ಮುನ್ನುಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮುನ್ನುಡಿ ಬರೆದ ನಟಿ ಛಾಯಾ ಸಿಂಗ್ ನಂತರ ಎರಡು ಸಾವಿರದ ಒಂದರಲ್ಲಿ ಚಿಟ್ಟೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಚಿಟ್ಟೆಯಂತೆ ಹಾರಾಡುವ ಎಲ್ಲ ಮುನ್ಸೂಚನೆಯನ್ನು ನೀಡಿದರು ನಂತರ ಗುಟ್ಟು ತುಂಟಾಟ ಬಲಗಾಲಿಟ್ಟು ಒಳಗೆ ಬಾ ಎಂಬ ಚಿತ್ರಗಳಲ್ಲಿ ನಟಿಸಿದರು ಆದರೆ ಅವರು ಕನ್ನಡ ಚಿತ್ರರಂಗಕ್ಕೆ ನಿಜವಾಗಲೂ ಬಲಗಾಲು ಇಟ್ಟರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತೆ.
ಹೌದು ಉತ್ತರ ಪ್ರದೇಶ ಮೂಲದ ಛಾಯಾ ಸಿಂಗ್ ಹುಟ್ಟಿದ್ದು ಬೆಂಗಳೂರಿನಲ್ಲಿ ನಮ್ಮ ಕನ್ನಡದ ನಟಿಯರಿಗಿಂತ ಸುಂದರವಾಗಿ ಕನ್ನಡ ಭಾಷೆಯನ್ನ ಬಳಸ್ತಾ ಇದ್ದರು ಆದರೆ ಇದ್ದಕ್ಕಿದ್ದಂತೆ ಕನ್ನಡ ಸಿನಿಮಾಗಳ ಸೌಂಡೇ ಇಲ್ಲದಂತಾಯಿತು ಕನ್ನಡದಲ್ಲಿ ಅವಕಾಶಗಳು ಕಡಿಮೆ ಆದಾಗ ತೆಲುಗು ತಮಿಳು ಮಲಯಾಳಂ ಸಿನಿಮಾಗಳತ್ತ ಮುಖ ಮಾಡಿದರು ಹಾಗೂ ಬೆಂಗಾಲಿ ಸಿನಿಮಾ ಒಂದರಲ್ಲಿ ಕೂಡ ನಟಿಸಿದ್ದಾರೆ ಕನ್ನಡ TV ಸೀರಿಯಲ್ ಗಳಲ್ಲಿ ಕೂಡ ನಟಿ ಛಾಯಾ ಸಿಂಗ್ ನಟಿಸಿದ್ದಾರೆ .
ಕಿರುತರೆ ಬಾ ಪ್ರಸಾರವಾಗುತ್ತಿದ್ದ ಸರೋಜಿನಿ ಪ್ರೇಮ ಕಥೆಗಳು ಹಾಗೂ ಇತ್ತೀಚಿಗೆ ಉದಯ TVಯಲ್ಲಿ ಪ್ರಸಾರವಾಗುತ್ತಿದ್ದಂತಹ ನಂದಿನಿ ಸೀರಿಯಲ್ ಅಲ್ಲೂ ಕೂಡ ಛಾಯಾ ಸಿಂಗ್ ನಟಿಸಿದ್ದಾರೆ ಕನ್ನಡದ ಕುಣಿಯೋಣು ಬಾರ ರಿಯಾಲಿಟಿ ಶೋ ಸೇರಿದಂತೆ ಕೆಲವು ರಿಯಾಲಿಟಿ ಶೋ ಗಳಿಗೆ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ ಕನ್ನಡದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಛಾಯಾ ಸಿಂಗ್.
ಅವರ ಕನ್ನಡದ ಕೊನೆಯ ಚಿತ್ರ ಖಾಕಿ ತಮಿಳು ಸಿನಿಮಾಗಳಲ್ಲಿ ಕೆಲವು ವರ್ಷಗಳಿಂದ ಛಾಯಾ ಸಿಂಗ್ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಇನ್ನು ತಮಿಳು ಸೀರಿಯಲ್ ನಲ್ಲಿ ನಟಿಸುತ್ತಿದ್ದಾಗ ತಮಿಳಿನ ಸಿನಿಮಾ ಹಾಗೂ ಕಿರುತೆರೆ ನಟ ಕೃಷ್ಣ ಎಂಬುವವರ ಪರಿಚಯ ಆಗಿ ಪರಿಚಯ ಪ್ರೀತಿಯಾಗಿ ಎರಡು ಸಾವಿರದ ಹನ್ನೆರಡರಲ್ಲಿ ಕೃಷ್ಣ ಹಾಗು ಛಾಯಾ ಸಿಂಗ್ ನಡುವೆ ಮದುವೆಯಾಗುತ್ತಾರೆ.
ಮೂವತ್ತೆಂಟರ ಹರೆಯದ ತಮಿಳು ತೆಲುಗು ಕನ್ನಡ ಚಿತ್ರಗಳಲ್ಲಿ ಹಾಗೂ ಸೀರಿಯಲ್ ಗಳಲ್ಲಿ ನಟಿಸುತ್ತಾ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ ನಟಿ ಛಾಯಾ ಸಿಂಗ್ ನಿಮಗೂ ನಟಿ ಛಾಯಾ ಸಿಂಗ್ ಇಷ್ಟ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಹಾಗೇನೇ ನೀವಿನ್ನು ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು