೆ ಯಾಕಂದ್ರೆ ಆ ಕಂಪನಿಯಲ್ಲಿ ಕೇವಲ ಪುರುಷರನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು ಇದನ್ನ ಪ್ರಶ್ನೆ ಮಾಡುತ್ತಾರೆ voice rise ಮಾಡುತ್ತಾರೆ ಅಂತಿಮವಾಗಿ ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಕೆಲಸವೂ ಕೂಡ ಸಿಗುತ್ತೆ ಕೆಲಸವನ್ನು ಕೂಡ ಆರಂಭಿಸುತ್ತಾರೆ ಅಲ್ಲಿ ಪ್ರಸನ್ನ ಅನ್ನುವಂತಹ ಸುಧಾ ಮೂರ್ತಿ ಒಬ್ಬರ colleague ಇರುತ್ತಾರೆ ಅಂದರೆ ಸಹೋದ್ಯೋಗಿ ಇರುತ್ತಾರೆ ಆ ಪ್ರಸನ್ನ ಎನ್ನುವಂತವರು ಸುಧಾ ಮೂರ್ತಿಯವರಿಗೆ ಯಾವಾಗಲು ಕೂಡ ಒಂದಷ್ಟು ಪುಸ್ತಕಗಳನ್ನು ತಂದುಕೊಡುತ್ತಿರುತ್ತಾರೆ ಆ ಪುಸ್ತಕಗಳ ಮೇಲೆ ಯಾವಾಗಲು ಕೂಡ ನಾರಾಯಣಮೂರ್ತಿಯವರ ಹೆಸರು ಇರುತ್ತೆ.

ಹೀಗಾಗಿ ನಾರಾಯಣ ಮೂರ್ತಿಗಳ ಬಗ್ಗೆ ಬಹಳ ಕುತೂಹಲ ಶುರುವಾಗುತ್ತೆ ಸುಧಾ ಮೂರ್ತಿಯವರಿಗೆ ಯಾರು ಇವರು ನಾರಾಯಣಮೂರ್ತಿ ಪ್ರತಿ ಪುಸ್ತಕದಲ್ಲೂ ಇವರ ಹೆಸರು ಇರುತ್ತಲ್ಲ ಅಂತ ಹೇಳಿ ನಾರಾಯಣಮೂರ್ತಿ ಪುಣೆಯಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸವನ್ನು ಕೂಡ ಮಾಡುತ್ತಿರುತ್ತಾರೆ ಹೀಗಾಗಿ ಸುಧಾ ಮೂರ್ತಿಯವರಿಗೆ ಅವರ ಬಗ್ಗೆ ದಿನೆ ದಿನೆ ಕುತೂಹಲ ಜಾಸ್ತಿ ಆಗುತ್ತೆ ಮತ್ತೊಂದು ಕಡೆಯಿಂದ ಸುಧಾ ಮೂರ್ತಿಯವರ colleague ಆಗಿರುವಂತಹ ಪ್ರಸನ್ನ ಯಾವಾಗಲು ಕೂಡ ನಾರಾಯಣ ಮೂರ್ತಿ ಅವರ ಬಗ್ಗೆ ಹೇಳುತ್ತಿರುತ್ತಾರೆ ಅವರ ಟ್ಯಾಲೆಂಟ್ ಆಗಿರಬಹುದು ಅವರು ತುಂಬಾ ಆಕ್ಟಿವ್ ಆಗಿರುವಂತಹ ವಿಚಾರ ಆಗಿರಬಹುದು ಹಾಗೆ ಜೀವನದಲ್ಲಿ ಇಟ್ಟುಕೊಂಡಿರುವ ಮಹತ್ವಾಕಾಂಕ್ಷೆಗಳು ಆಗಿರಬಹುದು ಇದರ ಬಗ್ಗೆ ಯಾವಾಗಲು ಕೂಡ ಹೇಳುತ್ತಾ ಇರುತ್ತಾರೆ .

ಮತ್ತೊಂದು ಕಡೆಯಿಂದ ಪ್ರಸನ್ನ ಅವರು ಆ ಕಡೆ ನಾರಾಯಣ ಮೂರ್ತಿ ಹತ್ತಿರ ಸುಧಾ ಮೂರ್ತಿ ಅವರ ಬಗ್ಗೆ ಹೇಳ್ತಾ ಇರ್ತಾರೆ ಸುಧಾ ಮೂರ್ತಿ active ಆಗಿರತಕ್ಕಂತ ರೀತಿ ಜೊತೆಗೆ ಓರ್ವ ಮಹಿಳೆಯಾಗಿ ತಮ್ಮನ್ನು ತಾವು ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಂತ ವಿಚಾರ ಎಲ್ಲವನ್ನು ಕೂಡ ನಾರಾಯಣ ಮೂರ್ತಿ ಅವರ ಬಗ್ಗೆ ಹೇಳ್ತಾರೆ ನಾರಾಯಣ ಮೂರ್ತಿ ಅವರ ಬಳಿ ಹೇಳ್ತಿರ್ತಾರೆ ಹೀಗಾಗಿ ಸುಧಾ ಮೂರ್ತಿಯವರಿಗೆ ನಾರಾಯಣ ಮೂರ್ತಿ ಅವರ ಬಗ್ಗೆ ಕುತೂಹಲ ನಾರಾಯಣ ಮೂರ್ತಿಯವರಿಗೆ ಸುಧಾ ಮೂರ್ತಿಯವರ ಬಗ್ಗೆ ಕುತೂಹಲ ದಿನೇ ದಿನೇ ಜಾಸ್ತಿಯಾಗುತ್ತೆ ಹೀಗಿರುವಂತ ಸಂದರ್ಭದಲ್ಲಿ ಒಮ್ಮೆ ಗ್ರೀನ್ ಫೀಲ್ಡ್ ಎನ್ನುವಂತ ಹೋಟೆಲ್ಗೆ ಸುಧಾ ಮೂರ್ತಿಯವರನ್ನ ಮೂರ್ತಿ ಕರೀತಾರೆ ಆರಂಭದಲ್ಲಿ ಸುಧಾ ಮೂರ್ತಿ ಬರೋದಿಕ್ಕೆ ನಿರಾಕರಿಸ್ತಾರೆ ಆದ್ರೆ ನಾರಾಯಣ ಮೂರ್ತಿಯವರು ನಿರಂತರವಾಗಿ ಒತ್ತಾಯ ಮಾಡಿದಂತ ಕಾರಣಕ್ಕಾಗಿ ಸುಧಾ ಮೂರ್ತಿಯವರು ಹೋಗ್ತಾರೆ ಅಲ್ಲಿ ಸುಧಾ ಮೂರ್ತಿ ಸೇರಿದಂತೆ ಒಂದಷ್ಟು ಜನರಿಗೆ ನಾರಾಯಣಮೂರ್ತಿಯವರು ಆಹ್ವಾನವನ್ನ ಕೊಟ್ಟಿರ್ತಾರೆ ಹೋಟೆಲನಲ್ಲಿ ಒಂದು ಸಣ್ಣ ಪಾರ್ಟಿಯನ್ನ ಕೊಡುವಂತ ಉದ್ದೇಶದಿಂದ ಹೀಗೆ ಮೊದಲ ಪರೀಕ್ಷೆ ಆಗುತ್ತೆ ಆ ಪರಿಚಯ ಸ್ನೇಹಕ್ಕೆ ಸಿಗುತ್ತೆ,

ಅದಾದ ನಂತರ ಇವರಿಬ್ಬರು ಕೂಡ ಪದೇ ಪದೇ ಭೇಟಿ ಆಗ್ತಿರ್ತಾರೆ ಸಾಕಷ್ಟು ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಪರಸ್ಪರ ಚರ್ಚೆಯನ್ನ ಕೂಡ ಮಾಡ್ತಾಯಿರ್ತಾರೆ ದೇಶದ ಆಗುಹೋಗುಗಳ ಬಗ್ಗೆ ಅಥವಾ ದೇಶದ ಬಗ್ಗೆ ಹೀಗೆ ಒಂದಷ್ಟು ವಿಚಾರಗಳ ಬಗ್ಗೆ ಇಬ್ಬರು ಕೂಡ ಚರ್ಚೆ ಮಾಡುತ್ತಿರುತ್ತಾರೆ ಒಂದು ರೀತಿಯಲ್ಲಿ ಇಬ್ಬರಿಗೂ ನಾವಿಬ್ಬರು ಸಮಾನ ಮನಸ್ಕರು ಅಂತ ಅನಿಸುವುದಕ್ಕೆ ಶುರುವಾಗುತ್ತೆ ಬರುತ್ತಾ ಬರುತ್ತಾ ನಾರಾಯಣ ಮೂರ್ತಿಯವರೇ ನಿಧಾನಕ್ಕೆ ಸುಧಾ ಮೂರ್ತಿಯವರ ಮೇಲೆ ಪ್ರೀತಿ ಹುಟ್ಟುವುದಕ್ಕೆ ಶುರುವಾಗುತ್ತೆ ನೇರವಾಗಿ ನಾರಾಯಣಮೂರ್ತಿ ಸುಧಾ ಮೂರ್ತಿಯವರ ಬಳಿ ಬಂದು propose ಮಾಡುತ್ತಾರಂತೆ ನಾನು ಬಡವ ಸದ್ಯಕ್ಕೆ ನನ್ನ ಬಳಿ ಹಣವಿಲ್ಲ ಮುಂದೆ ಶ್ರೀಮಂತನಾಗುತ್ತೀನೋ ಕೋಟ್ಯಾಧಿಪತಿ ಆಗುತ್ತೀನೋ ಅದು ಕೂಡ ಗೊತ್ತಿಲ್ಲ ಆದರೆ ಒಂದಷ್ಟು ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆ ಇದೆ ನಾನು ನಿಮ್ಮನ್ನು ಮದುವೆ ಆಗಬೇಕು ಅಂತ ಇದ್ದೀನಿ ಅಂತ propose ಮಾಡುತ್ತಾರಂತೆ ಸುಧಾ ಮೂರ್ತಿ ಅವರ ಆರಂಭದಲ್ಲಿ ಅವರು ಒಪ್ಪಿಕೊಳ್ಳುತ್ತಾರೆ ಆದರೆ ಸುಧಾ ಮೂರ್ತಿ ಹೇಳುತ್ತಾರೆ .

ನನ್ನ ಅಪ್ಪ ಅಮ್ಮನಂತೂ ನಾನು ಒಪ್ಪಿಸಲೇಬೇಕು ಒಂದಷ್ಟು ಟೈಮ್ ಕೊಡಿ ಅಂತ ಅಂತಿಮವಾಗಿ ಸುಧಾ ಮೂರ್ತಿ ಈ ವಿಚಾರವನ್ನ ತಂದೆ ತಾಯಿಯ ಬಳಿ ಹೇಳುತ್ತಾರೆ ನೀನು ಪ್ರಸ್ತಾಪ ಮಾಡುತ್ತ ನಾರಾಯಣ ಮೂರ್ತಿ ಅಂತ ಒಬ್ಬರು ಇದ್ದಾರೆ ಹೀಗೆ ಹೀಗೆ ನನಗೆ propose ಮಾಡಿದ್ದಾರೆ ಅಂತ ಸುಧಾ ಮೂರ್ತಿ ಅವರು ಡೌಟ್ ಇರುತ್ತೆ ಅಪ್ಪ ಅಮ್ಮ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅಂತ ಹೇಳಿ ಕಾರಣ ನಾರಾಯಣಮೂರ್ತಿ ಒಂದು ಕಡೆಯಿಂದ ಬಡತನದ ಹಿನ್ನಲೆ ಅಂತವರು ಬಡತನ ಅಂದರೆ ತೀರಾ ಬಡತನ ಅಂತ ಅಲ್ಲ middle ಕ್ಲಾಸ್ ಫ್ಯಾಮಿಲಿಯಿಂದ ಬಂದಂತವರು ಮತ್ತೊಂದು ಕಡೆಯಿಂದ ಸುಧಾ ಮೂರ್ತಿ ಅವರಿಗಿಂತ ಕಡಿಮೆ ಸಂಬಳ ಮೂರ್ತಿ ಅವರಿಗೆ ಇರುತ್ತೆ ನಾರಾಯಣ ಮೂರ್ತಿ ಅವರಿಗೆ ಇದ್ದಂತ job ಇದೆಯಲ್ಲ ಅದು ಒಂತರ permanent ಇರುವ ರೀತಿಯಲ್ಲಿ ಅಲ್ಲ ಅಥವಾ ತುಂಬಾ ದೊಡ್ಡ ಹುದ್ದೆ ಎನ್ನುವ ರೀತಿಯಲ್ಲಿ ಕೂಡ ಇರಲಿಲ್ಲ ಒಂದು ಸಾಮಾನ್ಯವಾದ ಹುದ್ದೆಯಲ್ಲಿ ನಾರಾಯಣ ಮೂರ್ತಿಯವರು ಇರ್ತಾರೆ ಹೀಗೆ ಅಪ್ಪ ಅಮ್ಮನ ಬಳಿ ವಿಚಾರವನ್ನ ಪ್ರಸ್ತಾಪ ಮಾಡಿದಾಗ ನಾರಾಯಣ ಮೂರ್ತಿಯವರನ್ನ ಆ ಅವರ ಅಪ್ಪ ಅಮ್ಮ ಕೂಡ ಭೇಟಿ ಆಗ್ತಾರೆ ಆದರೆ ಸುಧಾ ಮೂರ್ತಿಯವರ ತಂದೆ ಈ ಮದುವೆಗೆ ಆರಂಭದಲ್ಲಿ ವಿರೋಧವನ್ನ ವ್ಯಕ್ತಪಡಿಸ್ತಾರೆ .

ನೀನೀಗ ಇರುವಂತ ಹುದ್ದೆಯಲ್ಲಿ ನನ್ನ ಮಗಳನ್ನ ಸಾಕ್ತಿಯ ಎನ್ನುವಂತ ನಂಬಿಕೆ ನಮಗಂತೂ ಇಲ್ಲ ಒಂದು ಒಳ್ಳೆ ಕೆಲಸ ಸಿಗಲಿ ಅನಂತರ ಮದುವೆ ಮಾಡಿಕೊಡ್ತೀನಿ ಎನ್ನುವಂತ ಮಾತನ್ನ ಹೀಗೆ ನಿರಂತರವಾಗಿ ಸಾಗುತ್ತೆ ಮೂರು ವರ್ಷದವರೆಗೂ ಕೂಡ ಅವರ ತಂದೆ ಮದುವೆಗೆ ಒಪ್ಪಲೇ ಇಲ್ಲ ಅಂತಿಮವಾಗಿ ಸಾವಿರದ ಒಂಬೈನೂರ ಎಪ್ಪತ್ತೇಳರಲ್ಲಿ ಬಾಂಬೆಯಲ್ಲಿ ಮ್ಯಾನೇಜರ್ ಹುದ್ದೆ ಸಿಗುತ್ತೆ ಒಂದು ಒಳ್ಳೆ ಕಂಪನಿಯಲ್ಲಿ ಕಂಪನಿಯಲ್ಲಿ ಒಂದು ಕಡೆಯಿಂದ ಕೆಲಸವೂ ಕೂಡ ಸಿಗುತ್ತೆ ಜೊತೆಗೆ ಅಮೇರಿಕಾಕ್ಕೆ ಅವರನ್ನು ವರ್ಗಾವಣೆ ಕೂಡ ಮಾಡಲಾಗುತ್ತೆ ಈ ಕಾರಣಕ್ಕಾಗಿ ಅದರ ನಡುವೆ ಅವರ ತಂದೆ ತಾಯಿ ಇಬ್ಬರೂ ಕೂಡ ಒಪ್ಪಿಕೊಳ್ಳುತ್ತಾರೆ ಸಾವಿರದ ಒಂಬೈನೂರ ಎಪ್ಪತ್ತೆಂಟರಲ್ಲಿ ಬೆಂಗಳೂರಿನ ಜಯನಗರದಲ್ಲಿ ಇಬ್ಬರು ಕೂಡ ಮದುವೆಯಾಗುತ್ತಾರೆ ಮದುವೆ ಖರ್ಚಾಗಿದ್ದು ಎಂಟು ನೂರು ರೂಪಾಯಿ ಇಬ್ಬರು ಕೂಡ ನಾನೂರು ನಾನೂರು ರೂಪಾಯಿ ಹಂಚಿಕೊಂಡಿದ್ದರಂತೆ ಮುಖ್ಯವಾಗಿ ಖರ್ಚನ್ನು ಸಕತ್ತು ಬಹಳ interesting ವಿಚಾರಗಳು ಇವೆಲ್ಲವೂ ಕೂಡ ಇವೆಲ್ಲವನ್ನೂ ಕೂಡ ಸುಧಾ ಮೂರ್ತಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಪ್ರಸ್ತಾಪವನ್ನು ಮಾಡಿದ್ದಾರೆ ಅದಾದ ನಂತರ ನಾರಾಯಣ ಮೂರ್ತಿ ಅವರು ಅಮೆರಿಕಾಕ್ಕೆ ಹೋಗುತ್ತಾರೆ.

ಅಮೆರಿಕಾದಿಂದ ವಾಪಸ್ ಬರುವ ಸಂದರ್ಭದಲ್ಲಿ ಭಾರತದಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತೆ ಒಂದು ರೀತಿಯಲ್ಲಿ ಕಂಪ್ಯೂಟರ್ ಕ್ರಾಂತಿ ಅಥವಾ ಕಂಪ್ಯೂಟರ್ ಯುಗ ಶುರುವಾಗಿರುತ್ತೆ ಹೀಗಾಗಿ ನಾರಾಯಣಮೂರ್ತಿ ಅವರಿಗೆ ಅನಿಸುತ್ತೆ ಇದನ್ನು ಬಳಸಿಕೊಂಡು ನಾನು ಏನಾದರೂ ಮಾಡಬೇಕು ಏನಾದರೂ ಸಾಧನೆ ಕಡೆಗೆ ಹೋಗಬೇಕು ಅಂತ ಹೇಳಿ ಹೀಗಾಗಿ ಸಾವಿರದ ಒಂಬೈನೂರ ಎಂಬತ್ತೊಂದರಲ್ಲಿ ತಮ್ಮ companyಯ ಕೆಲಸಕ್ಕೆ ರಾಜೀನಾಮೆಯನ್ನ ಕೊಡ್ತಾರೆ Infosys ಎನ್ನುವಂತ ಕಂಪೆನಿಯನ್ನ ಶುರು ಮಾಡ್ಕೊಳ್ತಾರೆ ಅವರಿಗೊಂದು ಆರು ಜನ ಸಮಾನ ಮನಸ್ಕರು ಕೂಡ ಆಗ ಸಾಥ್ ಕೊಡ್ತಾರೆ ಆದ್ರೆ ಬೇಸಿಕ್ ಬಂಡವಾಳ ಕೂಡ ಅವರ ಬಳಿ ಇರೋದಿಲ್ಲ ಆಗ ಇದೆ ಸುಧಾ ಮೂರ್ತಿ ಹತ್ತು ಸಾವಿರ ರೂಪಾಯಿ ಬಂಡವಾಳವನ್ನ ಗಂಡನ ಕೈಗೆ ತೆಗೆದಿಡುತ್ತಾರೆ ಅವರು ಕೆಲಸ ಮಾಡಿದಂತ ಹಣ ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿದಂತ ಹಣ ಒಟ್ಟಾರೆಯಾಗಿ ಒಂದು ಹತ್ತು ಸಾವಿರ ರೂಪಾಯಿ ಹಣವನ್ನ ಸುಧಾ ಮೂರ್ತಿ ಇಟ್ಟುಕೊಂಡಿರ್ತಾರೆ ಅದೇ ಹಣವನ್ನ ನಾರಾಯಣ ಮೂರ್ತಿಯವರ ಕೈಗೆ ಕೊಡ್ತಾರೆ ಆಗ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇರ್ತಾರೆ ,

ಆ ಬಾಡಿಗೆ ಮನೆನೇ Infosysನ head office ಆ ಮನೆಯಲ್ಲಿಯೇ Infosys ಕಚೇರಿ ಶುರುವಾಗುತ್ತೆ ಅಥವಾ Infosysನ ಕಾರ್ಯ ಚಟುವಟಿಕೆಗಳೆಲ್ಲವೂ ಕೂಡ ಶುರುವಾಗುತ್ತೆ ಸುಧಾ ಮೂರ್ತಿ ಕೂಡ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡ್ತಾರೆ ಅವರು ಕೂಡ Infosys ಬಳಗವನ್ನ ಸೇರ್ಕೊಳ್ತಾರೆ ಹೀಗೆ ಒಂದಷ್ಟು ವರ್ಷಗಳ ಕಾಲ ಹೆಚ್ಚು ಕಡಿಮೆ ಒಂದು ಎರಡು ವರ್ಷಗಳ ಕಾಲ ಎಲ್ಲರು ಸೈಕಲ್ ಹೊಡಿತಾರೆ ನಿರಂತರವಾದಂತ ಪ್ರಯತ್ನ ಬಹಳ ಕಷ್ಟವನ್ನ ಅನುಭವಿಸ್ತಾರೆ ಆಗ ದುಡ್ಡು ಇರೋದಿಲ್ಲ ಯಾವುದೇ ಕಾಂಟ್ರಾಕ್ಟ್ ಕೂಡ ಬರ್ತಾಯಿರೋದಿಲ್ಲ Infosys companyಗೆ ಈ ಕಾರಣಕ್ಕೆ ಒಂದಷ್ಟು ದಿನಗಳ ಕಾಲ ನಿರಂತರವಾದಂತಹ ಕಷ್ಟ ಅದೆಲ್ಲವೂ ಕೂಡ ಇದ್ದೆ ಇರುತ್ತೆ ಆದರೆ ಪರಸ್ಪರರಿಗೆ ಪ್ರೋತ್ಸಾಹವನ್ನು ತುಂಬುವಂತ ಕೆಲಸವನ್ನ ಮಾಡ್ತಾ ಇರ್ತಾರೆ ಇವತ್ತು ಕಷ್ಟ ಪಟ್ಟರೆ ನಾಳೆ ನಾವು ಸುಖವನ್ನ ಪಡಬಹುದು ಅಂತ ಅಂತ ಅಂತಿಮವಾಗಿ ಇವರ ಟೈಮ್ ಬದಲಾಗಿದ್ದು ಯಾವಾಗ ಅಂದ್ರೆ ಸಾವಿರದ ಒಂಬೈನೂರ ಎಂಬತ್ತಮೂರರಲ್ಲಿ ಮೈಕೋ ಫ್ಯಾಕ್ಟರಿ ಇಂದ ಒಂದಷ್ಟು ಡಿಮ್ಯಾಂಡ್ ಬರುತ್ತೆ ,

ಅಥವಾ ಒಂದು ಕಾಂಟ್ರಾಕ್ಟ್ ಅನ್ನ ಕೊಡ್ತಾರೆ ಬಿಡಿ ಭಾಗಗಳನ್ನ ಒದಗಿಸಿ ಅಂತ ಅಲ್ಲಿಂದ ಇನ್ಫೋಸಿಸ್ ನ ಅಸಲಿ ಕೆಲಸ ಶುರುವಾಗುತ್ತೆ ನೋಡಿ ಅಲ್ಲಿಂದ Infosys ಹಿಂತಿರುಗಿ ನೋಡಿದ್ದೇ ಇಲ್ಲ ಅಂತ ಹಂತವಾಗಿ Infosys ಮೇಲೆ ಏರ್ತಾ ಏರ್ತಾ ಏರ್ತಾ ಇವತ್ತು IT ದಿಗ್ಗಜ ಕಂಪನಿ ಅಂತ ಅನ್ನಿಸಿಕೊಂಡಿದೆ ಯಾಕೆ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಟ್ಟೆ ಅಂದ್ರೆ ನೋಡಿ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿಯವರು ಪರಸ್ಪರರಿಗೆ ಯಾವ ರೀತಿಯಾಗಿ ಪ್ರೋತ್ಸಾಹವನ್ನ ಕೊಟ್ಕೊಂಡು ಬಂದ್ರು ಇವತ್ತು ಯಾವ ಹಂತಕ್ಕೆ ಗಂಡ ಹೆಂಡತಿ ಹೋಗಿ ನಿಂತಿದ್ದಾರೆ ಅಂತ ಹೇಳಿ ಅದಾದ ನಂತರ ಇನ್ಫೋಸಿಸ್ ಫೌಂಡೇಶನ್ ಶುರುವಾಗುತ್ತೆ ಅದರ ಮೂಲಕ ಸುಧಾ ಮೂರ್ತಿ ವಿಪರೀತವಾದಂತ ಸಮಾಜ ಸೇವೆಯನ್ನ ಮಾಡ್ತಾ ಇದ್ದಾರೆ ಪ್ರವಾಹ ಬಂದಂತ ಸಂದರ್ಭದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಗವರ್ನಮೆಂಟಗೆ ಫಂಡ್ ಕೊಡೋದು ಆಗಿರಬಹುದು.

ಅಥವಾ ಬೇರೆ ಬೇರೆ ಸಂದರ್ಭ ಹೆಣ್ಣು ಮಕ್ಕಳಿಗೆ ಸಹಾಯವನ್ನು ಮಾಡುವುದು ಆಗಿರಬಹುದು ಹೀಗೆ ಅವರ ಸಹಾಯದ ಗುಣಗಳನ್ನು ಹೇಳುತ್ತಾ ಹೋದರೆ ಬೇಕಾದಷ್ಟು ನಮಗೆ ಸಿಗುತ್ತಾ ಹೋಗುತ್ತೆ ಇವತ್ತು ನಾರಾಯಣ ಮೂರ್ತಿ ನೋಡಿ ಒಂದು ಕಾಲದಲ್ಲಿ ಒಂದೊಂದು ರೂಪಾಯಿಗೂ ಕೂಡ ಪರದಾಡುತ್ತಿದ್ದಂತವರು ಅದೇ ರೀತಿಯಾಗಿ ಕಂಪನಿ ಶುರು ಮಾಡುವುದಕ್ಕೆ ಬಂಡವಾಳವೇ ಇಲ್ಲದೆ ಒದ್ದಾಡಿದಂತ ನಾರಾಯಣಮೂರ್ತಿ ಇವತ್ತು ಇಡೀ ಜಗತ್ತಿನ ಆರು ನೂರ ಐವತ್ತು ನಾಲ್ಕನೇ ಶ್ರೀಮಂತ ಒಟ್ಟಾರೆಯಾಗಿ ಆಸ್ತಿ ಒಂದು ಲೆಕ್ಕಾಚಾರದ ಪ್ರಕಾರ ಖಚಿತವಾದ ಮಾಹಿತಿ ಇಲ್ಲ ಮೂವತ್ತೇಳು ಸಾವಿರ ಕೋಟಿಯ ಒಡೆಯ ಇನ್ನು ಸುಧಾ ಮೂರ್ತಿಯವರು ಎರಡು ಸಾವಿರದ ನಾನೂರ ಎಂಬತ್ತು ಕೋಟಿಯ ಒಡತಿ ಹಾಗೆ ಅವರಿಗೆ ಮಗ ಒಬ್ಬರು ಇದ್ದಾರೆ ಅವರು ಕೂಡ Infosysನಲ್ಲೆ ಬೇರೆ ಬೇರೆ ಹುದ್ದೆಯನ್ನ ನಿರ್ವಹಿಸ್ತಾ ಇದ್ದಾರೆ .

ಇನ್ನ ಅವರ ಪುತ್ರಿ ಅಕ್ಷತಾ ಮೂರ್ತಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ರಿಷಿ ಸುನಾಕ್ ಅವರ ಪತ್ನಿ ಸದ್ಯ ರಿಷಿ ಸುನಾಕ್ ಬ್ರೆಡ್ ಅನ್ನ ಪ್ರಧಾನಿಯಾಗಿದ್ದಾರೆ ಆದರೆ ಇಷ್ಟೆಲ್ಲ ಇದ್ದರು ಕೂಡ ಎಂತವರಿಗೂ ಹಮ್ಮು ಭೀಮು ಬಂದು ಬಿಡುತ್ತಿತ್ತು ಅಹಂಕಾರ ನೆತ್ತಿಗೆ ಏರಿಬಿಡುತ್ತಿತ್ತು ಜನ ಸಾಮಾನ್ಯರಿಗೆ ಅಂತೂ ಅವರ ಕೈಗೆ ಸಿಗುತ್ತಿರಲಿಲ್ಲ ಆದರೆ ಸುಧಾ ಮೂರ್ತಿ ಈಗಲೂ ಕೂಡ ಜನಸಾಮಾನ್ಯರ ನಡುವೆ ಇರುತ್ತಾರೆ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ಕೂಡ ಬಹಳ್ ಪ್ರೀತಿಯಿಂದ ಆ ಕಾರ್ಯಕ್ರಮವನ್ನ attend ಆಗ್ತಾರೆ ಇನ್ನ dress ವಿಚಾರದಲ್ಲಿ ಅವರು ಯಾವಾಗ್ಲೂ ಕೂಡ ಹೇಳ್ತಾರೆ ನಾನು ಜನಕ್ಕೆ ಮಾದರಿಯಾಗಿರಬೇಕು .

ಅನ್ನೋ ಕಾರಣಕ್ಕಾಗಿ ತುಂಬಾ simple ಆದಂತ dress ಅನ್ನ ಧರಿಸ್ತೇನೆ ಅಂತ ಹೇಳಿ ಗಂಡ ಹೆಂಡತಿ ಇಬ್ಬರೂ ಕೂಡ ಎಷ್ಟು ಸರಳವಾಗಿ ಇರೋದಕ್ಕೆ ಸಾಧ್ಯವಾಗುತ್ತೋ ಎಷ್ಟು ಸಮಾಜಕ್ಕೆ ಮಾದರಿಯುತವಾಗಿರೋದಕ್ಕೆ ಸಾಧ್ಯವಾಗುತ್ತೋ ಅಷ್ಟು ಸರಳವಾಗಿ ಅಷ್ಟು ಮಾದರಿಯುತವಾಗಿ ಗಂಡ ಹೆಂಡತಿ ಇಬ್ಬರು ಕೂಡ ಸಮಾಜದಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ ಇವತ್ತು ಅವರ ಇಡೀ ಕುಟುಂಬ ಅತ್ಯುನ್ನತವಾದಂತ ಒಂದು ಹುದ್ದೆಯಲ್ಲಿದೆ ಅಥವಾ ಒಂದು ಒಳ್ಳೆ ರೀತಿಯಲ್ಲಿ ತಾವು ಗುರುತಿಸಿಕೊಂಡಿದ್ದಾರೆ ಇದೆ ರೀತಿಯಾಗಿ ಅವರ ಕುಟುಂಬ ಇನ್ನಷ್ಟು ಯಶಸ್ಸನ್ನು ಕಾಣಲಿ ಅನ್ನುವಂತಹ ಆಶಯವನ್ನ ವ್ಯಕ್ತಪಡಿಸೋಣ ಜೊತೆಗೆ ಸುಧಾ ಮೂರ್ತಿಯಿಂದ ಇನ್ನಷ್ಟು ಸಮಾಜಕ್ಕೆ ಸೇವೆ ಆಗಲಿ ಎನ್ನುವಂತ ಆಶಯವನ್ನು ಕೂಡ ವ್ಯಕ್ತಪಡಿಸೋಣ