ಕೊನೆಯದಾಗಿ ಪುನೀತ್ ಬೇಟಿ ಕೊಟ್ಟ ಆಂಜನೇಯ ದೇವಸ್ಥಾನ.! ಯಾವುದೂ ಗೊತ್ತಾ…. ಭಕ್ತಿ ನೋಡಿ

194

ಕನ್ನಡಿಗರು ಮತ್ತು ಕನ್ನಡ ಸಿನಿ ರಸಿಕರಿಗೆ ಕನಸಲ್ಲಿ ಊಹಿಸಲಾರದ ಘಟನೆ ಹಾಗು ಎಂದು ನೆನೆಯದಂತ ಘಟನೆ ನಡೆದು ಹೋಗಿದ್ದು ಇದನ್ನು ಯಾರಿಂದಲೂ ಸಹ ಜೀರ್ಣಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ ಕೆಲವರ ಪ್ರಕಾರ ಸಿನಿಮಾ ನಟರು ತಾವು ಬೇಡಿಕೆಯಲ್ಲಿದ್ದಷ್ಟು ದಿನ ಮಾತ್ರ ಜನರ ಮನಸ್ಸಿನಲ್ಲಿಯೇ ಉಳಿಯುತ್ತಾರೆ ಸಿನಿಮಾ ಅವಕಾಶಗಳು ಕಡಿಮೆಯಾದರೆ ಅವರನ್ನು ಮರೆತು ಬಿಡುತ್ತಾರೆ ಎಂಬ ಮಾತು ಇದೆ ಹೌದು ಆದರೆ ಇದು ಖಂಡಿತವಾಗಿಯೂ ಸುಳ್ಳು ಎನ್ನಬಹುದು .

ಒಮ್ಮೆ ಕನ್ನಡ ಸಿನಿ ರಸಿಕರು ಓರ್ವ ನಟನೆಗೆ ತಮ್ಮ ಹೃದಯ ಸಿಂಹಾಸನದಲ್ಲಿ ನೆಲೆ ಊರಲು ಜಾಗ ಕೊಟ್ಟರೆ ಸಾಕು ಅವರು ಆಗಲಿ ದಶಕಗಳೇ ಕಳೆದರು ಕೂಡ ಅವರನ್ನೇ ಮನಸಿನಲ್ಲಿ ಇಟ್ಟು ಪೂಜಿಸುತ್ತಾರೆ ಶಂಕ್ರಣ್ಣ, ರಾಜಣ್ಣ, ವಿಷ್ಣುದಾದಾ, ಅಂಬಿ ಎಲ್ಲರು ಸಹ ಆಗಲಿ ಎಷ್ಟೋ ವರ್ಷ ಕಳೆದರು ಕೂಡ ಅವರ ಮೇಲಿದ್ದ ಪ್ರೀತಿ ಒಂದು ಚೂರು ಕಡಿಮೆಯಾಗಿಲ್ಲ ಆದರೆ ಇದೀಗ ನಡೆದಿರುವ ಘಟನೆ ಕರ್ನಾಟಕದಲ್ಲೇ ಮೌನ ಆವರಿಸಿದ್ದು ಅಭಿಮಾನಿಗಳ ಪ್ರೀತಿಯ ಅಪ್ಪು, ಭೂತಾಯಿಯ ಮಡಿಲು ಸೇರಿ ಬಿಟ್ಟಿದ್ದಾರೆ.

ಇನ್ನು ಸರಿ ಸುಮಾರು ನಲವತ್ತೈದು ವರ್ಷಗಳಿಂದ ಚಿತ್ರರಂಗ ತಮ್ಮನ್ನೇ ತಾವು ಗುರುತಿಸಿಕೊಂಡಿದ್ದ ಅಪ್ಪು ಅವರಿಗೆ ಇದೀಗ ಕೇವಲ ನಲವತ್ತಾರು ವರ್ಷ ಎಂಬತ್ತರ ದಶಕದವರಿಂದ ಹಿಡಿದು ಇದೀಗ ತೊದಲು ಮಾತನಾಡುವ ಮಕ್ಕಳು ಸಹ ಅಪ್ಪು ಅವರನ್ನ ಬಹಳ ಪ್ರೀತಿಸುತ್ತಿದ್ದರು ಆದರೆ ನಲವತ್ತಾರು ವರ್ಷಗಳಿಂದ ನಮ್ಮ ಕಣ್ಣು ಮುಂದೆಯೇ ಕುಣಿದು ಕುಪ್ಪಳಿಸಿದ ಅಪ್ಪು ಇನ್ನಿಲ್ಲ ಆಗಿದ್ದಾರೆ ಎಂದರೆ ಸಹಿಸಲು ಸಾಧ್ಯವೇ ಅದರಲ್ಲೂ ಶಿವಣ್ಣನವರಿಗೆ ತಮಗಿಂತ ಹದಿಮೂರು ವರ್ಷ ಚಿಕ್ಕವರಾದ ಅಪ್ಪು ಮಗನಂತಿದ್ದರು ಅವರ ಸ್ಥಿತಿ ಹೇಗಾಗಿರಬಹುದು ನೀವೇ ಹೇಳಿ ನಿಜಕ್ಕೂ ಸ್ಥಿತಿ ಯಾವ ಶತ್ರುವಿಗೂ ಕೂಡ ಬೇಡ ಅನ್ನಿಸುತ್ತೆ.

ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಅಪ್ಪು ಬಾಲ ಕಲಾವಿದನಾಗಿದ್ದಾಗಲೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಕಲಾವಿದರಾಗಿದ್ದರು ಅಪ್ಪು ಅವರ ಭಾಗ್ಯವಂತ ಬೆಟ್ಟದ ಹೂವು ಎರಡು ನಕ್ಷತ್ರ ಸಿನಿಮಾ ನೋಡಿದ ಅಭಿಮಾನಿಗಳು ಮುಂದೊಂದು ದಿನ ಈ ಬಾಲಕ ಚಿತ್ರರಂಗವನ್ನು ಆಳುತ್ತಾನೆ ಸ್ಟಾರ್ ನಟನಾಗುತ್ತಾನೆ ಎಂದು ಭವಿಷ್ಯವನ್ನು ಕೂಡ ನುಡಿದಿದ್ದರು ಎಲ್ಲರ ಮಾತಿನಂತೆ ಪುನೀತ್ ಅಪ್ಪು ಸಿನಿಮಾ ಮೂಲ ಚಿತ್ರರಂಗಕ್ಕೆ ಪರಿಪೂರ್ಣ ನಾಯಕನಾಗಿ ಪಾದಾರ್ಪಣೆ ಮಾಡಿ ಜೈಮ್ ಸಿನಿಮಾ ತನಕ ಹತ್ತು ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಅವರು ಅಭಿನಯಿಸಿದ ಬಹುತೇಕ ಸಿನಿಮಾಗಳೆಲ್ಲವೂ ಸಹ,

ಚಿತ್ರರಂಗದಲ್ಲಿ ಸೂಪರ್ duper hit ಆಗಿದ್ದವು ನೋಡು ನೋಡುತ್ತಲೇ ಅಪ್ಪು ಚಿತ್ರರಂಗದ ಸ್ಟಾರ್ ನಟರಾಗಿ ಬೆಳೆದು ನಿಂತಿದ್ದು ಯಶಸ್ವಿ ಉತ್ತುಂಗದಲ್ಲಿ ಇದ್ದರು ಇನ್ನು ಕೇವಲ ನಟನಾಗಿ ಮಾತ್ರವಲ್ಲದೆ ಗಾಯಕನಾಗಿ ನಿರ್ಮಾಪಕನಾಗಿಯೂ ಸಹ ತಮ್ಮದೇ ಆದ ಛಾಪು ಮೂಡಿಸಿದ್ದು ಚಿತ್ರರಂಗದ ಬಹುಮುಖ ಪ್ರತಿಭೆ ಆಗಿದ್ದರು ಆದರೆ ಅಪ್ಪು ಭೂತಾಯಿ ಮಡಿಲಲ್ಲಿ ಶಾಶ್ವತವಾಗಿ ಮಲಗಿರುವುದನ್ನ ನೋಡಿದರೆ ಯಾರಿಂದಲೂ ಕೂಡ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವೀಡಿಯೋ ಹರಿದಾಡುತ್ತಿದ್ದು ಇದೀಗ ವೈರಲ್ ಆಗಿರುವ ವೀಡಿಯೋ ನಿಜಕ್ಕೂ ಕಣ್ಣಲ್ಲಿ ನೀರು ಬರಿಸುವಂತಿದೆ.

ಹೌದು ಅಣ್ಣಾವ್ರ ಮಕ್ಕಳಲ್ಲಿ ಮೊದಲು ಬಣ್ಣ ಹಚ್ಚಿದ್ದೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆರು ತಿಂಗಳು ಹಸಿ ಹುಸಿ ಇದ್ದಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಡಿದ ಅಪ್ಪುರವರು ಅಪ್ಪಾಜಿಯವರ ಹೆಸರು ಉಳಿಸಿದ ಹೆಮ್ಮೆಯ ಮ ಆದರೂ ಹೌದು ದೊಡ್ಡ ಮನೆ ಕುಟುಂಬದಲ್ಲಿ ಪ್ರೀತಿಯ ಮಗನಾಗಿದ್ದಾರೆ ಯಾಕೆಂದರೆ ಅಪ್ಪು ಅಪ್ಪಾಜಿಯ ಕೊನೆಯ ಮಗನಾಗಿದ್ದು ಅಪ್ಪು ಹುಟ್ಟುವ ಸಮಯದಲ್ಲಿ ಅದಾಗಲೆ ಅಪ್ಪಾಜಿಯವರ ನಾಲ್ಕು ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ ಈ ಕಾರಣದಿಂದಲೇ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು ತಮ್ಮ ಎಂದು ಭಾವಿಸದೆ ಸ್ವಂತ ಮಗನಂತೆ ಅಪ್ಪು ಅವರನ್ನು ಎತ್ತಾಡಿಸಿ ಬಿಡಿಸಿದ್ದಾರೆ ಅದರಲ್ಲೂ ಶಿವಣ್ಣನಿಗೆ ಅಪ್ಪು ಅಂದ್ರೆ ಪಂಚಪ್ರಾಣ ಶಿವಣ್ಣ ಜನಿಸಿದ ಹದಿಮೂರು ವರ್ಷಗಳ ಬಳಿಕ ಅಪ್ಪು ಮಗನಂತೆ ಕಾಣ್ತಾ ಇದ್ದರು ಅಪ್ಪು ಮಹಾನ್ ದೈವಭಕ್ತರಾಗಿದ್ದರು .

ಹಲವಾರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದರು ಅವರು ಹಗಲುವ ಮುನ್ನ ನುಗ್ಗಿ ಕೇರಿ ಆಂಜನೇಯ ಸನ್ನಿದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ಈ ದೇವಸ್ಥಾನ ಬರುವುದು ಧಾರವಾಡದಲ್ಲಿ ಭಕ್ತರು ಈ ಆಂಜನೇಯನಿಗೆ ಕೇಳಿಕೊಂಡಿದ್ದೆಲ್ಲ ನೆರವೇರುತ್ತೆ ಎನ್ನುವುದು ಭಕ್ತರ ನಂಬಿಕೆ ಇದೆ ಅದರಲ್ಲೂ ವಿದ್ಯಾರ್ಥಿಗಳು ಈ ದೇವಸ್ಥಾನಕ್ಕೆ ಕಾಲ್ನಡಿಗೆ ಹರಕೆ ಹೊರುವುದು ವಾಡಿಕೆ ಇನ್ನು ಯುವ ರತ್ನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿರುವ ಪುನೀತ್ ಅವರು ಕೇರಿ ಆಂಜನೇಯ ಸನ್ನಿದಿಗೆ ಭೇಟಿ ನೀಡಿ ಪೂಜೆಯನ್ನ ಸಲ್ಲಿಸಿದ್ದು ಯುವ ರತ್ನ ಚಿತ್ರ ಯಶಸ್ವಿಯಾಗಲಿ ಎಂದು ಬೇಡಿಕೊಂಡಿದ್ದರು ಇದೆ ದೇವಸ್ಥಾನಕ್ಕೆ ಸುಮಲತಾ ಅಂಬರೀಷ್ ಅಭಿಷೇಕ್ ಭೇಟಿ ಕೊಟ್ಟಿದ್ದರು ಮಂಡ್ಯದಲ್ಲಿ ಗೆದ್ದ ಹಿನ್ನಲೆಯಲ್ಲಿ ಸುಮಲತಾ ತುಲಾಭಾರ ಮಾಡಿಸಿದ್ದರು ಅಪ್ಪು ದೇವಾಲಯಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ